Breaking News

ಬೆಳಗಾವಿ

ನಾಳೆಯೊಳಗೆ ಶೇ.99ರಷ್ಟು ಸಂಪುಟ ವಿಸ್ತರಣೆ ಕ್ಲಿಯರ್(ಇತ್ಯರ್ಥ) ಆಗಲಿದೆ.

ಮೂಲಗಳ ಪ್ರಕಾರ ಭಾನುವಾರ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದು ಅಂದು 12 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಗೆದ್ದಿರುವ 11 ಮಂದಿ ಶಾಸಕರ ಪೈಕಿ 9 ಮಂದಿ ಹಾಗೂ ಮೂಲ ಬಿಜೆಪಿಯಿಂದ ಮೂವರು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವಿದೆ. ಯಡಿಯೂರಪ್ಪ ನಾಳೆ ಬೆಂಗಳೂರಿಗೆ ಹಿಂತಿರುಗಲಿದ್ದು, ಭಾನುವಾರ ವಿಸ್ತರಣೆಗೆ ಸಮಯವನ್ನು ನಿಗದಿಪಡಿಸುವ ಸಾಧ್ಯತೆ ಇದೆ   ಬೆಂಗಳೂರು,ಜ.30- ಒಂದು ವೇಳೆ ದೆಹಲಿ ವರಿಷ್ಠರು ಅನುಮತಿ …

Read More »

ಅರ್ಧಕ್ಕೆ ನಿಂತ ಕೋಟ್ಯಾಂತರ ರೂಪಾಯಿ ಕಾಮಗಾರಿ. :3 ವರ್ಷಗಳಿಂದ ಶುರುವಾದ ಕಾಮಗಾರಿಗೆ ಇನ್ನೂ ಕೊನೆ ಯಾಗಿಲ್ಲ.

ಚಿಕ್ಕೋಡಿ, ಜ. 29: ಸಮೀಪದ ರಾಯಬಾಗ ತಾಲ್ಲೂಕಿನ ಹೊರವಲಯದಲ್ಲಿ ರೈಲ್ವೆ ಮೇಲ್ಸೇತುವೆ ಅರ್ಧಕ್ಕೆ ನಿಂತ ಕೋಟ್ಯಾಂತರ ರೂಪಾಯಿ ಕಾಮಗಾರಿ. ರಾಜ್ಯ ರೇಲ್ವೆ ಸಚಿವರಾದ ಸುರೇಶ ಅಂಗಡಿಯವರೇ ಇತ್ತ ಸ್ವಲ್ಪ ಗಮನ ಹರಿಸಿ ರಾಯಬಾಗ ಪಟ್ಟಣದ ಹೊರ ವಲಯದಲ್ಲಿ ಶುರುವಾಗಿದ್ದ ಕಾಮಗಾರಿ ಇನ್ನು ಮುಗಿಯುತ್ತಿಲ್ಲ ಸುಮಾರು 20 ಕೋಟಿ ರೂಪಾಯಿಗಳು ವೆಚ್ಚದಲ್ಲಿ ನಡೆಯುತ್ತಿರುವ ಈ ಸೇತುವೆ ಕಾಮಗಾರಿ 3 ವರ್ಷಗಳಿಂದ ಶುರುವಾದ ಕಾಮಗಾರಿಗೆ ಇನ್ನೂ ಕೊನೆ ಯಾಗಿಲ್ಲ. ಕೇವಲ ಐದು ನೂರು ಮೀಟರ್ …

Read More »

