Breaking News

ಅಥಣಿ

ಯುವಕನ ಮಿದುಳು ನಿಷ್ಕ್ರಿಯ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಅಥಣಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆ, ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಂಗಳವಾರ ಪ್ರಶಾಂತ ವಿಠ್ಠಲ ಮಲ್ಲೆವಾಡಿ ಎನ್ನುವ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳಿ ಬರುವಾಗ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು‌ ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ …

Read More »

ಮಾತಿಗೆ ತಪ್ಪಿದರೆ ನವೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾಜದಿಂದ 25 ಲಕ್ಷ ಜನಸಂಖ್ಯೆ ಸೇರಿ ವಿಧಾನಸೌಧ ಮುಂದೆ ಪ್ರತಿಭಟನೆ

ಅಥಣಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾನಸ ಪುತ್ರರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಕೂಡಲಸಂಗಮ ಪೀಠದ ಶ್ರೀಗಳು ಹಾಗೂ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಅಥಣಿ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕವಾಗಿ ಆರ್ಥಿಕವಾಗಿ, ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳುತ್ತಿದ್ದೇವೆ. …

Read More »

ಅಥಣಿಯಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ.. ನವಜಾತ ಮಗು ಪತ್ತೆ.. ಸಿಕ್ಕಿ ಬಿದ್ದ ಕಳ್ಳಿ

ಅಥಣಿ: ಸಿನಿಮೀಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಎರಡೂವರೆ ಗಂಟೆಯಲ್ಲಿ ಮಗುವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇಂದು ಬೆಳಗಿನ ಜಾವ 10.15 ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ …

Read More »

2A ಮೀಸಲಾತಿ ವಿಳಂಬ 5 ಸಾವಿರಕ್ಕೂ ಹೆಚ್ಚು ಜನ ಬೊಮ್ಮಾಯಿನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ: ರಮೇಶ್ ಗೌಡ ಪಾಟೀಲ್

  ಅಥಣಿ  :ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಹಲವು ದಶಕಗಳ ಹೋರಾಟ ಇದಾಗಿದೆ, ಆದರೆ ಸರ್ಕಾರಗಳು ಭರವಸೆ ನೀಡುತ್ತಾ ಬಂದಿದೆ, ಇದನ್ನು ಖಂಡಿಸಿ ನಾವು ಬರುವ ದಿನಾಂಕ ಇಪ್ಪತ್ತರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಅಥಣಿ ತಾಲೂಕು ಪಂಚಮಸಾಲಿ ಸಂಘಟನೆಯ ಅಧ್ಯಕ್ಷರಾದ ರಮೇಶ್ ಗೌಡ ಪಾಟೀಲ್ ಅವರು ಹೇಳಿದರು. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಪಂಚಮಸಾಲಿ ಸಮಾಜ …

Read More »

ಅದ್ದೂರಿ ಗಣೇಶೋತ್ಸವ ಮಾಡುತ್ತೇವೆ, ಡಿಜೆ ಬಳಕೆ ಮಾಡುತ್ತೇವೆ. ವಿದ್ಯುತ್ ಶುಲ್ಕ ಪಾವತಿ ಮಾಡಲ್ಲ:ಯತ್ನಾಳ್

ಅಥಣಿ, : ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಅಪ್ಪ ಮಕ್ಕಳಿಗೆ ಟಿಕೆಟ್ ನೀಡಬಾರದೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ.   ಬಿಜೆಪಿಯಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ನಿಯಮ ಜಾರಿಯಾಗಿದೆ. ಈ ಕುರಿತು ನಾನು ಕೂಡ ಕರ್ನಾಟಕದಲ್ಲಿ ತ್ವರಿತವಾಗಿ ಈ ನಿಯಮ ಜಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಅಪ್ಪ ಮಕ್ಕಳಿಗೆ ಹಾಗೂ ಕುಟುಂಬ ರಾಜಕೀಯಕ್ಕೆ …

Read More »

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನಂದ ಪಾಟೀಲ ಸಾವು

ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಪಟ್ಟು. ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಹೆಸ್ಕಾಂ ಲೈನ್ ಮೆನ್ ಸಹಾಯಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಘಟನೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೆಸ್ಕಾಂ ಲೈನ್ ಮನ್ …

Read More »

