Breaking News

ಬೆಂಗಳೂರು

ಏಕೆಂದರೆ ನಿನ್ನೆ ಸಂಪತ್ ನೋಡಲು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಿಸಿಬಿಗೆ ಶಾಕ್ ಎದುರಾಗಿತ್ತು. ಸಂಪರ್ ರಕ್ಷಣೆ ಮಾಡಲು ಬ್ಯಾಪ್ಟಿಸ್ಟ್ ಆಸ್ಪತ್ರೆ ಮಹಾ ನಾಟಕವನ್ನೇ ಆಡಿದೆ.

ಬೆಂಗಳೂರು: ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಸಂಪತ್ ರಾಜ್ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿ ಸಂಪತ್ ರಾಜ್ ರಕ್ಷಣೆ ಮಾಡಲು ಹೋಗಿ ಆಸ್ಪತ್ರೆ ತಗಲಾಕಿಕೊಂಡಿದೆ. ಏಕೆಂದರೆ ನಿನ್ನೆ ಸಂಪತ್ ನೋಡಲು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಿಸಿಬಿಗೆ ಶಾಕ್ ಎದುರಾಗಿತ್ತು. ಸಂಪರ್ ರಕ್ಷಣೆ ಮಾಡಲು ಬ್ಯಾಪ್ಟಿಸ್ಟ್ ಆಸ್ಪತ್ರೆ ಮಹಾ ನಾಟಕವನ್ನೇ ಆಡಿದೆ. ಸಂಪತ್ ರಾಜ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಠಿಕಾಣಿ ಹಾಕಿದ್ದರು. ಎರಡು ತಿಂಗಳಲ್ಲಿ 4 ಬಾರಿ ಆಡ್ಮಿಟ್, 4 ಬಾರಿ ಡಿಸ್ಚಾರ್ಜ್ …

Read More »

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 45.25% ಮತದಾನ, ಶಿರಾದಲ್ಲಿ ಈ ಬಾರಿ 82.31% ರಷ್ಟು ಮತದಾನ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠೆಯ ಕಣಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಬೈಎಲೆಕ್ಷನ್ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ, ಜೆಡಿಎಸ್‍ನ ಕೃಷ್ಣಮೂರ್ತಿ ಸೇರಿ 16 ಹುರಿಯಾಳುಗಳ ಭವಿಷ್ಯ ಮತಯಂತ್ರ ಸೇರಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್‍ನ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಏಳು ದಿನಗಳ ಬಳಿಕ …

Read More »

ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

ಬೆಂಗಳೂರು,ನ.3- ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮುಸ್ಲಿಂ ಪುರುಷರು ಹಿಂದೂ ಹುಡುಗಿಯರಿಗೆ ಆಮಿಷವೊಡ್ಡಿ ತಮ್ಮ ಜಾತಿಯ ವಿಚಾರವನ್ನು ರಹಸ್ಯವಾಗಿಟ್ಟು ಲವ್ ಜಿಹಾದ್ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆ ಕಠಿಣ ಕಾನೂನು ರಚಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಡಳಿತದ ನಾಲ್ಕನೇ …

Read More »

ಆರ್.ಆರ್.ನಗರದಲ್ಲಿ ಮತದಾನ ಮಾಡಿದ ತಾರೆಯರು

ಬೆಂಗಳೂರು,ನ.3- ಆರ್‍ಆರ್‍ನಗರ ಉಪಚುನಾವಣೆಯ ಮತದಾನದಲ್ಲಿ ನಟ ದರ್ಶನ ಸೇರಿದಂತೆ ಹಲವಾರು ನಟನಟಿಯರು ತಮ್ಮ ಹಕ್ಕು ಚಲಾಯಿಸಿದರು. ನೆನಪಿರಲಿ ಪ್ರೇಮ್ ಅವರು ಪತ್ನಿ ಸಮೇತ ಕ್ಲಾರೆಟ್ ಸ್ಕೂಲ್ ಮತಗಟ್ಟೆಯಲ್ಲಿ ವೋಟ್ ಮಾಡಿದರು. ತಮ್ಮ ಹಕ್ಕು ಚಲಾಯಿಸಿದ ನಂತರ ಸರ್ಕಾರ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಯಾರೂ ಆತಂಕ ಪಡುವುದು ಬೇಡ. ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ನಾವು ಮತದಾನ ಮಾಡಿಲ್ಲವೆಂದರೆ ನಮ್ಮ …

Read More »

ತಾಯಿ ಮೂಕಾಂಬಿಕೆ ಕೊಟ್ಟ ಉಡುಗೊರೆ ನೀನು – ಮಗನ ಹುಟ್ಟುಹಬ್ಬಕ್ಕೆ ರಕ್ಷಿತಾ ವಿಶ್

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿಯಾಗಿ ಸ್ಟಾರ್ ಮಕ್ಕಳು ಕೂಡ ಬರ್ತ್ ಡೇಯನ್ನು ಅಷ್ಟೇ ಸ್ಪೇಷಲ್ ಆಗಿ ಸೆಲೆಬ್ರೇಟ್ ಮಾಡೋದು ಟ್ರೇಂಡ್ ಆಗಿದೆ. ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮುದ್ದಾದ ಮಗ ಸೂರ್ಯ 12ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕವಾಗಿ ವಿಶ್ ಮಾಡಿದ್ದಾರೆ. ಇನ್‍ಸ್ಟಾದಲ್ಲಿ ರಕ್ಷಿತಾ ಬರೆದುಕೊಂಡಿದ್ದೇನು?: ನೀನು …

Read More »

ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಪೊಲೀಸರು ತೆಗೆಸಿದರು

ಬೆಂಗಳೂರು: ಆರ್​.ಆರ್​ ನಗರ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಕೆಲವರು ಕೇಸರಿ ಮಾಸ್ಕ್​ ಧಾರಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಪ್ಯಾರಾಮಿಲಿಟರಿ ಫೋರ್ಸ್​ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್​ ಧರಿಸಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ರು. ಪಟ್ಟು ಹಿಡಿದು ಮಾಸ್ಕ್ ಬದಲಿಸುವಂತೆ ಮಾಡಿದ್ರು. ಇದರ ಬೆನ್ನಲ್ಲೇ ಮತಗಟ್ಟೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಕೂಡ ಪೊಲೀಸರು ತೆಗೆಸಿದ್ದಾರೆ.

