ವಾಷಿಂಗ್ಟನ್: ಮಂಗಳ ಗ್ರಹದಲ್ಲಿದ್ದ ಸರೋವರದ ಅಲೆಗಳೇ ಕಲ್ಲುಗಳಾಗಿ ಮಾರ್ಪಾಡಾಗಿರುವ ಚಿತ್ರವನ್ನು ನಾಸಾದ ರೋವರ್ ಒಂದು ಸೆರೆ ಹಿಡಿದಿದೆ. ಈ ಮೂಲಕ ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು ಎನ್ನುವ ವಾದಗಳಿಗೆ ಮತ್ತೊಂದು ಪುಷ್ಟಿ ಸಿಕ್ಕಿದಂತಾಗಿದೆ. ಮಂಗಳನಲ್ಲಿ ಸಂಚರಿಸುತ್ತಿರುವ ನಾಸಾದ “ಕ್ಯೂರಿಯಾಸಿಟಿ ರೋವರ್’, “ಸಲ್ಫೆಟ್-ಬಿಯರಿಂಗ್ ಯೂನಿಟ್’ ಎನ್ನುವ ಪ್ರದೇಶದಲ್ಲಿ ಸಂಚರಿಸುತ್ತಿರುವ ವೇಳೆ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಇದು ಪರ್ವತ ಸಾಲಿನಲ್ಲಿರುವ ಪ್ರದೇಶವಾಗಿದ್ದು,ಚಿತ್ರಗಳು ಆ ಪ್ರದೇಶದಲ್ಲಿ ಪುರಾತನ ಸರೋವರವಿತ್ತು ಎನ್ನುವುದಕ್ಕೆ …
Read More »ಕುಂದರಗಿ ಮಹಾಲಕ್ಷ್ಮಿ ಜಾತ್ರೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ವಿಧಾನ ಪರಿಷತ್ ಸದಸ್ಯರಾದಲಖನ ಜಾರಕಿಹೊಳಿ
ಗೋಕಾಕ: ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಜಾತ್ರೆಯ ಸಂಭ್ರಮ ಜಿಲ್ಲೆ ಯಾದ್ಯಂತ ಸುಮಾರ ಕಡೆ ಗ್ರಾಮ ದೇವಿಯ ಜಾತ್ರೆಗಳು ನಡಿತಿವೆ. ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರ ರಾಗಿದ್ದಾರೆ. ಗ್ರಾಮದ ವಿಶೇಷ ಕುಂದು ಕೊರತೆಗಳ ಹಾಗೂ ದೇವಿಯ ಜಾತ್ರೆಗೆ ಬೇಕಾಗುವು ವ್ಯವಸ್ಥೆ ಬಗ್ಗೆ ಗಮನ ಹರಿಸಿ …
Read More »ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ : ಸೋನಾಲಿ ಸರ್ನೋಬತ್
ಬೆಳಗಾವಿ : ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾತ್ರೆಯ ನೆಪ ಮಾಡಿಕೊಂಡು ಜನರ ಬಳಿ ಬರುತ್ತಿವೆ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಟೀಕಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಖಾನಾಪುರ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದ ಕಾಂಗ್ರೆಸ್ ಶಾಸಕರು ಹಾಥ್ ಸೇ ಹಾಥ್ ಜೋಡೋ ಎನ್ನುತ್ತ …
Read More »ಫೆಬ್ರವರಿ ಕೊನೆಯ ವಾರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ: ಸಿದ್ದರಾಮಯ್ಯ
ವಿಜಯಪುರ: ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶನಿವಾರ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಡೆಸಿರುವ ಮೂರು ಸಮೀಕ್ಷೆ ಆಧಾರದಲ್ಲಿ ಗೆಲ್ಲುವ ಶಕ್ತಿ ಇರುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು. 150 ಕ್ಷೇತ್ರಗಳಲ್ಲಿ ವಿಜಯ ಸಾಧಿಸುವ ಗುರಿಯೊಂದಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಗೆಲ್ಲುವ …
Read More »ಕಾಂಕ್ರೀಟ್ ಲಾರಿಯೊಂದು ಬೈಕ್ ಗೆ ರಭಸವಾಗಿ ಡಿಕ್ಕಿ ಸ್ಥಳದಲ್ಲಿಯೇಸಾವನ್ನಪ್ಪಿದ ಮಹಿಳೆ
ಕಾಂಕ್ರೀಟ್ ಲಾರಿಯೊಂದು ಬೈಕ್ ಗೆ ರಭಸವಾಗಿ ಡಿಕ್ಕಿ ಹೊಡೆದು ಮಹಿಳೆಯೋರ್ವಳ ಮೇಲೆ ಹರಿದು ಪರಿಣಾಮವಾಗಿ ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ ಘಟನೆ ನಗರದ ನೂರಾನಿ ಮಾರ್ಕೆಟ್ ಬಳಿ ಇಂದು ಸಂಭವಿಸಿದೆ. ಮಹಿಳೆಯ ತಲೆಯ ಮೇಲೆ ಹರಿದು ಛಿದ್ರ ಛಿದ್ರವಾಗಿದ್ದು, ಮಹಿಳೆಯ ಹೆಸರು ತಿಳಿದು ಬಂದಿಲ್ಲ. ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಹಿಳೆಯ ಜೊತೆಗೆ ಇದ್ದ ವ್ಯಕ್ತಿಯೋರ್ವನಿಗೆ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. …
