Breaking News

ಬೆಳಗಾವಿ

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾ ರೋಹಣ ಕಾರ್ಯಕ್ರಮ

ಹಿರೆನಂದಿ: ಸಂತೋಷ್ ಜಾರಕಿಹೊಳಿ ಅವರ ನೇತೃತ್ವದ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪನೆ, ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಭಾಗಿ, ಹಾಗೂ ಜೊತೆಗೆ ಸೂರ್ಯ ಶ್ರೇಷ್ಠ ಜಾರಕಿಹೊಳಿ ಸಣ್ಣ ಸಾಹುಕಾರರು ಶ್ರೀಮತಿ ಜಯಶ್ರೀ ರಮೇಶ್ ಜಾರಕಿಹೊಳಿ, ಹಾಗೂ ಜಯಶ್ರೀ ನಾಯಿಕ ಈ ಒಂದು ಸಮಾರಂಭಕ್ಕೆ ಹಾಜರ್ ಇದ್ದರೂ ಹೌದು ತಮ್ಮ ಫ್ಯಾಕ್ಟರಿ ಆವರಣ ದಲ್ಲಿ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಅಧ್ಬ್ಬೂತ …

Read More »

ಕಮಿಷನ್ ಕಿರುಕುಳ: ಗ್ರಾ.ಪಂ ಸದಸ್ಯೆ ರಾಜೀನಾಮೆ

ರಾಯಬಾಗ : ತಾಲ್ಲೂಕಿನ ಮೇಖಳಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಬಿಜಿಪಿ ಶಾಸಕ ಡಿ.ಎಂ. ಐಹೊಳೆ ಅವರ ಕ್ಷೇತ್ರವ್ಯಾಪ್ತಿ ಇದಾಗಿದ್ದು, ಕಮಿಷನ್ ಆರೋಪ ಕೇಳಿ ಬಂದಿದೆ.   ‘ಗ್ರಾಮದ ಅಭಿವೃದ್ಧಿ ಕಾಮಗಾರಿಯ ಅನುಮೋದನೆಗಾಗಿ ಪಂಚಾಯಿತಿ ಅಧಿಕಾರಿಗಳು ಪ್ರತಿ ಸದಸ್ಯರಿಗೆ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ, ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ’14 …

Read More »

ಸಿದ್ದರಾಮಯ್ಯ ಜಾತಿ ಧರ್ಮದ ರಾಜಕಾರಣ ಬಿಟ್ಟು ಬೇರೆ ಏನೂ ಮಾಡಿಲ್ಲ: ಶೋಭಾ ಕರಂದ್ಲಾಜೆ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣ ಬಿಟ್ಟು ಬೇರೆ ಏನೂ ಮಾಡಲಿಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತೀವ್ರ ಟೀಕಾಪ್ರಹಾರ ನಡೆಸಿದರು. ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣೆ ಬಂದಾಗಲೊಮ್ಮೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರು ರೈತರಿಗೆ ಏನೂ ಮಾಡಲಿಲ್ಲ ಎಂದು ನಿರಾದಾರ ಆರೋಪ ಮಾಡುತ್ತಾರೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕಟುಕಿದರು.   …

Read More »

ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ.

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ. ಹೀಗಾಗಿ, ಮರಾಠಿ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಕೆಲವೇ ವರ್ಷಗಳ ಹಿಂದೆ 4ರಿಂದ 6 ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈಗ ದೂಳೀಪಟವಾಗಿದೆ. ಆ ಎಲ್ಲ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು, ಟಿಕೆಟ್‌ ಆಕಾಂಕ್ಷಿಗಳೂ ಓಲೈಕೆ ಆರಂಭಿಸಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಮರಾಠಿ ಸಾಹಿತ್ಯ ಸಮ್ಮೇಳನ, ಮರಾಠಿಗರೇ ಹೆಚ್ಚಿರುವ ಹಳ್ಳಿಗಳಲ್ಲಿ ಭೂಮಿಪೂಜೆ, ಮಹಾರಾಷ್ಟ್ರ …

Read More »

ವರ್ತುಲ ರಸ್ತೆ: ಟೆಂಡರ್‌ಗೆ ಸರ್ಕಾರ ಅನುಮತಿ

ಬೆಳಗಾವಿ: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್‌ ರಸ್ತೆ ನಿರ್ಮಿಸಲು ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿದೆ. ಅಲ್ಲದೇ, ಕಳೆದ ಜನವರಿ 1ರಂದು ಟೆಂಡರ್‌ ಪ್ರಕ್ರಿಯೆಗೂ ಅನುಮತಿ ನೀಡಿದೆ. ತಮ್ಮ ಫಲವತ್ತಾದ ಭೂಮಿ ಹಾಳಾಗುತ್ತದೆ ಎಂದು 31 ಹಳ್ಳಿಗಳ ರೈತರು ಈ ರಿಂಗ್ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎರಡು ವರ್ಷಗಳಿಂದ ಇದರ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ಮತ್ತೆ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೂ ಹತ್ತಿದ್ದಾರೆ. ಇದೆಲ್ಲರ ಆಚೆಗೂ ಸರ್ಕಾರದ …

