ಬೆಂಗಳೂರು, ಮೇ 30- ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಜಗಿಯುವ ತಂಬಾಕು ಪಾನ್ ಮಸಾಲ ಉತ್ಪನ್ನಗಳನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಇಂದು ವಿಶ್ವ ತಂಬಾಕು ದಿನವಾಗಿದ್ದು, ಇದರ ಅಂಗವಾಗಿ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ತಂಬಾಕು ಜಗಿದು ಉಗಿಯುವುದರಿಂದ ಸೋಂಕು ಹರಡುವ ಸಂಭವ ಹೆಚ್ಚಿದೆ. ಹೀಗಾಗಿ ತಂಬಾಕಿನ ಸಂಬಂಧಪಟ್ಟಂತೆ ಎಲ್ಲಾ ಉತ್ಪನ್ನಗಳನ್ನು ನಿಷೇಸಲಾಗಿದೆ ಎಂದರು. …
Read More »“ಯಡಿಯೂರಪ್ಪ ಒಪ್ಪಿದರೆ ವಿಪಕ್ಷಗಳ 22 ಶಾಸಕರ ರಾಜೀನಾಮೆ ಕೊಡಿಸುತ್ತೇನೆ”
ಬೆಂಗಳೂರು, ಮೇ 30- ಸದ್ಯಕ್ಕೆ ನಮಗೆ ಬಹುಮತವಿದೆ. ನಾವು ವಿಪಕ್ಷಗಳ ಶಾಸಕರ ರಾಜೀನಾಮೆ ಕೆಲಸಕ್ಕೆ ಕೈ ಹಾಕುವುದಿಲ್ಲ. ನಮ್ಮ ಜತೆ ಬರಲು ಸಾಕಷ್ಟು ಶಾಸಕರು ತಯಾರಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದರೆ 20 ರಿಂದ 22 ಜನ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ಸದ್ಯಕ್ಕೆ ಬಹುಮತವಿರುವುದರಿಂದ ಆ ಕೆಲಸಕ್ಕೆ ಕೈ ಹಾಕುವುದಿಲ್ಲ ಬೆಳಗಾವಿ 3, ಬಿಜಾಪುರ …
Read More »ಜನರ ಹಿತದೃಷ್ಟಿಯಿಂದ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಹಿಂಪಡೆದಿದೆ:B.S.Y.
ಬೆಂಗಳೂರು: ರಾಜ್ಯದ ಜನತೆಯ ಬೇಡಿಕೆ ಹಿನ್ನೆಲೆಯಲ್ಲಿ ಭಾನುವಾರ (ಮೇ 31 2020) ರಂದು ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ …
Read More »ಕೊರೊನಾ ಇದ್ರೂ ಮನೆಯಿಂದ ಹೊರ ಬಾರದ ಪಾಷಾ-
ಬೆಂಗಳೂರು: ವಾರ್ಡ್ ನಂಬರ್ 135 ಪಾದರಾಯನಪುರದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಆದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರುತ್ತಿಲ್ಲ. ಇಮ್ರಾನ್ ಪಾಷಾಗೆ 158 ಜನ ಕಾಂಟ್ಯಾಕ್ಟ್ ಇದ್ದು, ಅದರಲ್ಲೂ 75 ಜನ ಪ್ರೈಮರಿ ಕಾಂಟ್ಯಾಕ್ಟ್ ಇದ್ದಾರೆ. ಉಳಿದವರೆಲ್ಲ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ತಿಳಿದುಬಂದಿದೆ. ಹೀಗಾಗಿ ಶಾಸಕರು, ಅಧಿಕಾರಿಗಳು ಆಪ್ತರೆಲ್ಲ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ. ಇಮ್ರಾನ್ ಪಾಷಾ ಕೊರೊನಾ ಪಾಸಿಟಿವ್ ಬಂದರೂ ಇನ್ನೂ ವಿಕ್ಟೋರಿಯಾ …
Read More »ಶಾಪಿಂಗ್ ಮಾಡಲು ಭಾನುವಾರ ಒಂದೇ ದಿನ ಅವಕಾಶಭಾನುವಾರ ಕರ್ಫ್ಯೂ ತೆಗೆಯಲಾಗಿದೆ
ಬೆಂಗಳೂರು: ಶಾಪಿಂಗ್ ಮಾಡಲು ಭಾನುವಾರ ಒಂದೇ ದಿನ ಅವಕಾಶ ಇರುವುದು. ಹೀಗಾಗಿ ಖರೀದಿಗೆ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಅದಕ್ಕೆ ಭಾನುವಾರ ಕರ್ಫ್ಯೂ ತೆಗೆಯಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾನುವಾರ ಲಾಕ್ ಡೌನ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಿಎಂ ನಿರ್ಧಾರ ಸ್ವಾಗತಾರ್ಹ ಎಂದರು. ದುಡಿಯುವ ವರ್ಗಕ್ಕೆ ರಿಲ್ಯಾಕ್ಸ್ ಮಾಡಿಕೊಡಲು ಅನುಕೂಲವಾಗಿದೆ. ವಾರವೆಲ್ಲ ನೌಕರರು, ಉದ್ದಿಮೆದಾರರು ಕೆಲಸ ಮಾಡಿರುತ್ತಾರೆ. …
Read More »ಮಳೆಯ ಅವಾಂತರ – ಮನೆಗಳಿಗೆ ನುಗ್ಗಿದ ನೀರು, ಹತ್ತಾರು ಎಕರೆ ಬಾಳೆ ನಾಶ
ರಾಯಚೂರು/ಕೋಲಾರ: ಅನೇಕ ದಿನಗಳಿಂದ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ರಾಯಚೂರಿನಲ್ಲಿ ಇಡೀ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಮಳೆಗೆ ಚರಂಡಿ ನೀರು ಮನೆಯೊಳಗೆ ನುಗ್ಗಿದೆ. ನಗರದ ಮಡ್ಡಿಪೇಟೆ, ಬಂದರಗಲ್ಲಿ ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮನೆಗಳಿಗೆ ಮಳೆಯ ನೀರಿನೊಂದಿಗೆ ಕೊಳಚೆ ನೀರು ನುಗ್ಗಿದೆ. ಇದರಿಂದ ಜನರು ರಾತ್ರಿಯೆಲ್ಲಾ ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಿದ್ದಾರೆ. …
Read More »ಶಾಸಕರ ಸಂಬಳ ಕಡಿತ, ಅಧಿಕೃತ ಘೋಷಣೆ – ವೇತನ, ಭತ್ಯೆ ಎಷ್ಟಿದೆ?
