Breaking News

ಬೆಳಗಾವಿ

ಕೊರೆಯುವ ಚಳಿಯಲ್ಲೂ ರಾತ್ರಿಯಿಡೀ ಕನ್ನಡ ಧ್ವಜ ಕಾವಲು ಮಾಡಿದ ಕನ್ನಡ ಪರ ಹೋರಾಟಗಾರರು

  ಬೆಳಗಾವಿ: ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಸೋಮವಾರ ಬೆಳಿಗ್ಗೆ ಸುಮಾರು11 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕನ್ನಡ ಮಾತೆಗೆ ಜಯ ಘೋಷಣೆ ಕೂಗಿದರು. ಇನ್ನೊಂದು ಕಡೆ ಅದನ್ನು ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳ ಒತ್ತಡ ಹೇರಿದರು ಅದಕ್ಕೆ ಬಗ್ಗದ ಕನ್ನಡ ಪರ ಹೋರಾಟಗಾರರು ಅದನ್ನು ತೆರವುಗೊಳಿಸದಂತೆ ಇಡೀ ರಾತ್ರಿಯಲ್ಲ ಕೊರೆಯುವ ಚಳಿಯಲ್ಲೂ ಅದರ ಕಾವಲು ಮಾಡುವುದರ ಜೊತೆಗೆ …

Read More »

ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ

  ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಧ್ವಜವನ್ನು ತೆರವುಗೊಳಿಸದೇ ಅಲ್ಲಿಯೇ ಮುಂದುವರಿಸಬೇಕು ಎಂದು ಧರಣಿ ಮುಂದುವರಿಸಿದ್ದಾರೆ.. ಆದರೆ ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಸವಾಲು ಎಸೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳ …

Read More »

ಸ್ಟೋನ್ ಕ್ರಷರ‍್ಸದಲ್ಲಿ ಅಕ್ರಮವಾಗಿ ತಗಡಿನ ಶೇಡ್ ನಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸ್ಪೋಟಕ ವಸ್ತು

ಬೆಳಗಾವಿ – ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಶ್ರೀ ಸಾಯಿನಾಥ ಸ್ಟೋನ್ ಕ್ರಷರ‍್ಸದಲ್ಲಿ ಅಕ್ರಮವಾಗಿ ತಗಡಿನ ಶೇಡ್ ನಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಆಂತರಿಕ ಭದ್ರತಾ ವಿಭಾಗದ ಪೋಲಿಸ್ ಅಧಿಕಾರಿ ಶಿವಾನಂದ ಅಂಬಿಗೇರ ಪೊಲೀಸ್ ನಿರೀಕ್ಷರು ಇವರ ಮುಂದಾಳತ್ವದಲ್ಲಿ ರೇಡ್ ಮಾಡುವ ಮೂಲಕ ಎಲ್ಲ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ಡಿಸೆಂಬರ್ …

Read More »

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಯಶಸ್ವಿಯಾಗಿರುವ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಅಭಿನಂದನೆ ಸಲ್ಲಿಸಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಯಶಸ್ವಿಯಾಗಿರುವ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಅಭಿನಂದನೆ ಸಲ್ಲಿಸಿರುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್, ರಾಜ್ಯದ ಜನರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸಚಿವಸಂಪುಟ ಸಭೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸೋನಾಲಿ ಸರ್ನೋಬತ್ ಹೇಳಿಕೆ ನೀಡಿದ್ದಾರೆ. ಹಲವಾರು ವರ್ಷಗಳಿಂದ ರಾಜ್ಯದ ಕೊಟ್ಯಂತರ ಜನರ ಬೇಡಿಕೆಯಾಗಿದ್ದ ಗೋಹತ್ಯಾ ನಿಷೇಧ ಕಾಯ್ದೆ …

Read More »

ಅಕ್ರಮವಾಗಿ ನುಗ್ಗಿ ಚಿಗರೆಗೆ ಗುಂಡು ಹಾರಿಸಿದ ಇಬ್ಬರನ್ನು ಅರಣ್ಯಾಧಿಕಾರಿಗಳ ವಶಕ್ಕೆ

ಬೆಳಗಾವಿ: ಗೋಲಿಹಳ್ಳಿ ವಲಯದ ಕಿತ್ತೂರು ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮವಾಗಿ ನುಗ್ಗಿ ಚಿಗರೆಗೆ ಗುಂಡು ಹಾರಿಸಿದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಅರಣ್ಯ ಅಪರಾಧಗಳನ್ನು ರೂಢಿಗತ( Habitual Offenders) ಮಾಡಿಕೊಂಡಿರುವ ಇವರು ಅರಣ್ಯಾಧಿಕಾರಿಗಳ ಕಣ್ಣು ತಪ್ಪಿಸಿ ವನ್ಯಭೇಟೆಗೆ ಇಳಿಯುತ್ತಾರೆ ಎಂದು ತಿಳಿದುಬಂದಿದೆ. ಕಿತ್ತೂರು ಬಳಿಯ ಕಾಯ್ದಿಟ್ಟ ಅರಣ್ಯದಲ್ಲಿ ಗುಂಡು ಹಾರಿಸಿದ ಖದೀಮರಿಂದ ಜಿಂಕೆ ತಪ್ಪಿಸಿಕೊಂಡಿದ್ದು, ಬೆಳಗಾವಿ ವಿನಾಯಕ ನಗರದ ಉದ್ದವ ರಾಜೇಂದ್ರ ನಾಯಕ, ಕಾಕತಿ ದೇಸಾಯಿ ಗಲ್ಲಿಯ ಸಾಗರ …

