ಬೆಂಗಳೂರು : ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ನಡೆಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಕೆ-ಟಿಇಟಿ) ನಡೆಯಲಿದೆ. ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ತಿಳಿಸಿದೆ. BIG NEWS : ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭದ ಕುರಿತಂತೆ ಶಿಕ್ಷಣ ಸಚಿವ ನಾಗೇಶ್ ಮಹತ್ವದ ಮಾಹಿತಿ …
Read More »ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು: ಬಿಜೆಪಿ ಟೀಕೆ
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದರು. ವಿನಯ್ ಕುಲಕರ್ಣಿ ಜೈಲಿನಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ತಿನ್ನಿಸಿ ಸ್ವಾಗತಿಸಿದ್ದಾರೆ. ಇದಕ್ಕೆ ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ಪಕ್ಷ ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೊಲೆ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೆ ಯುದ್ಧ ಗೆದ್ದು …
Read More »ಹಬ್ಬದ ಪ್ರಯುಕ್ತ ನಂದಿನಿ ಉತ್ಪನ್ನಗಳ ಮೇಲೆ ಶೇಕಡಾ 10 ರಿಯಾಯ್ತಿ
ಬೆಂಗಳೂರು, – ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ ನೀಡಿದ್ದು, ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯ್ತಿ ನೀಡಿದೆ. ಆ.19ರಿಂದ 15 ದಿನ ಗಳ ಕಾಲ ರಾಜ್ಯಾದ್ಯಾಂತ ನಂದಿನಿ ಉತ್ಸವಕ್ಕೆ ಚಾಲನೆ ನೀಡಿರುವ ಕೆಎಂಎಫ್ ಸಿಹಿ ಉತ್ಪನ್ನಗಳ ಮೇಲೆ ರಿಯಾಯ್ತಿ ನೀಡಿದೆ. ಅಲ್ಲದೆ ಮಧುಮೇಹಿಗಳು ಮತ್ತು ಆಹಾರ ಕಾಳಜಿ ಇರುವರ ಅನುಕೂಲಕ್ಕಾಗಿ ಹೊಸದಾಗಿ ಸಿಹಿ ತಿನಿಸುಗಳನ್ನು ಬಿಡುಗಡೆ ಮಾಡಿದೆ ಎಂದು ಎಂದು ಕೆ ಎಂಎಫ್ ವ್ಯವಸ್ಥಾಪಕ …
Read More »ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ ರೆಸಿಡೆನ್ಸಿಯಲ್ ಟೌನ್ ಶಿಪ್: ಮುರುಗೇಶ್ ನಿರಾಣಿ
ಬೆಂಗಳೂರು: ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (ರೆಸಿಡೆನ್ಸಿಯಲ್ ಟೌನ್‍ಶಿಪ್) ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ಎಂದು ಹೇಳಿದ್ದಾರೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) …
Read More »ಬೆಂಗಳೂರು: 18 ಕುಖ್ಯಾತ ರೌಡಿಗಳ ಸ್ಥಳಾಂತರ
ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 18 ರೌಡಿಗಳನ್ನು ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ವಿಲ್ಸನ್ ಗಾರ್ಡನ್ ನಾಗರಾಜ್, ಶಿವ, ಜಾರ್ಜ್ ಮೈಕಲ್, ಪ್ರದೀಪ್, ಬಾಂಬೆ ಸಲೀಂ ಸೇರಿ ಒಟ್ಟು18 ಜನ ರೌಡಿಗಳನ್ನು ಸ್ಥಳಾಂತರಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ರೌಡಿಗಳು, ಜೈಲಿನಲ್ಲಿದ್ದುಕೊಂಡೆ ತಮ್ಮ ಸಹಚರರ ಮೂಲಕ ನಗರದಲ್ಲಿ ರೌಡಿ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸುವ ಯತ್ನ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ …
Read More »ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಜಾನ್ಸ್‌ನ್ ಅಂಡ್ ಜಾನ್ಸ್‌ನ್ ನಿಂದ ಮನವಿ
