ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್ಹೌಸ್ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ. ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ? ಅಥವಾ ಸಿಎಂ …
Read More »ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.
ಬೆಳಗಾವಿ: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಬೆಳಗಾವಿಯಲ್ಲಿ ಈಗ ಮತ್ತೆರಡು ಕುಡಿಗಳು ರಾಜಕೀಯ ಪ್ರವೇಶ ಮಾಡಲು ತಯಾರಾಗಿದ್ದು, ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ರಮೇಶ ಜಾರಕಿಹೊಳಿ ಪುತ್ರ ಅಮರನಾಥ ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಸತೀಶ್ ಜಾರಕಿಹೊಳಿಯ ಮಕ್ಕಳು ಇದೇ ಹಾದಿಯಲ್ಲಿದ್ದಾರೆ. 3 ದಶಕಗಳಿಂದ ರಾಜಕೀಯದಲ್ಲಿರುವ ಸತೀಶ್ ಈಗ ಮಕ್ಕಳಾದ ರಾಹುಲ್ ಹಾಗೂ ಪ್ರಿಯಂಕಾ ಅವರನ್ನು ರಾಜಕೀಯಕ್ಕೆ ಸಿದ್ಧಗೊಳಿಸುತ್ತಿದ್ದಾರೆ. ಇದೇ ಉದ್ದೇಶದಿಂದ ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಕನಿಷ್ಠ ಐದು ವರ್ಷ ಅವರು …
Read More »ಆರೋಗ್ಯ ಸಮಸ್ಯೆಯಿದ್ರೂ ರಾಗಿಣಿಗೆ ಸಿಗುತ್ತಿಲ್ಲ ಜಾಮೀನು!
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ‘ನಶೆ’ರಾಣಿ ರಾಗಿಣಿಗೆ ಹೊಸ ಸಮಸ್ಯೆ ಎದುರಾಗಿದೆ. ಆರೋಗ್ಯ ಸಮಸ್ಯೆಯಿದ್ರೂ ನಟಿಗೆ ಜಾಮೀನು ಸಿಗುತ್ತಿಲ್ಲ. ಜಾಮೀನು ಪಡೆಯಲು ಅವಕಾಶವಿದ್ರೂ ಅರ್ಜಿ ಸಲ್ಲಿಸಿಲ್ಲ. ಯಾಕಂದ್ರೆ ರಾಗಿಣಿ ಹಿರಿಯ ವಕೀಲರ ಹುಡುಕಾಟದಲ್ಲಿದ್ದಾರೆ. ಹೌದು ರಾಗಿಣಿ ಸಂಬಂಧಿಕರು ಹೈಕೋರ್ಟ್ ಮುಂದೆ ವಾದಿಸಲು ಯಾರು ಸೂಕ್ತವೆಂದು ಲಾಯರ್ನ ಹುಡುಕಾಟದಲ್ಲಿದ್ದಾರೆ. ರಾಗಿಣಿ ಈ ಪ್ರಕರಣದಲ್ಲಿ ಈಗಾಗಲೇ ಒಬ್ಬರು ವಕೀಲರನ್ನು ಬದಲಿಸಿದ್ದಾರೆ. ವಕೀಲ ಸುದರ್ಶನ್ ಬದಲಿಗೆ ಕಲ್ಯಾಣ್ಕೃಷ್ಣ ಬಂಡಾರು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ …
Read More »ರಾಜ್ಯದಲ್ಲಿ ಯಾಕೆ ಕಂಟ್ರೋಲ್ಗೆ ಬರ್ತಿಲ್ಲ ಕ್ರೂರಿ ಕೊರೊನಾ?
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗ ತಾನೇ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದೇವೆ. ಆದ್ರೆ ಈಗ ಮತ್ತೇ ಆ ದಿನಗಳು ಮರುಕಳಿಸುತ್ತಾ ಎಂಬ ಆತಂಕ ಉಂಟಾಗಿದೆ. ಮತ್ತೆ ವಾಪಸ್ ಬರುತ್ತಿದೆಯಾ ಹೋಂ ಕ್ವಾರಂಟೈನ್ ನಿಯಮಗಳು? ಎಂಬ ಪ್ರಶ್ನೆ ಎದ್ದಿದೆ. ಕರುನಾಡಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೂ ರಾಜಧಾನಿಯಲ್ಲಿಯೇ 3,362 ಮಂದಿ ಜೀವ ಕಳೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 3,498 ಮಂದಿಗೆ ವೈರಸ್ ಅಟ್ಯಾಕ್ ಆಗಿದೆ. ಇನ್ನು 2,85,055 ಸೋಂಕಿತರು …
Read More »ಕಡಲ ಒಡಲಲ್ಲಿ ನಾಪತ್ತೆಯಾಗುತ್ತಿರುವ ಮೀನುಗಾರರಿಗೆ ಬೇಕಿದೆ ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆ..
