Breaking News

ಬೆಳಗಾವಿ

ಕೊರೋನಾ ದಿನದಿಂದ ದಿನಕ್ಕೆ ಅಪಾಯದ ಮಟ್ಟಕ್ಕೆ ಏರುತ್ತಿದೆ.

ಬೆಳಗಾವಿ – ಇಲ್ಲಿಯ ಬಿಮ್ಸ್ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. 2 ದಿನದ ಹಿಂದೆ ಕೊರೋನಾದಿಂದ ನಿಧನರಾಗಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಗೆ ಸೋಂಕು ದೃಢಪಟ್ಟಿದೆ. ಆದರೆ ಅವರಲ್ಲಿ ಕೊರೋನಾದ ಯಾವ ಲಕ್ಷಣಗಳೂ ಕಾಣಿಸಿಕೊಂಡಿಲ್ಲ. ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಇದೀಗ ಅವರ ಸಂಪೂರ್ಣ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಮಾಡಿ ಅವರೆಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಇದೇ …

Read More »

ಬೆಳಗಾವಿ ನಗರದ ಕ್ಯಾಂಪ್ ಪೋಲೀಸರು ಬಂಧಿಸಿದ ಕುಖ್ಯಾತ ರೌಡಿಗೆ ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ, ಹಿಂಡಲಗಾ ಜೈಲು ಮತ್ತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಭೀತಿ ಶುರುವಾಗಿದೆ.

ಬೆಳಗಾವಿ- ಇತ್ತೀಚಿಗಷ್ಟೆ ಬೆಳಗಾವಿ ನಗರದ ಕ್ಯಾಂಪ್ ಪೋಲೀಸರು ಬಂಧಿಸಿದ ಕುಖ್ಯಾತ ರೌಡಿಗೆ ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ, ಹಿಂಡಲಗಾ ಜೈಲು ಮತ್ತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಭೀತಿ ಶುರುವಾಗಿದೆ. ದರೋಡೆಕೋರನಿಗೆ ಸೋಂಕು ಶಂಕೆ ಹಿಂಡಲಗಾ ಜೈಲಿನಲ್ಲಿ ಆತಂಕ ಸೃಷ್ಠಿಯಾಗಿದೆ. ದರೋಡೆ ಮಾಡುತ್ತಿದ್ದ ವ್ಯಕ್ಯಿಯನ್ನ ಬಂಧಿಸಿದ್ದ ಬೆಳಗಾವಿಯ ಕ್ಯಾಂಪ್ ಪೊಲೀಸರು. ಮೂರು ದಿನಗಳ ಹಿಂದೆ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ದರೋಡೆಕೋರನಿಗೆ ಇಂದು ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಲ್ಲಿನ ಕೈದಿ …

Read More »

ಜಿಲ್ಲಾ ಆಸ್ಪತ್ರೆಯ ಕೋವೀಡ್ ಐಸೋಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನರ್ಸಗೂ ಸೊಂಕು ತಗಲಿರುವದು ದೃಡವಾಗಿದೆ.

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ಐಸೋಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನರ್ಸಗೂ ಸೊಂಕು ತಗಲಿರುವದು ದೃಡವಾಗಿದೆ. ಹಲವಾರು ದಿನಗಳಿಂದ ಈ ನರ್ಸ್ ಗೆ ಕೋವೀಡ್ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು ಇಂದು ಬೆಳಿಗ್ಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ರೋಗಿಗಳ ಸೇವೆ ಮಾಡಿದ ನರ್ಸಗೂ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ಹರಡಿ ಇಂದಿಗೆ ಮೂರು ತಿಂಗಳು ಗತಿಸಿದ್ದು ಇದೇ …

Read More »

ಬೆಳಗಾವಿಯ ಮನೆಗಳಲ್ಲಿ ಕಳವು | ಆರೋಪಿ ಬಂಧನ: ₹4 ಲಕ್ಷ ಮೌಲ್ಯದ ಆಭರಣ ವಶ…?

