Breaking News

ಬೆಳಗಾವಿ

ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆ ಸ್ಥಳ ಪರಿಶೀಲನೆ

ಮೂಡಲಗಿ : ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ.ಬಿ. ಆರ್.ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು. ಅವರು ಬುಧವಾರ ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ ಸಲುವಾಗಿ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಉಪಸ್ಥಿತಿಯಲ್ಲಿ ಇದೇ ಭಾನುವಾರ …

Read More »

ಮತಕ್ಷೇತ್ರದ ಅಭಿವೃದ್ಧಿಗೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳು 110 ಕೋಟಿ ಬಿಡುಗಡೆ ಮಾಡಿದ್ದಾರೆ ಶಾಸಕ ಶ್ರೀಮಂತ ಪಾಟೀಲ್.

ಮತಕ್ಷೇತ್ರದ ಅಭಿವೃದ್ಧಿಗೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳು 110 ಕೋಟಿ ಬಿಡುಗಡೆ ಮಾಡಿದ್ದಾರೆ ಶಾಸಕ ಶ್ರೀಮಂತ ಪಾಟೀಲ್. ಕಾಗವಾಡ ಮತ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಇಲ್ಲಿಯವರೆಗೆ ಸುಮಾರು 110 ಕೋಟಿ ಅನುದಾನವನ್ನು ಕೊಟ್ಟಿದ್ದು ಅದರಿಂದ ಗ್ರಾಮೀಣ ಭಾಗದ ಕುಡಿಯುವ ನೀರು, ತೋಟದ ರಸ್ತೆ,ಕೆರೆಗಳ ಅಭಿವೃದ್ಧಿ, ಚರಂಡಿ, ಸ್ಮಶಾನ ದೇವಸ್ಥಾನ ಹೀಗೆ ಗ್ರಾಮೀಣ ಭಾಗಗಳನ್ನು ಸಮಸ್ಯೆಗಳು ನನ್ನ ಅವಧಿಯಲ್ಲಿ ಒಂದು ಕಾಣದಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳಿದರು …

Read More »

ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿಶಿವಾಜಿನಗರ ಇಂದು ಸಂಪೂರ್ಣ ಸ್ತಬ್ಧ……

ಬೆಂಗಳೂರು, ಜ.21- ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಶಿವಾಜಿನಗರ ಇಂದು ಸಂಪೂರ್ಣ ಸ್ತಬ್ಧವಾಗಿತ್ತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳು, ಫುಟ್‍ಪಾತ್ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ನೀಡಿದ್ದರು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕಂಟೋನ್ಮೆಂಟ್‍ನ 9 ಮಾರುಕಟ್ಟೆಗಳು ಬಂದ್‍ನಿಂದ ಬಿಕೋ ಎನ್ನುತ್ತಿದ್ದವು. ನಾಲಾ ವೆಜಿಟೆಬಲ್ ಮಾರ್ಕೆಟ್, ಈವಿನಿಂಗ್ ಬಜಾರ್, ಗುಜರಿ ಮಾರುಕಟ್ಟೆ, ಬಂಡಿಮೋಟಾ ಮಾರ್ಕೆಟ್, ಸ್ಟೀಫನ್ ಸ್ಟೋರ್, ಸೆಂಟ್ರಲ್ ಸ್ಟ್ರೀಟ್ …

Read More »

ಯಮಕನಮರಡಿ ವೈ.ವಿ.ಎಸ್ ಶಾಲಾ ಆವರಣದಲ್ಲಿ ನೃತ್ಯೋತ್ಸವ…..

ಯಮಕನಮರಡಿ ವೈ.ವಿ.ಎಸ್ ಶಾಲಾ ಆವರಣದಲ್ಲಿ ಯ.ವಿ ಸಂಘದ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ನಡೆದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅವರು ಅತ್ಯಂತ ಗೌರವದಿಂದ ಮಾಡಿದ ಸನ್ಮಾನವನ್ನು ಪ್ರೀತಿಯಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಬಿ. ಹಂಜಿ, ಉಪಾಧ್ಯಕ್ಷರಾದ ಶ್ರೀ ರಾಮಗೊಂಡಾ …

Read More »

ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದವೈದ್ಯಾಧಿಕಾರಿಗೈರು

ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದ ಹೆಚ್ಚಾಗಿ ಗೈರು ಇರುವ ವೈದ್ಯಾಧಿಕಾರಿ ಸುಜಾತಾ ಕಿನಗಿ ನಿರ್ಲಕ್ಷ್ಯತನದಿಂದ ಯಡವಟ್ಟು ಮಾಡಿಕೊಂಡಿದ್ದಾರೆ.   ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದ ಹೆಚ್ಚಾಗಿ ಗೈರು ಇರುವ ವೈದ್ಯಾಧಿಕಾರಿ ಸುಜಾತಾ ಕಿನಗಿ ನಿರ್ಲಕ್ಷ್ಯತನದಿಂದ ಯಡವಟ್ಟು ಮಾಡಿಕೊಂಡಿದ್ದಾರೆ. ಅದೆನಪ್ಪ ಅಂದರೆ ಸರ್ಕಾರಿ ಹುದ್ದೆಗೆ ವೈದ್ಯಕೀಯ ಪ್ರಮಾಣ ಪತ್ರ ತರಲು ಒಬ್ಬ ಸ್ಥಳಿಯ ಯುವಕ …

Read More »

9 ನೂತನ ಶಾಸಕರಿಗೆ ಸಚಿವ ಸ್ಥಾನದ ಪಟ್ಟಿ ರೆಡಿ, ಖಾತೆ ಹಂಚಿಕೆ ಬಾಕಿ..!

