ರಾಜ್ಯದಲ್ಲಿ ಇಂದು ಒಟ್ಟೂ 15 ಜನರಿಗೆ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ಬೆಳಗಾವಿಯ 6 ಜನರು ಸೇರಿದ್ದಾರೆ. ಬೆಂಗಳೂರಿನಲ್ಲಿ 6 ಜನ ಸೇರಿ ಒಟ್ಟೂ 126 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಇಂದು ಒಂದೇ ದಿನ 6 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 51 ಜನರಿಗೆ ಸೋಂಕು ತಗುಲಿದಂತಾಗಿದೆ. ರೋಂಗಿ ನಂಬರ್ 128ರ ಸಂಪರ್ಕದಿಂದ 6 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ನಾಲ್ವರು ಮಹಿಳೆಯರು.
Read More »ಎಸ್. ಟಿ ನೌಕರರ ಸಂಘದಿಂದ ಅಲೆಮಾರಿ ಜನಾಂಗದವರಿಗೆ ಅಕ್ಕಿ, ಬೇಳೆ ವಿತರಣೆ
ಗೋಕಾಕ :ಗೋಕಾಕನಗರದಲ್ಲಿ ರಮೇಶಅಣ್ಣಾ ಕಾಲೋನಿಯಲ್ಲಿ ಕೊರೋನಾ ವೈರಸದಿಂದಾಗಿ ಕೂಲಿ ಮಾಡಿ ಅಂದೇ ದುಡ್ದಿದು ಅಂದೇ ತಿನ್ನುವ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಆದರಿಂದ ಅಲೆಮಾರಿ ಜನಾಂಗದವರಿಗೆ ಗೋಕಾಕ ತಾಲೂಕಾ S. T ನೌಕರರ ಸಂಘದ ಅಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ S.T.ನೌಕರ ಸಂಘದ ಉಪಾಧ್ಯಕ್ಷರು ಸ್ವಇಚೆ ಯಿಂದ 50ಕೆಜಿ ಅಕ್ಕಿ ಮತ್ತು 10ಕೆಜಿ ಬೇಳೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸ್ವಾಭಿಮಾನ ವೇದಿಕೆ ಅಧ್ಯಕ್ಷರಾದ ಸಂತೋಷ ಖಂಡ್ರಿ, ಎಸ್. ಎ. …
Read More »ಸತ್ಕಾರದಿಂದ ಹೆಚ್ಚಿನ ಜವಾಬ್ದಾರಿ ಬಂದಿದೆ: ಬಾಲದಂಡಿ
ಸಾವಳಗಿ:ಮಾಹಾಮಾರಿ ಕೊರಾನ ಆತಂಕದಿಂದ ಜನರಿಗೆ ಅರಿವು ಮೂಡಿಸುವ ಸಲುವಾಗಿ ಘಟಪ್ರಭಾ ಪಿ,ಎಸ್,ಐ, ಹಾಲಪ್ಪ ಬಾಲದಂಡಿಯವರ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಸಮಯದಲ್ಲಿ ಕೊರಾನಾ ಸೈನಿಕರಿಗೆ ಹೂವು ಹಾರಿಸಿ ಮನಪೂರ್ವಕವಾಗಿ ಸ್ವಾಗತಿಸಿದರು. ಮಾಹಾಮಾರಿ ರೋಗ ತಡೆಯಲಿಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇದರಿಂದ ತಡೆಗಟ್ಟಬಹುದು, ಇದರಲ್ಲಿ ಆಶಾ ಕಾರ್ಯಕರ್ತರ ಪಾತ್ರ ಬಹುಮುಖ್ಯ , ಇಲ್ಲಿಯವರಿಗೆ ಹೋಮ್ ಕ್ವಾರೆಂಟನ್ ಇದ್ದವರು ಯಾರಿಗೂ ತೊಂದರೆ ನೀಡಿಲ್ಲ, ಅದಕ್ಕಾಗಿ ನಾವು ಎಲ್ಲರಿಗೂ ಕೊರಾನಾ ಅರಿವು …
Read More »ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ
ಬೆಂಗಳೂರು: ಕೊರೊನಾಗೆ ರಾಮಬಾಣವಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಚಲನೆ ನೀಡಿದರು. ಕರೊನಾ ಮಹಾಮಾರಿ ಗುಣಪಡಿಸುವ ಮಹತ್ವದ ಚಿಕಿತ್ಸೆ ಇದಾಗಿದೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಕರ್ನಾಟಕದಲ್ಲಿ ಈಗ ಪ್ರಾಯೋಗಿಕವಾಗಿ ಈ ಚಿಕಿತ್ಸೆ ಆರಂಭವಾಗಿದ್ದು, ಕೊರೊನಾಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡವರ ದೇಹದಿಂದ …
Read More »ಮೂಡಲಗಿ ಕೆಇಬಿ ಸಿಬ್ಬಂದಿಗೆ ಹಣ್ಣು, ಮಾಸ್ಕ್ ಕಳುಹಿಸಿಕೊಟ್ಟ ಶಾಸಕ ಸತೀಶ ಜಾರಕಿಹೊಳಿ
ಮೂಡಲಗಿ: ಕೊರೊನಾ ಸೋಂಕು ವಿರುದ್ದ ಹೋರಾಡುತ್ತಿರುವ ಪವರ್ ಮ್ಯಾನ್ ಸಿಬ್ಬಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಬೆಂಬಲಿಗರು ಹಣ್ಣು, ಹಾಗೂ ಮಾಸ್ಕ್ ಗಳನ್ನು ವಿತರಿಸಿದರು. ಇಲ್ಲಿನ ಕೆಇಬಿ ಕಚೇರಿಯಲ್ಲಿ ಕೆಲಸ ನಿರ್ವಹಿಸಿತ್ತಿರುವ ಸಿಬ್ಬಂದಿಗಳಿಗಾಗಿ ಶಾಸಕ ಸತೀಶ ಜಾರಕಿಹೊಳಿ ಅಗತ್ಯವಸ್ತುಗಳನ್ನು ಕಳುಹಿಸಿಕೊಟ್ಟಿದ್ದು, ಅವರ ಬೆಂಬಲಿಗರು ಬಂದು ವಿತರಿಸಿದರು. ಇದೇ ವೇಳೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದ್ರು. ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ಮುರಳಿ ಬಡಿಗೇರ, ಶಾಖಾಧಿಕಾರಿಗಳಾದ ಸಿ.ಬಿ.ವಂಟಗುಡಿ,ಆರ್.ಡಿ.ಪಿಡಾಯಿ. ಆರ್.ಬಿ.ಬಾಗೇವಾಡಿ. …
Read More »ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿ
