Breaking News

ರಾಜಕೀಯ

ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಇಲ್ಲಿದೆ ಭಾಷಣದ ಹೈಲೈಟ್ಸ್

ಬೆಂಗಳೂರು ಗ್ರಾಮಾಂತರ: ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತ ಹಿಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿಕಾರಿದರು. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ನಾವೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಧಮ್‌ ಇದ್ರೆ ತಡೆಯಿರಿ ಅಂತ ಕಾಂಗ್ರೆಸ್‌ಗೆ ಸವಾಲ್‌ ಹಾಕಿದರು. …

Read More »

ಇಟಗಿ ಗ್ರಾಮದಲ್ಲಿ ಸರಗಳ್ಳತನಕ್ಕೆ ಯತ್ನ: ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ರಗ್ಗು ಮಾರುವ ನೆಪದಲ್ಲಿ ಬಂದು ಸರಕಳ್ಳತನಕ್ಕೆ ಯತ್ನಿಸಿದ ನಾಲ್ವರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಖಾನಾಪೂರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ. ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುಮಾರಿಗೆ ರಗ್ಗು ಮಾಡಿರುವುದಾಗಿ ಹೇಳಿಕೊಂಡು ನಾಲ್ವರು ಇಟಗಿ ಗ್ರಾಮಕ್ಕೆ ಬಂಧಿದ್ದರು. ಜನರ ಮನೆ, ಮನೆಗೆ ತೆರಳಿ ಉದ್ರಿಯಲ್ಲಿ ನೀಡುವುದಾಗಿ ಹೇಳಿಕೊಂಡು ಓಡಾಡಿದ್ದಾರೆ. ಈ ವೇಳೆ ಮಹಿಳೆಯೋರ್ವಳ ಕೊರಳಿನ ಸರ ಕದಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಿಳೆ …

Read More »

B.J.P. ಸರ್ಕಾರದ ‘ಜನಸ್ಪಂದನ’ ಇಂದು; ಸರ್ಕಾರದ ‘ರಿಪೋರ್ಟ್ ಕಾರ್ಡ್’ ಮಂಡಿಸುವ C.M.

ಬೆಂಗಳೂರು /ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಡುವ ‘ಜನಸ್ಪಂದನ’ ಸಮಾವೇಶಕ್ಕೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಸಜ್ಜಾಗಿದೆ. 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಆಶಯದಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.   ‘ಜನೋತ್ಸವ’ದ ಹೆಸರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಮೂರು ಬಾರಿ ಮುಂದೂಡಿಕೆಯಾಗಿತ್ತು. ಇದೀಗ ‘ಜನಸ್ಪಂದನ’ದ ಹೆಸರಿನಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನ ಭಾಗವಹಿಸುವ …

Read More »

ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ

ಶಿವಮೊಗ್ಗ: ಇಲ್ಲಿನ ಹಿಂದೂ ಮಹಾಸಭಾದಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ವೇಳೆ ಶುಕ್ರವಾರ ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಜೊತೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಇತ್ತೀಚೆಗೆ ಕೊಲೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಹಾಗೂ ನಾಥೂರಾಮ್ ಗೋಡ್ಸೆಯ ಭಾವಚಿತ್ರಗಳನ್ನು …

Read More »

ಒಂದು ಲಡ್ಡುವಿನ ಬೆಲೆ 24.60 ಲಕ್ಷ ರೂ! ಹರಾಜಿನಲ್ಲಿ ದಾಖಲೆ ಬರೆದ ಬಾಲಾಪುರದ ಗಣಪ

ಹೈದರಾಬಾದ್: ಗಣೇಶನ ಹಬ್ಬದ ಲಡ್ಡು ಎಂದಾಕ್ಷಣ ನೆನಪಾಗುವುದು ಹೈದರಾಬಾದ್​ನ ಬಾಲಾಪುರ. ಏಕೆಂದರೆ ಪ್ರತಿ ವರ್ಷವೂ ಗಣೇಶನಿಗೆ ಇಟ್ಟ ಲಡ್ಡು ದಾಖಲೆ ಪ್ರಮಾಣದಲ್ಲಿ ಇಲ್ಲಿ ಹರಾಜಾಗುತ್ತದೆ. ಒಂಬತ್ತು ದಿನಗಳವರೆಗೆ ಬಾಲಾಪುರದ ಗಣೇಶೋತ್ಸವ ನಡೆಯುತ್ತದೆ. 9ನೇ ದಿನ ಗಣೇಶ ಲಡ್ಡುವಿನ ಹರಾಜು ನಡೆಯುತ್ತದೆ. ಕಳೆದ ವರ್ಷ 18 ಲಕ್ಷ 90 ಸಾವಿರ ರೂಪಾಯಿಗಳಿಗೆ ಲಡ್ಡು ಮಾರಾಟವಾಗಿತ್ತು. ಆದರೆ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಲಡ್ಡು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಬಾಲಾಪುರ …

Read More »

ತಾತನನ್ನೇ ಕೊಂದು ತೋಟದಲ್ಲಿ ಹೂತುಹಾಕಿದ್ದ ಮೊಮ್ಮಗ! ತುಮಕೂರಲ್ಲಿ 8 ತಿಂಗಳ ಬಳಿಕ ಭಯಾನಕ ರಹಸ್ಯ ಬಯಲು

