ಬೆಳಗಾವಿ: ಜಿಲ್ಲಾ ವಿಭಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸರಿಸುಮಾರು 30 ವರ್ಷ. ಇನ್ನೊಂದೆಡೆ ಈ ವಿಭಜನೆ ವಿರೋಧಿಸಿ ನಡೆದ ಪ್ರತಿಭಟನೆಗೆ ಆ.22ಕ್ಕೆ ಬರೋಬ್ಬರಿ 25 ವರ್ಷ. ಇದು ಗಡಿ ಜಿಲ್ಲೆ ಬೆಳಗಾವಿ ವಿಭಜನೆ ಹಾಗೂ ಅದಕ್ಕಾಗಿ ನಡೆದಿರುವ ಪರ ಮತ್ತು ವಿರೋಧದ ಹೋರಾಟಗಳ ಕಥೆ. ಎರಡೂವರೆ ದಶಕಗಳ ಈ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಸರ್ಕಾರಗಳು ಬದಲಾಗಿವೆ. ಹೋರಾಟಗಾರರು ಬದಲಾಗಿದ್ದಾರೆ. ಇದಕ್ಕಾಗಿ ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ. ಹಲವಾರು ಸಚಿವರು ಮತ್ತು ಶಾಸಕರು ಬಂದು …
Read More »ಚಿರತೆ ಸೆರೆಗೆ ಬೆಳಗಾವಿಯತ್ತ ಜೋಡಿ ಆನೆ
ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಅವಿತುಕೊಂಡ ಚಿರತೆ ಸೆರೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಶಿಬಿರದಿಂದ ಎರಡು ಆನೆಗಳನ್ನು ಕರೆಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆಯೇ ಎರಡು ಆನೆ ಹಾಗೂ ಎಂಟು ಪರಿಣತ ಸಿಬ್ಬಂದಿಯ ತಂಡ ಬೆಳಗಾವಿಯತ್ತ ಹೊರಟಿದೆ. ಸಕ್ರೆಬೈಲ್ ಆನೆ ತರಬೇತಿ ಕ್ಯಾಂಪಿನಲ್ಲಿದ್ದ 20 ವರ್ಷ ವಯಸ್ಸಿನ ಅರ್ಜುನ ಹಾಗೂ 14 ವರ್ಷ ಪ್ರಾಯದ ಆಲೆ ಎಂಬ ಆನೆಗಳನ್ನು ಕರೆಸಲಾಗುತ್ತಿದೆ. ಈ ಎರಡೂ ಆನೆಗಳು ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿವೆ. …
Read More »ಗಣೇಶ ಮಂಟಪದಲ್ಲಿಬಿಜೆಪಿಯವರು ಸಾವರ್ಕರ್ ಭಾವಚಿತ್ರ ಅಳವಡಿಸಿದರೆ, ನಾವೂ ಬಸವಣ್ಣ, ಅಂಬೇಡ್ಕರ್ ಭಾವಚಿತ್ರ ಅಳವಡಿಸುತ್ತೇವೆ’
ಬೆಳಗಾವಿ: ‘ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಮಂಟಪದಲ್ಲಿ ಬಿಜೆಪಿಯವರು ಸಾವರ್ಕರ್ ಭಾವಚಿತ್ರ ಅಳವಡಿಸಿದರೆ, ನಾವೂ ಬಸವಣ್ಣ, ಅಂಬೇಡ್ಕರ್ ಭಾವಚಿತ್ರ ಅಳವಡಿಸುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲ ಜಾತಿಯವರೂ ಗಣೇಶನ ವಿಗ್ರಹ ಪ್ರತಿಷ್ಠಾಪಿಸುತ್ತಾರೆ. ಆದರೆ, ಧಾರ್ಮಿಕ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಬಿಜೆಪಿಯವರು ರಾಜಕಾರಣ ಮಾಡಲು ಮುಂದಾದರೆ, ನಾವೂ ಮಾಡಬೇಕಿರುವುದು ಅನಿವಾರ್ಯ. ಹಾಗಾಗಿ ಅಂಬೇಡ್ಕರ್, ಬಸವಣ್ಣನವರ ಭಾವಚಿತ್ರ …
Read More »ಅಂಬೇಡ್ಕರ್ ಟು ಟಿಪ್ಪು ಸುಲ್ತಾನ್ ಸರ್ಕಲ್, ಕಲ್ಲೇಶ್ವರ ಸರ್ಕಲ್ ಟು ಶಿವಬೋಧರಂಗ ಮಠತನಕ ರಸ್ತೆ ಅಭಿವೃದ್ಧಿ ಶೀಘ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮೂಡಲಗಿ ಪಟ್ಟಣದ ಸಾರ್ವಜನಿಕರ ಕೋರಿಕೆಯ ಮೇರೆಗೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ ಹಾಗೂ ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ಸ್ವಂತ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ 9 ಮೀಟರ್ ಅಗಲದ 1 ಕಿ.ಮೀ ವರೆಗಿನ ರಸ್ತೆಯನ್ನು ಇಷ್ಟರಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಕಲ್ಮೇಶ್ವರ ವೃತ್ತದಿಂದ ಮಠದವರೆಗಿನ 500 …
Read More »K.P.T.C.L. ಪರೀಕ್ಷಾ ಅಕ್ರಮ; 9 ಜನರ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿಯಲ್ಲಿ ಬಂಧಿತ ಅಭ್ಯರ್ಥಿಗಳು ಸ್ಮಾರ್ಟ್ ವಾಚ್ ಬಳಸಿ, ಪ್ರೆಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್ ಆಪ್ ಮೂಲಕ ತನ್ನ ಸ್ನೇಹಿತರಿಗೆ ಕಳುಹಿಸಿ ಉತ್ತರ ಪಡೆದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿನ್ ಶ್ರೀಧರ ಕಮತರ (32) ಗೋಕಾಕ ಶಹರ ಠಾಣೆಗೆ ಹಾಜರಾಗಿ …