Read More »

ನಿವೃತ್ತಿ ವೇಳೆ ಇಡಗಂಟು ನೀಡಿ’

ಬೆಳಗಾವಿ: ನಿವೃತ್ತಿ ವೇಳೆ ಬಿಸಿಯೂಟ ತಯಾರಕ ಸಿಬ್ಬಂದಿಗೆ ಇಡಗಂಟು ಅಥವಾ ನಿವೃತ್ತಿ ವೇತನ ನೀಡಬೇಕೆಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೌಕರರು ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.   ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಈಗಾಗಲೇ ಸೇವೆಯಿಂದ ಬಿಡುಗಡೆಗೊಳಿಸಿದ 6 ಸಾವಿರ ನೌಕರರಿಗೆ ₹1 ಲಕ್ಷ ಇಡಗಂಟು ನೀಡಬೇಕು. …

Read More »

ವೆಂಕಟಾಪೂರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆಎಂಎಫ್ ನಿಂದ ೧೨ ಲಕ್ಷ ರೂಪಾಯಿ ನೆರವು-

ಮೂಡಲಗಿ- ವೆಂಕಟಾಪೂರ ಹಾಲು ಉತ್ಪಾದಕ ಸಹಕಾರಿ ಸಂಘಕ್ಕೆ ೧೨ ಲಕ್ಷ ರೂ. ನೆರವು ನೀಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲ್ಲೂಕಿನ ವೆಂಕಟಾಪೂರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ಇದರಲ್ಲಿ ಕೆಎಂಎಫ್ ನಿಂದ ೧೦ ಲಕ್ಷ ರೂ ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ ೨ ಲಕ್ಷ ರೂ. ಗಳ ನೆರವು ನೀಡುವ ಭರವಸೆಯನ್ನು ನೀಡಿದರು.   ವೆಂಕಟಾಪೂರ ಗ್ರಾಮದ ಹಣಮಂತ ದೇವರ …

Read More »

ಯೂ ಟ್ಯೂಬ್ ಚಾನೆಲ್‍ವೊಂದರಿಂದ ಭಗೀರಥ ಸಮಾಜಕ್ಕೆ ನಿಂದನೆ : ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ನಾಳೆ ಗುರುವಾರದಂದು ನಡೆಯಲಿರುವ ಭಗೀರಥ ಸಮಾಜದ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಕ್ಕೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿರುವ ಯೂ ಟ್ಯೂಬ್ ಸಂಪಾದಕನೋರ್ವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಘಟಪ್ರಭಾದ ಯೂ ಟ್ಯೂಬ್ ಚಾನೇಲ್‍ನ ಸಂಪಾದಕರು ಸುದ್ಧಿ ವಿಮರ್ಶೆ ಮಾಡುವಾಗ …

Read More »

ಸವದತ್ತಿ: ಕಾಲೇಜಿನ ಪ್ರತಿಷ್ಠೆಗಾಗಿ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ

ಸವದತ್ತಿ: ಕಾಲೇಜಿನ ಪ್ರತಿಷ್ಠೆಗಾಗಿ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿದ್ದಾರೆ. ಪಿಯುಸಿ ಪ್ರಥಮ ವರ್ಷದ ಮಕ್ಕಳ ಹಾಜರಾತಿ ನೆಪವೊಡ್ಡಿ 72 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿಷೇಧಿಸಲಾಗಿದೆ. ಪ್ರತಿವರ್ಷ ಇದನ್ನು ಮುಂದುವರೆಸಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ಬೆಳಗಾವಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಸವರಾಜ ತಳವಾರ ಆಕ್ರೋಶಿದರು. ಇಲ್ಲಿನ ಜಿ.ಜಿ. ಚೋಪ್ರಾ ಕಾಲೇಜಿನಲ್ಲಿ ಹಾಜರಾತಿ ನೆಪವೊಡ್ಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿರಾಕರಿಸಿದ್ದನ್ನು ಖಂಡಿಸಿ ದಲಿತ ಮುಖಂಡರು ಹಾಗೂ ವಿದ್ಯಾರ್ಥಿಗಳಿಂದ …

Read More »

ಬೆಳಗಾವಿಗೆ ಪ್ರಧಾನಿ ಭೇಟಿ: ಸಕಲ ಸಿದ್ಧತೆಗೆ ಸೂಚನೆ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ನಗರದ ನವೀಕೃತ ರೈಲು ನಿಲ್ದಾಣ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.   ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರೈಲ್ವೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ಫಲಾನುಭವಿಗಳು …

Read More »