Breaking News

ಬೆಳಗಾವಿ

ಅತಿವೃಷ್ಟಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ

ಸವದತ್ತಿ: ‘ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಕಂಗಾಲಾಗಿರುವ ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ರೈತ ಸಂಘದವರು ಉಪ ತಹಶೀಲ್ದಾರ್‌ ಆರ್.ಎಸ್. ನೇಸರಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ‘ಬರ, ನೆರೆ, ಅತಿವೃಷ್ಟಿ ಹೀಗೆ ಒಂದಿಲ್ಲೊಂದು ತೊಂದರೆಗೆ ರೈತರು ಪ್ರತಿ ವರ್ಷವೂ ಸಿಲುಕುತ್ತಿದ್ದೇವೆ. ಕಷ್ಟಪಟ್ಟು ಬೆಳೆದ ಬೆಳೆ ನಮ್ಮ ಕೈ ಸೇರುತ್ತಿಲ್ಲ. ಈ ಬಾರಿ ಅತಿವೃಷ್ಟಿಯಿಂದ ಹೆಸರು, ಮೆಕ್ಕೆಜೋಳ, …

Read More »

ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ

ರಾಯಬಾಗ : ಮೂರ್ನಾಲ್ಕು ವರ್ಷಗಳಿಂದ ಶೀತಿಲಗೊಂಡ ಸರ್ಕಾರಿ ಶಾಲೆ ಮೂರ್ನಾಲ್ಕು ವರ್ಷಗಳಿಂದ ಶಾಲೆ ಶೀತಿಲಗೊಂಡಿದ್ದು ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಶಾಸಕರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡಾ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶೀತಲ ಗೊಂಡಿದ್ದು ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಂಚುಗಳು ಒಡೆದ …

Read More »

ಕಳಪೆ ಕಾಮಗಾರಿಯಿಂದ ಕಾಲುವೆ ಸೋರಿ ರೈತರ ಜಮೀನು ಸವಳಾಗಿ ಪರಿವರ್ತನೆ ಆಂಕರ್:

ಚಿಕ್ಕೋಡಿ ಕೊಚ್ಚಿಹೊದ ಕಾಲುವೆಯ ಸಿಮೆಂಟ ಕಾಂಕ್ರೆಟ್, ಮೊಳಕಾಲು ತನಕ ನೀರು ನಿಂತು ಕೆಸರು ಗದ್ದೆಯಂತಾಗಿರುವ ಜಮೀನು, ನೀರಾವರಿ ಇಲಾಖೆಯ ವಿರುದ್ಧ ಘೋಷಣೆ ಹಾಕುತ್ತಿರುವ ರೈತರು ಇವೇಲ್ಲ ದೃಶ್ಯಗಳು ಕಂಡು ಬಂದಿರುವುದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪೂರ ಗ್ರಾಮದಲ್ಲಿ…. ಜವಳಿ ಸಚಿವ ಶ್ರೀಮಂತ ಪಾಟೀಲ ತವರು ಕ್ಷೇತ್ರದ ಐನಾಪೂರ ಗ್ರಾಮದ ರೈತರು ಗೋಳು ಯಾರು ಕೇಳದಂತಾಗಿದೆ. ಐನಾಪೂರ ಗ್ರಾಮದಿಂದ ಮಂಗಸೂಳಿ ಗ್ರಾಮದವರಗೆ ಐನಾಪೂರ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ …

Read More »

ಬೆಳಗಾವಿಯಲ್ಲಿ ಆಕ್ಸಿಜನ್ ಸಿಲಿಂಡರ್‌ ಕೊರತೆ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಪರದಾಟ ಎದುರಾಗಿದೆ. ‘ಬೇರೆ ಕಡೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಡುವಂತಿಲ್ಲ’ ಎಂದು ಅಲ್ಲಿನ ಜಿಲ್ಲಾಧಿಕಾರಿ ಆದೇಶಿಸಿರುವುದು ಇಲ್ಲಿ ಸಮಸ್ಯೆ ಸೃಷ್ಟಿಸಿದೆ. ಗಡಿ ತಾಲ್ಲೂಕುಗಳಾದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಅಥಣಿ ಹಾಗೂ ರಾಯಬಾಗ ಭಾಗದ 30ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಹಲವು ದಿನಗಳಿಂದ ಆಕ್ಸಿಜನ್‌ ಸಿಲಿಂಡರ್‌ ಪೂರೈಕೆಯಲ್ಲಿ ಕೊರತೆ ಎದುರಾಗಿದೆ. ಈ ಆಸ್ಪತ್ರೆಗಳು, ಆಕ್ಸಿಜನ್‌ಗಾಗಿ ಹಲವು ವರ್ಷಗಳಿಂದಲೂ ಕೊಲ್ಹಾಪುರದ …

Read More »

ಬಿಡುವು ಕೊಟ್ಟು ಬಿದ್ದ ಮಳೆಗೆ ರಾಜ್ಯ ತತ್ತರ: ಹಾಳಾಯ್ತು ಬೆಳೆ, ಮನೆಗಳಿಗೆ ನುಗ್ಗಿದ ಚರಂಡಿ ನೀರು

ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ! ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ …

Read More »