Read More »

ಬಿಜೆಪಿಯವರು 7 ವರ್ಷದಲ್ಲೇ ಮಾರಿದ್ರು: ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ಕಾಂಗ್ರೆಸ್ ಏನು ಮಾಡದಿದ್ರೆ ಸಂಸ್ಥೆಗಳನ್ನು ಹೇಗೆ ಮಾರಾಟ ಮಾಡುತಿದ್ರು?

ಗೋಕಾಕ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಅಭಿವೃದ್ದಿಗೊಳಿಸಿದ ದೇಶವನ್ನು ಬಿಜೆಪಿಯವರು ಕೇವಲ 7 ವರ್ಷದಲ್ಲಿ ಮಾರಾಟ ಮಾಡಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ ಎಲ್ ಎಲ್ಲವನ್ನು ಕಾಂಗ್ರೆಸ್ ನವರು 70ವರ್ಷಗಳ …

Read More »

ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿ

ಬೆಳಗಾವಿ: ಸಾಧಿಸುವ ಗುರಿಯೊಂದಿದ್ದರೆ ಸಾಕು, ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಕುಟುಂಬದ ಕಷ್ಟಗಳನ್ನೇ ತನ್ನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಫಾಸ್ಟೆಸ್ಟ್ ಸ್ಕೇಟಿಂಗ್‌ನಲ್ಲಿ ಗಿನ್ನೆಸ್​ ದಾಖಲೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು, ನಗರದ ಮಾಳಮಾರುತಿ ನಿವಾಸಿ ಸಂಜಯ ಹಾಗೂ ಸುಜಾತಾ ನವಲೆ ದಂಪತಿ ಪುತ್ರ ಅಭಿಷೇಕ ನವಲೆ 12.85 ಸೆಕೆಂಡ್ಸ್​​​ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ …

Read More »

ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ

ಬೆಂಗಳೂರು: ಗಡಿ ಭದ್ರತಾ ಪಡೆ ವತಿಯಿಂದ ಆಯೋಜಿಸಿದ್ದ ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬಿ.ಎಸ್.ಎಫ್ ನ ಐ.ಜಿ.ಎಸ್.ಕೆ.ತ್ಯಾಗಿ , ಬಿ.ಎಸ್.ಸಾಧು ಮತ್ತಿತರರು ಉಪಸ್ಥಿತರಿದ್ದರು – ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ಯಾರಾ ಸೈಕ್ಲಿಂಗ್ ಮೂಲಕ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ …

Read More »

ಗ್ರಾಪಂ.ಚುನಾವಣೆಗೆ ಸ್ಪರ್ಧಿಸಿದ್ದ ಅಂಬೋಜಿ ನಿಧನ

ಖಾನಾಪುರ : ತಾಲ್ಲೂಕಿನ ನ್ಯಾಯವಾದಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಸಿ.ಬಿ.ಅಂಬೋಜಿ (64) ಭಾನುವಾರ ಬೆಳಿಗಿನ ಜಾವ ನಿಧನರಾದರು. ಬಿಷ್ಟಾದೇವಿ ಜೀರ್ಣೊದ್ದಾರ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಕ್ಕೇರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಂಗಳವಾರ ನಡೆದ ಗ್ರಾಪಂ ಚುಣಾವಣೆಗೆ ಕಕ್ಕೇರಿ ಗ್ರಾಮದ ವಾರ್ಡ್ ನಂ.2ಕ್ಕೆ ಸ್ಪರ್ಧೆ ಮಾಡಿದ್ದರು.

Read More »

ಗೋಕಾಕ: ಜ.6 ರಂದು ತೆರಿಗೆ ಸಂದಾಯ ಮಾಡದ 21 ವಾಹನಗಳ ಹರಾಜು!!

ಗೋಕಾಕ: ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಕಾರಣ ಮುಟ್ಟುಗೋಲು ಹಾಕಿಕೊಂಡಿರುವ 21 ವಾಹನಗಳನ್ನು ಜ. 6 ರಂದು ಮುಂಜಾನೆ 10.30 ಘಂಟೆಗೆ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಬಹಿರಂಗು ಹರಾಜು ಮಾಡಲಾಗುವುದು ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಬಾಕಿ ಇರುವ ತೆರಿಗೆ ಸಂದಾಯ ಮಾಡಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುಲು …

Read More »