ಬೆಂಗಳೂರು: ಕೋವಿಡ್ 19 ನಿಂದಾಗಿ ಶಾಸಕರ ಸಂಬಳಕ್ಕೂ ಈಗ ಸರ್ಕಾರ ಕತ್ತರಿ ಹಾಕಿದೆ. ಸಂಬಳ ಕಡಿತದ ಬಗ್ಗೆ ಅಧಿಕೃತವಾಗಿ ಇಂದು ಸ್ಪಷ್ಟೀಕರಣ ನೀಡಿದೆ. ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗೆ ಶೇ.30ರಷ್ಟು ಶಾಸಕರ ಸಂಬಳ ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ …
Read More »ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಪರದಾಟ……….
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ, ಮತ್ತೊಂದು ಕಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸಿನಕಲ್ಲು ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ. ಗ್ರಾಮಕ್ಕೆ ತೆರಳಲು ರಸ್ತೆ ಇಲ್ಲ, ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಮಳೆಯ ನೀರಿನ ಆಶ್ರಯದಲ್ಲೇ ದಿನದ ಬದುಕು ಸಾಗಿಸುತ್ತಿದ್ದಾರೆ. ಸಣ್ಣ ಕೆರೆಯ ನೀರನ್ನು ನಂಬಿ ಜೀವನ ನಡೆಸುತ್ತಿರುವ ಗ್ರಾಮದ ಜನರು ದಿನನಿತ್ಯದ ಬಳಕೆಗೆ ಕೊಳಕು ನೀರು ಆಧಾರವಾಗಿದೆ …
Read More »ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿನ್ನೆ ಉಮೇಶ ಕತ್ತಿ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತೃಪ್ತ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿನ್ನೆ ಉಮೇಶ ಕತ್ತಿ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತೃಪ್ತ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಉಮೇಶ್ ಕತ್ತಿ ನಿವಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಶಾಸಕರು ಸಭೆ ನಡೆಸಿದ್ದಾರೆ. ಶಿವರಾಜ್ ಪಾಟೀಲ್, ರಾಜುಗೌಡ ನಾಯಕ್, ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ಸೇಡಂ, ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮೊಡ್, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಸೋಮಲಿಂಗಪ್ಪ, …
Read More »ರೆಬೆಲ್‍ಸ್ಟಾರ್ ಬರ್ತ್‍ಡೇಗೆ ಡಿಫರೆಂಟಾಗಿ ವಿಶ್ ಮಾಡಿದ್ರು ನೀನಾಸಂ ಸತೀಶ್!
ಭೌತಿಕವಾಗಿ ಮರೆಯಾದರೂ ಪ್ರತಿಯೊಬ್ಬರ ಮನಸ್ಸುಗಳಲ್ಲಿಯೂ ಅಜರಾಮರವಾಗಿರುವವರು ರೆಬೆಲ್ ಸ್ಟಾರ್ ಅಂಬರೀಶ್. ಹುಸಿಮುನಿಸು, ಒಂದಷ್ಟು ಬೈಗುಳಗಳ ಮೂಲಕವೇ ಪ್ರಾಂಜಲ ಪ್ರೀತಿಯನ್ನು ಎಲ್ಲರತ್ತಲೂ ದಾಟಿಸುತ್ತಿದ್ದ, ಎದುರು ಯಾರೇ ನಿಂತರೂ ಬೆಚ್ಚಗಿನ ಸ್ನೇಹವನ್ನು ಮನಸಾರೆ ಪ್ರವಹಿಸುತ್ತಿದ್ದ ಅಂಬರೀಶ್‍ರ ಬಗ್ಗೆ ಒಂದೇ ಗುಕ್ಕಿನಲ್ಲಿ ವಿವರಿಸೋದು ಕಷ್ಟ. ಎಷ್ಟೇ ಮಾತಾಡಿದರೂ, ಬರೆದರೂ ಅದರ ನಿಲುಕಿಗೆ ಸಿಗದ ಅಸಂಗತ ವ್ಯಕ್ತಿತ್ವ ಹೊಂದಿದ್ದ ಅಂಬರೀಶ್ ಹುಟ್ಟಿದ ದಿನವಿಂದು. ಈ ಸಂದರ್ಭದಲ್ಲಿ ಬಹುತೇಕರು ತಂತಮ್ಮದ್ದೇ ಆದ ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಅಂಬರೀಶ್‍ರನ್ನು …
Read More »
Laxmi News 24×7