ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್‍ಗಳ ಪ್ರಾಯೋಗಿಕ ಪರೀಕ್ಷೆಗೆ ಕೋಲಾರ ಜಿಲ್ಲೆ ಮುಂದಾಗಿದೆ. ಸುಮಾರು 6 ಸಾವಿರ ಮಂದಿಗೆ ರ‍್ಯಾಪಿಡ್ ಟೆಸ್ಟ್ ಮಾಡುವುದಕ್ಕೆ ಕೋಲಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ. ಎಲ್ಲೆಡೆ ಸಂಚಲನ ಮೂಡಿಸಿರುವ ಹಾಗೂ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿರುವ ರಕ್ತ ಮಾದರಿ ಹಾಗೂ ಗಂಟಲು ದ್ರವ ಸಂಗ್ರಹಿಸಿ ಎರಡು ದಿನಗಳ ಕಾಲ ವರದಿಗಾಗಿ ಕಾಯುವ ಬದಲಿಗೆ ಪ್ರಾಥಮಿಕ ಹಂತದಲ್ಲೆ ಪರೀಕ್ಷೆಗೆ …
Read More »ಸರ್ಕಾರದ ಖಜಾನೆ ಖಾಲಿ ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ:ಅಬಕಾರಿ ಸಚಿವ ಎಚ್.ನಾಗೇಶ್
ಕೋಲಾರ: ಸರ್ಕಾರದ ಖಜಾನೆ ಖಾಲಿಯಾಗಿದ್ದು, ಮುಖ್ಯಮಂತ್ರಿಗಳಿಗೆ ಮದ್ಯದಂಗಡಿಗಳನ್ನ ತೆರೆಯುವ ಒಲವಿದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ. ಕೋಲಾರದ ಜಿಲ್ಲಾಪಂಚಾಯತಿ ಬಳಿ ಮಾತನಾಡಿದ ಸಚಿವ ನಾಗೇಶ್ ಅವರು, ಮೇ 3ರ ನಂತರ ಮದ್ಯದಂಗಡಿಗಳನ್ನ ತೆರೆಯುವ ಮುನ್ಸೂಚನೆಯನ್ನು ನೀಡಿದರು. ಕೊರೊನಾ ಕಾರಣದಿಂದ ಸರ್ಕಾರಿ ಅಧಿಕಾರಗಳ ವೇತನ ನೀಡುವುದು ಸೇರಿದಂತೆ ಯೋಜನೆಗಳಿಗೆ ಹಣ ನೀಡಲು ಸರ್ಕಾರಕ್ಕೆ ತುಂಬಾ ಹೊರೆಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಮುಖ್ಯಮಂತ್ರಿಗಳು ಮದ್ಯದಂಗಡಿಗಳನ್ನು ತೆರೆಯುವ ಒಲವನ್ನು ಹೊಂದಿದ್ದಾರೆ. …
Read More »ವೈದ್ಯರ ಸಲಹೆ ಪಡೆದು ಮದ್ಯ ಸೇವನೆ ಬಿಟ್ಬಿಡಿ: ಅಬಕಾರಿ ಸಚಿವ ನಾಗೇಶ್ ಸಲಹೆ
ಕೋಲಾರ: ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ ಎನ್ನುವ ಮೂಲಕ ಮದ್ಯಪಾನಿಗಳ ಬಗ್ಗೆ ಸಚಿವ ಎಚ್.ನಾಗೇಶ್ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದಾರೆ. ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಿದ್ದೇವೆ. ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಡು ಬಿಡಿ ಎಂದು ಕಿವಿ ಮಾತು ಹೇಳಿದ್ರು. ತಾಳ್ಮೆ, ಚಟ ತ್ಯಜಿಸಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿರಿ. ಇನ್ನೂ ಇದೆ …
Read More »ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ…….
ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು …
Read More »ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ
ಕೋಲಾರ: ಕೊರೊನಾ ಮಹಾಮಾರಿ ಹರಡುವ ನಿಟ್ಟಿನಲ್ಲಿ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕುಟುಂಬವೊಂದು ಪೆಟ್ರೋಲ್ ಬಾಟಲ್ ನೊಂದಿಗೆ ಗ್ರಾಮ ಪಂಚಾಯ್ತಿಯ ಒಳಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಂತೇಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಕುಟುಂಬದವರನ್ನು ಕಳೆದ ಎರಡು ದಿನದ ಹಿಂದೆ …
Read More »ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ
ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪುಟಾಣಿ ಬಾಲಕಿಯೊರ್ವಳು ಮಾದರಿಯಾಗಿದ್ದಾಳೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮೂಲದ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್. ರಾಯಲ್ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಾಲಕಿ ನೀಡಿದ್ದಾಳೆ. ಕೋವಿಡ್-19 ಚಿಕಿತ್ಸೆಗಾಗಿ ತಾನೂ ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ …
Read More »ಮದ್ಯ ಸಿಗದ್ದಕ್ಕೆ ಕೋಲಾರದಲ್ಲಿ 8 ಮದ್ಯದಂಗಡಿ ಕಳವು, 6 ಕಳ್ಳಭಟ್ಟಿ ಪ್ರಕರಣ ದಾಖಲು
ಕೋಲಾರ: ಕೋಲಾರದಲ್ಲಿ ಮದ್ಯ ಸಿಗದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅನ್ಯ ಮಾರ್ಗಗಳನ್ನ ಕಂಡುಕೊಳ್ಳುತ್ತಿದ್ದು, ಮದ್ಯ ಕಳವು, ಕಳ್ಳಭಟ್ಟಿಯಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮದ್ಯದಂಗಡಿಗಳು ಬಂದ್ ಆದ ಕಾರಣ ಗಡಿ ಜಿಲ್ಲೆ ಕೋಲಾರದ ಜನರು ಕಳ್ಳಭಟ್ಟಿ, ಸೇಂದಿಗೆ ಮೊರೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಬಾರ್‍ಗಳಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮದ್ಯ ಕಳ್ಳತನ ಮಾಡುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯಲ್ಲಿ ಅಕ್ರಮ ಕಳ್ಳಬಟ್ಟಿ ಹಾಗೂ ಸೇಂಧಿ ಮಾರಾಟ, ಸಾಗಾಟ ನಿಯಂತ್ರಣಕ್ಕೆ ಬರುತ್ತಿಲ್ಲ. …
Read More »ಓಟಿ ಕ್ವಾಟರ್ ಗೆ 800 ರೂ, ಬಿಯರ್ 1 ಸಾವಿರ ರೂ. ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ
ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಳ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಬಾರ್‍ಗಳಲ್ಲಿ ಮದ್ಯ ಖಾಲಿಯಾಗಿದ್ದು, ಕೆಲವೇ ಬಾರ್‍ಗಳಲ್ಲಿ ಸ್ಟಾಕ್ ಇದೆ. ಬಾಗಿಲು ಕ್ಲೋಸ್ ಮಾಡಿ ಹಿಂದೆ ಬಾಗಿಲು ತೆರೆದು ಬಾರ್ ಮಾಲೀಕರು ಮಾರಾಟ ಮಾಡಲಾಗುತ್ತಿದೆ. ಹತ್ತು ಪಟ್ಟು ಹೆಚ್ಚಿನ …
Read More »ಕೋಲಾರ:ಸ್ವತಃ ಹೆಗಲ ಮೇಲೆ ಪೈಪ್‍ಗಳನ್ನು ಹೊತ್ತು ಸಾಗಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಾಮಾನ್ಯರಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಅನೇಕ ರಾಜಕಾರಣಿಗಳು ಮನೆಯಲ್ಲೇ ಕಳೆಯುತ್ತಿದ್ದರೆ, ಕೆಲವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಲಾಕ್‍ಡೌನ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್‍ನ ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ …
Read More »55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ
ಕೋಲಾರ: ಜಿಲ್ಲೆಯ ಮಾಲೂರಲ್ಲಿ 55 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಅಲ್ಲದೆ ರೈತರ ತೋಟಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ಧೈರ್ಯ ತುಂಬಿದರು. ಸಂಕಷ್ಟದಲ್ಲಿರುವ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಕೇಳುವುದರ ಜೊತೆಗೆ ಅವರು ಬೆಳೆದಿರುವ ತರಕಾರಿ ಖರೀದಿ ಮಾಡಿ ಜನರಿಗೆ ಹಂಚಲು ಕಾಂಗ್ರೆಸ್ ಮುಂದಾಗಿದೆ. ಎಲೆಕೋಸು, ಕ್ಯಾರೆಟ್, ಟೊಮ್ಯಾಟೋ, ಕ್ಯಾಪ್ಸಿಕಂ ತೋಟಗಳಿಗೆ ಡಿಕೆಶಿ ಭೇಟಿ ನೀಡಿದರು. ಅಲ್ಲದೆ …
Read More »
Laxmi News 24×7