ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಡ್ಯಾಂನಲ್ಲಿ ನಿಪ್ಪಾಣಿಯ ಯುವಕರಿಬ್ಬರು ನೀರುಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಡ್ರದ ಕೊಲ್ಲಾಪೂರ ಜಿಲ್ಲೆಯ ರಾಧಾನಗರಿ ತಾಲೂಕಿನ ಕಾಳಮ್ಮವಾಡಿ ಜಲಾಶಯಕ್ಕೆ ನಿಪ್ಪಾಣಿ ಮೂಲದ 13 ಜನ ಯುವಕರು ಪ್ರವಾಸಕ್ಕೆ ತೆರಳಿದರು. ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ. ನಿಪ್ಪಾಣಿಯ ಗಣೇಶ ಕದಮ್, ಪ್ರತೀಕ್ ಪಾಟೀಲ್ ನೀರುಪಾಲಾದ ಯುವಕರು. ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆಯ ಅಬ್ಬರ ಮುಂದುವರಿದಿದೆ. ಆದರೂ ಶವ …
Read More »ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ
ಬೈಲಹೊಂಗಲ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಎಂಟು ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ನಯಾನಗರ ಗ್ರಾಮದ ಸಮೀಪ ಸೋಮವಾರ ನಡೆದಿದೆ. ನಯಾನಗರ ಗ್ರಾಮದ ಮಲಪ್ರಭಾ ನದಿ ಹತ್ತಿರದ ದಾಬಾ ದಾಟಿ ಸಂಚರಿಸುತ್ತಿದ್ದ ಮಾರುತಿ 800 ಮತ್ತು ಅಲ್ಟೋ ಕಾರು ಪರಸ್ಪರ ಡಿಕ್ಕಿ ಹೊಡಿದಿವೆ. ಅಪಘಾತದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂಗೊಂಡು ನುಜ್ಜುಗುಜ್ಜಾಗಿವೆ. ಚಾಲಕರಾದ ಲಿಂಗದಳ್ಳಿ ಗ್ರಾಮದ ಕಿರಣ ಅಡಿವೆಪ್ಪ ಪೂಜೇರ, ಆನಿಗೋಳದ ಮಹಾಂತೇಶ ರಾಮನಿಂಗಪ್ಪ ಕುರಿ ಸೇರಿದಂತೆ ಎಂಟು …
Read More »ಡೆಂಗ್ಯೂ ಜ್ವರಕ್ಕೆ ಓರ್ವ ಯುವಕ ಬಲಿ
ಬೆಳಗಾವಿ : ಬೆಳಗಾವಿಯ ಹಿಂಡಲಗಾ ಗ್ರಾಮದ ಲಕ್ಷ್ಮೀ ನಗರದ ಯುವಕ ಪ್ರಸಾದ ಮುಚ್ಚಂಡಿಕರ (28) ಶನಿವಾರ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾನೆ. ಪ್ರಸಾದ ಕಳೆದ ಕೆಲದಿನಗಳಿಂದ ಡೆಂಗ್ಯು ರೋಗಕ್ಕೆ ತುತ್ತಾಗಿದ್ದರು. ಅವರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರು ಅಜ್ಜಿ, ತಂದೆ, ಪತ್ನಿ, ಪುತ್ರನನ್ನು ಅಗಲಿದ್ದಾರೆ.
Read More »ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ಬೆಳೆಸಿ:ಸವದಿ
ಅಥಣಿ: ‘ಗಿಡಗಳನ್ನು ಹಚ್ಚುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು. ಗಿಡಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗಿಡ ಬೆಳೆಸುವುದರಿಂದ ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಸಹಕಾರಿಯಾಗುತ್ತದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಅಥಣಿ ಮತ್ತು ಕಾಗವಾಡ ತಾಲ್ಲೂಕು ಸಹಕಾರಿ ಸಂಘಗಳ ಹಾಗೂ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಬ್ಯಾಂಕ್‌ಗಳ ಒಕ್ಕೂಟದ ಆಶ್ರಯದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಹಕಾರ ಸಂಘಗಳ ಮುಖಾಂತರ 5,000 ಸಸಿಗಳ ವಿತರಣೆ …
Read More »ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ
ಬೆಳಗಾವಿ: ಮಹಾರಾಷ್ಟ್ರದ ಜತ್ ಮತ್ತು ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ಕನ್ನಡ ಮಾಧ್ಯಮ ಶಾಲೆಗಳಿಗೆ ಗಡಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತ್ತ ತಾಲ್ಲೂಕಿನ ಬೋರಗಿ, ಕರಜಗಿ, ಭೇವರ್ಗಿ, ಬಾಲಗಾಂವ, ಅಂಕಲಗಿ, ಸಂಖ, ರಾವಳಗುಂಡವಾಡಿ, ಮೇಂಡಿಗೇರಿ ಗ್ರಾಮಗಳಲ್ಲಿನ ವಿವಿಧ ಕನ್ನಡ ಮಾಧ್ಯಮ ಶಾಲೆಗಳಿಗೆ ಕರ್ನಾಟಕದ ಮುಖ್ಯಮಂತ್ರಿಗಳ ಸೂಚನೆಯಂತೆ ಭೇಟಿ ನೀಡಿದರು. ಈ ಪ್ರದೇಶಗಳಲ್ಲಿನ ಕೆಲವು ಕನ್ನಡ ಶಾಲೆಗಳಲ್ಲಿ ಕನ್ನಡ ಬಾರದ ಮರಾಠಿ ಶಿಕ್ಷಕರನ್ನು ಕನ್ನಡ …