Read More »ಸಾವರ್‌ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದರೆ ಹರಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ : ಪ್ರಮೋದ ಮುತಾಲಿಕ್
ಬೆಳಗಾವಿಯಲ್ಲಿ ಪ್ರತೀ ಗಲ್ಲಿಗಲ್ಲಿಯಲ್ಲಿ ಸಾವರ್‌ಕರ್ ಯಾರು ಎಂದು ತಿಳಿಸುವ ಉದ್ದೇಶದಿಂದ ನಾವು ಪ್ರತೀ ಗಣೇಶ ಮಂಡಳಿಯಲ್ಲಿ ಸಾವರ್‌ಕರ್ ಭಾವಚಿತ್ರವನ್ನು ಅಳವಡಿಸುವಂತೆ ಅಭಿಯಾನವನ್ನು ಮಾಡುತ್ತಿದ್ದೇವೆ. ಈ ವೇಳೆ ಯಾರಾದರೂ ಕಾಂಗ್ರೆಸ್ ಅಥವಾ ಮುಸ್ಲಿಂರು ಸಾವರ್‌ಕರ್ ಭಾವಚಿತ್ರವನ್ನು ಹರಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಗಣೇಶೋತ್ಸವ ವೇಳೆ ಸಾವರ್‌ಕರ್ ಭಾವಚಿತ್ರ ಅಳವಡಿಸುವ ಆಂದೋಲನಕ್ಕೆ ಇಂದು ಪ್ರಮೋದ ಮುತಾಲಿಕ್ ಬೆಳಗಾವಿಯಲ್ಲಿ ಚಾಲನೆ ನೀಡಿದರು. …
Read More »ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ವಿಡಿಯೋ ವೈರಲ್; ಶಾಲೆಗಳಿಗೆ ರಜೆ ಘೋಷಣೆ
ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಮೀಪದ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಬೆಳಗಾವಿಯ ಗಾಲ್ಫ್ ಮೈದಾನ ಸಮೀಪದಲ್ಲಿ ಮತ್ತೆ ಚಿರತೆ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಈಗ್ಗೆ 20 ದಿನಗಳ ಹಿಂದೆ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಚಿರತೆ ಪರಾರಿಯಾಗಿತ್ತು. ಇದೀಗ ಸೋಮವಾರ ಹಿಂಡಲಗಾ ರಸ್ತೆಯ ಮಹಾತ್ಮ ಗಾಂಧೀ ವೃತ್ತ ಬಳಿ …
Read More »ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ: ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
ಗೋಕಾಕ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ವಿವೇಕ್ ಜತ್ತಿ, ಮಂಜುಳಾ ರಾಮಾನಗಟ್ಟಿ, ಹಾಗೂ ಅನೇಕರು ಉಪಸ್ಥಿತರಿದ್ದರು
Read More »ಹಿಂಡಲಗಾ ನಡು ರಸ್ತೆಯಲ್ಲೇ ಚಿರತೆ ದಾಟುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ
ಬೆಳಗಾವಿ: ಹಿಂಡಲಗಾ ಡಬಲ್ ರಸ್ತೆಯ ಮಧ್ಯೆ ಇಂದು ಬೆಳಿಗ್ಗೆ ಚಿರತೆ ಮತ್ತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಿಣ ಭಾಗದ 22 ಶಾಲೆಗಳಿಗೆ ಇಂದು (ಸೋಮವಾರ 22/8/2022) ಮತ್ತೆ ರಜೆ ನೀಡಲಾಗಿದೆ. ಕಳೆದ ವಾರವೂ ಈ ಭಾಗದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ತೀವ್ರ ಶೋಧ ಕಾರ್ಯಾಚರಣೆಗಳ ನಂತರವೂ ಚಿರತೆ ಕಾಣಿಸದೆ ಇದ್ದಾಗ ಮತ್ತೆ ಶಾಲೆಗಳನ್ನು ಆರಂಭಿಸಲಾಗಿತ್ತು. ಬಸ್ ಚಾಲಕರೊಬ್ಬರು ನಡು ರಸ್ತೆಯಲ್ಲೇ ಚಿರತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್ …
Read More »ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶಶಿಧರಕುರೇರ ನೇಮಕ
ಬೆಳಗಾವಿ – ಐಎಎಸ್ ಅಧಿಕಾರಿಯಾಗಿ ಈಚೆಗಷ್ಟೆ ಭಡ್ತಿ ಪಡೆದಿರುವ ಬೆಳಗಾವಿಯ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಕಾಡಾ) ಆಡಳಿತಾಧಿಕಾರಿ ಶಶಿಧರ ಕುರೇರ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಕುರೇರ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ಹಾಲಿ ಸಿಇಒ ಚಂದ್ರಶೇಖರ ನಾಯಕ ಅವರ ಸ್ಥಾನದಲ್ಲಿ ಕುರೇರ ಅವರು ನೇಮಕವಾಗಿದ್ದು, ಇದು ಐಎಎಸ್ ಅಧಿಕಾರಿಯಾಗಿ ಅವರ ಮೊದಲ ಹುದ್ದೆಯಾಗಿದೆ. ಕುರೇರ ಅವರು …
Read More »
Laxmi News 24×7