Breaking News

ಬೆಳಗಾವಿ

ಆಗಸ್ಟ್ 7 ರಿಂದ ಆಗಸ್ಟ್ 10 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ರಮೇಶ ಜಾರಕಿಹೊಳಿ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆಗಸ್ಟ್ 7 ರಿಂದ ಆಗಸ್ಟ್ 10 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.    ಅ. 7ರಂದು ಬೆಳಗ್ಗೆ 11 ಗಂಟೆಗೆ ನಗರದ ಪರಿವೀಕ್ಷಣಾ ಮಂದಿರರದಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ತುರ್ತು ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಅ.8 ರಂದು ಬೆಳಗ್ಗೆ 10.30ಕ್ಕೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸಿದ ಬಳಿಕ …

Read More »

ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. 

ಬೆಳಗಾವಿ: ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.  ಸಂಜು ಅವರು ಉತ್ತರ ಸಂಚಾರಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ರಜೆ ಮೇಲೆ ಖಾನಾಪುರ ತಾಲ್ಲೂಕಿನ ಹಟ್ಟಿಹೊಳ್ಳಿ ತಮ್ಮ ಸ್ವ ಗ್ರಾಮಕ್ಕೆ ತೆರಳಿದ್ದರು. ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಹೃದಯಾಘಾತದಿಂದ ಕೊನೆಯೂಸಿರೆಳೆದಿದ್ದಾರೆ.

Read More »

ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು

ಗೋಕಾಕ್:  ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ  ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಇಂದು ಮಾಹಿತಿ ನೀಡಿರುವ ಅವರು , ಮೂಡಲಗಿ ಸಿಡಿಪಿಓ ಸೇರಿ ಎರಡು ತಾಲ್ಲೂಕಿನಲ್ಲಿ 65 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆ ಸೋಂಕಿಗೆ ಬಲಿಯಾಗಿದ್ದಾರೆ. ಗೋಕಾಕ ನಗರದಲ್ಲಿ-49 , ಕರಗುಪ್ಪಿ -1 , ಮೂಡಲಗಿ -2 , …

Read More »

ಚಿಕ್ಕೋಡಿ ಪೊಲೀಸ ಠಾಣೆ ಯನ್ನು ಸೀಲ್‍ಡೌನ್ ಮಾಡಲಾಗಿದೆ.

ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಇದೀಗ ಚಿಕ್ಕೋಡಿ ಪೊಲೀಸ ಠಾಣೆಗೂ ವಕ್ಕರಿಸಿಕೊಂಡಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಧೃಢಪಟ್ಟಿದ್ದು,  ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

Read More »

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ  ಪ್ರತಿಭಾನ್ವಿತ  ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ  ಪ್ರತಿಭಾನ್ವಿತ  ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಪುತ್ರರಾದ ಅಥಣಿ ತಾಲ್ಲೂಕಿನ ಮೋಳೆ ಗ್ರಾಮದ ಜಗದೀಶ್ ಅಡಹಳ್ಳಿ 440ನೇ ಸ್ಥಾನ, ಹುಕ್ಕೇರಿ ತಾಲ್ಲೂಕಿನ ಯರನಾಳದ ಪ್ರಭುಲ್ ದೇಸಾಯಿ 532ನೇ ಸ್ಥಾನ, ರಾಯಬಾಗ ತಾಲ್ಲೂಕಿನ ಗಜಾನನ ಬಾಲೆಯವರು 663ನೇ ರ್ಯಾಂಕ್, ಚಿಕ್ಕೋಡಿಯ ಪ್ರಿಯಾಂಕ …

Read More »

ಮತ್ತೆ 4ಸಾವಿರ ಕಿಟ್‌ಗಳ ಪೂರೈಕೆ

ಬೆಳಗಾವಿ: ‘ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಹೊರತುಪಡಿಸಿ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು. ಇಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ತುರ್ತು ಚಿಕಿತ್ಸೆಗೆ ಅಗತ್ಯ ಇರುವವರಿಗೆ ತಪಾಸಣೆ ನಡೆಸಿ ಪ್ರಮಾಣಪತ್ರವನ್ನು ನೀಡಲು ಜಿಲ್ಲೆಗೆ ಮತ್ತೆ 4ಸಾವಿರ ರ‍್ಯಾಪಿಡ್ ಆಂಟಿಜೆನ್ ಕಿಟ್‌ಗಳು ಬಂದಿವೆ. ಪ್ರಮಾಣಪತ್ರ ಪಡೆದ ಬಳಿಕವೂ …

Read More »

