Breaking News

ರಾಜಕೀಯ

ನೀರಿನ ಕಾಲುವೆಗೆ ಕೆಮಿಕಲ್ ಮಿಶ್ರಿತ ಆಯಸಿಡ್​ ಕಪ್ಪು ಬಣ್ಣಕ್ಕೆ ತಿರುಗಿದ‌ ಬೆಳೆ

ದಾವಣಗೆರೆ : ಅವರು ಮೂಲತಃ ಆಂಧ್ರದಿಂದ ಆಗಮಿಸಿ ದಾವಣಗೆರೆಯ ಸುತ್ತಮುತ್ತ ಕೃಷಿ ಚಟುವಟಿಕೆ ಮಾಡ್ತಾ ಜೀವನ ಸಾಗಿಸುತ್ತಿದ್ದವರು. ಯಾರೋ ದುರುಳರು ಬಂದು ಆ ರೈತನ ಹೊಲಕ್ಕೆ ನೀರು ಕಟ್ಟುವ ಕಾಲುವೆಯ ನೀರಿಗೆ ಟ್ಯಾಂಕರ್ ಮೂಲಕ ರಾಸಾಯನಿಕ ತ್ಯಾಜ್ಯ (ಕೆಮಿಕಲ್) ಸುರಿದ ಬೆನ್ನಲ್ಲೇ ಅವರ ಬದುಕು ಬರ್ಬಾದ್ ಆಗಿದೆ. ನೀರಿನಲ್ಲಿ ರಾಸಾಯನಿಕ ಹರಿದುಬಂದು ಹೊಲ ಸೇರಿದ್ದರಿಂದ‌ ಇಡೀ ಭತ್ತದ ಪೈರು ಕಪ್ಪು ಬಣ್ಣಕ್ಕೆ ತಿರುಗಿ ಸುಟ್ಟಿರುವ ರೀತಿ ಭಾಸವಾಗುತ್ತಿದೆ. ಸಾಲಸೋಲ ಮಾಡಿ ಬೆಳೆದಿದ್ದ …

Read More »

ಶಿವಶಕ್ತಿ ಪಾಯಿಂಟ್​ನಲ್ಲಿ 3×4 ವ್ಯಾಸದ ಕುಳಿ ಚಿತ್ರ ಕಳುಹಿಸಿದ ರೋವರ್​.. ಪಥ ಬದಲಿಸಿ ಅಧ್ಯಯನ ಮುಂದುವರಿಕೆ

ಬೆಂಗಳೂರು​: ಚಂದ್ರನ ಶಿವಶಕ್ತಿ ಪಾಯಿಂಟ್​ ಸುತ್ತಲೂ ಅಧ್ಯಯನ ಆರಂಭಿಸಿರುವ ಪ್ರಜ್ಞಾನ್​ ರೋವರ್​ ದೊಡ್ಡ ಕುಳಿಯನ್ನು ಗುರುತಿಸಿದೆ. 8 ಮೀಟರ್ ದೂರದ ಸಂಚಾರದಲ್ಲಿ ಮಾರ್ಗ ಮಧ್ಯೆ ಕುಳಿಯೊಂದು ಬಂದಿದ್ದು, ನೇರವಾಗಿ ಚಲಿಸುವ ಬದಲು ಅಲ್ಲಿಂದ ಪಕ್ಕಕ್ಕೆ ಸರಿದು ಪ್ರಯೋಗ ಮುಂದುವರಿಸಿದೆ. ಶಶಿಯ ಈ ಕುಳಿ 3×4 ವ್ಯಾಸ ಹೊಂದಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 27 ರಂದು ರೋವರ್​ ಈ ಕುಳಿಯ ಸಮೀಪ ಸಾಗಿದೆ. ಬಳಿಕ ಹೊಸ ಮಾರ್ಗವನ್ನು ಆಯ್ದುಕೊಂಡು ಸುರಕ್ಷಿತವಾಗಿ ಮುಂದೆ …

Read More »

ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಲ್ಲ:H.D.K.