ಡಿಸಿಎಂ ಆಗುವ ನಿರೀಕ್ಷೆಯಲ್ಲಿ ರಮೇಶ ಜಾರಕಿಹೊಳಿ ಇಲ್ಲ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಡಿಸಿಎಂ ಆಗುವ ನಿರೀಕ್ಷೆಯಲ್ಲಿ ರಮೇಶ ಜಾರಕಿಹೊಳಿ ಇಲ್ಲ ಎಂದು ಕೆ ಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಇಂದು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ ಡಿಸಿಎ ಆಗುವ ಆಸೆ ನನಗೂ ಇಲ್ಲ, ರಮೇಶ ಅವರಿಗೂ ಇಲ್ಲ, ಇದು ಮಾಧ್ಯಮಗಳ ಸೃಷ್ಠಿ ಎಂದರು. 17 ಶಾಸಕರ ತ್ಯಾಗದಿಂದ ಸರ್ಕಾರ ಬಂದಿದೆ ಇದೇ ವಿಚಾರವನ್ನು ಹಲವು ಸಲ ಸಿಎಂ ಯಡಿಯೂರಪ್ಪ ಕೂಡ ಹೇಳಿದ್ದಾರೆ. ಇದೇ ವಿಚಾರವಾಗಿ ಇಂದು ದೆಹಲಿಗೆ ಸಿಎಂ ತೆರಳಿದ್ದಾರೆ. ಶೀಘ್ರದಲ್ಲೆ …

Read More »

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಟೆಕ್ಯೂಪ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗವು ಟೆಕ್ಯೂಪ ೧.೩ ಪ್ರಾಯೋಜಕತ್ವದಲ್ಲಿ “ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಗಾಗಿ ಮಷೀನ್ ಲರ್ನಿಂಗ್” ಎಂಬ ವಿಷಯದ ಕುರಿತು ಐದು ದಿನಗಳ  ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ) ಕಾರ್ಯಾಗಾರವನ್ನು ಜನೇವರಿ 28 ರಿಂದ ಫೆಬ್ರುವರಿ 01 ರವರೆಗೆ ಆಯೋಜಿದೆ. ಇದರ ಉದ್ಘಾಟನಾ ಸಮಾರಂಭವು ಮಂಗಳವಾರ  ವಿತಾವಿಯ ಸೆನೆಟ್ ಹಾಲ್ ನಲ್ಲಿ ನಡೆಯಿತು. ಇದನ್ನು ವಿಪ್ರೊ ಲಿಮಿಟೆಡ್ ನ ಫ್ರೆಷರ್ಸ್ ಎಂಗೇಜ್ಮೆಂಟ್ ಕಾರ್ಯಕ್ರಮದ ಮುಖ್ಯಸ್ಥ ಪಿ. ಬಿ. ಕೊಟುರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತಾಂತ್ರಿಕವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಇವತ್ತಿನ ಶಿಕ್ಷಕರು ತಮ್ಮ ಉಪನ್ಯಾಸದಲ್ಲಿ ಹೊಸ ರೀತಿಯ ವಿಧಾನಗಳ ಜೊತೆ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ವಿಷಯಗಳನ್ನು ಅರ್ಥೈಸಿಕೊಂಡು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ಕಾರಣ ಶಿಕ್ಷಕರೆ ವಿದ್ಯಾರ್ಥಿಗಳಿಗೆ ಬದಲಾಗುತ್ತಿರುವ ತಂತ್ರಜ್ಞಾನಗಳ ಬಗ್ಗೆ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲರು ಮತ್ತು ಅವರೇ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತರಬಲ್ಲರು ಎಂದು ಹೇಳಿದರು. ಸಮಾರಂಭದ ಗೌರವ್ ಅತಿಥಿಯಾಗಿದ್ದ ವಿ ತಾ ವಿ ಮೌಲ್ಯಮಾಪನ ಕುಲ ಸಚಿವರಾದ ಡಾ. ಸತೀಶ್ ಅಣ್ಣಿಗೇರಿ ಈ ಸಂದರ್ಭದಲ್ಲಿ ಮಾತನಾಡಿ ಶಿಕ್ಷಕರು ಈ ಹೊಸ ವಿಷಯಗಳ ಬಗೆಗಿನ ಆಳವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿ ತಾ ವಿ ಕುಲಸಚಿವರಾದ ಪ್ರೊ. ಆನಂದ ದೇಶಪಾಂಡೆ ಮಾತನಾಡಿ ಈ ಮಷೀನ್ ಲರ್ನಿಂಗ್ ಇವತ್ತಿನ ತಂತ್ರಜ್ಞಾನ ಲೋಕವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು ಕಾರಣ ತಂತ್ರಜ್ಞಾನದ ಪ್ರತಿ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವುದಕ್ಕೆ ಈ ಮಷೀನ್ ಲರ್ನಿಂಗ್ ಮೂಲ ಕಾರಣ ಎಂದು ಹೇಳಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಕ್ಷರಾದ ಡಾ.ಎಸ್.ಎ.ಅಂಗಡಿ ಸ್ವಾಗತಿಸಿದರು. ಎಫ್‌ ಡಿ ಪಿ ಸಂಯೋಜಕ ಡಾ.ಆರ್. ಎಚ್. ಗೌಡರ್, ಎಫ್‌ ಡಿ ಪಿ ಯ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ರೋಹಿತ್ ಕಲಿವಾಲ್ ವಂದಿಸಿದರು. ಪ್ರೊ.ರಂಜನಾ ನಾಡಗೌಡರ್ ನಿರೂಪಿಸಿದರು. ಇದರಲ್ಲಿ ಔದ್ಯೋಗಿಕ ಹಾಗೂ ಮತ್ತು ಸರ್ಕಾರಿ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ವಿ ಟಿ ಯು ಸಂಲಗ್ನತೆ ಹೊಂದಿದ ಕಾಲೇಜ್ ಗಳಿಂದ ಸುಮಾರು ೫೦ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

