Breaking News

ಬೆಳಗಾವಿ

ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಬೇಕಿದೆ ಸರ್ಕಾರದ ನೆರವು

ಚಿಕ್ಕೋಡಿ : ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್​ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲೇ ಸಾಗಿದ್ದವು. ಅಲ್ಪ ಸ್ವಲ್ಪ ಮಳೆಯಲ್ಲೇ ಬೀಜ ಬಿತ್ತಿದ್ದ ರೈತರಿಗೆ ಆಘಾತವಾಗಿದೆ. ಮಳೆ ಕೈಕೊಟ್ಟ ಪರಿಣಾಮ, ಬಿತ್ತನೆ ಮಾಡಿರುವ ಬೀಜಗಳು ಮೊಳಕೆಯಲ್ಲಿ ಒಣಗುತ್ತಿರುವ ಹಿನ್ನೆಲೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳಗಾವಿ ಜಿಲ್ಲೆಯ …

Read More »

ಶುದ್ಧ ನೀರು ಬರುತ್ತಿಲ್ಲ. ಕಲುಷಿತ ನೀರು ಕುಡಿದು ಮಕ್ಕಳೆಲ್ಲ ಅನಾರೋಗ್ಯ ಮೂಲ ಸೌಕರ್ಯಗಳಿಲ್ಲದೆ ಬೆಳಗಾವಿಯ ಕೆಹೆಚ್​ಬಿ ಕಾಲೋನಿ ನಿವಾಸಿಗಳ ಗೋಳು

ಬೆಳಗಾವಿ: ಮಹಾನಗರದ ಪಕ್ಕದಲ್ಲಿದ್ದರೂ ಈ ಬಡಾವಣೆ ಮಾತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕಣ್ಮುಂದೆಯೇ ಬೆಳಗಾವಿ ಮಹಾನಗರ ಕಾಣಿಸಿದರೂ, ಅದನ್ನು ತಲುಪಲು ಸುತ್ತಿಬಳಸಿ ಬರಬೇಕಾದ ಸಂದಿಗ್ಧತೆ ಎದುರಾಗಿದೆ. ಇದು ಬಸವನ ಕುಡಚಿಯಲ್ಲಿರುವ ಕೆಹೆಚ್‌ಬಿ ಕಾಲೋನಿ ಜನರಿಗೆ ಎದುರಾಗಿರುವ ಸಂಕಷ್ಟ. ಕರ್ನಾಟಕ ಗೃಹ ಮಂಡಳಿ 2012ರಲ್ಲಿ ಈ ಬಡಾವಣೆಯನ್ನು ನಿರ್ಮಾಣ ಮಾಡಿದ್ದು, 137 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ವಿವಿಧ ಗಾತ್ರಗಳ 1,573 ನಿವೇಶನಗಳನ್ನು ರೂಪಿಸಿ, ಸರ್ಕಾರಿ ನಿಯಮಾನುಸಾರ ಜನರಿಗೆ ಹಂಚಲಾಗಿದೆ. 125 ನಿವೇಶನಗಳಲ್ಲಿ ಸರ್ಕಾರದಿಂದಲೇ …

Read More »

ಚಂದರಗಿ ಗ್ರಾಮ ಪಂಚಾಯತ ಆವರಣದಲ್ಲಿ ರಕ್ತದಾನ

ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಕುಂದ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಚಂದರಗಿ ಗ್ರಾಮ ಪಂಚಾಯತ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ನಡೆಯಿತು. ಈ ವೇಳೆ 28ಕ್ಕೂ ಅಧಿಕ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಂಜಯ ಹಳ್ಳಿ, ರಕ್ತದಾನ ಶ್ರೇಷ್ಠದಾನ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಹೀಗಾಗಿ ಎಲ್ಲರೂ ರಕ್ತದಾನ ಮಾಡಲು …

Read More »

ರಾಜು ಕಾಗೆ ಇವರಿಗೆ ಅಥಣಿ ಜಿಲ್ಲಾ ಎಂದು ಘೋಷಣೆವಾಗಬೇಕು ಕಾರಣ ಸರ್ಕಾರಕ್ಕೆ ಒತ್ತಡ ಹಾಕಿರಿ ಎಂದು ಹೋರಾಟ ಸಮಿತಿ ವತಿಯಿಂದ ಉಗಾರದಲ್ಲಿ ಶಾಸಕರಿಗೆ ಮನವಿ

ಅಥಣಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಕಾಗವಾಡ ಶಾಸಕ ರಾಜು ಕಾಗೆ ಇವರಿಗೆ ಅಥಣಿ ಜಿಲ್ಲಾ ಎಂದು ಘೋಷಣೆವಾಗಬೇಕು ಕಾರಣ ಸರ್ಕಾರಕ್ಕೆ ಒತ್ತಡ ಹಾಕಿರಿ ಎಂದು ಹೋರಾಟ ಸಮಿತಿ ವತಿಯಿಂದ ಉಗಾರದಲ್ಲಿ ಶಾಸಕರಿಗೆ ಮನವಿ ಅರ್ಪಿಸಿದರು. ರವಿವಾರ ರಂದು ಅಥಣಿ ತಾಲೂಕ ಹೋರಾಟ ಸಮಿತಿ ವತಿಯಿಂದ ಹೋರಾಟ ಸಮಿತಿಯ ಅಧ್ಯಕ್ಷ ಪ್ರಶಾಂತ್ ತೂಡಕರ್ ಇವರು ಖ್ಯಾತ ನ್ಯಾಯವಾದಿಗಳಾದ ಕೆ ಎಲ್ ಕುಂದರಗಿ, ದೇವೇಂದ್ರ ಬಿಸವಾಗರ್ ಇವರ ನೇತೃತ್ವದಲ್ಲಿ ಶಾಸಕ ರಾಜು …

Read More »

ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಬಳಿ ಕ ಎಲ್ಲರೂ ಒಂದಾಗಿ ಪಕ್ಷ, ಜಾತಿ ಭೇದಗಳನ್ನು ಮರೆತು ಅಭಿವೃದ್ಧಿಗಾಗಿ ಒಂದಾಗೋಣ ಎಂದ ರಾಜು ಕಾಗೆ

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ಸರ್ವಾಂಗಿನ ಅಭಿವೃದ್ಧಿ ವಾಗಲು ಸ್ಥಳೀಯ ಎಲ್ಲ ರಾಜಕೀಯ ಪಕ್ಷದ ಮುಖಂಡರು ಚುನಾಯಿತ ಸದಸ್ಯರು ಇವರ ಸಹಕಾರದಿಂದ 12 ಅಂತರರಾಷ್ಟ್ರೀಯ,ರಾಷ್ಟ್ರ, ರಾಜ್ಯ, ಪ್ರಶಸ್ತಿಗಳು ಲಭಿಸಿವೆ ಇದು ಒಂದು ಗ್ರಾಮದ ಒಕ್ಕಟಕ್ಕೆದ ಫಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಮಂಗಳವಾರ ರಂದು ಶರುಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಬಳಿಕ ಪ್ರಥಮ ಬಾರಿಗೆ ಶಾಸಕ ರಾಜು ಕಾಗೆ ಆಗಮಿಸಿದ ನಿಮಿತ್ಯ ಅವರನ್ನು ಮತ್ತು ನೂತನ ಗ್ರಾಮ …

Read More »

ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ವಿಭಿನ್ನ ರೀತಿಯಲ್ಲಿ ಬಸವ ಪಂಚಮಿ ಆಚರಿಸಲಾಯಿತು

ಬೆಳಗಾವಿಯ ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ಇಂದು ಬಸವ ಪಂಚಮಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ಬಸವ ಪಂಚಮಿಯನ್ನು ನಾಗದೇವತೆಗೆ ಹಾಲಿನ ಅಭಿಷೇಕದ ಬದಲು ಮಕ್ಕಳಿಗೆ ಹಾಲು, ಸಿಹಿತಿಂಡಿ ನೀಡಿ ಆಚರಿಸಲಾಯಿತು. ಸಮಾಜದಲ್ಲಿ ದೇವರ ಹೆಸರಿನಲ್ಲಿ ಮೂಢನಂಬಿಕೆ ಹೋಗಲಾಡಿಸಲು, ಆಹಾರ ಪೋಲು ಮಾಡುವದನ್ನು ನಿಲ್ಲಿಸಲು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಸಾಮಾಜಿಕ …

Read More »