ನನ್ನ ಖಾಸಾ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ :ರಮೇಶ ಜಾರಕಿಹೊಳಿ

ಗೋಕಾಕ:  ಗೋಕಾಕ್ ನಗರದ ಸಚ್ಛಾರಿತ್ರ್ಯದ ರಾಜಕಾರಣಿಯಾಗಿದ್ದ  ಗಿರೀಶ್ ಖೋತ್ ಅವರ ಅಕಾಲಿಕ ಮರಣದಿಂದ ನನ್ನ ಖಾಸಾ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ  ಎಂದು  ಸಚಿವ ರಮೇಶ ಜಾರಕಿಹೊಳಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. 3 ನೆಯ ಬಾರಿಗೆ ಗೋಕಾಕ್ ನಗರಸಭೆಗೆ ಆಯ್ಕೆಯಾಗಿದ್ದ ಖೋತ್ ಮಾದರಿ ಜನಪ್ರತಿನಿಧಿಯಾಗಿದ್ದರು. ಜನಾನುರಾಗಿ ಮತ್ತು  ಸರಳ, ಸ್ನೇಹಜೀವಿಯಾಗಿದ್ದ ಇವರು ನನ್ನ ರಾಜಕಾರಣದ ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಗಿದ್ದರು. ಇವರ ಹಠಾತ್ ಅಗಲಿಕೆ ನನ್ನ ಮನಸ್ಸಿಗೆ ತೀವ್ರ ನೋವನ್ನು …

Read More »

ಗೋಕಾಕ: ನಗರಸಭೆ ಸದಸ್ಯ ಗಿರೀಶ ಖೋತ್( 45) ಅಕಾಲಿಕ ಮರಣ……….

ಗೋಕಾಕ: ಮೂರು ಬಾರಿ ನಗರಸಭೆ ಸದಸ್ಯರಾಗಿ ಜನಸೇವಕರಾಗಿ ದುಡಿದಿದ್ದ  ಗಿರೀಶ ಖೋತ್ (45) ಅಕಾಲಿಕ ಮರಣ ಹೊಂದಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸವನಗರದ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. 14 ನೇ ವಾರ್ಡಿನ್ ಮೂರು ಬಾರಿ ಸದಸ್ಯರಗಾಗಿ ಜನಸೇವಕರಾಗಿ ದುಡಿದಿದ್ದ ಗಿರೀಶ ಖೋತ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಸೌಭಾಗ್ಯ ಲಕ್ಷ್ಮಿ ಚೇರ್ಮನ್ ರಾದಂತ ಶ್ರೀ ಸಂತೋಷ್ ಜಾರಕಿಹೊಳಿ ಅವರು …

Read More »

ಸಂಬಳ ಕೊಟ್ಟಿಲ್ಲ ಎಂದು ಎಂದು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾದ ಕರೋನಾ ಸೋಂಕಿತ..

ಬೆಳಗಾವಿ: ಕೊರೊನಾ ಸೋಂಕಿತನೋರ್ವ ಆಸ್ಪತ್ರೆಯ ಕಟ್ಟಡ ಏರಿ ಆತ್ಮಹತ್ಯೆ  ಬೆದರಿಕೆ ಹಾಕಿರುವ ಘಟನೆ ಗೋಕಾಕ್ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಈತನಿಗೆ ಸೋಮವಾರ ಬೆಳಿಗ್ಗೆ ಕೊರೊನಾ ಪಾಸಿಟಿವ್ ಬಂದಿದೆ.   ಬಳಿಕ ಆಸ್ಪತ್ರೆ ಕಟ್ಟಡ ಏರಿ ಕಳೆದ 6 ತಿಂಗಳಿಂದ ವೇತನ ನೀಡಿಲ್ಲ. ಸುಮಾರು 40 ಜನರು ಕೆಲಸ ನಿರ್ವಹಿಸುತ್ತಿದ್ದೆವೆ.   ಎಲ್ಲ ಕುಟುಂಬಗಳು ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿವೆ.  ಗುತ್ತಿಗೆ ಕಾರ್ಮಿಕರಿಗೆ …

Read More »

ಕನ್ನಡ ಭಾಷೆಗೆ ಅವಮಾನಿಸಿದ ಸಚಿವ ಶ್ರೀಮಂತ ಪಾಟೀಲ ಚಿವ ಸಂಪುಟದಿಂದ ಕೈಬಿಡಬೇಕ: ಕರ್ನಾಟಕ ರಕ್ಷಣಾ ವೇದಿಕೆ

ಚಿಕ್ಕೋಡಿ : ಕನ್ನಡ ಭಾಷೆಗೆ ಅವಮಾನಿಸಿದ ಸಚಿವ ಶ್ರೀಮಂತ ಪಾಟೀಲರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ಈಚೆಗೆ ನಡೆದ ಸಕ್ಕರೆ ಕಾರ್ಖಾನೆಯ ಅಡಿಗಲ್ಲು ಸಮಾರಂಭದ ವೇದಿಕೆಯಲ್ಲಿ ಮರಾಠಿ ನಾಮಫಲಕ ಹಾಕುವ ಜತೆಗೆ ಸಚಿವ ಶ್ರೀಮಂತ ಪಾಟೀಲರು ಕನ್ನಡ ಭಾಷೆ ಮರೆತು ಮರಾಠಿಯಲ್ಲಿಯೇ ಮಾತನಾಡಿದ್ದಾರೆ.  ಇದು ಕನ್ನಡಿಗರಿಗೆ ನೋವುಂಟು ಮಾಡಿದ್ದಾರೆ. ಮರಾಠಿ …

Read More »