Breaking News

ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯಿಂದ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕಆರಂಭ

ಭಾರತದಲ್ಲಿ ಪ್ರಪ್ರಥಮವಾಗಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಆರಂಭಿಸಲಾಯಿತು ಕುಂದಾನಗರಿಯ ಬೆಳೆಗಾವಿಯಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಆರಂಭಿಸಲಾಯಿತು , ಅಶೋಕ ನಗರದಲ್ಲಿರುವ ಫ್ಲವರ್ ಮಾರ್ಕೆಟ್ ನಲ್ಲಿ ಹಸಿರು ‌ನ್ಯಾಯಪೀಠದ ಸುಭಾಷ ಅಡಿ ಚಾಲನೆ ನೀಡಿದರು. ದೇಶದಲ್ಲಿ ಮೊದಲ ಬಾರಿಗೆ ಪ್ರಪ್ರಥಮವಾಗಿ ಬೆಳಗಾವಿಯ ಆರೋಗ್ಯ ಇಲಾಖೆಯಿಂದ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಘಟಕವನ್ನು ಸ್ಥಾಪಿಸಿರುವುದು ಖುಷಿಯ ವಿಚಾರ ಬೆಳೆಗಾವಿಯ …

Read More »

ಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಗೋಕಾಕ್ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ವಾಟ್ಸ್​ಆಯಪ್​ನಲ್ಲಿ ಚರ್ಚಿಸಿ ಬಳಿಕಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಗೋಕಾಕ್ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಬೆಣಚಿನಮರಡಿಯ ಖಿಲಾರಿ ಗ್ಯಾಂಗ್ ಮತ್ತು ಗೋಕಾಕ್​ ಎಸ್‌ಪಿ ಸರ್ಕಾರ ಗ್ಯಾಂಗ್‌ ಎಂಬ ಹೆಸರಿಟ್ಟುಕೊಂಡು ದರೋಡೆಗೆ ಇಳಿದಿದ್ದ ಗೋಕಾಕ್​ ತಾಲೂಕಿನ ಬೆಣಚಿನಮರಡಿಯ ದುರ್ಗಪ್ಪ ವಡ್ಡರ, ನಾಗಪ್ಪ ಮಾದರ, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ಧ ತಪಸಿ, ಬೀರಸಿದ್ಧ ಗುಂಡಿ, ಉದ್ದಪ್ಪ ಖಿಲಾರಿ, ಗೋಕಾಕ್​ನ ಪರಶುರಾಮ ಗೊಂಧಳಿ ಹಾಗೂ ಆಕಾಶ ತಳವಾರ ಬಂಧಿತರು. ಸಾಮಾನ್ಯವಾಗಿ …

Read More »

ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಗೋಕಾಕ: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದರು. ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ವಿಧಾನ ಸಭಾ ಮತಕ್ಷೇತ್ರದ ಅನುದಾನ ಅಡಿಯಲ್ಲಿ ಫಲಾನುಭವಿಗಳಿಗೆ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಗೂ ಅಂಗವಿಕಲ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ ಹಾಗೂ …

Read More »

ರಾಯಬಾಗ:ಸರ್ವಧರ್ಮ ಸಮಾನ ಸಿಪಿಐ ಮುಲ್ಲಾ, ಠಾಣೆಗೆ ಆಗಮಿಸಿದ ಗಣೇಶ

ರಾಯಬಾಗ:ಸರ್ವಧರ್ಮ ಸಮನ್ವಯ ಸಿಪಿಐ ಮುಲ್ಲಾ ಠಾಣೆಗೆ ಆಗಮಿಸಿದ ಗಣೇಶ.ಹೌದು ಬೆಳಗಾವಿ ಜಿಲ್ಲೆಯ ಪಟ್ಟಣದಲ್ಲಿಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪೋಲಿಸ್ ಗಣೇಶ ಆಗಮನ, ಗಣೇಶ ಚತುರ್ಥೀ ಹಬ್ಬದ ನಿಮಿತ್ಯ ಎಲ್ಲೆಡೆ ಸಡಗರ ಸಂಭ್ರಮದಿಂದ ಗಣೇಶನನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಇಂದು ಪಟ್ಟಣದ ರಾಯಬಾಗದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಠಾಣೆಗೆ ಗಣಪಣ ಆಗಮನ, ಇಂದು ರಾಯಬಾಗ ಪೊಲಿಸರು ಅದ್ದೂರಿಯಾಗಿ ಗಣೇಶನನ್ನ ಪೋಲಿಸ್ ಜೀಪ ಮೇಲಿಟ್ಟು ಅದ್ದೂರಿಯಾಗಿ ಪಟಾಕಿ ಸಿಡಿಸಿ ವಾದ್ಯಮೇಳದೊಂದಿಗೆ …

Read More »

ತಿಗಡೊಳ್ಳಿಯ ಯುವಕನಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಪಿ ಭೀಮಾಶಂಕರ ಗುಳೇದ ಹೇಳಿದ್ದೇನು?