ಉಡುಪಿ: ಅರಬ್ಬೀ ಸಮುದ್ರ ಕಳೆದ ಒಂದೆರಡು ವರ್ಷಗಳಿಂದ ಆತಂಕದ ಸಮುದ್ರ ಆಗ್ತಿದೆ. ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಲೇ ಇವೆ. ದಡದಿಂದ ಹೊರಟು 15 ದಿನ ಸಮುದ್ರದಲ್ಲಿ ಜೀವನ ಮಾಡೋ ಕಡಲ ಮಕ್ಕಳು ಇದೀಗ ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಮೋದಿ ಸರ್ಕಾರದ ಮೀನುಗಾರಿಕಾ ಸಚಿವಾಲಯದ ಕದ ತಟ್ಟಿದ್ದಾರೆ. ಅರಬ್ಬೀ ಸಮುದ್ರ ಒಂದು ಕಾಲದಲ್ಲಿ ಸೇಫ್ ಸಮುದ್ರ ಎಂಬ ಖ್ಯಾತಿ ಪಡೆದಿತ್ತು. ಕಡಲ ಮಕ್ಕಳು ಕಸುಬು ಮಾಡಿ …
Read More »ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣ: CID ಕೈಗೆ ಸಿಕ್ಕಿಬಿದ್ದ ಖತರ್ನಾಕ್ಗಳು
ಬೆಂಗಳೂರು: ಕೋಟಿ-ಕೋಟಿ ಲೆಕ್ಕದಲ್ಲಿ ಹತ್ತಾರು ವರ್ಷಗಳಿಂದ್ಲೂ ವಹಿವಾಟು ನಡೆಸ್ತಿದ್ದ ಕೋಆಪರೇಟಿವ್ ಸೊಸೈಟಿ ಅದು. ಹೀಗೆ ಸಾವಿರಾರು ಗ್ರಾಹಕರ ನಂಬಿಕೆ ಗಳಿಸಿದ್ದ ಸೊಸೈಟಿ ಬ್ಯಾಂಕ್ನಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿದ್ದಾರೆ. ಆದ್ರೆ ಇತ್ತಿಚೇಗೆ ಬ್ಯಾಂಕ್ ವ್ಯವಹಾರ ಹಳ್ಳ ಹಿಡಿದಿತ್ತು. ಕಮಿಟಿ ಸದಸ್ಯರು ಅಧ್ಯಕ್ಷನ ಸಮೇತ ಎಸ್ಕೇಪ್ ಅಗಿದ್ರು. ಇದೀಗ ಖತರ್ನಾಕ್ ಕಮಿಟಿ ಗ್ಯಾಂಗ್ ಅನ್ನ CID ಪೊಲೀಸರು ಲಾಕ್ ಮಾಡಿದ್ದಾರೆ. ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ’ ಬಹುಕೋಟಿ ಅವ್ಯವಹಾರದ ತನಿಖೆಯನ್ನು …
Read More »ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಅಟ್ಯಾಕ್..
ರಾಯಚೂರು: ಕಾಂಗ್ರೆಸ್ ಪಕ್ಷದ ಮುಖಂಡನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಉದಯನಗರದಲ್ಲಿ ನಡೆದಿದೆ. ಸುಮಾರು 8ಜನರ ಗುಂಪು ಏಕಾಏಕಿ ಮನೆಗೆ ನುಗ್ಗಿ ಕಾಂಗ್ರೆಸ್ ಪಕ್ಷದ ಮುಖಂಡ ಲಾಲಪ್ಪ ನಾಯಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಗಾಯಾಳು ಲಾಲಪ್ಪ ನಾಯಕ್‌ಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ …
Read More »ಕೇಂದ್ರ ನೌಕರರಿಗೆ ಮೋದಿ ಬಂಪರ್ ಗಿಫ್ಟ್.. ಏನಿದು ಎಲ್‌ಟಿಸಿ ನಗದು ಯೋಜನೆ?