ಬೆಳಗಾವಿ: ಇಲ್ಲಿನ ಕ್ಯಾಂಪ್ ಠಾಣೆ ಪೊಲೀಸರು ಮನೆಗಳಲ್ಲಿ ಕಳವು ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿ ಅವರಿಂದ ₹ 4 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಂಟಮೂರಿ ಕಾಲೊನಿಯ ರಾಜು ಯಲ್ಲಪ್ಪ ಆಲಟ್ಟಿ (19 ವರ್ಷ) ಬಂಧಿತ. ‘ಮನೆಯ ಬಾಗಿಲಿನ ಬೀಗ ಮುರಿದು ಅಲ್ಮೆರಾದಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಯಾರೋ ಕಳವು ಮಾಡಿದ್ದಾರೆ’ ಎಂದು ವಿನಾಯಕ ನಗರದ ನಕ್ಷತ್ರ ಕಾಲೊನಿಯ ಸಂಗೀತಾ ಪಾಟೀಲ ಮತ್ತು …

Read More »

ಬೆಳಗಾವಿ | 20 ಗ್ರೇಸ್ ಅಂಕ ನೀಡಲು ಆಗ್ರಹ

ಬೆಳಗಾವಿ: ‘ಉತ್ತರ ಕರ್ನಾಟಕದ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕನ್ನಡ ವಿಷಯದ ಉತ್ತರಪತ್ರಿಕೆಗಳನ್ನು ಈ ಭಾಗದ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸಬೇಕು’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ ಸದಸ್ಯ ಇಬ್ರಾಹಿಂ ಎಂ. ಶಂಷೀರ್‌ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ‘ವಿವಿಧ ಭಾಷಿಕರು ಇಲ್ಲಿದ್ದಾರೆ. ಹೀಗಾಗಿ, ಕನ್ನಡದಲ್ಲಿ ಶುದ್ಧ ವ್ಯಾಕರಣ ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ದಕ್ಷಿಣದವರನ್ನು ನಿಯೋಜಿಸಬಾರದು’ ಎಂದು ಕೋರಿದ್ದಾರೆ. ‘ಕೋವಿಡ್-19 ಸಂಕಷ್ಟ …

Read More »

ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರ ಕಾತರ…?

ಸವದತ್ತಿ: ವರ್ಷದ 12 ತಿಂಗಳೂ ಭಕ್ತರು, ವ್ಯಾಪಾರಿಗಳಿಂದ ಗಿಜುಗುಡುತ್ತಿದ್ದ ತಾಲೂಕಿನ ಸುಕ್ಷೇತ್ರ ಯಲ್ಲಮ್ಮ ದೇವಿ ಸನ್ನಿಧಿಗೆ ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಮಂಗಳವಾರ ಮತ್ತು ಶುಕ್ರವಾರ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಇದರಿಂದ ತಾಲೂಕಿಗೆ ಅಲ್ಪ ಪ್ರಮಾಣದಲ್ಲಿದ್ದ ಕೋವಿಡ್‌ ಸೋಂಕು ಹರಡುವ ಸಾಧ್ಯತೆಗಳಿವೆ. ಈಗಾಗಲೇ ಸರಕಾರದ ಆದೇಶದನ್ವಯ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿಂದ ಸರಕಾರ ಮತ್ತು ಜಿಲ್ಲಾಧಿಕಾರಿಗಳು …

Read More »

ರೋಗಿ ಕೈಯಲ್ಲೇ ಗ್ಲೂಕೋಸ್ ಬಾಟಲ್ ಹಿಡಿಸಿ, ಆಂಬುಲೆನ್ಸ್ ಹತ್ತಿಸಿಕೊಂಡ ಬಿಮ್ಸ್‌ ಬೆಳಗಾವಿ…?

ಬೆಳಗಾವಿ: ಕೊರೊನಾ ಆರ್ಭಟದ ಮಧ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಾ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಇದೀಗ ಬೆಳಗಾವಿಯ ಬಿಮ್ಸ್​ ಆಸ್ಪತ್ರೆಯು ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡಿದೆ. ಬಿಮ್ಸ್‌ ಆಸ್ಪತ್ರೆಯ ಸಿಬ್ಬಂದಿಯುಯ ಗಾಯಾಳುವಿನ ಕೈನಲ್ಲೇ ಗ್ಲೂಕೋಸ್ ಬಾಟಲ್ ಹಿಡಿಸಿ ಆಯಂಬುಲೆನ್ಸ್‌ ಹತ್ತಿಸಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಾಮಾನ್ಯ ವಾರ್ಡ್​ಗೆ ಶಿಫ್ಟ್​ ಮಾಡುವಾಗ ಗಾಯಾಳುವಿನ ಕೈಗೇ ಗ್ಲೂಕೋಸ್ ಬಾಟಲ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ …

Read More »

ನಾಯಿ ಕಚ್ಚಿ ಗಾಯಗೊಂಡಿದ್ದ ಬಾಲಕ ಸಾವು ಬೆಳಗಾವಿ ಜಿಲ್ಲೆಯಲ್ಲಿ ನಡದ್ದಿದೆ

ಬೆಳಗಾವಿ :ಬೆಳಗಾವಿ ಸಮೀಪದ ಮಚ್ಛೆ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಾಯಿ ಕಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಶಹಾಪುರ ಆನಂದವಾಡಿಯ 8 ವರ್ಷದ ಬಾಲಕ, ತೀವ್ರ ಅನಾರೋಗ್ಯದಿಂದ ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಾಯಿ ಕಡಿತದಿಂದ ಗಾಯಗೊಂಡಿದ್ದ ಶಹಾಪುರ ಆನಂದವಾಡಿಯ 8 ವರ್ಷದ ಬಾಲಕ ಸೋಹಂ ಸುನೀಲ ಬೆನಕೆ ಗುರುವಾರ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. 2 ತಿಂಗಳ ಹಿಂದೆ …

Read More »

ಬ್ರೀಜ್ ಕಮ್ ಬ್ಯಾರೆಜ್ ನಿರ್ಮಾಣ ಸ್ಥಳವನ್ನು ನೀರಾವರಿ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ

ಸುರಪುರ: ತಾಲೂಕಿನ ಅಥಣಿ ಬಳಿಯ ಕೃಷ್ಣಾ ನದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬ್ರೀಜ್ ಕಮ್ ಬ್ಯಾರೆಜ್ ನಿರ್ಮಾಣ ಸ್ಥಳವನ್ನು ನೀರಾವರಿ ಸಚಿವ ರಮೇಶ ಜಾರಕಿಹೊಳಿ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷ್ಣಾ ನದಿಯಲ್ಲಿ ಬ್ರೀಜ್ ಕಮ್ ಬ್ಯಾರೆಜ್ ನಿರ್ಮಾಣದ ಕುರಿತು ಹಿಂದೆ ಬಜೆಟ್‍ನಲ್ಲಿಯೆ ಅನುದಾನ ಘೋಷಿಸಲಾಗಿದೆ.ಅದರಂತೆ ಈಗ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು,ಎರಡು ಮೂರು ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ. ಸೂಕ್ತ ಸ್ಥಳದಲ್ಲಿ ಸುಮಾರು 300 ಕೋಟಿ ಅಂದಾಜು ವೆಚ್ಚದಲ್ಲಿ ಬ್ರೀಜ್ ಕಮ್ ಬ್ಯಾರೆಜ್ …

Read More »

ಗೋಕಾಕ: ಗೋಕಾಕನಗರದಲ್ಲಿ ಮೊಟ್ಟಮೊದಲ ಬಾರಿ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ.

  ಗೋಕಾಕ :ಇಂದು ಗೋಕಾಕ ನಗರದ ಎಂಟು ವರ್ಷದ ಓರ್ವ ಬಾಲಕಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಗೋಕಾಕ ನಗರದ ಭಜಂತ್ರಿ ಗಲ್ಲಿಯ ಕೊಳಚೆ ಪ್ರದೇಶದ ಸುಮಾರು ಐವತ್ತಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದಾಗ ಈ ಓರ್ವ ಬಾಲಕಿಗೆ ಕೋರೊನಾ ದೃಢವಾಗಿದೆ.ಯಾವುದೇ ಟ್ರಾವೆಲ್ಲಿಂಗ್ ಹಿಸ್ಟರಿ ಇಲ್ಲ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೂ ಬಂದಿರುವುದಿಲ್ಲಾ. ಈ ಬಾಲಕಿಯು ಭಜಂತ್ರಿ ತೋಟ ಕೌಜಲಗಿ ಗ್ರಾಮಕ್ಕೆ ಹೋಗಿದ್ದಾಳೆ ಈಗ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆ ಬೆಳಗಾವಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ.ಭಜಂತ್ರಿ …

Read More »