Breaking News

ಬೆಂಗಳೂರು

17 ದಿನದಲ್ಲಿ ಮೊದಲ 50, ಈಗ ಕೇವಲ 4 ದಿನದಲ್ಲಿ 47 ಮಂದಿಗೆ ಕರ್ನಾಟಕದಲ್ಲಿ ಸೋಂಕು

ಬೆಂಗಳೂರು: ಕೊರೊನಾ ಪೀಡಿತ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 11ನೇ ಸ್ಥಾನ ಸಿಕ್ಕಿರಬಹುದು. ಆದರೆ ಲಾಕ್‍ಡೌನ್ ಮಧ್ಯೆ ಕೊರೊನಾ ಪೀಡಿತರ ಸಂಖ್ಯೆ ದಿಢೀರ್ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು ಮಾರ್ಚ್ 8 ರಂದು. ಖಾಸಗಿ ಕಂಪನಿಯ ಟೆಕ್ಕಿಗೆ ಕೊರೊನಾ ಬಂದಿತ್ತು. ಇದಾದ 17 ದಿನದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50ಕ್ಕೆ ಏರಿಕೆ ಆಗಿತ್ತು. ಮಾರ್ಚ್ 31ಕ್ಕೆ 100ನೇ ಪ್ರಕರಣ ಬಂದಿತ್ತು. ಅಂದರೆ ಮಾರ್ಚ್ 25 …

Read More »

ಡಿಸೆಂಬರ್‌ವರೆಗೂ ಅಲರ್ಟ್ ಆಗಿರುವಂತೆ ಸಾರ್ವಜನಿಕರಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಮನವಿ

ಬೆಂಗಳೂರು: ಕೊವಿಡ್‌ 19 ವೈರಸ್‌ ಸಂಪೂರ್ಣ ನಿರ್ನಾಮ ಆಗುವವರೆಗೂ ಅಂದರೆ ಕನಿಷ್ಠ ಮುಂದಿನ 7-8 ತಿಂಗಳು ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಿಬಿಎಂಪಿಯ ಪೌರ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಮಲ್ಲೇಶ್ವರದಲ್ಲಿ ಬುಧವಾರ ಪಡಿತರ ವಿತರಣೆ ಮಾಡಿದ ಡಾ. ಅಶ್ವತ್ಥನಾರಯಣ ಅವರು, ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. “ಪ್ರಸ್ತುತ ಸಭೆ, …

Read More »

ಎಂಎಲ್‌ಎ, ಎಂಎಲ್‍ಸಿಗಳ ವೇತನ ಕಡಿತಕ್ಕೆ ರಾಜ್ಯ ಸರಕಾರ ಚಿಂತನೆ ….”

ಬೆಂಗಳೂರು : ಕೊರೋನಾ ತಂಡದೊಡ್ಡಿರುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಎಂಎಲ್‌ಎ, ಎಂಎಲ್ಸಿಗಳ ವೇತನ ಕಡಿತಕ್ಕೆ ಸರಕಾರ ಚಿಂತನೆ ನಡೆಸಿದೆ. ಪ್ರತಿಪಕ್ಷ ನಾಯಕರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ, ಎಲ್ಲಾ ಶಾಸಕರ, ಪ್ರತಿಪಕ್ಷದ ನಾಯಕರ, ಪರಿಷತ್ ಸದಸ್ಯರ ವೇತನ ಕಡಿತ ಮಾಡೋ ಬಗ್ಗೆ ಮಾತುಕತೆ‌ ನಡೆಸಿದರು. ಶೇ. …

Read More »

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಸಿಎಂ

ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಲಿದ್ದಾರೆ ಸಿಎಂ ಯಡಿಯೂರಪ್ಪ, ಹೌದು, ಕೊರೋನಾ ಹೊಡೆತಕ್ಕೆ ರಾಜ್ಯ ತತ್ತರಿಸಿರುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಆಡಳಿತ ಯಂತ್ರಕ್ಕೆ ಹಿಡಿದಿರುವ ಕಿಲುಬನ್ನು ತಿಕ್ಕಿ ತೊಳೆಯಲು ಬಯಸಿರುವ ಸಿಎಂ ಇದಕ್ಕಾಗಿ ಪೂರ್ವಭಾವಿ ತಯಾರಿ ಆರಂಭಿಸಿದ್ದಾರೆ. ಆಡಳಿತ ಯಂತ್ರ ದುಬಾರಿ ವೆಚ್ಚದ್ದಾಗಿ ಪರಿಣಮಿಸಿರುವುದರಿಂದ ಮೊದಲು ತಮ್ಮ ಸಿಬ್ಬಂದಿಗಳು ಹಾಗೂ ಸಚಿವರ ಸಿಬ್ಬಂದಿಗಳ ಸಂಖ್ಯೆಗೆ ಸಿಎಂ ಕತ್ತರಿ ಹಾಕಲಿದ್ದಾರೆ. …

Read More »

ಕೊರೊನಾ ರೋಗಿ ಸಾವು – ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ, ಸಿಬ್ಬಂದಿಗೆ ಕ್ವಾರಂಟೈನ್

ಬೆಂಗಳೂರು: ಕೊರೊನಾ ಸೋಂಕಿತ ರೋಗಿ ನಂಬರ್ 177 ಸಾವಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯ ಎಡವಟ್ಟು ಕಾರಣವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇರವಾಗಿ ದೂರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿಯ ಖಾಸಗಿ ಆಸ್ಪತ್ರೆಯು ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡಿತ್ತು. ಆದರೆ ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ …

