ಭಟ್ಕಳದಲ್ಲಿ 5 ತಿಂಗಳ ಕಂದಮ್ಮ, 3 ವರ್ಷದ ಬಾಲಕಿ ಸೇರಿ 12 ಮಂದಿಗೆ ಸೋಂಕು – ಬೆಳಗಾವಿ, ದಾವಣಗೆರೆಯಲ್ಲಿ ಕೊರೊನಾ ಸ್ಫೋಟ ಇಂದು 45 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 45 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ರಾಜ್ಯ ಕುಟುಂಬ ಕಲ್ಯಾಣ ಹಾಗೂ …
Read More »ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ; ಕುಡಿದ ಅಮಲಿನಲ್ಲಿ ಕೊಲೆಯಾದ ರೌಡಿಶೀಟರ್
ಬ್ಯಾಟರಾಯನಪುರ ರೌಡಿಶೀಟರ್ ಅಶೋಕ್ ನಿನ್ನೆ ಕುಡಿದ ಅಮಲಿನಲ್ಲಿದ್ದಾಗ ದಾಳಿ ಮಾಡಿದ್ದ ಕೆಲವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿಯೇ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ. ಬೆಂಗಳೂರು (ಮೇ 08); ಕಳೆದ 47 ದಿನಗಳಿಂದ ಶಾಂತವಾಗಿದ್ದ ಬೆಂಗಳೂರು ಕ್ರೈಂ ಲೋಕ ಲಾಕ್‌ಡೌನ್ ಅನ್ನು ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಮತ್ತೆ ಕ್ರಿಯಾಶೀಲವಾಗಿದೆ. ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ …
Read More »ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ……………
ಬೆಂಗಳೂರು: ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ ಅಂತ ಎಚ್ಚರಿಸಲಾಗಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ …
Read More »ಅವಧಿಗೆ ತಕ್ಕಂತೆ ಪಠ್ಯವನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ ಸೂಚನೆ
ಬೆಂಗಳೂರು : ಕೋವಿಡ್ ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸಚಿವರು ಈ ಶೈಕ್ಷಣಿಕ ಸಾಲಿನ ಪ್ರಾರಂಭದ …
Read More »ಯಾವ ಹಾಲಿವುಡ್ ಹೀರೋಗೂ ಕಮ್ಮಿ ಇಲ್ಲ’- ಕಿಚ್ಚನ ಖಡಕ್ ಲುಕ್‍ಗೆ ಅಭಿಮಾನಿಗಳು ಫಿದಾ
ಬೆಂಗಳೂರು: ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ಲುಕ್ ಹಾಗೂ ಬೇರ್ ಬಾಡಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಸುದೀಪ್ ಅವರು ಪೈಲ್ವಾನ್ ಸಿನಿಮಾದ ಸಮಯದಲ್ಲಿ ತಮ್ಮ ದೇಹವನ್ನು ದಂಡಿಸಿ ಖಡಕ್ ಬಾಡಿ ಮಾಡಿದ್ದರು. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿವೆ. ಕಿಚ್ಚನ ಖಡಕ್ ಲುಕ್ ಇರುವ ಈ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕ ಪವನ್ …
Read More »ಮೂರನೇ ಲಾಕ್ ಡೌನ್ ನಂತರ ಏನು? ಸುಳಿವು ಕೊಟ್ಟ ಗೃಹಸಚಿವ ಬೊಮ್ಮಾಯಿ
ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ ಎನ್ನುವ ಕಾರಣಕ್ಕಾಗಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ, ಇದರರ್ಥ ಕೊರೊನಾ ಕಮ್ಮಿಯಾಗಿದೆ ಎಂದಲ್ಲ” ಎಂದು ಬೊಮ್ಮಾಯಿ ಹೇಳಿದ್ದಾರೆ. ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಕೊರೊನಾವನ್ನು ಸಂಪೂರ್ಣ ತೊಲಗಿಸಲು ಸಾಧ್ಯ. ಮೂರನೇ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿ ಜನರದ್ದು”ಎಂದು ಬೊಮ್ಮಾಯಿ ಪುನರುಚ್ಚಿಸಿದ್ದಾರೆ. ಮೇ ಹದಿನೇಳರ ನಂತರ ಕೊರೊನಾ ನಿಯಂತ್ರಣಕ್ಕೆ ಬರದೇ ಇದ್ದಲ್ಲಿ, ಮುಂದೆ ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಸರಕಾರಕ್ಕೆ ಬರಲಿದೆ”ಎಂದು …