Read More »ರಾಜ್ಯ ಸರಕಾರದ ಭ್ರಷ್ಟಾಚಾರ ಭಾಷಣದಲ್ಲಿ ಸಾಬೀತು: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ಯಾವ ಕೆಲಸವನ್ನೂ ಮಾಡದೆ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜನರ ಆರೋಪ ರಾಜ್ಯಪಾಲರ ಭಾಷಣದಿಂದ ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣ ಕುರಿತು ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಸರಕಾರವು ರಾಜ್ಯಪಾಲರ ಬಾಯಲ್ಲಿ ಒಂದು ವರ್ಷದ ಸಾಧನೆಗಳ ಬಗ್ಗೆ ಮಾಡಿಸಿರುವ ಭಾಷಣ ಸುಳ್ಳಿನ ಕಂತೆ ಎಂದು ದೂರಿದ್ದಾರೆ. ರಾಜ್ಯವು ಇಂದು ಮುಖ್ಯವಾಗಿ ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ, ಸೌಹಾರ್ದದ ಸಮಸ್ಯೆ, …
Read More »ಡಿ.ಕೆ.ಶಿ ಮಗಳಿಗೆ ₹ 150 ಕೋಟಿ ಆಕಾಶದಿಂದ ಉದುರಿದೆಯೇ: ಸಿಬಿಐ ಪ್ರಶ್ನೆ
ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಇದೇ 24ರವರೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಈ ಸಂಬಂಧ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಶುಕ್ರವಾರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್.ಜಾಧವ್, ‘ಅರ್ಜಿದಾರರು ಸಾರ್ವಜನಿಕ ಸೇವಕರಿದ್ದು …
Read More »3 ವಿಮಾನ ನಿಲ್ದಾಣಗಳಿಗೆ ನಾಮಕರಣ ಏಕಕಾಲಕ್ಕೆ ನಿರ್ಧಾರ: ಸಿಎಂ
ಹುಬ್ಬಳ್ಳಿ: ‘ಶಿವಮೊಗ್ಗ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಾಮಕರಣ ಕುರಿತು ಏಕಕಾಲದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡುವ ಜನರ ಬೇಡಿಕೆಯಿತ್ತು. ಯಡಿಯೂರಪ್ಪ ನವರೇ ಮತ್ತೆ ಬೇಡ ಎಂದಿದ್ದಾರೆ. ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. ‘ಕಾಂಗ್ರೆಸ್‌ನದ್ದು ಟಿಪ್ಪು ಸಂಸ್ಕೃತಿ, ಬಿಜೆಪಿಯದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಕೃತಿ’ ಎಂಬ …
Read More »ಕನ್ನಡ ಪರ ಹೋರಾಟಗಾರರಿಗೆ ರೌಡಿ ಶೀಟರ್ ಪಟ್ಟ, 50 ಸಾವಿರ ರೂ. ಮುಚ್ಚಳಿಕೆ
ಬೆಳಗಾವಿ: ಮರಾಠಿಗರ ಓಲೈಕೆ ರಾಜಕಾರಣಕ್ಕೆ ಬಿದ್ದ ರಾಜ್ಯ ಸರಕಾರ ಕನ್ನಡ ಪರ ಹೋರಾಟಗಾರರಿಗೆ ರೌಡಿ ಶೀಟರ್ ಪಟ್ಟ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ಎಂಇಎಸ್ ಮುಖಂಡ ದೀಪಕ ದಳವಿ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರಾದ ಸಂಪತ್ ಕುಮಾರ್ ದೇಸಾಯಿ ಹಾಗೂ ಅನಿಲ ದಡ್ಡಿಮನಿ ಅವರ ವಿರುದ್ಧ ಪೊಲೀಸರು ರೌಡಿಶೀಟ್ ತೆರೆದಿದ್ದಾರೆ. ಇತ್ತೀಚೆಗಷ್ಟೇ ನಡೆದ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕನ್ನಡಿಗರಿಗೆ …
Read More »ಇನ್ಸ್ ಪೆಕ್ಟರ್ ದೇವೇಂದ್ರ ದುಬೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಬೆಂಗಳೂರು: ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ದೇವೇಂದ್ರ ದುಬೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ತು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರಪ್ರದೇಶ ಮೂಲದ ದೇವೆಂದ್ರ ದುಬೆ ಹಲವು ವರ್ಷಗಳಿಂದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಆರತಿ ಮಾಳವಿಯ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆದರೆ ಈಗ ದುಬೆ ಮೃತದೇಹ ಬಿಡಿಎ ಕಚೇರಿ ಬಳಿಯ ರೈಲ್ವೆ …
Read More »
Laxmi News 24×7