ಬಾಗಲಕೋಟೆ: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು. ಉತ್ಸವ, ಭಂಡಾರ, ಕೇಸರಿ ಹಚ್ಚಿಕೊಳ್ಳೋದು ಅಂದ್ರೆ ಅವರಿಗೆ ಅಲರ್ಜಿ ಆಗುತ್ತದೆ. ಅದೇ ಹಾಲುಮತ ಪೇಟ ಹಾಕಿಕೊಂಡು ಕುಂಕುಮ ಹಚ್ಚಿಕೊಂಡ್ರೆ ಅದು ಸಿದ್ದರಾಮೋತ್ಸವ ಆಗುತ್ತದೆ. ನಮಾಜ್ ಟೋಪಿ ಹಾಕಿಕೊಳ್ತಾರೆ, ಆದ್ರೆ ಕೇಸರಿ ಬಂದರೆ ನೂಕ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದ್ಯಾವ ಉತ್ಸವರಿ, ಇದು ಕೊನೆಯದ್ದು, ಇದು ಸಿದ್ದರಾಮೋತ್ಸವ ಅಲ್ಲ, ಮನೆಗೆ …
Read More »ಮಳೆಗಾಗಿ ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆ: ಹೂತಿದ್ದ ಶವ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ
ವಿಜಯಪುರ: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ(rain)ಯಾಗುತ್ತಿದ್ದು, ಜನ ಜೀವನ ಅಸ್ಥವ್ಯಸ್ತವಾಗಿದೆ. ಜೊತೆಗೆ ಹಲವೆಡೆ ರೆಡ್, ಯೊಲ್ಲೋ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಒಂದು ಹನಿ ಮಳೆ ಕೂಡ ಆಗಿಲ್ಲ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದು, ವಿಶಿಷ್ಟ ಆಚರಣೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ. ಸದ್ಯ ಮಳೆಗಾಗಿ ವಿಜಯಪುರ ಜಿಲ್ಲೆಯಲ್ಲಿ ಜನರು ವಿಶಿಷ್ಟ ಆಚರಣೆಯೊಂದು ಮಾಡುತ್ತಿದ್ದು, ಈ ಬಗ್ಗೆ ಕೇಳಿದರೆ ಆಶ್ಚರ್ಯವಾಗೋದು ಗ್ಯಾರಂಟಿ. ಸ್ಮಶಾನದಲ್ಲಿ ಹೂತಿದ್ದ ಶವ …
Read More »ಕಾರ್ ಹಾಗೂಬೈಕ್ ನಡುವೆ ಮುಖಾಮುಖಿ ಡಿಕ್ಕಿ:ಗಂಭೀರ ಗಾಯ
ಬೈಕ್ ಹಾಗೂ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮೀಸಾಳೆ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಎರಡು ವಾಹನಗಳ ಅತೀ ವೇಗವೇ ಕಾರಣ ಎನ್ನಲಾಗಿದೆ ಘಟನೆಯಲ್ಲಿ ಗಾಯಗೊಂಡಿವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
Read More »ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ವಿಜಯಪುರ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸುತ್ತಾರೆ. ಅವರು ಎಲ್ಲಿ ನಿಂತರೂ ಗೆದ್ದು ಬರ್ತಾರೆ. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದಿಂದ ಒಳ್ಳೆ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಬೆಳೆಯುತ್ತಾನೆ ಎಂಬ ವಿಶ್ವಾಸವಿದೆ ಎಂದರು. ಯಡಿಯೂರಪ್ಪ ಮತ್ತು ಕುಟುಂಬವನ್ನು ಬಿಜೆಪಿ ಪಕ್ಕಕ್ಕೆ ಸರಿಸಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ …
Read More »ಸಿಂದಗಿ ತಾಲೂಕಿನಲ್ಲಿ ಡಬಲ್ ಮರ್ಡರ್ – ಕೌಟುಂಬಿಕ ಕಲಹ ಹಿನ್ನೆಲೆ ಅಕ್ಕ- ತಮ್ಮನ ಬರ್ಬರ ಕೊಲೆ
ಸಿಂದಗಿ(ವಿಜಯಪುರ): ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಸದ್ಯ ನಾನಾಗೌಡ ಯರಗಲ್ಲ ಹಾಗೂ ರಾಜಶ್ರೀ ಯರಗಲ್ಲ ಕೊಲೆಯಾದವರಾಗಿದ್ದು,ಶಂಕರಲಿಂಗ ಬಿರಾದಾರ ಹತ್ಯೆಗೈದಿರುವ ಆರೋಪಿ ಎಂದು ತಿಳಿದು ಬಂದಿದೆ. ಅಂದ ಹಾಗೇ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕನ ಗಂಡ ಶಂಕರಲಿಂಗ ಬಿರಾದಾರ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು …
Read More »ಬಡತನದಲ್ಲಿ ಉತ್ತಮ ಅಂಕ ಪಡೆದ ಅಮಿತ್