ಮಂಡ್ಯ: ಮುಂದಿನ ಐದು ವರ್ಷ ನಿಖಿಲ್ ಕುಮಾರಸ್ವಾಮಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನಿಖಿಲ್‌ಗೆ ಸಲಹೆ ನೀಡಿದ್ದೇನೆ, ರಾಜಕೀಯ ಸಹವಾಸಕ್ಕೆ ಹೋಗಬೇಡ. ನಿನಗೆ ಭಗವಂತ ಕೊಟ್ಟಿರೋ ಕಲೆ ಇದೆ ಸಿನಿಮಾ ಮಾಡು ಎಂದು ಹೇಳಿರುವುದಾಗಿ ನಿಖಿಲ್ ಚುನಾವಣೆ ಸ್ಪರ್ಧೆ ಬಗ್ಗೆ ನಿಖಿಲ್​ ತಂದೆಯೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಿಖಿಲ್​ಗೆ ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು …

Read More »

ಗೋಕಾಕ ಪ್ರತಿಭೆಗಳಿಗೆ ಗುಡ್ ನ್ಯೂಸ್; ಮತ್ತೆ ಸತೀಶ್ ಶುಗರ್ಸ್ ಅವಾರ್ಡ್ ಪ್ರಾರಂಭ

ಗೋಕಾಕ ಪ್ರತಿಭೆಗಳಿಗೆ ಗುಡ್ ನ್ಯೂಸ್; ಮತ್ತೆ ಸತೀಶ್ ಶುಗರ್ಸ್ ಅವಾರ್ಡ್ ಪ್ರಾರಂಭ. ಗೋಕಾಕ : ಸತೀಶ್ ಶುಗರ್ಸ್ ಅವಾರ್ಡ್ ಪ್ರಾರಂಭ ಮಾಡುವುದಾಗಿ ಗೋಕಾಕ ಪ್ರತಿಭೆಗಳಿಗೆ ಗುಡ್ ನ್ಯೂಸ್; ಮತ್ತೆ ಸತೀಶ್ ಶುಗರ್ಸ್ ಅವಾರ್ಡ್ ಪ್ರಾರಂಭ. ಗೋಕಾಕ : ಸತೀಶ್ ಶುಗರ್ಸ್ ಅವಾರ್ಡ್ ಪ್ರಾರಂಭ ಮಾಡುವುದಾಗಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ, ಜನವರಿ ತಿಂಗಳಲ್ಲಿ ಗೋಕಾಕ ನಗರದಲ್ಲಿ ಸತೀಶ್ ಶುಗರ್ಸ್ ಅವಾರ್ಡ್ ಹಮ್ಮಿಕೊಳ್ಳಲಾಗುವುದು. …

Read More »

ಧರಣಿ ನಡೆಸುತ್ತಿದ್ದ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ರೈತರು.. ಡಿಸಿ, ಎಸ್ಪಿ ಭೇಟಿ

ಗಂಗಾವತಿ (ಕೊಪ್ಪಳ) : ಸರಿಯಾದ ಮಳೆ ಇಲ್ಲದಿರುವ ಕಾರಣಕ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕಾರಟಗಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.   ಆರೋಗ್ಯದಲ್ಲಿ ದಿಢೀರ್ ಏರುಪೇರಿನಿಂದಾಗಿ ಆಸ್ಪತ್ರೆ ಪಾಲಾದ ರೈತರನ್ನು ಕಾರಟಗಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ನಲೀನ್ ಅತುಲ್ ಕುಮಾರ್ ಹಾಗೂ ಜಿಲ್ಲಾ ಎಸ್ಪಿ ಯಶೋಧಾ …

Read More »

ಒಂದೇ ಕುಟುಂಬದ ನಾಲ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೈಸೂರು: ಒಂದೇ ಕುಟುಂಬದ ನಾಲ್ವರು ಮನೆಯಲ್ಲಿಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ನಗರದ ಚಾಮುಂಡಿ ಪುರಂನಲ್ಲಿ ನಡೆದಿದೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಲಭಾದೆಯಿಂದಲೇ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಚಾಮುಂಡಿಪುರಂನ ಮನೆಯಲ್ಲಿ ಮಹದೇವ ಸ್ವಾಮಿ (48), ಇವರ ಪತ್ನಿ ಅನಿತಾ(35), 17 ಹಾಗೂ 15 ವರ್ಷ ವಯಸ್ಸಿನ ಪುತ್ರಿಯರು ಶವವಾಗಿ ಪತ್ತೆಯಾದವರು. ಮಹದೇವ ಸ್ವಾಮಿ ಶವ ಮನೆಯ ಹಾಲ್​ನಲ್ಲಿ …