Read More »

ಕೊರೊನಾ ಭೀತಿ ನಡುವೆ ರಕ್ತದಾನ- ದಾನಿಗಳಿಗೆ ಆರೋಗ್ಯ ಸಚಿವರಿಂದ ಮೆಚ್ಚುಗೆ

ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದೆ. ಲಾಕ್‍ಡೌನ್ ಹಾಗೂ ಕೊರೊನಾ ಬರುತ್ತೆ ಎಂಬ ತಪ್ಪು ಕಲ್ಪನೆಯಿಂದ ರಕ್ತದಾನಿಗಳು ರಕ್ತದಾನಕ್ಕೆ ಮುಂದೆ ಬಾರದೆ ರಕ್ತನಿಧಿ ಕೇಂದ್ರದಲ್ಲಿ ರಕ್ತ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಸಿಜೇರಿಯನ್ ನಂತಹ ಪ್ರಕರಣಗಳಲ್ಲಿ ರಕ್ತ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ಮೂಲಕ ಜಿಲ್ಲಾ ಸರ್ಕಾರಿ ನೌಕರರು ಮಾನವೀಯತೆ ಮೆರೆದಿದ್ದಾರೆ. ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವುದನ್ನು ಅರಿತ …

Read More »

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಜಂಟಿಯಾಗಿ ರು. 5 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.

ಬೆಂಗಳೂರು:ಕೋವಿಡ್ 19 ಸೋಂಕು ನಿವಾರಣೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವತಿಯಿಂದ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಜಂಟಿಯಾಗಿ ರು. 5 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊರೋನಾದಿಂದ ನರಳುತ್ತಿರುವವರಿಗೆ ಹಾಗೂ ಇತರರಿಗೆ ಸಹಾಯಕವಾಗಲು ಮುಖ್ಯಮಂತ್ರಿಗಳ ನಿಧಿಗೆ …

Read More »

ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದರು ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ದೆಹಲಿ ಜಮಾತ್ ಕಾರ್ಯಕ್ರಮಕ್ಕೆ ಹೋದವರ ಕುರಿತು ಟ್ಟಿಟ್ಟರಿನಲ್ಲಿ ಮಾಹಿತಿ ನೀಡಿದ್ದಾರೆ. “ದೆಹಲಿಯ ನಿಜಾಮುದ್ದೀನ್‍ನ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಲಾಗಿದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ …

Read More »

‘ಗುಂಡಿಕ್ಕಿ ಕೊಲ್ಲಿ’ ಎಂದ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅರೆಸ್ಟ್ ಮಾಡಿ : ಸಿದ್ದರಾಮಯ್ಯ

ಬೆಂಗಳೂರು, ಏ.8- ರಾಜಕೀಯ ಷಡ್ಯಂತ್ರದಿಂದ ಒಂದು ಸಮುದಾಯವನ್ನು ಗುರಿಯಾಸಿ ಹೇಳಿಕೆ ನೀಡಿರುವ ಮತ್ತು ಗುಂಡಿಕ್ಕಿಕೊಲ್ಲಿ ಎಂದು ಪ್ರಚೋದನಾಕಾರಿ ಮಾತನಾಡಿರುವ ಬಿಜೆಪಿಯ ಇಬ್ಬರು ಶಾಸಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಕೂಡಲೇ ಬಂಧಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವಿಡಿಯೋ ಸಂದೇಶದ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹ ಮಾಡಿರುವ ಅವರು, ಹೊನ್ನಾಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸನ ರಚಿಸುವ …

Read More »

ಕೊರೋನಾ ಭಾರತದಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ ಏಕೆ..? ಬಯಲಾಯ್ತು ಅಸಲಿ ಕಾರಣ…!

ಬೆಂಗಳೂರು, ಏ.8- ವಿಶ್ವವನ್ನೆ ಕಂಗೆಡಿಸಿರುವ ಕೊರೊನಾ ವೈರಸ್ ಭಾರತದಲ್ಲಿ ಮಾತ್ರ ನಿಧಾನ ಗತಿಯಲ್ಲಿ ಮಿಸುಕಾಡುತ್ತಿರುವುದು ಜಗತ್ತಿನ ಹಲವು ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ತಲೆ ಕೆಡಿಸಿದೆ. ಬಹುಶಃ ಇದಕ್ಕೆ ಭಾರತದಲ್ಲಿ ಚಾಲ್ತಿಯಲ್ಲಿರುವ ಬಿಸಿಜಿ ಚುಚ್ಚುಮದ್ದು ಕಾರಣ ಎಂಬ ಮಾಹಿತಿ ಹೊರ ಬಿದ್ದಿದೆ. ಹೌದು ಬಿಸಿಜಿ ಚುಚ್ಚುಮದ್ದು ಹಾಕಿಸಿಕೊಂಡರನ್ನು ಕೊರೊನಾ ಏಕಾಏಕಿ ಬಾಧಿಸಲಾಗುತ್ತಿಲ್ಲ. ಹಾಗಾಗಿ ಭಾರತದಲ್ಲಿ ಕಳೆದ ಫೆಬ್ರವರಿಯಲ್ಲೇ ಸೋಂಕು ಪತ್ತೆಯಾದರೂ ಈವರೆಗೂ ಅಷ್ಟೇನು ಅನಾವುತಕಾರಿ ಪರಿಣಾಮಗಳನ್ನು ಉಂಟು ಮಾಡಿಲ್ಲ. ಇತರ ದೇಶಗಳಿಗೆ …

Read More »