Read More »ಆಡಳಿತದಲ್ಲಿ ಪಾರದರ್ಶಕತೆ ಕೊರತೆ: ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಬೇಸರ
ಬೆಳಗಾವಿ: ‘ಸರ್ಕಾರಿ ಯೋಜನೆಗಳ ಪ್ರಯೋಜನ ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸಬೇಕಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನಾಗರಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಪ್ರಕ್ರಿಯೆಯು …
Read More »ಸಿಎಂ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು;: ಶಿವಾಚಾರ್ಯ ಸ್ವಾಮೀಜಿ
ಚಿಕ್ಕೋಡಿ, ಜೂನ್ 28: ಡಿಸಿಎಂ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವಂತೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಬೆನ್ನಲ್ಲೇ ಇದೀಗ ವಿವಿಧ ಸಮುದಾಯಗಳ ಸ್ವಾಮೀಜಿಗಳು ಆ ಬಗ್ಗೆ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಇದೀಗ, ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ …
Read More »ಏಳು ತಿಂಗಳ ಬಾಕಿ ಸಂಬಳ ಕೊಡಿ’
ರಾಯಚೂರು: ‘ಜಿಲ್ಲೆಯಲ್ಲಿ ವಿವಿಧ ವೃಂದ ಹೊರ ಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ ಏಳು ತಿಂಗಳ ವೇತನವನ್ನು ತಕ್ಷಣ ವೇತನ ಪಾವತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ. ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯಗೌಡ, ‘ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಗುತ್ತಿಗೆ ಏಜೆನ್ಸಿಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. …
Read More »ಕರ್ನಾಟಕದ ಕುದುರೆಗಳಿಗೆ ‘ಮಹಾ’ ಮರ್ಯಾದೆ
ಚಿಕ್ಕೋಡಿ: ಹೀರಾ ಮತ್ತು ಮೋತಿ ಅವರಿಗೆ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಿಯಲ್ಲಿ ಆಷಾಢ ಏಕಾದಶಿಯಲ್ಲಿ ರಾಜ ಮರ್ಯಾದೆ ಸಿಗುತ್ತದೆ. ಪ್ರತಿ ವರ್ಷ ಪಂಢರಪುರಕ್ಕೆ ಹೊರಡುವ ದಿಂಡಿಯಲ್ಲಿ 315 ಕಿ.ಮೀ ದಾರಿಯುದ್ದಕ್ಕೂ ಇವರೂ ಹೆಜ್ಜೆ ಹಾಕುತ್ತಾರೆ..! ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ. ಹೀರಾ, ಮೋತಿ ಎಂಬುದು ಎರಡು ಕುದುರೆಗಳ ಹೆಸರು. ತಾಲ್ಲೂಕಿನ ಅಂಕಲಿ ಗ್ರಾಮದ ಶಿಥೋಳೆ ಮನೆತನದವರು ಸಾಕಿರುವ ಈ ಕುದುರೆ ಜೋಡಿಗೆ ಪಂಢರಪುರದ ದೇವಸ್ಥಾನದಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ. ಪ್ರತಿವರ್ಷ ಜ್ಯೇಷ್ಠ …
Read More »ಖಾನಾಪುರ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು
ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ ರಸ್ತೆಯ ಮರೆಮ್ಮ ದೇವಾಲಯದ ಬಳಿ ಶುಕ್ರವಾರ ರಾತ್ರಿ ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟಿದ್ದಾರೆ. ತಾಲ್ಲೂಕಿನ ಹಲಕರ್ಣಿ ನಿವಾಸಿ ಸಂಜು ಮಲ್ಲಪ್ಪ ಸತನಾಯ್ಕ (35) ಮೃತರು. ಪಟ್ಟಣದಿಂದ ಬೆಳಗಾವಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿಯನ್ನು ಓವರ್‌ಟೇಕ್ ಮಾಡಲು ಹೀಗಿ, ಎದುರಿಗೆ ಬಂದ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಗಂಗವಾಳಿ ಗ್ರಾಮದ ತುಕಾರಾಮ ಸುತಾರ …
Read More »