Read More »

ಇನ್ನು ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವಂತೆ ಸಂಪುಟಕ್ಕೆ ಸೇರ್ಪಡೆಯಾಗುವ ಆಕಾಂಕ್ಷಿಗಳು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ

ಬೆಂಗಳೂರು,ಜ.30-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯುವ ನಿಟ್ಟಿನಲ್ಲಿ ವರಿಷ್ಠರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಲು ಮುಂದಾಗಿರುವಂತೆ ಸಚಿವ ಸ್ಥಾನ ಕೈ ತಪ್ಪಲಿರುವವರು ಹಾಗೂ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಪಕ್ಷ ನಿಷ್ಠರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಂತ್ರಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು …

Read More »

ವೀರ್ ಯೋಧ ಈರಣ್ಣ ಸೇವೆ ಸಲ್ಲಿಸಲು ಹೋಗುವ ಮಾರ್ಗದಲ್ಲಿ ಹೃದಯಾಘಾತದಿಂದ ಮರಣ

ಗೋಕಾಕದ ಮಹಾಲಿಂಗೇಶ್ವರ ನಗರದ ವೀರ್ ಯೋಧ ಈರಣ್ಣ ಬಸವರಾಜ್ ಶೀಲವಂತ ಇವರು ಭಾರತೀಯ ಸೈನ್ಯದಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರುಳಿ ಸೇವೆ ಸಲ್ಲಿಸಲು ಹೋಗುವ ಮಾರ್ಗದಲ್ಲಿ ಹೃದಯಾಘಾತದಿಂದ ಮರಣ ಹೊಂದಿರುತ್ತಾರೆ, ನಾಳೆ ಬೆಳಿಗ್ಗೆ ವೀರ ಯೋಧನ ಪಾರ್ಥಿವ ಶರೀರ ಗೋಕಾಕ ಕ್ಕೆ ಬರಲಿದೆ ದೇಶ ಪ್ರೇಮಿಗಳು ಈ ಪುಣ್ಯದ ಕಾರ್ಯದಲ್ಲಿ ಭಾಗವಹಿಸಿ ಗೌರವ ವಂದನೆಗಳನು ಅರ್ಪಿಸಿರಿ ಭಾವಪೂರ್ಣ ಶ್ರದಾಂಜಲಿ

Read More »