Read More »ಪತ್ರಕರ್ತರಿಗೆ ಯಾಕೆ ಜೀವ ವಿಮೆ ಘೋಷಿಸಿಲ್ಲ?: ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ನಲ್ಲಿ PIL ಸಲ್ಲಿಕೆ
ಬೆಂಗಳೂರು: ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಪೌರ ಕಾರ್ಮಿಕರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ. ಈ ಮೂಲಕ ಕೊರೋನಾ ವಿರುದ್ಧದ ಸಮರದಲ್ಲಿ ಸಾವನ್ನಪ್ಪುವ ವಾರಿಯರ್ಸ್ಗೆ 30 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಲಾಗಿದೆ. ಆದರೀಗ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರಂತೆಯೇ ತಮ್ಮ ಪ್ರಾಣವನ್ನು …
Read More »ಶಿವಾಜಿನಗರ ನಾಲ್ವರಲ್ಲಿ ಕೊರೋನಾ ಸೋಂಕು; ಬೆಂಗಳೂರಿನ ಬಹುತೇಕ ಕಡೆ ಅಡ್ಡಾಡಿರುವ ಸೋಂಕಿತರು
ಬೆಂಗಳೂರು: ಹೌಸ್ ಕೀಪಿಂಗ್ ಜೊತೆ ವಾಸವಿದ್ದ ಶಿವಾಜಿನಗರ ನಾಲ್ವರು ವ್ಯಾಪಾರಿಗಳಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಕೊರೋನಾ ಸೋಂಕಿತ ಹೌಸ್ ಕೀಪಿಂಗ್ ವ್ಯಕ್ತಿ ಜತೆ ಒಟ್ಟು ಏಳು ಜನ ಇದ್ದರು. ಇವರಲ್ಲಿ ನಾಲ್ಕು ಜನರಲ್ಲಿ ಪಾಸಿಟಿವ್ ಕಂಡುಬಂದಿದೆ. 13 ಜನರಲ್ಲಿ 5 ಮಂದಿಗೂ ಕೊರೋನಾ ಸೋಂಕು ತಗುಲಿದೆ. ಉಳಿದ 9 ಜನರ ಫಲಿತಾಂಶ ನಾಳೆ ಬರಲಿದೆ. ಇದೀಗ ಕೊರೋನಾ ಪಾಸಿಟಿವ್ ವರದಿ ಬಂದ ನಾಲ್ವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 19, 22, 25 …
Read More »ರಾಜ್ಯದ ಉಚಿತ ಬಸ್ ವ್ಯವಸ್ಥೆ ಅವಧೀ ಮುಗಿದಿದೆ.ಒಂದು ವಾರದಲ್ಲಿ ಬೆಂಗಳೂರಿನಿಂದ ಊರುಗಳತ್ತ ತೆರಳಿದ 1,08,300 ಕಾರ್ಮಿಕರು
ದೇಶಾದ್ಯಂತ ಮೇ 17ರವರೆಗೆ ಲಾಕ್ ಡೌನ್ ಮುಂದುವರಿಸಲಾಗಿದೆ. ಕೆಲ ರಿಯಾಯಿತಿಗಳನ್ನು ನೀಡಲಾಗಿದ್ದು, ರಾಜ್ಯದೊಳಗಿನ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ಸೇರಲಾರಂಭಿಸಿದ್ದಾರೆ. ಆದರೆ, ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯದ ಕಾರ್ಮಿಕರು ಗೋಳು ಕೇಳುವವರೇ ಇಲ್ಲದಂತಾಗಿದೆ. ಬೆಂಗಳೂರು(ಮೇ.08): ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಆದೇಶ ಮೇರೆಗೆ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1,08,300 ಕಾರ್ಮಿಕರನ್ನು ಕೆಎಸ್ಆರ್ಟಿ ಬಸ್ಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಸುಮಾರು 3610 ಬಸ್ಗಳಲ್ಲಿ ವಲಸೆ ಕಾರ್ಮಿಕರು …
Read More »ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢ
ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ ಏಳು ಮಂದಿಗೆ ಕಿಲ್ಲರ್ ಕೊರೊನಾ ದೃಢವಾಗಿದೆ. ಶಿವಾಜಿನಗರದಲ್ಲಿ ನಾಲ್ವರಿಗೆ, ಪಾದರಾಯನಪುರದಲ್ಲಿ ಇಬ್ಬರಿಗೆ ಮತ್ತು ಯಶವಂತಪುರದಲ್ಲೂ ಓರ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಪಾದರಾಯನಪುರದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕುತ್ತಿದೆ. ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢವಾಗಿದೆ. ಬೇರೆ ಬೇರೆ ಮನೆಗಳಲ್ಲಿ ಇದ್ದ …
Read More »