ಸಂಕೇಶ್ವರ : ಕಳೆದ ಹಲವು ದಿನಗಳಿಂದ ಅಕ್ರಮವಾಗಿ ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ವ್ಯಕ್ತಿಯಿಂದ ೧೪ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ ಕರಜಗಾ ಗ್ರಾಮದಲ್ಲಿ ಲಾಕಡೌನ್ ಆರಂಭದಿಂದಲೂ ದೇಶಿ ಮದ್ಯ ಪೂರೈಸುತ್ತಿದ್ದ ಕರಜಗಾ ಗ್ರಾಮದ ಫಕ್ರುದ್ದೀನ ಸಯ್ಯದ ಸೊಲ್ಲಾಪೂರೆ ಬಂಧಿತ ಆರೋಪಿ. ಡಿವೈಎಸ್‌ಪಿ ಡಿ.ಟಿ. ಪ್ರಭು, ಸಿಪಿಐ ಗಣಪತಿ ಕಲ್ಯಾಣಶೆಟ್ಟಿ, ಪಿಎಸ್‌ಐ ಗಣಪತಿ ಕೊಗನೊಳ್ಳಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಪಿಎಸ್‌ಐ …
Read More »ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಚೆಕ್ ಸ್ವೀಕರಿಸಿದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಗೋಕಾಕ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 75 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಮತ್ತು ರಾಯಬಾಗ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ಇತರರು ಇದ್ದರು
Read More »ಪ್ರಚಾರಕ್ಕಾಗಿ ಅಲ್ಲ,ಮಾನವೀಯ ಸೇವೆಗೆ ಮುಂದಾದ ಮೇದಾರ ಸಮಾಜದ ಹಿತೈಸಿ ಪಕ್ಕಿರಪ್ಪ ಮುರಗೋಡ..!
ಬೆಳಗಾವಿ : ಪ್ರಚಾರಕ್ಕಾಗಿ ಆಸೆಪಡದೆ ಮೇದಾರ ಸಮಾಜದ ಶ್ರೇಯೊಭಿವೃದ್ದಿಗಾಗಿ ಸದಾಕಾಲ ತಮ್ಮ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಾ ಮೇದಾರ ಸಮಾಜದ ಏಳಿಗೆಗೆ ಸದಾಕಾಲ ಶ್ರಮಿಸುತ್ತಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಮಾಜದ ಹಿತೈಸಿಗಳಾದ ಪಕ್ಕಿರಪ್ಪ ಮುರಗೋಡ ಅವರು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ವಾಸಿಸುವ ಸುಮಾರು100 ಕ್ಕೂ ಹೆಚ್ಚು ಮೇದಾರ ಸಮಾಜದ ಕುಲಬಾಂಧವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕುಲ ಕಸುಬು ಹಾಗೂ …
Read More »ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಬಡ ಕುಟುಂಬದವರಿಗೆ ದಿನ ಬಳಕೆಗೆ ಬೇಕಾದ ದಿನಸಿ ಸಾಮಗ್ರಿಗಳ ವಿತರಣೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕುಟುರನಟ್ಟಿ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬೇಕಾದ ಆಹಾರ ಕಿಟ್ ಗಳನ್ನು ಅಖಿಲ ಕರ್ನಾಟಕ ವಿಶ್ವ ಕರ್ಮ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಸುರೇಶ ಪತ್ತಾರ ರವರು ವಿತರಿದರು. ಮಾತನಾಡಿ ನಮ್ಮ ಸಮಿತಿಯಿಂದ ಪ್ರತಿ ಹಳ್ಳಿ ಹಳ್ಳಿಗೂ ವಿಷಯ ತಿಳಿದು ಕೊಂಡು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳು ಪೂರೈಸಲು ಮುಂದಾಗಿದ್ದು. ಕುಟುರನಟ್ಟಿ ಗ್ರಾಮಸ್ಥರಿಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆತಾಯಿಲ್ಲ.ಆದುದರಿಂದ ದಯಮಾಡಿ ಈ …
Read More »ರೈತರ ಸಂಕಷ್ಟಕ್ಕಿಡಾಗಲು ಅಧಿಕಾರಿಗಳೇ ಕಾರಣ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ
ಚಿಕ್ಕೋಡಿ : ತಾಲೂಕಿನ ರೈತರು ಯಾವ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆಂಬ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿಲ್ಲ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೆ ತಯಾರಿಸಿಲ್ಲ. ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಎಸ್.ಹಿಂಡಿಹೊಳಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವೃ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಕೊರೊನಾ ಮುಂಜಾಗೃತ ಕ್ರಮಗಳ ಕುರಿತಾದ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …
Read More »