Breaking News

ಬೆಳಗಾವಿ

ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ

ಬೆಂಗಳೂರು: ಗಡಿ ಭದ್ರತಾ ಪಡೆ ವತಿಯಿಂದ ಆಯೋಜಿಸಿದ್ದ ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬಿ.ಎಸ್.ಎಫ್ ನ ಐ.ಜಿ.ಎಸ್.ಕೆ.ತ್ಯಾಗಿ , ಬಿ.ಎಸ್.ಸಾಧು ಮತ್ತಿತರರು ಉಪಸ್ಥಿತರಿದ್ದರು – ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ಯಾರಾ ಸೈಕ್ಲಿಂಗ್ ಮೂಲಕ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ …

Read More »

ಗ್ರಾಪಂ.ಚುನಾವಣೆಗೆ ಸ್ಪರ್ಧಿಸಿದ್ದ ಅಂಬೋಜಿ ನಿಧನ

ಖಾನಾಪುರ : ತಾಲ್ಲೂಕಿನ ನ್ಯಾಯವಾದಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ.ಅಂಬೋಜಿ (64) ಭಾನುವಾರ ಬೆಳಿಗಿನ ಜಾವ ನಿಧನರಾದರು. ಬಿಷ್ಟಾದೇವಿ ಜೀರ್ಣೊದ್ದಾರ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಕ್ಕೇರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಂಗಳವಾರ ನಡೆದ ಗ್ರಾಪಂ ಚುಣಾವಣೆಗೆ ಕಕ್ಕೇರಿ ಗ್ರಾಮದ ವಾರ್ಡ್ ನಂ.2ಕ್ಕೆ ಸ್ಪರ್ಧೆ ಮಾಡಿದ್ದರು.

Read More »

ಗೋಕಾಕ: ಜ.6 ರಂದು ತೆರಿಗೆ ಸಂದಾಯ ಮಾಡದ 21 ವಾಹನಗಳ ಹರಾಜು!!

ಗೋಕಾಕ: ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಕಾರಣ ಮುಟ್ಟುಗೋಲು ಹಾಕಿಕೊಂಡಿರುವ 21 ವಾಹನಗಳನ್ನು ಜ. 6 ರಂದು ಮುಂಜಾನೆ 10.30 ಘಂಟೆಗೆ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಬಹಿರಂಗು ಹರಾಜು ಮಾಡಲಾಗುವುದು ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಬಾಕಿ ಇರುವ ತೆರಿಗೆ ಸಂದಾಯ ಮಾಡಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುಲು …

Read More »

ಬ್ಯಾಲೇಟ್ ಪೇಪರ್ ನಲ್ಲಿ ಬಕೆಟ್ ಬದಲು ಅಲ್ಮೇರಾ ಚಿಹ್ನೆ: ಮತದಾನ ಸ್ಥಗಿತ

ರಾಮದುರ್ಗ: ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿ ಚಿಹ್ನೆಯನ್ನು ತಪ್ಪಾಗಿ ಮುದ್ರಿಸಿರುವ ಹಿನ್ನೆಲೆ ಕದಂಪೂರ ವಾರ್ಡ್ ನಂಬರ್ 6 ರ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ತಾಲೂಕಿನ ಕದಂಪೂರ ಗ್ರಾಮದಲ್ಲಿ 6 ನೇ ವಾರ್ಡ್​ಗೆ ನಿರ್ಮಲಾ ಮಹಾಂತೇಶ ಖಾನಪೇಟ್ ಎಂಬುವರು ಸ್ಪರ್ಧಿಸಿದ್ದಾರೆ. ಇವರಿಗೆ ಬಕೆಟ್ ಚಿಹ್ನೆ ನೀಡಲಾಗಿತ್ತು. ಆದರೆ ಮತದಾನದ ಬ್ಯಾಲೆಟ್ ಪೇಪರ್‌ನಲ್ಲಿ ‘ಬಕೆಟ್’ ಚಿಹ್ನೆ ಬದಲು ‘ಅಲ್ಮೇರಾ’ ಚಿಹ್ನೆ ಮುದ್ರಣವಾಗಿದೆ. ಇದರಿಂದಾಗಿ ಮತದಾನ ಮೂಂದೂಡಿಕೆ ಮಾಡಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ …

Read More »

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಭಾಷೆ ಬದಲು ಪಕ್ಷದ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ

ಬೆಳಗಾವಿ(ಡಿ. 26): ಬೆಳಗಾವಿ ಮಹಾನಗರ ಪಾಲಿಕೆ ಭಾಷೆ, ಗಡಿ ವಿಚಾರವಾಗಿ ರಾಜ್ಯದಲ್ಲಿ ಅನೇಕ ಸಲ ಸುದ್ದಿಯಾಗಿದೆ. ಅನೇಕ ಬಾರಿ  ಅಧಿಕಾರ ಚುಕ್ಕಾಣಿ ಹಿಡಿಯಲು ಇದೇ ವಿಚಾರವನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ರಾಜಕೀಯ ಪಕ್ಷಗಳು ಭಾಷೆ ಆಧಾರದ  ಬದಲಾಗಿ ಪಕ್ಷದ ಆಧಾರದ ಮೇಲೆ ಸ್ಪರ್ಧಿಸಲು ಸಜ್ಜಾಗಿವೆ.  2019ರ ಮಾರ್ಚ್ ತಿಂಗಳಲ್ಲಿಯೇ ಮಹಾನಗರ ಪಾಲಿಕೆ ಅವಧಿ ಮುಕ್ತಾಯ‌ವಾಗಿದೆ. ಆದರೆ, ಮೀಸಲಾತಿ, ವಾರ್ಡ್ ವಿಂಗಡಣೆ ವಿಚಾರದಲ್ಲಿ ವಿವಾದ ಉಂಟಾಗಿ ಕೋರ್ಟ್ ಮೆಟ್ಟಿಲು ಏರಿದ್ದರ ಪರಿಣಾಮ ಚುನಾವಣೆ  …

