ಕಸದ ರಾಶಿಯಲ್ಲಿ ಮುಳುಗಿರುವ ಬೆಳಗಾವಿ ಅಜಮ್ ನಗರದ ಮೊದಲನೇ ಕ್ರಾಸ್… ಕಸ ವಿಲೇವಾರಿಯಾಗುತ್ತಿಲ್ಲ, ನಾಯಿಗಳ ಹಾವಳಿ, ಗಬ್ಬು ವಾಸನೆ… ಪಾಲಿಕೆ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿರುವ ನಿವಾಸಿಗಳು….. ಬೆಳಗಾವಿ ಅಜಂನಗರ ಕೆಎಲ್ಇ ಕಂಪೌಂಡ ಪಕ್ಕದಲ್ಲಿರುವ ಮೊದಲೇ ಕ್ರಾಸ್ ನಲ್ಲಿ ಬಿದ್ದಿರುವ ಕಸದ ರಾಶಿಯನ್ನು ನೋಡಿದರೆ ಅಕ್ಷರಶಹ ತ್ಯಾಜ್ಯ ವಿಲೇವಾರಿ ಘಟಕದಂತಾಗಿದ್ದು, ಪಾಲಿಕೆ ನಿರ್ಲಕ್ಷ್ಯಕ್ಕೆ ಇಲ್ಲಿಯ ನಿವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ ಅಜಮ್ ನಗರ ಮಹಾನಗರ ಪಾಲಿಕೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. …
Read More »ಕಂದಾಯ ಇಲಾಖೆ ಕಚೇರಿಯಲ್ಲಿ ಲಂಚದ ರೇಟ್ ಕಾರ್ಡ್ ಹಾಕಿ: ಸಚಿವ ಕೃಷ್ಣ ಬೈರೇಗೌಡ ಕಿಡಿ
ಬೆಂಗಳೂರು (ಜೂ.20): ಪ್ರತಿಯೊಂದು ಕೆಲಸಕ್ಕೂ ಲಂಚ, ಅಲೆದಾಟ, ವಿಳಂಬ ನೀತಿಯ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹೆಚ್ಟುವರಿ ಆಯುಕ್ತರ ಕಚೇರಿಗಳು ಮತ್ತು ತಹಸೀಲ್ದಾರ್ ಕಚೇರಿಗಳಿರುವ ಕಂದಾಯ ಭವನಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇಂಥ ಕೆಲಸಕ್ಕೆ ಇಂತಿಷ್ಟು ಲಂಚ ಆಗುತ್ತದೆ ಎನ್ನುವ ‘ಲಂಚದ ದರ ಫಲಕವನ್ನೇ ಅಳವಡಿಸಿಬಿಡಿ’ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು. ದಿಢೀರ್ ಭೇಟಿಗೆ …
Read More »ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ
ಗೋಕಾಕ- ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ ಜರುಗಲಿದ್ದು, ಪಟ್ಟಣದ ನಾಗರೀಕರು ಇದರಲ್ಲಿ ಭಾಗಿಯಾಗುವ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕಕರಲ್ಲಿ ಮನವಿ ಮಾಡಿಕೊಂಡರು. ಗುರುವಾರದಂದು ನಗರದ ಎನ್ ಎಸ್ ಎಫ್ ಕಚೇರಿಯಲ್ಲಿ ಮೂಡಲಗಿ ಪಟ್ಟಣದ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ …
Read More »ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ”
ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ” ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ” ಚಂಪಾ ಸಿರಿಗನ್ನಡ ಪ್ರಶಸ್ತಿ”ಯನ್ನು ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇಂದು ಬುಧವಾರ ಜೂನ್ 18 ರಂದು ಬೆಂಗಳೂರಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಖ್ಯಾತ ಸಾಹಿತಿ ಡಾ.ಬರಗೂರು …
Read More »ಅಂತರ್ಜಾತಿ ವಿವಾಹಗಳಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ
ಬೆಳಗಾವಿ: ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಜಾತಿ ಭೇದ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತಿದೆ. ಈ ರೀತಿ ಬೇರೆ ಜಾತಿಯ ವರ-ವಧು ಮದುವೆ ಆದಲ್ಲಿ ಅವರಿಗೆ ಸರ್ಕಾರ ಸಹಾಯಧನ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದೆ. ಅಂತರ್ಜಾತಿ ವಿವಾಹ ಎಂದರೆ ವಧು ಮತ್ತು ವರ ಬೇರೆ ಬೇರೆ ಜಾತಿಗೆ ಸೇರಿದವರಾಗಿರಬೇಕು. ಹೀಗೆ ಮದುವೆ ಆಗಿರುವ ಆ ದಂಪತಿಗೆ ಸಹಾಯಧನವನ್ನು 1989ರಿಂದ ಕರ್ನಾಟಕ ರಾಜ್ಯದಲ್ಲಿ ನೀಡಲಾಗುತ್ತಿದೆ. ಆರಂಭದಲ್ಲಿ 12 ಸಾವಿರ …
Read More »ಬೆಳಗಾವಿಯ ಪ್ರವೇಶ ದ್ವಾರದಂತಿರುವ ಗಾಂಧಿನಗರ ಅಸ್ವಚ್ಛತೆಯಿಂದಾಗಿ ಈಗ ‘ಗಂಧಗಿ’ ನಗರದಂತಾಗಿದೆ….