ದೆಹಲಿ: ದೇಶದಲ್ಲಿ ಕೊರೊನಾ ವೈರಸ್ನಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಸಂಪ್ರದಾಯಿಕವಲ್ಲದ ಯೋಜನೆಗಳಿಂದ ದೇಶದಲ್ಲಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಆರ್ಥಿಕತೆ ಚೇತರಿಕೆಯಾಗುವ ವಿಶ್ವಾಸವೂ ಇದೆ. ಇದಕ್ಕಾಗಿ ಹೊಸ ಯೋಜನೆ ಸಿದ್ಧವಾಗಿದೆ. ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ಜಿಡಿಪಿ ಕುಸಿಯುತ್ತಿದೆ. ಕೈಗಾರಿಕಾ ಉತ್ಪಾದನೆ ಕೂಡ ಕುಸಿದಿದೆ . ಈ ಪರಿಸ್ಥಿತಿ ಹೀಗೆ ಮುಂದುವರಿದರೇ, ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಉದ್ಯೋಗ ನಷ್ಟ ತಪ್ಪಿಸಲು ಬೇಡಿಕೆ …
Read More »ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಭೂ ಕಬಳಿಕೆ ಆರೋಪ, ನ್ಯಾಯ ಒದಗಿಸಿ ಎಂದು ರೈತರ ಅಳಲು
ನೆಲಮಂಗಲ: ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಪದೇಪದೆ ಭೂ ಕಬಳಿಕೆ ಆರೋಪ ಕೇಳಿಬರ್ತಿದೆ. 2007ರಲ್ಲಿ ಬಾಲಕೃಷ್ಣ ಅಧ್ಯಕ್ಷರಾಗಿದ್ದ ಜನತಾ ಎಜುಕೇಷನ್ ಸೊಸೈಟಿ ಹೆಸರಲ್ಲಿ ಕೋಟಿ ಕೋಟಿ ಬೆಲೆಬಾಳುವ ಗೋಮಾಳವನ್ನು ಹರಾಜಲ್ಲಿ ಖರೀದಿಸಿದ್ದು, ನಮಗೆ ಅನ್ಯಾಯ ಆಗಿದೆ ನ್ಯಾಯ ಒದಗಿಸಿ ಎಂದು ರೈತರು ಪೋಲಿಸರ ಮೊರೆ ಹೋಗಿದ್ದಾರೆ. ಬೆಂಗಳೂರಲ್ಲಿ ಭೂಮಿಯ ಬೆಲೆ ಗಗನ ಕುಸುಮವಾಗಿದೆ. ಇಂತಹ ಜಮೀನನ್ನು ಸ್ವಾಧೀನದಲ್ಲಿರುವ ರೈತರಿಗೆ ತಿಳಿಯದೇ ಹರಾಜು ಪ್ರಕ್ರಿಯಯಲ್ಲಿ ಅಕ್ರಮವಾಗಿ ಜನತಾ ಎಜುಕೇಷನ್ ಸೊಸೈಟಿಯವರು ಖರೀದಿಸಿದ್ದಾರೆ …
Read More »ರಾಜ್ಯದಲ್ಲಿ ಕೊಂಚ ತಗ್ಗಿದ ಕೊರೊನಾ ಸೋಂಕಿನ ಅಬ್ಬರ
ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 70 ಜನರು ಸತ್ತಿದ್ದಾರೆ ಮತ್ತು ಹೊಸದಾಗಿ 7,606 ಜನರಲ್ಲಿ ಸೋಂಕು ದೃಢಪಟ್ಟಿದೆಯೆಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿಯಿಂದ ಗೊತ್ತಾಗಿದೆ . ಮಹಾಮಾರಿಯಿಂದ ಇದುವರೆಗೆ ಮರಣಿಸಿದವರ ಸಂಖ್ಯೆ ಇಂದು ಹತ್ತು ಸಾವಿರ (10,036) ದಾಟಿದೆ . ಇಲ್ಲಿಯವರೆಗೆ 7,07,860 ಸೋಂಕು ತಾಕಿಸಿಕೊಂಡವರ ಪೈಕಿ 5,92,084 ಜನ ಗುಣಮುಖರಾಗಿ ಮನೆಗಳಿಗೆ ಹಿಂತಿರುಗಿದ್ದಾರೆ ಮತ್ತು ಉಳಿದ 1,15,776 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 18 ಜನ ಬಲಿಯಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 3,498 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ . ನಗರದಲ್ಲಿ ಇದುವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 3,362 ತಲುಪಿದೆ ಮತ್ತು …
Read More »