ಮಂಜುನಾಥ ಸೈನಿಕ ತರಬೇತಿ 16 ನೆ ವಾರ್ಷಿಕೋತಸವ

ಮೂಡಲಗಿ: ದೇಶ ನಮ್ಮಗೆ ಏನು ಕೋಟಿದ್ದೆ ಎಂಬ ಭಾವ ತೋರೆದು ದೇಶಕ್ಕಾಗಿ ನಾನೇನು ಮಾಡಿದ್ದೇನೆ, ದೇಶ ನನಗಾಗಿ ಅಲ್ಲ ನಾನು ದೇಶಕ್ಕಾಗಿ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೂಡಲಗಿ ಶಿಕ್ಷಣ ಸಂಸ್ಥೇಯ ಅಧ್ಯಕ್ಷರಾದ ವಿಜಯ ಸೊನವಾಲ್ಕರ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಎಲ್.ವಾಯ್.ಅಡಿಹುಡಿ ಶಾಲೆ ಹಾಗೂ ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸ್ಕೂಲ್ ಇವುಗಳ 16 ನೇ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ …

Read More »

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಜಾರಿಗೆ ತಂದ ಸಿಎಎ,ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ಕೈ ಬಿಡಬೇಕೆಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಜಾರಿಗೆ ತಂದ ಸಿಎಎ,ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ಕೈ ಬಿಡಬೇಕೆಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ದಲಿತ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ತಹಶೀಲ್ದಾರ ಕಛೇರಿಗೆ …

Read More »

 ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿ

ಬೆಳಗಾವಿ: ಸ್ಮಾಟ್೯ ಸಿಟಿ ಯೋಜನೆ ಅಡಿಯಲ್ಲಿ ರೂ.೯೫೯.೪೩ ಕೋಟಿ ಮೊತ್ತದಲ್ಲಿ ಒಟ್ಟು ೧೦೦ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ರೂ. ೬೬.೨೯ ಕೋಟಿಯ ೧೬ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ರೂ.೭೭೧.೭೬ ಕೋಟಿಯ ೬೨ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ೧೪ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಬಾಕಿ ಇರುವ ೮ ಕಾಮಗಾರಿಗಳು ಡಿಪಿಆರ್ ರಚನೆ ಹಂತದಲ್ಲಿವೆ. ಕೇಂದ್ರದಿಂದ ರೂ.೧೯೬ ಕೋಟಿ ಮತ್ತು ರಾಜ್ಯದಿಂದ ರೂ.೨೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ ರೂ.೧೪೩.೩೩ ಕೋಟಿ ಖಚಾ೯ಗಿದೆ. ಮುಖ್ಯವಾಗಿ ೪೧ …

Read More »

ಧಿಡೀರಣೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು, ಇನ್ನೊಬ್ಬ ಪ್ರಬಲ ಆಕಾಂಕ್ಷಿ ಅನಹ೯ ಶಾಸಕ ಆರ್. ಶಂಕರ ಹೆಸರು ಮುನ್ನೆಲೆಗೆ

ಬೆಳಗಾವಿ: ರಿಜ್ವಾನ್ ಅಷ೯ದ್ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ  ಚುನಾವಣಾ ಆಯೋಗ ಫೆಬ್ರುವರಿ ೧೭ರಂದು ಉಪಚುನಾವಣೆ ಘೋಷಣೆ ಮಾಡಿದ ಬಳಿಕ ನಿರಾಳವಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮತ್ತೆ ಆತಂಕ ಶುರುವಾಗಿದೆ. ಮೊನ್ನೆಯವರೆಗೆ ಖಾಲಿಯಾಗಿರುವ ಸ್ಥಾನ ತುಂಬಲು ಸವದಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಆದರೆ, ಧಿಡೀರಣೆ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು, ಇನ್ನೊಬ್ಬ ಪ್ರಬಲ ಆಕಾಂಕ್ಷಿ ಅನಹ೯ ಶಾಸಕ ಆರ್. ಶಂಕರ ಹೆಸರು ಮುನ್ನೆಲೆಗೆ …

Read More »