ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಶೀರ್ವಾದಿಂದ ಮಾಹನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಸ್ಪಷ್ಟವಾದ ಬಹುಮತ ಪಡೆದುಕೊಳ್ಳುವಂತಹ ಎಲ್ಲಾ ಸಾಧ್ಯತೆಗಳಿವೆ. ಕಲಬುರಗಿಯಲ್ಲಿ ಕೂಡ ನಂಬರ್ ಒನ್ ಪಾರ್ಟಿ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದರು. ಎಲ್ಲಾ ಮಹಾನಗರ ಪಾಲಿಕೆಯ ಅಧ್ಯಕ್ಷರುಗಳಿಗೆ, …
Read More »ಸ್ಯಾಂಡಲ್ವುಡ್ಗೆ ಬಿಗ್ ಶಾಕ್: ರೌಡಿಸಂ ಪ್ರೇರಕ ದೃಶ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಚಿಂತನೆ
ಬೆಂಗಳೂರು : ಇನ್ಮುಂದೆ ‘ಮಚ್ಚು ಹಿಡಿದೊವ್ನು ನಾನು,ಲಾಂಗ್ ಕೊಟ್ಟವ್ನು ನಾನು, ಮಚ್ಚು ಹಿಡಿಯೊಕೆ ಹೇಳ್ಕೊಟ್ಟಿದ್ದೇ ನಾನು’ ಅಂತ ಖಡಕ್ ಡೈಲಾಗ್ ಹೊಡ್ದು, ಸಿನಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳೊ ರೌಡಿಸಂ ಪ್ರೇರಕ ದೃಶ್ಯಾವಳಿಗಳಿರುವ ಸಿನಿಮಾಗಳಿಗೆ ಪೊಲೀಸ್ ಇಲಾಖೆ ಶಾಕ್ ನೀಡಲು ಸಜ್ಜಾಗಿದೆ. ಹೌದು, ಇತ್ತೀಚಿಗೆ ರೌಡಿಸಂ ಆಧಾರಿತ ಸಿನಿಮಾಗಳು, ಆರೋಪಿಗಳಿಗೆ ಪ್ರೇರಣೆಯಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ಕೆಲ ರೌಡಿಸಂ ಎಳೆ ಹೊಂದಿರುವ, ಮತ್ತು ರೌಡಿಸಂ ಪ್ರೇರೆಪಿಸುವ ಸಿನಿಮಾಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ …
Read More »ನಾಳೆಯಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿ ಆರಂಭ
ಬೆಂಗಳೂರು: ಇದೇ ಸೋಮವಾರ, ಸೆ. 6ರಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶನಿವಾರ, ರವಿವಾರ ಸೋಂಕು ಪ್ರಕರಣ ಕಡಿಮೆಯಾಗಿ, ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆಯಾದರೆ ಇಲ್ಲೂ ಶಾಲಾರಂಭ ಖಚಿತ. ಶನಿವಾರ ಐದು ಗಡಿ ಜಿಲ್ಲೆಗಳ ಕೋವಿಡ್ 19 ಸ್ಥಿತಿಗತಿ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಬಳಿಕ …
Read More »ಜಿಪಂ, ತಾಪಂ ಚುನಾವಣೆ; ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವರ್ಗೀಕರಣಕ್ಕೆ ಪ್ರತ್ಯೇಕ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ. ಚುನಾವಣೆ ಆಯೋಗದ ವಿಂಗಡಣೆಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಹೊಸ ಹೆಜ್ಜೆ ಇಟ್ಟಿದ್ದು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಹಿಂದೆಯೇ ಜಿಲ್ಲಾ …
Read More »ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನ: ಡಿ.ಕೆ.ಶಿವಕುಮಾರ್
ಬೆಂಗಳೂರು: ‘ವಿಧಾನ ಪರಿಷತ್ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದು, 10 ದಿನ ಕಾಲಾವಕಾಶ ನೀಡಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಚುನಾವಣೆಗೆ ಪೂರ್ವತಯಾರಿ ಮತ್ತು ಪಕ್ಷ ಸಂಘಟನೆ ಕುರಿತು ಪಕ್ಷದ ಜಿಲ್ಲಾ ಘಟಕಗಳ ನಾಯಕರ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈಗಾಗಲೇ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಅರ್ಜಿ ಕರೆಯಲಾಗಿದೆ. ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆಗೆ ಶೀಘ್ರದಲ್ಲೇ …
Read More »ಮೈಸೂರು ಅರಮನೆಯಲ್ಲಿ ಫೋಟೋ ತೆಗೆಯಲು ಅವಕಾಶ: ಮಾಧುಸ್ವಾಮಿ
ಬೆಂಗಳೂರು: ಮೈಸೂರು ಅರಮನೆ ವ್ಯಾಪ್ತಿಯಲ್ಲಿ ಫ್ಲ್ಯಾಶ್ ಬಳಸದೆ ಫೋಟೊ ತೆಗೆಯಲು ಅವಕಾಶ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಸಚಿವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಭಾರೀ ಸುದ್ದಿಯಾಗಿದ್ದ ಮೈಸೂರು ಅರಮನೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ ಪ್ರಕರಣವನ್ನು ಸಂಪುಟ ಸಭೆ ಕೈಬಿಟ್ಟಿದೆ. ಚಿತ್ರೀಕರಣಕ್ಕೆ ಅನುಮತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ವಿರುದ್ಧ ಉಪ …
Read More »ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಕುರಿತು ಚರ್ಚೆಗೆ ಎಡೆಮಾಡಿಕೊಟ್ಟ ಬಿಬಿಎಂಪಿ ಸೆರೋಸರ್ವೆ!