ಸ್ನಾನ ಮಾಡಲು ಹೋದ ಯುವಕ ಕಾಲುಜಾರಿ ನೀರುಪಾಲು

ಅಥಣಿ: ತಾಲ್ಲೂಕಿನ ಹಲ್ಯಾಳ ದೂರು ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಶುಕ್ರವಾರ ಸ್ನಾನ ಮಾಡಲು ಹೋದ ಯುವಕ ಕಾಲುಜಾರಿ ನದಿ ನೀರಿನಲ್ಲಿ ತೇಲಿಹೋಗಿದ್ದಾರೆ. ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ನೀರುಪಾಲಾದ ಯುವಕ. ದೇವರ ಪೂಜೆಗೆ ನದಿಯಿಂದ ನೀರು ಒಯ್ಯಲು ಬಂದಿದ್ದರು. ಸ್ನಾನ ಮಾಡಿ ಹೋಗಬೇಕು ಎಂದು ನದಿಗೆ ಇಳಿದರು. ಮರಳಿ ಬಂದಿಲ್ಲ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ …

Read More »

ಬೆಳಗಾವಿಯ ಯುವಕ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಾದಯಾತ್ರೆ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರೆಯ ಮೂರನೇ ದಿನವಾದ ಇಂದು ಬೆಳಗಾವಿಗೆ ಬಂದು ತಲುಪಿದ್ದಾರೆ. ಬೆಳಗಾವಿಯ ಸಿದ್ದರಾಮಯ್ಯ ಅಭಿಮಾನಿಗಳು ಅವರನ್ನು ನಗರದ ಕನಕದಾಸ ಸರ್ಕಲ್‍ನಲ್ಲಿ ಸ್ವಾಗತ ಮಾಡಿದರು. ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ವ್ಯಕ್ತಿಯೋರ್ವ ಪಾದಯಾತ್ರೆಯನ್ನು ಕೈಗೊಂಡಿದ್ದಾನೆ. ಮೂರನೇ ದಿನವಾದ ಇಂದು ಆತ ಬೆಳಗಾವಿಗೆ ಬಂದು ತಲುಪಿದ್ದು …

Read More »

ಅಥಣಿ ಪೋಲಿಸ್ ಠಾಣೆಗೆ ಮೊದಲಬಾರಿಎಸ್ ಪಿ ಸಂಜಿವ್ ಪಾಟೀಲ ಭೇಟಿ

ಬೆಳಗಾವಿ ಜಿಲ್ಲಾ ನೂತನ ಎಸ್ ಪಿ ಯಾಗಿ ಅಧಿಕಾರ ವಹಿಸಿದ ಬಳಿಕ ಅಥಣಿ ಪೋಲಿಸ್ ಠಾಣೆಗೆ ಮೊದಲಬಾರಿಎಸ್ ಪಿ ಸಂಜಿವ್ ಪಾಟೀಲ ಭೇಟಿ ನೀಡಿದರು. ಅಥಣಿ ಪಿಎಸ್ಐ ಕುಮಾರ್ ಹಾಡಕರ್ ಮತ್ತು ಸಿಬ್ಬಂದಿಗಳಿಂದ ಗೌರವ ಸಮರ್ಪಣೆ ಪಡೆದ ನಂತರ ಅಥಣಿ ಪೋಲಿಸ್ ಠಾಣೆಯ ಎಎಸ್ಐ, ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಖುದ್ದು ಮಾಹಿತಿ ಪಡೆದರು . ಬಳಿಕ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೇಸಿ ಮಾತನಾಡಿದ ಅವರು ಮಾರ್ಚ್ ತಿಂಗಳಲ್ಲಿ ಅಥಣಿ …

Read More »

ಖಾಸಗಿ ಆಸ್ಪತ್ರೆಗಳಿಂದ ರೋಗದ ಭೀತಿಯಲ್ಲಿ ಗ್ರಾಮೀಣ ಜನರು….

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮೀಣ ಪ್ರದೇಶದ ಜನರು ಖಾಸಗಿ ಆಸ್ಪತ್ರೆ ಎಡವಟ್ಟು ಹಾಗೂ ಹವಮಾನ ವೈಪರಿತೆಯಿಂದ ರೋಗರುಜನೆಗಳು ಜನರಿಗೆ ತಗಲುತ್ತವೆ ಎಂಬ ಭಯದ ವಾತಾವರಣದಲ್ಲಿದ್ದಾರೆ.   ಇದೆಲ್ಲಾ ಕಂಡು ಬಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಗ್ರಾಮವಾದ ಕೊಕಟನೂರ ದಲ್ಲೀ ಖಾಸಗಿ ಆಸ್ಪತ್ರೆಯದವರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ತಮ್ಮ ಆಸ್ಪತ್ರೆಗಳಲ್ಲಿ ರೋಗಿಯನ್ನ ಗುಣಪಡಿಸಲು ಉಪಯೋಗಿಸಿದ ಔಷಧೀಯ ಮೆಡಿಸನಗಳಾದ, ಸಿರಂಜ್,ಸಲೈನ್,ಬ್ಯಾಂಡೇಜ್, ವೇಸ್ಟ್ ಆದ ಔಷಧಿ ಬಾಟಲಿಗಳನ್ನು ಹಾಗೂ …

Read More »