ರಾಣಿ  ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ

ಭೂತರಾಮನಹಟ್ಟಿ, ಹಿರೇಬಾಗೇವಾಡಿ ಎರಡು ಕಡೆ ವಿವಿ ಕಾರ್ಯಚಟುವಟಿಕೆ ಹೆಚ್ಚುವರಿ ಕಟ್ಟಡಕ್ಕಾಗಿ  ಹಿರೇಬಾಗೇವಾಡಿಗೆ ಸ್ಥಳಾಂತರ ಅಭಿವೃದ್ದಿ ದೃಷ್ಠಿಯಿಂದ ಈ ನಿರ್ಧಾರ ಬೆಳಗಾವಿ: ರಾಣಿ  ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ ವಿಚಾರವಾಗಿ  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ  ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ.   ಸದ್ಯ ಭೂತರಾಮನಹಟ್ಟಿಯಲ್ಲಿರುವ ವಿಶ್ವ ವಿದ್ಯಾಲಯ  ಅರಣ್ಯ ಪ್ರದೇಶದ ಜಾಗದ ಅಧೀನದಲ್ಲಿರುವುದಿಂದ ಹೆಚ್ಚುವರಿ ಕಟ್ಟಡ, ಮತ್ತೀತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. …

Read More »

ಹೆಸ್ಕಾಂ ಅಕ್ರಮ-ಸಕ್ರಮ ಯೋಜನೆಯನ್ನು ರೈತರು ಸದ್ಭಳಕೆ ಮಾಡಿಕೊಳ್ಳಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವ್ಯಾಪ್ತಿಯ ರೈತರು ತಮ್ಮ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯಗಳು ಅಗತ್ಯವಿದ್ದಲ್ಲಿ ಶುಲ್ಕ ಮತ್ತು ಭದ್ರತಾ ಠೇವಣಿಯನ್ನು ಹೆಸ್ಕಾಂಗೆ ಪಾವತಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ. ಅಕ್ರಮ-ಸಕ್ರಮ ಯೋಜನೆಯಡಿ ಆರ್ ಆರ್ ಸಂಖ್ಯೆಗಳನ್ನು ಪಡೆದು 50 ರೂ. ನೋಂದಣಿ ಶುಲ್ಕ ಪಾವತಿಸಿದ ರೈತರು ತಮ್ಮ ಅನುಕೂಲದ ಪ್ರಕಾರ ಸರ್ವಿಸ್ ವೈರ್ ಗಳ ಮೂಲಕ ವಿದ್ಯುತ್ …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಿರೇಬಾಗೇವಾಡಿಗೆ ಶಿಫ್ಟ್​

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಭೂತರಾಮಟ್ಟಿಯಿಂದ ಹಿರೇಬಾಗೇವಾಡಿಗೆ ಸ್ಥಳಾಂತರಿಸಲಾಗಿದ್ದು, ಹಿರೇಬಾಗೇವಾಡಿ ಗ್ರಾಮಸ್ಥರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಕ್ಯಾಬಿನೆಟ್ ಅನುಮೋದನೆ ಅಷ್ಟೇ ಬಾಕಿ ಉಳಿದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿದ್ದಾರೆ.  

Read More »

ಎಬಿವಿಪಿಯಿಂದ ಸಹಿ ಸಂಗ್ರಹ ಅಭಿಯಾನ ಆರಂಭ

ಬೆಳಗಾವಿ: ‘ಡ್ರಗ್ಸ್ ಜಾಲದಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಹಾನಗರ ಘಟಕದ ಕಾರ್ಯಕರ್ತರು ಬುಧವಾರ ಸಹಿ ಸಂಗ್ರಹ ಅಭಿಯಾನ ಆರಂಭಿಸಿದರು. ಇಲ್ಲಿನ ಹುತಾತ್ಮ ಚೌಕದಲ್ಲಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ್ ಮಾತನಾಡಿ, ‘ಶಾಲಾ-ಕಾಲೇಜು ಅಂಗಳಕ್ಕೂ ಡ್ರಗ್ಸ್ ಜಾಲ ಕಾಲಿಟ್ಟಿದೆ. ಗುಣಾತ್ಮಕ ಶಿಕ್ಷಣ ಪಡೆದು ಭವಿಷ್ಯ ಕಟ್ಟಿಕೊಳ್ಳಬೇಕಿದ್ದ …

Read More »

ಬಿಟ್ಟು ಬ್ಯಾಸರಲೇ ಕೇಂದ್ರ ತಂಡದ ಅಧ್ಯಯನ : ವರದಿಯಿಂದ ರೈತರ ಕಣ್ಣೀರು ಒರಸತ್ತಾ ಮೂಲೆಗೆ ಸೇರುತ್ತಾ?

ಹುಬ್ಬಳ್ಳಿ; ಆಗಸ್ಟ್​ನಿಂದ ಈವರೆಗೆ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿ ಹಾನಿಗೀಡಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ನಿನ್ನೆ ಭೇಟಿ ನೀಡಿ ಪರಿಶೀಲಿಸಿತು. ತಾಲೂಕಿನ 2 ಹಳ್ಳಿಗೆ ಭೇಟಿ ನೀಡಿದ ತಂಡದ ಅಧಿಕಾರಿಗಳು, ಹಾನಿ ಪಟ್ಟಿಯಲ್ಲಿದ್ದ ರೈತರ ಜಮೀನಿಗೆ ಭೇಟಿ ನೀಡದೆ ರೈತನೊಬ್ಬನನ್ನು ತಾವಿದ್ದಲ್ಲೇ ಕರೆಸಿಕೊಂಡರು. ಕಾಲು ದಾರಿಯಲ್ಲಿ ನೀರಿದೆ ಎಂದು ರೈತ ಮಹಿಳೆಯನ್ನು ತಮ್ಮ ಹತ್ತಿರ ಕರೆಸಿಕೊಂಡಿದ್ದು ಕಾಟಾಚಾರದ ಅಧ್ಯಯನಕ್ಕೆ ಹಿಡಿದ …

Read More »