ಬೆಳಗಾವಿ: ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಅದರಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಿಗಡೊಳ್ಳಿಯ ವಿಜಯ ಆರೇರ್(32) ಕೊಲೆಯಾದ ಯುವಕ. …

Read More »

ಗಣೇಶೋತ್ಸವ ಮೆರವಣಿಗೆಗೆ ಈದ್ ಮಿಲಾದ್ ಮುಂದೂಡಿದ ಮುಸ್ಲಿಮರು

ಬೆಳಗಾವಿ: ಗಡಿ, ಭಾಷೆಯ ಹೆಸರಿನಲ್ಲಿ ನಡೆಯುವ ಹಲವು ವಿವಾದಗಳ ಮಧ್ಯೆ ಬೆಳಗಾವಿ ಹಬ್ಬಗಳ ವಿಚಾರದಲ್ಲಿ ಸೌಹಾರ್ದತೆ ಮೆರೆಯುತ್ತಾ ಬಂದಿದೆ. ಇದಕ್ಕೆ ಹೊಸ ಉದಾಹರಣೆಯೆಂಬಂತೆ, ಈ ಬಾರಿ ಎಲ್ಲ ಧರ್ಮ, ಭಾಷೆಯವರು ಒಂದಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಗಣೇಶ ನಿಮಜ್ಜನೆ ಮೆರವಣಿಗೆಗೆ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಮುಂದೂಡಿದ್ದಾರೆ. 119 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ವೈಭವದ ಗಣೇಶೋತ್ಸವಕ್ಕೆ ಕುಂದಾನಗರಿ ಖ್ಯಾತಿಯ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಶ್ರದ್ಧಾ-ಭಕ್ತಿಯಿಂದ ಬರಮಾಡಿಕೊಂಡು, ಸಂತಸದಿಂದ …

Read More »

ಗಣಪನ ಆಗಮನಕ್ಕೆ ಕುಂದಾನಗರಿ ಸಜ್ಜಾಗಿದ್ದು

ಬೆಳಗಾವಿ: ಗಣಪನ ಆಗಮನಕ್ಕೆ ಕುಂದಾನಗರಿ ಸಜ್ಜಾಗಿದ್ದು, ಭರದ ಸಿದ್ಧತೆಯಲ್ಲಿ ಜನರು ತೊಡಗಿದ್ದಾರೆ. ಮಾರುಕಟ್ಟೆ ಪ್ರದೇಶಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಇನ್ನು, ಪೂಜಾ ಸಾಮಗ್ರಿ ಖರೀದಿಗೆ ಜನ ಅಂಗಡಿಗಳಿಗೆ ಮುಗಿ ಬಿದ್ದಿರುವುದು ಇಂದು ಕಂಡು ಬಂತು. ಹೌದು.. ಇಡೀ ರಾಜ್ಯದಲ್ಲೇ ಬೆಳಗಾವಿಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತದೆ‌. ಈ ಸಲ ಸೆ.18ರಂದು ಕೆಲವರು ಚೌತಿ ಆಚರಿಸುತ್ತಿದ್ದರೆ ಮತ್ತೊಂದಿಷ್ಟು ಜನ 19ರಂದು ಆಚರಿಸಲು ಮುಂದಾಗಿದ್ದಾರೆ. ಹಾಗಾಗಿ ಭಾನುವಾರ ಬೆಳಗಾವಿಯ ಗಣಪತಿ ಗಲ್ಲಿ, ಖಡೇಬಜಾರ್, …

Read More »

ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಥಣಿಯ ಆರು ಮಂದಿ ಸಾವು; ಸ್ವಗ್ರಾಮದಲ್ಲಿ ನೆರವೇರಿತು ಅಂತ್ಯಕ್ರಿಯೆ

ಚಿಕ್ಕೋಡಿ : ಸೆಪ್ಟೆಂಬರ್ 15 ರಂದು ತಿರುಪತಿಯ ತಿಮ್ಮಪ್ಪನ ದರ್ಶನ ಮಾಡಿಕೊಂಡು ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದ ಅಥಣಿ ತಾಲೂಕಿನ ಬಡಚಿ ಗ್ರಾಮದ ಭಕ್ತರ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಮೃತಪಟ್ಟಿದ್ದರು. ಇವತ್ತು ಅವರ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ, ಕಡಪ-ಚಿತ್ತೂರು ರಸ್ತೆಯಲ್ಲಿ ಅಪಘಾತ ಸಂಭವಿಸಿ ಐದು ಜನ ಸಾವು ಸಂಭವಿಸಿ 11 ಜನರಿಗೆ ಗಾಯಗಳಾಗಿತ್ತು. ಇದರಲ್ಲಿ ಮೂವರ ಸ್ಥಿತಿ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ದಿನ ಆಚರಣೆ

ಗೋಕಾಕ : ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ದಿನಾಚರಣೆ ಆಚರಿಸಲಾಯಿತು.   ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು.   ಈ ಸಂದರ್ಭದಲ್ಲಿ ಕಾರ್ಖಾನೆ ಎಲ್ಲ‌ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

Read More »

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಖಾಸಗಿ ಲಾಡ್ಜ್ ವೊಂದರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.   ಕುಡಚಿ ಪಟ್ಟಣದ ಲಾಡ್ಜ್​ದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸಿಇಎನ್ ಇನ್ಸ್‌ಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿ ಗುಜರಾತ್, ಪಶ್ಚಿಮ ಬಂಗಾಳ ಮೂಲದ ತಲಾ ಇಬ್ಬರು ಯುವತಿಯರನ್ನು …

Read More »