Read More »

ಗೌರಮ್ಮ ತಮ್ಮ ಸೊಸೆ ಕುಸುಮ ಬೆಂಬಲಕ್ಕೆ ನಿಂತಿದ್ದಾರೆ

ಬೆಂಗಳೂರು: ಕೆಲವೇ ಕೆಲವು ದಿನಗಳ ಹಿಂದಕ್ಕೆ ಹೋದರೆ.. ಅಂದ್ರೆ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಘೋಷಣೆಯಾದಾಗ, ಕಾಂಗ್ರೆಸ್ ಪಕ್ಷ ಇನ್ನೂ ಕುಸುಮಗೆ ಟಿಕೆಟ್ ಕೊಟ್ಟಿರಲಿಲ್ಲ. ರಾಜಕೀಯಕ್ಕೆ ಕುಸುಮ ಇಳಿಯುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೆ ಮಾಧ್ಯಮದ ಮುಂದೆ ಡಿ.ಕೆ.ರವಿ ತಾಯಿ ಕಿಡಿಕಾರಿದ್ದರು.ಮಗ ಸಾವನ್ನಪ್ಪಿದಾಗ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ. ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಲು. ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು ಫೋಟೋ ಹಾಕಬಾರದು. ಒಂದು …

Read More »

ಡಿಸೆಂಬರ್ 2ನೇ ವಾರದಲ್ಲಿ ಶಾಲೆ ಆರಂಬಿಸುವ ಸಾಧ್ಯತೆ

ಬೆಂಗಳೂರು : ಕೋವಿಡ್ 19 ಕಾರಣದಿಂದಾಗಿ ಕಳೆದ ಏಳು -ಎಂಟು ತಿಂಗಳಿನಿಂದ ಶಾಲಾ ಕಾಲೇಜು ತೆರೆದಿಲ್ಲ. ಇದೀಗಾ ಕೊರೋನಾ ಕೊಂಚ ಮಟ್ಟಿಗೆ ಇಳಿಮುಖದತ್ತ ಮುಖ ಮಾಡಿದೆ. ಆದ್ದರಿಂದ ಮತ್ತೆ ಶಾಲಾ ಕಾಲೇಜು ಓಪನ್ ಮಾಡಲು ಮಹತ್ವದ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ವಾರಾಂತ್ಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ನವೆಂಬರ್ 17ರಂದು ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಶಾಲಾ ಕಾಲೇಜುಗಳ ಆರಂಭದ …

Read More »

ಯೋಧನ ಕೇಸರಿ ಮಾಸ್ಕ್ ಬದಲಿಸಲು ಅನುಕೂಲ : ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ನಡೆಯುತ್ತಿರುವಂತ ಮತದಾನದ ವೇಳೆ, ಮತಗಟ್ಟೆಯ ಕೇಂದ್ರದಲ್ಲಿ ಅರೆ ಸೇನಾಪಡೆಯ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗೆ ನಿಯೋಜನೆಗೊಂಡಿದ್ದಂತ ಯೋಧರೊಬ್ಬರು ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದರು. ಇದನ್ನು ಮತ ಚಲಾವಣೆಗೆ ತೆರಳುವ ವೇಳೆ ಗಮನಿಸಿದಂತ ಯುವಕನೋರ್ವ ತರಾಟೆಗೆ ತೆಗೆದುಕೊಂಡನು. ತಾವು ಕೇಸರಿ ಮಾಸ್ಕ್ ಧರಿಸಿದ್ದೀರಿ. ದಯವಿಟ್ಟು ಕೇಸರಿ ಮಾಸ್ಕ್ ಬದಲಾಯಿಸಿ, ಬೇರೆಯ ಮಾಸ್ಕ್ ಧರಿಸುವಂತೆ ಸೂಚಿಸಿದರು. ಆದ್ರೇ ಅರೆ …

Read More »

ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್‌ ಧರಿಸಬೇಕಿಲ್ಲ

ಬೆಂಗಳೂರು: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಬಿಬಿಎಂಪಿ ವಾಪಸ್‌ ಪಡೆದಿದೆ. ಈ ಹಿಂದೆ ಕಿಟಿಕಿ ಮುಚ್ಚಿದ ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸಬೇಕು ಎಂದು ಬಿಬಿಎಂಪಿ ಆದೇಶ ಪ್ರಕಟಿಸಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಸಾರ್ವಜನಿಕರ ಆಕ್ರೋಶದ ನಂತರ ತಜ್ಞರ ಸಲಹೆ ಕೋರಿ ಆರೋಗ್ಯ ಇಲಾಖೆಗೆ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದರು. ತಜ್ಞರ ಸಲಹೆಯಂತೆ ಕಾರಿನಲ್ಲಿ ಮುಚ್ಚಲ್ಪಟ್ಟ ಕಿಟಕಿಯೊಂದಿಗೆ …

Read More »