ಬೆಳಗಾವಿಯ ಪ್ರವೇಶ ದ್ವಾರದಂತಿರುವ ಗಾಂಧಿನಗರ ಅಸ್ವಚ್ಛತೆಯಿಂದಾಗಿ ಈಗ ‘ಗಂಧಗಿ’ ನಗರದಂತಾಗಿದೆ…. ಚರಂಡಿ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಹಳೆ ಗಾಂಧಿನಗರ, ದೀಪಕ ಗಲ್ಲಿ ಸುಭಾಷ ಗಲ್ಲಿ ನಿವಾಸಿಗಳು ಸ್ಮಾರ್ಟ್ ಸಿಟಿ ಎಂದು ಹೇಳುತ್ತಿರುವ ಬೆಳಗಾವಿಯ ವಿವಿಧ ಬಡಾವಣೆಗಳು ಸಮಸ್ಯೆಯ ಆಗರಗಳಾಗಿವೆ ಹಳೆ ಗಾಂಧಿನಗರ, ದೀಪಕ್ ಗಲ್ಲಿ, ಸುಭಾಷ್ ಗಲ್ಲಿಯ ಚರಂಡಿ, ರಸ್ತೆಗಳು ದುರಸ್ತಿಯಾಗದೆ ಕಸದ ರಾಶಿಯಿಂದ ಬೇಸತ್ತ ನಾಗರಿಕರು ಪಾಲಿಕೆಯ ನಿರ್ಲಕ್ಷಕ್ಕೆ ಹಿಡಿ ಶಾಪ …
Read More »18 ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲ
ಬೆಳಗಾವಿ: ಬೆಳಗಾವಿ, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿದೆ. ಕುಂದಾನಗರಿಯಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಅಧಿಕವಾಗಿದೆ. ಆದರೆ, ಕಳೆದ 18 ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಬೆಳಗಾವಿ ಮಹಾನಗರದಲ್ಲಿ ಸ್ವಂತ ಸೂರಿನ ಕನಸು ಹೊತ್ತ ಮಧ್ಯಮ ವರ್ಗದವರ ಕನಸು ಕನಸಾಗಿಯೇ ಉಳಿದಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ …
Read More »ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ…
ಬೆಳಗಾವಿ: ಬಸ್ಸಿನ ಕಿಟಕಿ ಸೀಟಿಗಾಗಿ ಕಿತ್ತಾಟ… ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾದ ಅಪರಿಚಿತ ಯುವಕರ ಗುಂಪು ಬಸ್’ನ ಕಿಟಕಿ ಸೀಟಗಾಗಿ ಕಿತ್ತಾಡಿಕೊಂಡು ಅಪರಿಚಿತ ಯುವಕರು ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್’ನ ಕಿಟಕಿ ಸೀಟಗಾಗಿ ಕಾಲೇಜು ವಿದ್ಯಾರ್ಥಿಯೊಂದಿಗೆ ಅಪರಿಚಿತ ಯುವಕರು ಜಗಳಕ್ಕಿಳಿದು, ಜಗಳ ವಿಕೋಪಕ್ಕೆ ಹೋಗಿ ವಿದ್ಯಾರ್ಥಿಯ ಎದೆಗೆ ಹರಿತವಾದ ಆಯುಧದಿಂದ …
Read More »ದಲಿತ ಸಿಎಂ ವಿಚಾರ ಸದ್ಯಕ್ಕಿಲ್ಲ ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ.
ಹೊಸಪೇಟೆ (ಜೂ.18): ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ. ಆದರೂ, ಈ ಬಗ್ಗೆ ಮುಖ್ಯಮಂತ್ರಿ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ. ಆದರೂ, ಈ ಬಗ್ಗೆ ಸಿಎಂ, ಹೈಕಮಾಂಡ್ ನವರು ನಿರ್ಣಯ …
Read More »ನಿಪ್ಪಾಣಿಯ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಅವರು ಇಂದು ಬೆಳಗಾವಿಯಲ್ಲಿ ನಿಧನರಾಗಿದ್ದಾರೆ.
ಬೆಳಗಾವಿ: ನಿಪ್ಪಾಣಿಯ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಅವರು ಇಂದು ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. 68 ವರ್ಷ ವಯಸ್ಸಿನ ಕಾಕಾಸಾಹೇಬ್ ಪಾಟೀಲ್ ಅವರು ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿನಿಧಿಸುತ್ತ ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು. 1975ರಲ್ಲಿ ದೇವ ಚಂದ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಹಲವು ಬಾರಿ ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ …
Read More »