ಹುಬ್ಬಳ್ಳಿ ಏ,4- ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ ಎಂಬ ಅನುಮಾನ ಕಾಡುತ್ತಿದೆ.ಪೊಲೀಸರ ಕಣ್ತಪ್ಪಿಸಿ ಒಂದು ಕೋಮಿನ ಜನರು ಪ್ರಾರ್ಥನೆ ನಡೆಸಲು ಮುಂದಾಗಿದ್ದರು. ಆದ್ರೆ ಇದನ್ನು ಪ್ರಶ್ನಿಸಲಯ ಹೋದ ಪೊಲೀಸರ ಮೇಲೆ ಆ ಸಮುದಾಯದ ಮಹಿಳೆಯರು ಹಾಗೂ ಪುರುಷರು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಪ್ರಾರ್ಥನೆ ತಡೆಯಲು ಬರುತ್ತಾರೆ ಎಂದು ಪೂರ್ವನಿಯೋಜಿಯವಾಗಿ ಕಲ್ಲು …
Read More »ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತ:ಸಿದ್ಧಾರೂಢ ಸ್ವಾಮಿ
ಹುಬ್ಬಳ್ಳಿ: ಕೋವಿಡ್ 19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಸುಮಾರು 135 ವರ್ಷಗಳಿಂದ ನಡೆಯುತ್ತ ಬಂದಿದ್ದ ದಾಸೋಹ ಶನಿವಾರದಿಂದ ಸ್ಥಗಿತಗೊಂಡಿದೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ದೇಶದ ಎಲ್ಲ ಕ್ಷೇತ್ರಗಳನ್ನು ಸಂಚರಿಸುತ್ತ,ಅಜ್ಞಾನ ನಿವಾರಿಸಿ ಸನ್ಮಾರ್ಗ ತೋರುತ್ತ 1877ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದರು. ತಮ್ಮನ್ನು ಭೇಟಿ ಮಾಡಲು ಆಗಮಿಸುವ ಭಕ್ತರು ಹಸಿವಿನಿಂದ ಹೋಗಬಾರದೆಂಬ ಉದ್ದೇಶದಿಂದ ಸುಮಾರು 1885-87ರಲ್ಲಿ ಅನ್ನಸಂತರ್ಪಣೆ ಆರಂಭಿಸಿದ್ದರು. ಅಂದಿನಿಂದ ಅನ್ನಸಂತರ್ಪಣೆ ಪ್ರತಿದಿನ ನಿರಂತರವಾಗಿ …
Read More »ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 1 ವರ್ಷದ ವೇತನ ನೀಡಿದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್-19 ಹಾವಳಿ ತಡೆಗಟ್ಟಲು ಸ್ಥಾಪಿಸಿರುವ ಪರಿಹಾರ ನಿಧಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಮ್ಮ 1 ವರ್ಷದ ವೇತನವನ್ನು ನೀಡಿದ್ದಾರೆ. ಈ ಕುರಿತಂತೆ ಸಚಿವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಸೋಂಕು ಲಕ್ಷಣ ಇರುವ ಮಂದಿಗೆ ಮತ್ತು ರೋಗಿಗಳಿಗೆ ಸರ್ಕಾರವೇ ಚಿಕಿತ್ಸೆ ಒದಗಿಸುತ್ತಿದೆ. ಈ ಸಂಕಷ್ಟದ ಸಂದರ್ಭದಲ್ಲಿ …
Read More »ಕೊರೋನಾ ಎಫೆಕ್ಟ್ : ಮಧ್ಯಂತರ ಜಾಮೀನಿನ ಮೇಲೆ 11 ಕೈದಿಗಳಿಗೆ ಬಿಡುಗಡೆ ಭಾಗ್ಯ..!
ಹುಬ್ಬಳ್ಳಿ: ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಮತ್ತು ಇಷ್ಟೇ ಅವಧಿಗೆ ಶಿಕ್ಷೆಗೆ ಒಳಗಾಗುವ ಅಪರಾಧ ಪ್ರಕರಣ ಹೊಂದಿದ್ದವರ 11 ಜನ ಕೈದಿಗಳನ್ನು ಇಲ್ಲಿನ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಕೊರೊನೊ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ …
Read More »ಎಟಿಎಂಗಳಲ್ಲಿ ಹಣ ಖಾಲಿ, ಯಾಮಾರಿದರೆ ಉಚಿತವಾಗಿ ಅಂಟುತ್ತೆ ಕೊರೋನಾ..!