ತುಮಕೂರು: ತಾತನನ್ನು ಮೊಮ್ಮಗನೇ ಕೊಲೆ ಮಾಡಿದ ರಹಸ್ಯ 8 ತಿಂಗಳ ಬಳಿಕ ಬಯಲಾಗಿದೆ. ಅದೂ ಸ್ನೇಹಿತರ ನಡುವೆ ಮನಸ್ತಾಪ ಉಂಟಾಗಿದ್ದರಿಂದ… ಇಂತಹ ವಿಚಿತ್ರ ಪ್ರಕರಣ ಗುಬ್ಬಿ ತಾಲೂಕಿನ ನಡೆದಿದೆ. ಕಲ್ಲರ್ದಗೆರೆ ಭೋವಿ ಕಾಲನಿಯ ಗೋವಿಂದಪ್ಪ (75) ಕೊಲೆಯಾಗಿದ್ದು, ಪ್ರಕರಣದ ಬೆನ್ನು ಹತ್ತಿದ ಚೇಳೂರು ಪೊಲೀಸರು ಗೋವಿಂದಪ್ಪನ ಮೊಮ್ಮಗ ಮೋಹನ್​ ಹಾಗೂ ಆತನ ಸ್ನೇಹಿತರಾದ ಪ್ರಜ್ವಲ್​, ಚೇತನ್​ ಎಂಬುವವರನ್ನು ಬಂಧಿಸಿದ್ದಾರೆ.   ಏನಿದು ಪ್ರಕರಣ?: ಗೋವಿಂದಪ್ಪಗೆ ನಾಲ್ಕು ಎಕರೆ ಜಮೀನು ಇತ್ತು. ಇವರಿಗೆ ಒಬ್ಬ …

Read More »

ದೇಶದಲ್ಲಿ ಸುನಾಮಿ ಬರುವ ಸಾಧ್ಯತೆಯಿದೆ,: ಕೋಡಿಮಠದ ಶ್ರೀ

ಮಂಡ್ಯ : ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swami) ಅವರು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ   ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ಭೇಟಿ ನೀಡಿರುವ ಕೋಡಿ ಮಠದ ಶ್ರೀಗಳು ರಾಜ್ಯಾದ್ಯಂತ ಮಳೆ ಅನಾಹುತ ಮುಂದುವರಿಯಲಿದೆ. ದೇಶದಲ್ಲಿ ಸುನಾಮಿ ಬರುವ ಸಾಧ್ಯತೆಯೂ ಇದೆ ಎಂದು ಅಪಾಯದ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ ಭೂಮಿಯಿಂದ ಹೊಸ ವಿಷ ಜಂತುಗಳು ಉದ್ಭವಿಸಲಿವೆ. ಜನರು ಓಡಾಡುವಾಗ ಬಡಿಗೆ …

Read More »

ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಡಬ್ಬಿ ಹಂಚುವ ಕೆಲಸ ಶುರುವಾಗಿದೆ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ: ಸಂಜಯ ಪಾಟೀಲ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗಿನಿಂದಲೇ ಡಬ್ಬಿ ಹಂಚುವ ಕೆಲಸ ಶುರುವಾಗಿದೆ. ಆ ಡಬ್ಬಿ ಖಾಲಿ ಇದೆಯೋ..? ತುಂಬಿದೆಯೋ..? ಗೊತ್ತಿಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ನಾನು 10 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಶಾಸಕನಾಗಬೇಕು ಎಂಬ ಆಸೆಯಿದೆ. ಆ ಪ್ರಕಾರ …

Read More »

ಎಲ್ಲಾ ಸಮಾಜದ ಸಾಧು, ಸಂತರು, ಸನ್ಯಾಸಿ ಹಾಗೂ ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ದ: ಸಂಜಯ ಪಾಟೀಲ

ಎಲ್ಲಾ ಸಮಾಜದ ಸಾಧು, ಸಂತರು, ಸನ್ಯಾಸಿ ಹಾಗೂ ಮಠಾಧೀಶರ ಹಿತರಕ್ಷಣೆಗೆ ಬಿಜೆಪಿ ಬದ್ದವಾಗಿದ್ದು, ಸಮಾಜದಲ್ಲಿ ಘಾತಕ ಶಕ್ತಿಗಳ ಮಟ್ಟಾಹಾಕಲು ಬಿಜೆಪಿ ಸಿದ್ದ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು. ಬೆಳಗಾವಿ ನಗರದ ಖಾಸಗಿ ಹೋಟೆಲ್ ದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ನಾಡಿನಲ್ಲಿ ಸಾಧು ಸಂತರ ಹಾಗೂ ಸನ್ಯಾಸಿಗಳ ತ್ಯಾಗದಿಂದ ಇಂದು ಪ್ರತಿಯೊಂದು ಸಮಾಜದ ಜನರು ಅವರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾಗಿ ಸಾಮರಸ್ಯದ …

Read More »

ನಾಳೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ `ಜನಸ್ಪಂದನ’ ಸಮಾವೇಶ : 3 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ’ ಸಮಾವೇಶ ಜನಸ್ಪಂದನಾ ಸಮಾವೇಶವು ನಾಳೆ ಮಧ್ಯಾಹ್ನ 12 ಗಂಟೆಗೆ ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದು, ಮೂರು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.   ಜನಸ್ಪಂದನ ಸಾರ್ಥಕ ಸೇವೆ ಸಬಲೀಕರಣ ಸಮಾವೇಶವನ್ನು ಶನಿವಾರ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉದ್ಘಾಟಿಸಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ …

Read More »