ವಿಜಯಪುರ: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳ (Students) ಪರೀಕ್ಷಾ ಫಲಿತಾಂಶ (Exam Result) ಪ್ರಕಟಗೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ (Education Minister) ಬಿ.ಸಿ. ನಾಗೇಶ್ (B.C. Nagesh) ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು (Students) ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ (Girls) ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು (Boys) ಪಾಸ್ (Pass) ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ …
Read More »ಕೆಎಸ್‌ಆರ್ಟಿಸಿ ಬಸ್ – ಬೈಕ್ ನಡುವೆ ಡಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಸಾವು
ವಿಜಯಪುರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರದ ರಾಷ್ಟ್ರೀಯ ಹೆದ್ದಾರಿ 218ರ ಹೊರವಲಯದ ಗಾನಸಿರಿ ಸರ್ಕಲ್ ಬಳಿ ನಡೆದಿದೆ. ವಿಜಯಪುರ ಜಿಲ್ಲೆಯ ಮನಗೋಳಿ ಗ್ರಾಮದ ರಾಮನಗೌಡ ಶಂಕ್ರಪ್ಪ ಆಲಗೊಂಡ್ (70) ಮೃತ ದುರ್ದೈವಿಯಾಗಿದ್ದಾನೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬಿಜೆಪಿ ಶಾಸಕ ಯತ್ನಾಳ್ ಕುತೂಹಲದ ಹೇಳಿಕೆ
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಬಿಜೆಪಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ವರಿಗೆ ಸಚಿವ ಸ್ಥಾನ, ನಾಲ್ವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿ, ಸಂಪುಟದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬೇಕೆಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಎಲ್ಲ ಸಮುದಾಯ ಮತ್ತು ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಾಗುತ್ತದೆ …
Read More »ಅನ್ಯಧರ್ಮದಲ್ಲಿ ಜನಿಸಿದ್ದರೆ ಬಸವಣ್ಣ ವಿಶ್ವಖ್ಯಾತಿ ಪಡೆಯುತ್ತಿದ್ದ: ಶಿವಾನಂದ ಪಾಟೀಲ
ವಿಜಯಪುರ: ಬಸವಣ್ಣ ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೆ ಮಹ್ಮದ್ ಪೈಗಂಬರರನ್ನು, ಕ್ರೈಸ್ತ ಧರ್ಮದಲ್ಲಿ ಜನಿಸಿದ್ದರೆ ಏಸುವಿಗಿಂತ ಮಿಗಿಲಾಗಿ ಜಗತ್ತನ್ನು ಆವರಿಸಿರುತ್ತಿದ್ದರು. ಆದರೆ ಬಸವಣ್ಣ ಎಂಬ ಮಹಾನ್ ದಾರ್ಶನಿಕ ಕನ್ನಡ ನೆಲದ ಬಾಗೇವಾಡಿಯಲ್ಲಿ ನೆಲೆಸಿದ್ದರಿಂದ ಅವರ ವೈಚಾರಿಕ ಸಂದೇಶಗಳು ಜಗತ್ತಿನ ಮೂಲೆ ಮೂಲೆಗೆ ತಲುಪುವಲ್ಲಿ ವಿಫಲವಾಗಿದೆ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ಮಂಗಳವಾರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ …
Read More »ಈಶ್ವರಪ್ಪ ಹೇಳಿದ ಹಾಗೆ ಬೊಮ್ಮಾಯಿ ರಾಜೀನಾಮೆ ಖಚಿತ….ಡಿಕೆಶಿ ವಿಜಯಪುರದಲ್ಲಿ ಹೊಸ ಬಾಂಬ್
ವಿಜಯಪುರ: ರಾಜ್ಯ ಬಿಜೆಪಿ ಸರಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆ ಯಡಿಯೂರಪ್ಪ ಮೇಲೆ ವಿಶ್ವಾಸ ಕಳೆದುಕೊಂಡರೆಂದು ರಾಜೀನಾಮೆ ಪಡೆಯಲಾಯಿತು. ಅನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರಕಾರದ ಮೇಲೂ ಅವರದೇ ಸಚಿವರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡ ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ, ಆಡಳಿತ ಯಂತ್ರದ ಕುಸಿತದ ಕುರಿತು …
Read More »