ಕುಡಚಿ: ಇಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಕೋವಿಡ್ ಕಾರಣದಿಂದಾಗಿ ಸರಳವಾಗಿ ಶನಿವಾರ ಆಚರಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಅವರು ಮಾಸಾಹೇಬಾ ದರ್ಗಾದಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ದೇವರ ನಾಮಸ್ಮರಣೆ ಮಾಡಿದರು. ಅವರಿಗೆ ಮುಖಂಡರು ಸಿಹಿ, ಶರಬತ್, ಚಹಾ ವಿತರಿಸಿದರು. ಮುಖಂಡರಾದ ಮಹಮ್ಮದ ಹುಸೇನ ಓಮಿನಿ, ಸುಲ್ತಾನ ವಾಟೆ, ರಾಜು ನಿಡಗುಂದಿ, ಆಶಿಫ ಚಮನಶೇಖ, ಆತೀಫ ಪಟಾಯಿತ, ಅಮೀನ ವಾಟೆ ಇದ್ದರು. ಮಸೀದಿಗಳನ್ನು ಸಿಂಗರಿಸಲಾಗಿತ್ತು. ಪಿಎಸ್‌ಐ …
Read More »ಬಿಜೆಪಿ ನಾಯಕರ ನಡುವೆ ‘ಸಮನ್ವಯ’ ಮೂಡಿಸುವ ಕಾರ್ಯಕ್ಕೆ ಹೈಕಮಾಂಡ್ ತಂತ್ರ ರೂಪಿಸಿದೆ.
ಬೆಳಗಾವಿ: ಅನಿರೀಕ್ಷಿತವಾಗಿ ಎದುರಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಬಿಜೆಪಿ ನಾಯಕರ ನಡುವೆ ‘ಸಮನ್ವಯ’ ಮೂಡಿಸುವ ಕಾರ್ಯಕ್ಕೆ ಹೈಕಮಾಂಡ್ ತಂತ್ರ ರೂಪಿಸಿದೆ. ಇದರ ಮೊದಲ ಭಾಗವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಒಂದು ಬಣ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ …
Read More »ಸಂಗ್ಯಾ-ಬಾಳ್ಯಾ ಸಣ್ಣಾಟದ ಕಲಾವಿದೆ ಅರಭಾವಿಯ ಕೆಂಪವ್ವಾ ಹರಿಜನ ಅವರಿಗೆ ಈ ಬಾರಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ
ಮೂಡಲಗಿ : ಸಂಗ್ಯಾ-ಬಾಳ್ಯಾ ಸಣ್ಣಾಟದ ಕಲಾವಿದೆ ಅರಭಾವಿಯ ಕೆಂಪವ್ವಾ ಹರಿಜನ ಅವರಿಗೆ ಈ ಬಾರಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವುದು ನಮ್ಮ ನೆಲದ ಹೆಮ್ಮೆಯಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕೆಂಪವ್ವಾ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೂ ಬಯಲಾಟಗಳ ಪ್ರದರ್ಶನ ಮಾಡುತ್ತ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಸುಮಾರು 4 ದಶಕಗಳಿಂದ ಸಣ್ಣಾಟದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಲಾವಿದೆಯಾಗಿದ್ದಾರೆ. …
Read More »ಔಷಧಿ ಅಂಗಡಿಯಕಳ್ಳತನ ಮಾಡಿರುವ ಘಟನೆ
ಬೆಳಗಾವಿ: ಔಷಧಿ ಅಂಗಡಿಯ ಮೇಲ್ಛಾವಣಿ ಕೊರೆದ ಕಳ್ಳರು ಮಾಸ್ಕ್ ಸೇರಿದಂತೆ ಇತರೆ ಔಷಧಿಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲದಲ್ಲಿ ತಡರಾತ್ರಿ ನಡೆದಿದೆ. ಕಳ್ಳರು 1 ಚೀಲ ಮಾಸ್ಕ್ ಕಳವು ಮಾಡಿದ್ದಾರೆ. ಚಂದ್ರಶೇಖರ ಹುಚ್ಚನ್ನವರ್‌ಗೆ ಸೇರಿದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಒಂದು ಚೀಲ ಮಾಸ್ಕ್ ಜೊತೆಗೆ 50ಕ್ಕೂ ಹೆಚ್ಚು ಮೂವ್ ಸ್ಪ್ರೇ ಮತ್ತು 6 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.
