Breaking News

ರಾಜಕೀಯ

ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ : ಯತ್ನಾಳ್‌

ಮೈಸೂರು : ಹಿಂದೂ ಸಮಾಜ ಉಳಿಸುತ್ತಿರುವವರು ಮೇಲ್ಜಾತಿ ಹುಡುಗರಲ್ಲ. ದಲಿತರು, ನಾಯಕರು, ಹಿಂದುಳಿದ ಸಮಾಜದ ಯುವಕರು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ತಿ.‌ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಿರಿ ವಾತಾವರಣವಿದೆ. ಹಿಂದೂಗಳು ಜೀವನ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹನುಮ ಜಯಂತಿ ಮಾಡುವುದು ಕೆಲವು ಜನರಿಗೆ ಭಯ ಹುಟ್ಟಿಸಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡರೆ ಹುಷಾರ್ ಅಂತ ರಾಜ್ಯದ …

Read More »

ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು’: ಊರ ಹೊರಗಿನ ಗುಡಿಸಲೊಳಗಿಂದ ಯಾರಿಗೂ ಕೇಳಿಸದ ಬಾಣಂತಿ, ಕಂದಮ್ಮನ ಪಾಡು!

ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಬಾಣಂತಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳು ವಾಸ ಮಾಡುತ್ತಿದ್ದಾರೆ. ಇದು ಕಾಡುಗೊಲ್ಲ ಸಮುದಾಯದ ಆಚರಣೆ. ಇಂಥ ಆಚರಣೆಯನ್ನು ಇಂದಿಗೂ ಈ ಸಮುದಾಯ ನಡೆಸಿಕೊಂಡು ಬರುತ್ತಿದೆ. ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇದಕ್ಕೊಂದು ಉದಾಹರಣೆ ದೊರೆಯಿತು. ಊರ ಹೊರಗಿರುವ ಗುಡಿಸಲಿನಲ್ಲಿ ವಾಸಿಸುತ್ತಿರುವ ವಸಂತ ಎಂಬ ಬಾಣಂತಿಯದ್ದು ನರಕಯಾತನೆಯಾಗಿದೆ. ತುಂತುರು ಮಳೆ, ಚಳಿ, ಗಾಳಿಯ ನಡುವೆ ಗುಡಿಸಲಿನಲ್ಲಿ ಈಕೆ ಇದ್ದಾರೆ. ಐದು ದಿನಗಳ ಹಿಂದೆ ತುಮಕೂರು …

Read More »

ಎನ್‌ಡಿಎ ಮೈತ್ರಿಕೂಟವು ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ

  ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಪಡೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸೇರಿ ತಮ್ಮ ಎರಡನೇ ಏಕತಾ ಸಭೆಯನ್ನು ನಡೆಸಿದ ಕೆಲವೇ ಗಂಟೆಗಳ ಬಳಿಕ ಸಂಜೆ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎನ್‌ಡಿಎ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನಮ್ಮ ಎಲ್ಲ ಮೈತ್ರಿ ಪಾಲುದಾರರು …

Read More »

ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್​ ಕ್ವೀನ್​!

ಚಿಕ್ಕೋಡಿ(ಬೆಳಗಾವಿ): ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯ ಪರಿಸ್ಥಿತಿ ಇತ್ತು. ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ. ಟೊಮೆಟೊ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರೆ, ಅನ್ನದಾತರು ಮಾತ್ರ ಖುಷಿಯಾಗಿದ್ದಾರೆ. ಟೊಮೆಟೊ ಬೆಳೆದ …

Read More »

ವಿಧಾನಸಭೆಯಲ್ಲಿಂದು ಸಚಿವರು ಕರ್ನಾಟಕ ಸಹಕಾರ ಸಂಘಗಳ ಹಾಗೂ ಕರ್ನಾಟಕ ಭೂ ಕಂದಾಯ ಸೇರಿದಂತೆ ಹಲವು ವಿಧೇಯಕಗಳನ್ನು ಮಂಡಿಸಿದ್ದಾರೆ.

ಬೆಂಗಳೂರು: ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ 2023ನೇ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ರೈತರು, ಬಡವರಿಗೆ ತ್ವರಿತ ನ್ಯಾಯದಾನ ಕಲ್ಪಿಸಿಕೊಡುವ ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಪರಾಜಯ ತಪ್ಪಿಸಲು ಪೂರಕವಾಗಲಿರುವ ಎರಡು ಹೊಸ ಕಾನೂನುಗಳು ಜಾರಿಗೆ ಬರಲಿವೆ. ಸಣ್ಣ, ಅತೀ ಸಣ್ಣ …

Read More »

ಚಲಿಸುತ್ತಿದ್ದ ಬಸ್​ ಮುಂದೆ ಮಹಿಳೆ ಆತ್ಮಹತ್ಯೆ.. ಮಗನ ಕಾಲೇಜು ಶುಲ್ಕಕ್ಕಾಗಿ ಹೆತ್ತಮ್ಮಳ ದಾರುಣ ಅಂತ್ಯ!