ಹುಬ್ಬಳ್ಳಿಮಾ,31- ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕ ಸೇವಾ ವಲಯಗಳಲ್ಲಿ ಕಡ್ಡಾಯವಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟ ಸಂದೇಶ ರವಾನಿಸಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಎಟಿಎಂ ಸೆಂಟರ್ ಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಾ, ಸರಿಯಾಗಿ ನಿರ್ವಹಣೆ ಮಾಡುತಿಲ್ಲ.ಶೇಕಡಾ 75 ರಷ್ಟು ಎಟಿಎಂಗಳಲ್ಲಿ ಹಣವೇ ಖಾಲಿ.ಕೆಲ ರಾಷ್ಟ್ರೀಕೃತ, ಪ್ರಾದೇಶಿಕ ಬ್ಯಾಂಕ್‌ಗಳ ಎಟಿಎಂಗಳಲ್ಲಿಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಬ್ಯಾಂಕ್ ಗ್ರಾಹಕರಲ್ಲಿಆತಂಕ ಇನ್ನಷ್ಟು ಸೃಷ್ಟಿಸಿದೆ. ಜಿಲ್ಲೆಯಲ್ಲಿರುವ 450 …
Read More »ಕೊರೊನಾ ತಡೆಗೆ ರೈತನಿಂದ ಒಂದು ಲಕ್ಷ ದೇಣಿಗೆ
ಹುಬ್ಬಳ್ಳಿ: ರೈತರೇ ನಿಜವಾದ ಅನ್ನದಾತರು. ತಮ್ಮ ಕಾಯಕದಲ್ಲಿ ಸದಾ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದರಲ್ಲೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ಇದೀಗ ಅಂತಹ ರೈತನೊಬ್ಬ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಧಾರವಾಡ ನಗರದ ಗುಲಗಂಜಿಕೊಪ್ಪ ನಿವಾಸಿ ಸದಾನಂದ ಶಿವಳ್ಳಿ ಅವರು ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಕೋವಿಡ್-19 ತಡೆ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ನೌಕರರು ಹಾಗೂ ಅನೇಕರು …
Read More »ಕೊರೊನಾ ಎಫೆಕ್ಟ್: ತಂದೆಯ ಅಂತ್ಯಕ್ರಿಯೆಗೆ ಬಾರದ ಮಗ, ಮಗಳಿಂದ ಚಿತೆಗೆ ಬೆಂಕಿ
ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ತಂದೆಯ ಅಂತಿಮ ಸಂಸ್ಕಾರಕ್ಕೆ ಮಗನೇ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ ಮೃತ ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬಾರದಿರುವ ಹಿನ್ನೆಲೆಯಲ್ಲಿ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಆಗಮಿಸಬೇಕಿದ್ದ ಮಗ ಲಾಕ್‍ಡೌನ್‍ನಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಂದೆ ಎನ್.ಎ. ಚವ್ಹಾನ್ ಅವರ ಅಂತಿಮ ಸಂಸ್ಕಾರವನ್ನು ಮಗನ ಅನುಪಸ್ಥಿತಿಯಲ್ಲಿ ಅವರ …
Read More »ಹುಬ್ಬಳ್ಳಿ:ಮದ್ಯ ಸಿಗದೇ ಮತ್ತೊಬ್ಬ ವ್ಯಕ್ತಿ ನೇಣಿಗೆ ಶರಣು..!
ಹುಬ್ಬಳ್ಳಿ: ಮದ್ಯ ಸಿಗುತ್ತಿಲ್ಲಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸೂರಿನ ಗಣೇಶ ಪಾರ್ಕ್ ನಲ್ಲಿ ನಡೆದಿದೆ. ಧಾರವಾಡ ಮೂಲದ ಉಮೇಶ ಹಡಪದ (46) ಮೃತ ವ್ಯಕ್ತಿ. ಈತ 15 ದಿನಗಳ ಹಿಂದೆ ಗಣೇಶ ಪಾರ್ಕ್ನ ಮನೆಯೊಂದರಲ್ಲಿವಾಚ್ಮನ್ ಕೆಲಸಕ್ಕೆ ಸೇರಿಕೊಂಡಿದ್ದ. ಒಂದು ವಾರದಿಂದ ಮದ್ಯದಂಗಡಿ ಬಂದ್ ಆಗಿದ್ದು, 5 ದಿನದಿಂದ ಮದ್ಯ ಸಿಕ್ಕಿರಲಿಲ್ಲ. ಮದ್ಯ ಸಿಗದೇ ಕಂಗಾಲಾಗಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. …
Read More »ಕೊರೊನಾ ಯುದ್ಧದಲ್ಲಿ ಸೈನಿಕರಂತೆ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ “
ಹುಬ್ಬಳ್ಳಿ,ಮಾ,27- ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಜನರು ಸಮರ್ಪಕವಾಗಿ ಸ್ಪಂದನ ಮಾಡುತಿಲ್ಲ ಆದ್ದರಿಂದ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ ಕಾರ್ಮಿಕರು. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಹಗಲಿರುಳು ಹೋರಾಡುತ್ತಿದ್ದಾರೆ. ಕೊರೊನಾ ವೈರಾಣು ಹರಡದಂತೆ ಸಹಕರಿಸಲು ಪ್ರಧಾನಿ ಮನವಿ ಮಾಡಿದರೂ ಏನು ಪ್ರಯೋಜನವಾಗುತಿಲ್ಲ. ಆದರೂ ಸಹ ಇಲ್ಲಿ ಕೇಲವರು ತಮ್ಮ ಜೀವನದ ಮೇಲಿನ ಆಶೆ ಮೀರಿ ಹೋರಾಟ ಮಾಡುತಿದ್ದಾರೆ. ಅವರೇ ನಮ್ಮ ಹುಬ್ಬಳ್ಳಿ ಧಾರವಾಡ ಪಾಲಿಕೆ …
Read More »ಧಾರವಾಡ ಜಿಲ್ಲೆಯಲ್ಲಿ 437 ಜನರ ಮೇಲೆ ಕರೋನಾ ನಿಗಾ
ಹುಬ್ಬಳ್ಳಿ.:,ಮಾ,26- ಕರೋನಾ ವೈರಸ್ ಪತ್ತೆಗಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 437 ಜನರ ಮೇಲೆ ನಿಗಾ ವಹಿಸಲಾಗಿದೆ. 266 ಜನರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಪ್ರತ್ಯೇಕತಾ ಅವಧಿಯನ್ನು 155 ಜನ ಪೂರ್ಣಗೊಳಿಸಿದ್ದಾರೆ. 28 ದಿನಗಳ ಪ್ರತ್ಯೇಕತೆ ಅವಧಿಯನ್ನು 14 ಜನ ಪೂರ್ಣಗೊಳಿಸಿದ್ದಾರೆ.ಇದುವರೆಗೆ 38 ಶಂಕಿತರ ಗಂಟಲು ದ್ರವದ ಪ್ರಯೋಗಾಲಯ …
Read More »