Read More »ರಾಜ್ಯ ರೈಲ್ವೆ ಖಾತೆ ತೆರವಾಗಿದ್ದು, ಈ ಖಾತೆ ಮೇಲೆ ರಾಜ್ಯದ ಸಂಸದರು ಕಣ್ಣಿಟ್ಟಿದ್ದಾರೆ
ಬೆಳಗಾವಿ: ಸುರೇಶ್ ಅಂಗಡಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ವೀರಶೈವ-ಲಿಂಗಾಯತ ಸಮುದಾಯದ ನಾಯಕರಾಗಿದ್ದರು. ಹೀಗಾಗಿ ಅದೇ ಸಮುದಾಯದ ಸಂಸದರಿಗೆ ಕೇಂದ್ರ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ನಡುವೆ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಸಂಸದ ಪಿ.ಸಿ. ಗದ್ದೀಗೌಡರ್, ಸಂಸದ ಶಿವಕುಮಾರ್ ಉದಾಸಿ, ಸಂಸದ ಕರಡಿ ಸಂಗಣ್ಣ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರಗೆ ಅವರು …
Read More »ಉಮೇಶ ಕತ್ತಿ ಮಂತ್ರಿನೇ ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ
ಬೆಳಗಾವಿ : ಉಮೇಶ ಕತ್ತಿ ಮಂತ್ರಿನೇ ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಅವರು ಪ್ರಶ್ನಿಸಿದ್ದಾರೆ. ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ ಕತ್ತಿ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಬೇಕೆಂಬುದು ಈ ಭಾಗದ ಜನತೆಯ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ. ಭೀಕರ ಪ್ರವಾಹ: ‘ಮನೆ ನಿರ್ಮಿಸಿಕೊಳ್ಳದಿದ್ದರೆ ಹಣ ವಾಪಸ್’ ಮುಖ್ಯಮಂತ್ರಿ ಸ್ಥಾನಕ್ಕೆ ಉಮೇಶ ಕತ್ತಿ ಹೆಸರು ಮುಂಚೂಣಿಯಲ್ಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ …
Read More »ಬ್ಲ್ಯಾಕ್ ಡೇ ಗೆ ಕರೆ ಕೊಟ್ಟ ಮಹಾರಾಷ್ಟ್ರ ಸರ್ಕಾರ…!
ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ …
Read More »ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಹದಿನಾರು ಸ್ಥಾನಗಳನ್ನು ಅವಿರೋಧ ಆಯ್ಕೆ ಮಾಡಿ, ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಲು ನಿರ್ಧರಿಸಿದ್ದೇವೆ: ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ಕಳೆದ 2015ರಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಭಿನ್ನಾಭಿಪ್ರಾಯಗಳು ಮೂಡಿದ್ದವು. ಹೀಗಾಗಿ ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಹದಿನಾರು ಸ್ಥಾನಗಳನ್ನು ಅವಿರೋಧ ಆಯ್ಕೆ ಮಾಡಿ, ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಲು ನಿರ್ಧರಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಭಿನ್ನಾಪ್ರಾಯ ಬದಿಗಿಟ್ಟು ಒಂದಾಗಿ ಹೋಗುವ ನಿಟ್ಟಿನಲ್ಲಿ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿನ 16 ಕ್ಷೇತ್ರದಲ್ಲಿ …
Read More »ಹೊಸದಾಗಿ ಡಿಡಿಸಿ ಬ್ಯಾಂಕ್ ಉದ್ಘಾಟನೆ ಪ್ರಧಾನಿ ಮೋದಿ ಅವರುಗೆ ಆಹ್ವಾನ ನೀಡುತ್ತೇವೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ಬೆಳಗಾವಿ: ಹೊಸದಾಗಿ ಡಿಡಿಸಿ ಬ್ಯಾಂಕ್ ಉದ್ಘಾಟನೆ ಪ್ರಧಾನಿ ಮೋದಿ ಅವರುಗೆ ಆಹ್ವಾನ ನೀಡುತ್ತೇವೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು. ಇಲ್ಲಿನ ಯು.ಕೆ 27 ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನೂರು ವರ್ಷದ ಸಂಭ್ರಮಾಚರಣೆಗೆ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಮಂ ಬಿಜೆಪಿ ನಾಯಕರು ದೆಹಲಿ ಹೋರಟಿದ್ದೇವೆ ಎಂದರು. ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು …
Read More »ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಲ್ಲಿಸಿದ ನಾಮಪತ್ರವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲವೆಂದು ಶಾಸಕಿ ಅಂಜಿಲಿ ನಿಂಬಾಳ್ಕರ್
ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಲ್ಲಿಸಿದ ನಾಮಪತ್ರವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲವೆಂದು ಶಾಸಕಿ ಅಂಜಿಲಿ ನಿಂಬಾಳ್ಕರ್ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ವಾಪಾಸ್ ಪಡೆಯುವುದಿಲ್ಲವೆಂದು ತಿಳಿಸಿದ್ದಾರೆ. ನನ್ನ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಎಂಇಎಸ್ ಮುಖಂಡರೊಂದಿಗೂ ಸಹ ಮಾತನಾಡಿದ್ದೇನೆ. …
Read More »
Laxmi News 24×7