ಬೆಂಗಳೂರು: 1,800 ನಾಗರೀಕರ ಮೇಲೆ ಆರೋಗ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ನಡೆಸಿದ ಸೆರೋಸರ್ವೇಯೊಂದು ತಜ್ಞರಲ್ಲಿ ಚರ್ಚೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ವೈರಸ್ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎರಡು ಡೋಸ್ ಲಸಿಕೆ ಪಡೆದುಕೊಂಡ ಬಳಿಕ ಬೂಸ್ಟರ್ ಡೋಸ್ ನೀಡಬೇಕೆಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಆದರೆ, ಇನ್ನೂ ಕೆಲವರು, ಬೂಸ್ಟರ್ ಡೋಸ್ ಗಳ ಕುರಿತು ಸೂಕ್ತ ರೀತಿಯ ಅಧ್ಯಯನ ನಡೆಸದ ಹೊರತು ಅದನ್ನು ನೀಡಬಾರದು ಎಂದು …
Read More »ಮದ್ಯ ಕುಡಿಸಿ ಮಹಿಳಾ ಟೆಕ್ಕಿ ಮೇಲೆ ನೈಜೀರಿಯಾ ಪ್ರಜೆಗಳಿಂದ ಅತ್ಯಾಚಾರ – ಇಬ್ಬರ ಬಂಧನ
ಬೆಂಗಳೂರು, ಸೆ 04 : ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾ ಪ್ರಜೆಗಳಿಬ್ಬರು ಬಂಧಿಸಲಾಗಿದೆ. ಮಹಿಳಾ ಟೆಕ್ಕಿ ಈ ಬಗ್ಗೆ ಬಾಣಸವಾಡಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ನೈಜೀರಿಯಾ ಪ್ರಜೆಗಳಾದ ಬಾಣಸವಾಡಿ ನಿವಾಸಿ ಟೋನಿ (35) ಹಾಗೂ ಉಬಾಕಾ (36) ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಯುವತಿ ಮೂಲತಃ ಕಲ್ಬುರ್ಗಿ ಜಿಲ್ಲೆಯವಳಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ …
Read More »ಅಚ್ಚರಿ ಬೆಳವಣಿಗೆ -ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್
ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ಮಾಡಿದ್ದಾರೆ. ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭೇಟಿ ಮಾಡಿದ ಬಿಸಿ ನಾಗೇಶ್, ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕೆಲವು ಹೊತ್ತುಗಳ ಕಾಲ ಇತ್ತೀಚೆಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ಸಿ.ನಾಗೇಶ್, ಇದೊಂದು ಸೌಜನ್ಯದ ಭೇಟಿ ಅಂತಾ ತಿಳಿಸಿದ್ದಾರೆ.
Read More »ಕೋವಿಡ್ ಲಸಿಕೆ: ರಾಜ್ಯದ 9 ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಸಾಧನೆ
ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಯಲ್ಲಿ ರಾಜ್ಯದ 9 ಜಿಲ್ಲೆಗಳು ಹಿಂದೆ ಬಿದ್ದಿದ್ದು, ಲಸಿಕಾ ಅಭಿಯಾನ ಪ್ರಾರಂಭವಾಗಿ ಏಳೂವರೆ ತಿಂಗಳು ಕಳೆದರೂ ಶೇ 50ರಷ್ಟ ಗುರಿ ಸಾಧನೆ ಸಾಕಾರವಾಗಿಲ್ಲ. ಕಳೆದ ಜ.16ರಿಂದ ರಾಜ್ಯದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ವಾರಗಳಿಂದ ಲಸಿಕೆ ವಿತರಣೆಗೆ ವೇಗ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಬುಧವಾರ 15 ಲಕ್ಷ ಹಾಗೂ ಉಳಿದ ದಿನ 6 ಲಕ್ಷ ಡೋಸ್‌ಗಳನ್ನು ವಿತರಿಸುವ ಗುರಿಯನ್ನು …
Read More »
Laxmi News 24×7