ಶಾಹಪೂರ ನಗರದ ನಿವಾಸಿಯಾಗಿದ್ದ ಗೋಪಾಲ ರೋಹಿದಾಸ ಹೊನಗೆಕರ ಹೃದಯಘಾತದಿಂದ ಇಂದು ನಿಧನ

ಶಾಹಪೂರ ನಗರದ ನಿವಾಸಿಯಾಗಿದ್ದ ಗೋಪಾಲ ರೋಹಿದಾಸ ಹೊನಗೆಕರ ಹೃದಯಘಾತದಿಂದ ಇಂದು ನಿಧನರಾದರು. ಇಂದು ಹೃದಯಘಾತದಿಂದ ಶಾಹಪೂರ ನಗರದ ನಿವಾಸಿ ಗೋಪಾಲ ರೋಹಿದಾಸ ಹೊನಗೆಕರ ಯವರು ನಿಧನರಾಗಿದ್ದಾರೆ ,ಮೃತರು ಹೆಂಡತಿ ,ಇಬ್ಬರು ಮಕ್ಕಳು, ತಂದೆ ತಾಯಿಗಳು ಸಹೋದರ ಸಹೋದರಿಯನ್ನು ಅಗಲಿದ್ದಾರೆ ಮೃತರನ್ನ ಆತ್ಮಕ್ಕೆ ಶಾಂತಿ ಸಿಗಲೇಂದು ಹೊನಗೆಕರ ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ , ಇನ್ನೂ ಮೃತನ ಪುಣ್ಯತಿಥಿ ಕಾರ್ಯಕ್ರವನ್ನು ಆ.23 ರಂದು ನೇರವೇರಿಸುವುದಾಗಿ ಗುರು ಹಿರಿಯರು ತಿಳಿಸಿದ್ದಾರೆ

Read More »

ನಂಬಿಕೆ ದ್ರೋಹ ಮಾಡಿದನೆಂದು ಸ್ನೇಹಿತನನ್ನೇ ದುಷ್ಕರ್ಮಿಗಳ ಕೊಲೆ

ಚಿಕ್ಕೋಡಿ : ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಹಾರುಗೇರಿ ಗ್ರಾಮದ ಅಕ್ಬರ್ ಶಬ್ಬೀರ್ ಜಮಾದಾರ್ (22) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳ್ಳತನದ ವ್ಯವಹಾರದಲ್ಲಿ ನಂಬಿಕೆ ದ್ರೋಹ ಎಸಗಿದ್ದಾನೆಂದು ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಮೃತನ ತಾಯಿ ಕೈರುಣ ಜಮಾದಾರ ಆರೋಪಿಸಿದರು. ಬಸ್ತವಾಡ ಗ್ರಾಮದ ಹೊರವಲಯದಲ್ಲಿ ಜಮಾದಾರ್​ನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದು, ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಳೆದ ಎರಡು …

Read More »

ಭೋಲೇನಾಥ ಕಲಾಕೃತಿ ಕಲ್ಲಂಗಡಿಯಲ್ಲಿ ರಚಿಸಿದ ಕಲ್ಲಪ್ಪ ಶಿವಾಜಿ ಭಾತಕಾಂಡೆ

ಹಬ್ಬಗಳು ಮತ್ತು ಆಚರಣೆಗಳ ತಿಂಗಳು ಎಂದು ಕರೆಯಲ್ಪಡುವ ಶ್ರಾವಣ ಮಾಸ ಮತ್ತು ಶ್ರಾವಣ ಸೋಮವಾರ ಕೂಡ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕಲ್ಲಪ್ಪ ಶಿವಾಜಿ ಭಾತಕಾಂಡೆ ಕಲ್ಲಂಗಡಿಯಲ್ಲಿಶಂಕರ ಮತ್ತು ಶಿವಲಿಂಗವನ್ನು ರಚಿಸಿದ್ದಾರೆ. ನಾಳೆ ಈ ವರ್ಷದ ಪವಿತ್ರ ಶ್ರಾವಣದ ಮೊದಲ ಸೋಮವಾರ. ಹೀಗಾಗಿ ನಗರದ ಶಿವಾಲಯಗಳಲ್ಲಿ ಶಂಕರನಿಗೆ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಪ್ಪ ಭಾತಕಾಂಡೆ ತಮ್ಮ ಶಿವಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಶ್ರೀ ಹನುಮಂತೆಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.   ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ …

Read More »