Read More »

ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಿಸಲು ನೂತನ ಕ್ಯಾಲೇಂಡರ್ ವಿತರಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ- ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಿಸಲು ನೂತನ ಕ್ಯಾಲೇಂಡರ್ ವಿತರಿಸಿದ ರಮೇಶ ಜಾರಕಿಹೊಳಿ ಪೃಥ್ವಿ ಫೌಂಡೇಶನ್ ವತಿಯಿಂದ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕೊರೊನಾ ವಾರಿಯರ್ಸ್‍ಗೆ ಸತ್ಕಾರ ಮಾಡಿ ಬಳಿಕ ತಮ್ಮ ಭಾವಚಿತ್ರದ ಹೊಸ ವರ್ಷದ ಕ್ಯಾಲೇಂಡರ್‍ನ್ನು ಬಿಡುಗಡೆಗೊಳಿಸಿದರು. ಈ ವೇಳೆ ಪೃಥ್ವಿ ಸಿಂಗ್ ಮಾತನಾಡಿ ಸುಮಾರು 10 ಸಾವಿರ ಕ್ಯಾಲೇಂಡರ್‍ಗಳನ್ನು ಗ್ರಾಮೀಣ ಕ್ಷೇತ್ರದಲ್ಲಿ ವಿತರಿಸುತ್ತಿದ್ದೇವೆ. ಅದೇ ರೀತಿ ಗ್ರಾಮೀಣ ಕ್ಷೇತ್ರದಲ್ಲಿ …

Read More »

ಶಿಕ್ಷಕರ ಸಂಘದಿಂದ ನಾಗಪ್ಪ ಶೇಖರಗೋಳ ಅವರಿಗೆ ಸತ್ಕಾರ

ಗೋಕಾಕ: ಶಿಕ್ಷಕರು ತಮ್ಮ ಕರ್ತವ್ಯದ ಜೊತೆಗೆ ಸಂಘದ ಪ್ರಗತಿಗೂ ಶ್ರಮಿಸಿ, ಶಿಕ್ಷಕರ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ತಿಳಿಸಿದರು. ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು …

Read More »

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ಚಿಗುರು ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ಚಿಗುರು ಕಾರ್ಯಕ್ರಮ -2020 ನ್ನು ಆಯೋಜಿಸಲಾಗಿತ್ತು. ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಚಿಣ್ಣರ ಹಬ್ಬವನ್ನು ಬಸವರಾಜ ಕಟ್ಟಿಮನಿ ಸಭಾಗೃಹದಲ್ಲಿ ಆಯೋಜನೆ ಮಾಡಲಾಗಿತ್ತು. ವೇದಿಕೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ,ಉತ್ತರ ವಿಭಾಗದ ಶಾಸಕ ಅನಿಲ ಬೆನಕೆ, ವೇಣುಧ್ವನಿ ಬಾನುಲಿಯ ಸುನಿತಾ ದೇಸಾಯಿ,ಪತ್ರಕರ್ತ್ ಮಹೇಶ ವಿಜಾಪುರ & ಗಣ್ಯರು ಆಸಿನರಾಗಿದ್ದರು. ದೀಪ ಬೆಳಗಿಸುವ …

Read More »

FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ

FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡು ನಿಯಮಾನುಸಾರ ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ …

Read More »

ಕೊಣ್ಣೂರಲ್ಲಿ ಪೋಲಿಸ ಇಲಾಖೆಯಿಂದ ಅಪರಾದ ತಡೆ ಕಾರ್ಯಕ್ರಮ

ಬೆಳಗಾವಿ ಜಿಲ್ಲೆಯಲ್ಲಿ ಅಪರಾದ ಮಾಸಾಚಾರಣೆ ತಡೆ ನಿಮಿತ್ಯವಾಗಿ ಗೋಕಾಕ ತಾಲೂಕಿನ ಕೊಣ್ಣೂರ ಉಪ ಪೋಲಿಸ್ ಠಾಣಾವತಿಯಿಂದ ASI ಟಿ,ಎಸ್,ದಳವಾಯಿ, ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ದುಂಡೇಶ ಅಂತರಗಟ್ಟಿ, ಸಂಜೀವ ಮಾನೆಪ್ಪಗೋಳ, ಮಹೇಶ ಕಾಂಬಳೆ ಹಾಗೂ ಸರದಾರ ಹಸರಂಗಿಯವರು ಉಪಸ್ಥಿತರಿದ್ದು ಸಾರ್ವಜನಿಕರಿಗೆ ಅಪರಾದ ಮಾಡುವುದರಿಂದ ಎನೆನು ಹಾನಿಯಾಗುತ್ತದೆ ಎಂದು ತಿಳುವಳಿಕೆ ನೀಡಿದರು, ಅದರಂತೆ ಕೊರಾನಾದ ಬಗ್ಗೆ ಎಲ್ಲರೂ ಮಾಸ್ಕ್ ದರಿಸಿ ,ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದರು.

Read More »