ನವದೆಹಲಿ,ಆ.20- ಕೊರೊನಾ ವಿರುದ್ಧ ಹೋರಾಟದ ಭ್ರಹ್ಮಾಸ್ತ್ರವಾಗಿರುವ ಲಸಿಕೆ ಅವಿಷ್ಕಾರಗಳು ದಿನೇ ದಿನೇ ಪ್ರಗತಿ ಸ್ವರೂಪದಲ್ಲಿದ್ದು, ಹೊಸದಾಗಿ ಜಾನ್ಸನ್ ಅಂಡ್ ಜಾನ್ಸ್‍ನ್ ಸಂಸ್ಥೆ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ)ಗೆ ಅರ್ಜಿ ಸಲ್ಲಿಸಿದ್ದು, ಪ್ರಾಯೋಗಿಗ ಪರೀಕ್ಷೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಾದರೆ ಜಾನ್ಸನ್ ಅಂಡ್ ಜಾನ್ಸನ್ ಮಕ್ಕಳಿಗೆ …
Read More »ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ: ಜನತೆಯಲ್ಲಿ ಮನವಿ ಮಾಡಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಕೋವಿಡ್ 19 ಸೋಂಕು ನಿಯಂತ್ರಣದಲ್ಲಿದೆ. ಮುಂದೆಯೂ ಕೋವಿಡ್ ನಿಯಂತ್ರಣಕ್ಕೆ ಜನ ಸಹಕರಿಸಬೇಕು. ಮಾರುಕಟ್ಟೆಗಳಲ್ಲಿ ಜನಸಂದಣಿ ಆಗದಂತೆ ಜನರು ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹಬ್ಬದ ಸಂಭ್ರಮದಲ್ಲಿ ಜನತೆ ಮೈಮರೆಯಬೇಡಿ. ಕೋವಿಡ್ ನಿಯಮಗಳನ್ನು ಪಾಲಿಸಿ. ಜನ ಸೇರುವುದು ಬೇಡ ಎಂದರು. ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದರು. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 36,571 …
Read More »ಗಡಿ ಕಣ್ಗಾವಲು ವಿಸ್ತರಿಸಿ ಸರಕಾರ ಆದೇಶ
ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಹಾಕಲಾಗಿರುವ ಕಣ್ಗಾವಲನ್ನು ಆಗಸ್ಟ್ 30ರ ವರೆಗೂ ವಿಸ್ತರಿಸಿದ ಸರಕಾರ ಆದೇಶ ಹೊರಡಿಸಿದೆ. ಕರ್ನಾಟಕ -ಮಹಾರಾಷ್ಟ್ರ, ಕರ್ನಾಟಕ – ಕೇರಳ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಹಾಕಿ ಈ ಹಿಂದೆ ಜುಲೈ 3ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶವನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಲಾಗಿದೆ.
Read More »ಹಬ್ಬಕ್ಕೆ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಸಾರಿಗೆ ನೌಕರರು
ಬೆಂಗಳೂರು: ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಜನ ಸಂಭ್ರಮ ಸಡಗರದಿಂದ ಸಜ್ಜಾಗುತ್ತಿದ್ದರೆ, ಈ ಹೊತ್ತಿನಲ್ಲಿ ಸಾರಿಗೆ ನಿಗಮಗಳ ನೌಕರರು ವೇತನ ಇಲ್ಲದೆ ಹಬ್ಬ ಹೇಗಪ್ಪಾ ಮಾಡೋದು ಎಂಬ ಚಿಂತೆಯಲ್ಲಿದ್ದಾರೆ. ಕೊರೋನಾದಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆಗಸ್ಟ್ ಅರ್ಧ ತಿಂಗಳು ಮುಗಿದರೂ ನೌಕರರಿಗೆ ಜುಲೈ ತಿಂಗಳ ವೇತನ ಬಿಡುಗಡೆ ಮಾಡಿಲ್ಲ. ಪರಿಣಾಮ 4 ಸಾರಿಗೆ ನಿಗಮಗಳಿಂದ 1 ಲಕ್ಷ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಂಬಳ ಇಲ್ಲದೆ …
Read More »ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ: ಸಚಿವ ನಿರಾಣಿ ಮೇಲೆ FIR ಸಾಧ್ಯತೆ
ಬೆಂಗಳೂರು: ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್. ಆರ್.ನಿರಾಣಿ ಮೇಲೆ ಇಂದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸುವ ಸಾಧ್ಯತೆಗಳಿವೆ. ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿ, ಸೆಪ್ಟೆಂಬರ್ 13 ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ ನೀಡಿತ್ತು. …
Read More »