ಸೇಲಂ (ತಮಿಳುನಾಡು): ಮಕ್ಕಳಿಗಾಗಿ ಹೆತ್ತವರು ಎಂತಹ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ತಮ್ಮ ಆಸೆ, ನಿರೀಕ್ಷೆಗಳನ್ನೆಲ್ಲ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಾ ತಾಯಿ ಮಗನ ಕಾಲೇಜು ಶುಲ್ಕ ಕಟ್ಟುವ ಹಣ ಹೊಂದಿಸಲು ಪರಿಹಾರ ಸಿಗುತ್ತದೆ ಎಂದು ಚಲಿಸುತ್ತಿರುವ ಬಸ್ ಎದುರು ಬಂದು ಪ್ರಾಣ ತ್ಯಾಗ ಮಾಡಿದ್ದಾರೆ.ತನ್ನ ಮಗನ ಭವಿಷ್ಯ ಉಜ್ವಲಗೊಳಿಸುವ ಆಸೆಯಿಂದ ತಾಯಿ ತನ್ನ ಪ್ರಾಣವನ್ನೇ ಬಲಿ ಕೊಟ್ಟ ದಾರುಣ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.ಪಾಪತಿ (46) ಮೃತ ಮಹಿಳೆ. ಕಳೆದ ಜೂ.28ರಂದು ಬೆಳಗ್ಗೆ …

Read More »

ಎಪಿಎಂಸಿ ತಿದ್ದುಪಡಿ ವಿಧೇಯಕ ಸೆಲೆಕ್ಟ್ ಕಮಿಟಿಗೆ ವಹಿಸುವ ನಿರ್ಣಯ ಅಂಗೀಕರಿಸಿದ ಪರಿಷತ್: ಸರ್ಕಾರಕ್ಕೆ ಹಿನ್ನಡೆ..!

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಮತದಾನದ ಮೂಲಕ ಸೆಲೆಕ್ಟ್ ಕಮಿಟಿಗೆ ವಹಿಸುವ ಪ್ರಸ್ತಾವವನ್ನು ವಿಧಾನ ಪರಿಷತ್ ಅಂಗೀಕರಿಸಿದ್ದು, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ವಿಧಾನ ಪರಿಷತ್ ಕಲಾಪದಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ”ಎಪಿಎಂಸಿ ಕಾಯ್ದೆ ಕೇಂದ್ರ ವಾಪಸ್ ಪಡೆದರೂ ಕರ್ನಾಟಕ ವಾಪಸ್ ಪಡೆದಿಲ್ಲ. ಹಿಂದೆ ಕಾಯ್ದೆ ತಿದ್ದುಪಡಿ …

Read More »

ವಿಜಯಪುರ ಜಿಲ್ಲೆಯಲ್ಲಿ ಇಂದು ಕೊನೆಗೂ ಮುಂಗಾರು ಆರಂಭ

ವಿಜಯಪುರ: ಕೊನೆಗೂ ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಸೋಮವಾರ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದೆ. ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಇಂದು ಮಂಗಳವಾರ ಬೆಳಗ್ಗೆ 8-30ರಿಂದ ಸಂಜೆ 5-30ರವರೆಗೆ 5.2 ಮಿ,ಮೀ ಮಳೆ ದಾಖಲಾಗಿದೆ. ಇನ್ನೂ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ. ಭಾರತದ ಹವಾಮಾನ ವಿಭಾಗದ ಮಾಹಿತಿಜು.19 ರಿಂದ 23ರವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ. ವಿಜಯಪುರ …

Read More »

ಹಿರೆಕೋಡಿ ಗ್ರಾಮದ ಜೈನ ಮುನಿ ಹತ್ಯೆ ಹಿಂದೆ ಆಯಂಟಿ ನ್ಯಾಷನಲ್​ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ.

ಚಿಕ್ಕೋಡಿ(ಬೆಳಗಾವಿ): ಹಿರೆಕೋಡಿ ಗ್ರಾಮದ ಜೈನ ಮುನಿ ಹತ್ಯೆ ಹಿಂದೆ ಆಯಂಟಿ ನ್ಯಾಷನಲ್​ ಟೆರರಿಸ್ಟ್ ಸಂಘಟನೆ ಕೆಲಸ ಮಾಡುತ್ತಿದೆ. ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿಯಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಜಿನ್ಯಕ್ಯ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ …

Read More »

ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರು ಭಾರತವನ್ನು ರಕ್ಷಣೆ ಮಾಡುವ ತೀರ್ಮಾನ ಮಾಡಿದ್ದಾರೆ ಎಂದ ಡಿ.ಸಿ.ಎಂ .ಡಿ.ಕೆ. ಶಿ.:

ಬೆಂಗಳೂರು: ದೇಶ ನಿರೀಕ್ಷೆ ಮಾಡಿದಂತೆ ಇಂದಿನ ಪ್ರತಿ ಪಕ್ಷಗಳ ಸಭೆ ಯಶಸ್ವಿಯಾಗಿ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ಸಭೆ ಭಾರತದ ಧ್ವನಿಯಾಗಿತ್ತು. ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರು ಭಾರತವನ್ನು ರಕ್ಷಣೆ ಮಾಡುವ ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ. ಮೈತ್ರಿಕೂಟದ ನಾಯಕರ ಜೊತೆ ಡಿಕೆ ಶಿವಕುಮಾರ್​ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ಇಂದಿನ ಸಭೆಯು ಭಾರತದ ಧ್ವನಿಯಾಗಿದೆ.. ಅದರಲ್ಲಿ ಸಾಕಷ್ಟು …

Read More »