Read More »

ಸಾವಯವ ಕೃಷಿಯ ಮಹತ್ವದ ಬಗ್ಗೆ ರೈತ ಶ್ರೀಶೈಲ ಕೂಗಲಿ ಮಾಹಿತಿ

ಬಾಗಲಕೋಟೆ : ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಆರಾಮಾಗಿ ಜೀವನ ಕಳೆಯಬೇಕು ಎನ್ನುವರು ಹೆಚ್ಚಾಗಿ ಇರುತ್ತಾರೆ. ಆದರೆ ಇಲ್ಲೊಬ್ಬರು ನಿವೃತ್ತರಾದ ಬಳಿಕ ರೈತರಾಗಿ ಮತ್ತೆ ತಮ್ಮ ಹೊಸ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಜಮೀನಿಗೆ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಜಾಗೃತಿ ಮೂಡಿಸುವ ಜೊತೆಗೆ ಉಚಿತ ಸಾವಯವ ಗೊಬ್ಬರ ವಿತರಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಶ್ರೀಶೈಲ ಕೂಗಲಿ ಎಂಬ ಇವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 17 ವರ್ಷ ಸೇನೆಯಲ್ಲಿ …

Read More »

ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ.. ಮನೆಗಳಿಗೆ ಬೆಂಕಿ, ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರ ಲೂಟಿ

ಇಂಫಾಲ (ಮಣಿಪುರ): ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾನುವಾರ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹೊಸದಾಗಿ ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿ ನಡುವೆ ಘರ್ಷಣೆ ಕೂಡ ಭುಗಿಲೆದ್ದಿದೆ. ಮೇ 3ರಿಂದ ಮಣಿಪುರ ರಾಜ್ಯಾದ್ಯಂತ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಆಗಸ್ಟ್ 29ರಂದು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲಾಗಿದೆ. ಇದರ ನಡುವೆ ಇಂಫಾಲ ಪೂರ್ವ ಜಿಲ್ಲೆಯ ನ್ಯೂ ಲಂಬುಲೇನ್‌ ಪ್ರದೇಶದಲ್ಲಿ …

Read More »

ಸಾಲಾಬಾಧೆಯಿಂದ ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ.

ಹಾವೇರಿ : ಜಿಲ್ಲೆಯಲ್ಲಿ ರವಿವಾರ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಗಿರೀಶ್ ಮುರ್ಡೆಪ್ಪನವರ್ ಮೃತಪಟ್ಟಿದ್ದರೆ, ಮತ್ತೊಂದು ಕಡೆ ಬ್ಯಾಡಗಿ ತಾಲೂಕಿನ ಶೀಡೆನೂರು ಗ್ರಾಮದ ನಾಗೇಶಪ್ಪ ಕೊಡಗದ್ದಿ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಗಿರೀಶ್ ಬ್ಯಾಂಕ್‌ನಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಮತ್ತು ಸೊಸೈಟಿಯಲ್ಲಿ ಎರಡು ಲಕ್ಷ ಮತ್ತು ಕೈಗಡ ಒಂದೂವರೆ ಲಕ್ಷ ಸಾಲ ಮಾಡಿದ್ದ. ತಮ್ಮ ಮನೆಯಲ್ಲಿ ಗಿರೀಶ್ ಸಾವಿಗೆ ಶರಣಾಗಿದ್ದಾರೆ. ಈ ಕುರಿತಂತೆ ಹಲಗೇರಿ …

Read More »

ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ.:H.D.K.

ರಾಮನಗರ : ರೇಷ್ಮೆನಗರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ಹಣ ಕೊಟ್ಟಿದ್ದೆ. ಡಿ ಕೆ ಶಿವಕುಮಾರ್ ಆಗ ವೈದ್ಯಕೀಯ ಸಚಿವರಾಗಿದ್ದರು. ಟೆಂಡರ್ ಕೊಟ್ಟಿದ್ದೂ ಕೂಡಾ ಇನ್ನೂ ಜೀವಂತವಾಗಿದೆ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ನಿಮ್ಮದೇ ಸರ್ಕಾರ ಇದೆ. ನಾನು …

Read More »