ಬೆಂಗಳೂರು,ಜ.20- ಅಮಿತ್ ಷಾ ಸಿದ್ಧಪಡಿಸಿ ದ್ದಾರೆ ಎನ್ನಲಾದ ಸಚಿವರ ಪಟ್ಟಿ ಅಂತಿಮಗೊಂಡರೆ ಉಪಚುನಾವಣೆಯಲ್ಲಿ ಗೆದ್ದ 7 ಶಾಸಕರ ಜೊತೆಗೆ 2018ರ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷದ ಇಬ್ಬರು ಶಾಸಕರು ಯಡಿಯೂರಪ್ಪ ನವರ ಸಂಪುಟ ಸೇರ್ಪಡೆಯಾಗುವುದು ಖಚಿತವಾಗಿದ್ದು, ಅವರಿಗೆ ಯಾವ ಖಾತೆ ನೀಡಬೇಕೆಂಬು ದನ್ನೂ ಕೂಡ ಷಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ 11 ಮಂದಿ ನೂತನ ಶಾಸಕರು ಯಾವಾಗ ಸಚಿವ ಸಂಪುಟ ವಿಸ್ತರಣೆಯಾಗಿ ತಮಗೆ ಸಚಿವ ಹುದ್ದೆ ನೀಡುತ್ತಾರೊ ಎಂದು ಕಾಯುತ್ತಿದ್ದಾರೆ. …

Read More »

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲನ

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ,ಜಿ ಇವರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ,ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. …

Read More »

ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ

ಬೆಳಗಾವಿ, ಜ.20-ರಾಜ್ಯದ ಇತಿಹಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಶಾಸಕರಾದ ಅವರ ಪತ್ನಿ 9 ದಿನಗಳ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಮುಗಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಆಡಳಿತ) ಹೇಮಂತ ನಿಂಬಾಳ್ಕರ್ ಮತ್ತು ಅವರ ಪತ್ನಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಳೆದ ಜ. 11ರಂದು ಬೆಂಗಳೂರಿಂದ ಪಾದಯಾತ್ರೆ ಹೊರಟು ಸುದೀರ್ಘ 263 ಕಿಮೀ ನಡಿಗೆಯ 9 ದಿನಗಳ ನಂತರ ಇಂದು ತಿರುಪತಿ ತಿರುಮಲ …

Read More »

ಮುಗಳಖೋಡ ಮಠದಲ್ಲಿ ಭಜ೯ರಿಯಾಗಿ ನಡೆದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ : ಬ್ರಹ್ಮಾಂಡ ಗುರೂಜಿ ಉಪಸ್ಥಿತಿ

ಮುಗಳಖೋಡ ಮಠದಲ್ಲಿ ಭಜ೯ರಿಯಾಗಿ ನಡೆದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ : ಬ್ರಹ್ಮಾಂಡ ಗುರೂಜಿ ಉಪಸ್ಥಿತಿ ಬೆಳಗಾವಿ: ಇಂದು ರಾಯಬಾಗ ತಾಲೂಕಿನ ಮುಗಳಖೋಡದ ಜಿಡಗಾ ಮಠದಲ್ಲಿ, ಈ ವಷ೯ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಯಬಾಗ ತಾಲೂಕು ಸೇರಿದಂತೆ ಇತರೆಡೆಯಿಂದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು ರೊಟ್ಟಿ ಬುತ್ತಿಯನ್ನು ತಂದು ಮಠಕ್ಕೆ ಅಪಿ೯ಸಿದರು. ಮಠದ ಹೆಲಿಪ್ಯಾಡ ಆವರಣದಲ್ಲಿ ನಿಮಿ೯ಸಲಾಗಿದ್ದ ಮಂಟಪದಲ್ಲಿ ಹಳ್ಳಿ …

Read More »

 ತಂದೆ ಮಗ ಮತ್ತು ತಾಯಿಯ ಬರ್ಬರವಾಗಿ ಹತ್ಯೆ

ಬೈಲಹೊಂಗಲ ತಾಲೂಕು ದೊಡವಾಡ ಗ್ರಾಮದಲ್ಲಿ ತ್ರಿವಳಿ ಕೊಲೆ ನಡೆದಿದೆ. ತಂದೆ ಮಗ ಮತ್ತು ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಕಳೆದ ರಾತ್ರಿ ಅಪರಿಚಿತ ದುಷ್ಕರ್ಮಿಗಳಿಂದ ಈ ಭೀಕರ ಕೃತ್ಯ ನಡೆದಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ, ಹೆಂಡತಿ ಶಾಂತವ್ವಾ ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ ಕೊಲೆಯಾಗಿದ್ದಾರೆ. ಒಂದೇ ಮನೆಯಲ್ಲಿ ಮೂರು ಜನರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಳೆ ದ್ವೇಷ ಹಿನ್ನೆಲೆಯಲ್ಲಿ  ಈ ಕೊಲೆ ನಡೆದಿರು ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ದೊಡ್ಡವಾಡ ಪೊಲೀಸರು …

Read More »