ಗೋಕಾಕ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಕಮಿಷನರ್ ಶಿವನಂದ ಹಿರೇಮಠ್ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅಂಗಡಿ, ಮುಗ್ಗಟ್ಟು ಹಾಗೂ ವ್ಯಾಪಾರಸ್ತರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ನಾಳೆಯಿಂದ ಆ. 15(ರವಿವಾರ)ದವರೆಗೂ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತಲಿದೆ. ಹೀಗಾಗಿ ಬಟ್ಟೆ ಅಂಗಡಿ, …
Read More »ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಚಿಕ್ಕೋಡಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದುಕೊಂಡು ನಮ್ಮ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ ಅವಳ ಮುಂದಿನ ವಿದ್ಯಾಭ್ಯಾಸದ ಸಮಗ್ರ ಖರ್ಚು ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂದು ಸಿಎಲ್‍ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ ತಿಳಿಸಿದರು. ಇಲ್ಲಿನ ಸಿಎಲ್‍ಇ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ ಪಡೆದ ಎಂ.ಕೆ.ಕವಟಗಿಮಠ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ …
Read More »ನಗರ ಅಪರಾಧ ಮತ್ತು ಸಂಚಾರ ಪೊಲೀಸ್ ದಳದ ಡಿಸಿಪಿಯಾಗಿ ಚಂದ್ರಶೇಖರ್ ನೀಲಗಾರ್ ಅಧಿಕಾರ
ಬೆಳಗಾವಿ : ನಗರ ಅಪರಾಧ ಮತ್ತು ಸಂಚಾರ ಪೊಲೀಸ್ ದಳದ ಡಿಸಿಪಿಯಾಗಿ ಚಂದ್ರಶೇಖರ್ ನೀಲಗಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಡಿಸಿಪಿ ಯಶೋಧಾ ವಂಟಗೋಡಿ ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆಯಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚಂದ್ರಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಅವರು ಅಧಿಕಾರ ಸ್ವೀಕರಿಸಿಕೊಂಡರು.
Read More »S.S.L.C.ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ
ಹಾವೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಬಂದ ಬೆನ್ನಲ್ಲೇ ಕಡಿಮೆ ಅಂಕ ಬಂದಿದೆ ಹಾಗೂ ಅನುತ್ತೀರ್ಣನಾಗಿದ್ದೇನೆ ಎಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣಿತ ವಿಷಯದಲ್ಲಿ ಫೇಲಾದ ಕಾರಣಕ್ಕೆ ಹಾವೇರಿಯ ದ್ಯಾಮವ್ವನ ಗುಡಿ ಓಣಿಯಲ್ಲಿ ವೈಷ್ಣವಿ ರಿತ್ತಿ (16) ಮನೆಯಲ್ಲಿ ವಿಷ ಸೇವಿಸಿದ್ದಾಳೆ. …
Read More »ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ
ಬೆಳಗಾವಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಬಾಳೆಕುಂದ್ರಿ ಕೆ.ಎಚ್.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಪ್ರಶಾಂತ ಅವರು ವಿರುದ್ಧ 26,78,473 ರುಪಾಯಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ವಿಚಾರಣೆ ನಡೆಸಿದೆ. ಅಲ್ಲದೆ ಅವರ ವಿರುದ್ಧ ಹಲವಾರು ಗಂಭೀರ ಆರೋಪಗಳ ಕೇಳಿ ಬಂದಿವೆ. ಗ್ರಾಮ ಪಂಚಾಯಿತಿಯ ಕರವಸೂಲಾತಿಯಲ್ಲಿ …
Read More »ಘಟಪ್ರಭಾ-ಮಣಗುತ್ತಿ ವಿವಾದ ಸೌಹಾರ್ದತೆ ಕಾಪಾಡುವಂತೆ ಪೋಲಿಸ್ ಕಮೀಶನರ್ ಗೆ ಕನ್ನಡ ಸೇನೆ ವತಿಯಿಂದ ಮನವಿ
ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮತ್ತು ಸ್ಥಳಾಂತರ ಪ್ರಕರಣವನ್ನು ಶಿವಸೇನೆ ಮತ್ತು ಹೊರಗಿನಿಂದ ಬಂದ ಇತರೆ ಸಂಘಟನೆಗಳು ವಿವಾದ ಸೃಷ್ಟಿ ಮಾಡಿ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳನ್ನು ಕೂಡಲೇ ಅವರನ್ನು ಬಂದಿಸಬೇಕು. ಅದರಂತೆ ಅಲ್ಲಿಯ ಜನರಿಗೆ ಸೌಹಾರ್ದತೆಯಿಂದ ಬಾಳಲು ಅನುಮಾಡಿ ಕೊಡಬೇಕು ಎಂದು ಕನ್ನಡ ಸೇನೆ ಮತ್ತು ಕರವೇ ಸಂಘಟನೆ ವತಿಯಿಂದ ಪೋಲಿಸ್ ಕಮೀಶನರ್ ಮನವಿ ಸಲ್ಲಿಸಲಾಯಿತು. ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ …
Read More »ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವಿಟ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನ ಸಭೆ ಮತಕ್ಷೇತ್ರದಲ್ಲಿ ಬರುವ ಮಣಗುತ್ತಿ ಗ್ರಾಮದಲ್ಲಿಯ ಶಿವಾಜಿ ಪ್ರತಿಮೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವಿಟ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮಣಗುತ್ತಿಯಲ್ಲಿಯ ಶಿವಾಜಿ ಪ್ರತಿಮೆಯನ್ನು ತೆರವು ಮಾಡಿದ್ದನ್ನು ಆಕ್ಷೇಪಿಸಿದ ಶಾಸಕಿ ನಿಂಬಾಳ್ಕರ್ ಅವರು, ಸಕಲ ಸರಕಾರಿ ಗೌರವದೊಂದಿಗೆ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಬೇಕು ಮತ್ತು ರಾಜ್ಯ ಸರ್ಕಾರ ಕ್ಷಮೆಯನ್ನು ಕೇಳಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದು ಕನ್ನಡಿಗರ …
Read More »ಜಿಲ್ಲೆಯಲ್ಲಿ ಇಂದು 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರು ಬಲಿ
ಬೆಳಗಾವಿ: ಜಿಲ್ಲೆಯಲ್ಲಿ ಇಂದು 54 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರು ಬಲಿಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಇಂದು ಒಂದೇ ದಿನ 90 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿಯ ಇಬ್ಬರು ಹಾಗೂ ಸವದತ್ತಿ ತಾಲೂಕಿನ ಒಬ್ಬ ಒಟ್ಟು ಮೂವರು ಸಾವನ್ನಪ್ಪಿದ್ದು, ಇದವರೆಗೆ ಜಿಲ್ಲೆಯಲ್ಲಿ ಬೆಳಗಾವಿ ತಾಲೂಕಿನಲ್ಲಿ 20, ಗೋಕಾಕನಲ್ಲಿ 10, …
Read More »ಜಲಪಾತದಲ್ಲಿ ಮಂಜಿನೊಂದಿಗೆ ಶರಾವತಿ ಕಣ್ಣ ಮುಚ್ಚಾಲೆ
ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೋಗ ಜಲಪಾತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿದ್ದು, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದಾಳೆ. ಮಲೆನಾಡಿನ ಬೆಟ್ಟ, ಗುಡ್ಡ ಹಸಿರು ಕಾನನದ ನಡುವೆ ಬಳುಕುತ್ತಾ ಹರಿಯುವ ಶರಾವತಿ ನದಿ ಜೋಗದಲ್ಲಿ ಸುಮಾರು 950 …
Read More »ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಅವರು ರಾಜಕೀಯವಾಗಿ ಒಗ್ಗಟ್ಟಾಗುತ್ತಿದ್ದಾರೆ……..?:ಸತೀಶ ಜಾರಕಿಹೊಳಿ
ಬೆಳಗಾವಿ: ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಅವರು ರಾಜಕೀಯವಾಗಿ ಒಗ್ಗಟ್ಟಾಗುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅದು ಅಸಾಧ್ಯದ ಮಾತು ಎಂದು ಹೇಳಿದ್ದಾರೆ. ರಾಜಕೀಯವಾಗಿ ಅವರ ಸಿದ್ಧಾಂತಗಳು, ವಿಚಾರ, ಹೋರಾಟವೇ ಬೇರೆಯಾಗಿದೆ.ಅವ್ರು ಹಾಸ್ಪಿಟಲ್ ನಲ್ಲಿ ಒಂದಾಗಬಹದು ಆದ್ರೆ ರಾಜಕೀಯವಾಗಿ ಅದು ಅಸಾಧ್ಯದ ಮಾತು ಎಂದು ವ್ಯಂಗ್ಯವಾಡಿದ ಅವರು ರಾಜಕೀಯವಾಗಿ ಯಾವಾಗಲೂ ಕೂಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ರಾಜಕೀಯವಾಗಿ 24 …
Read More »