ಆನೇಕಲ್: ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. ಕಾಲೇಜ್ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ ಎಂದು ಮಧುಕರ್ ಅವರ ನಕಲಿ ಸಹಿ ಬಳಸಿಕೊಂಡು ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ದೂರು ದಾಖಲಿಸಿದ್ದರು. ದೂರು ಆಧರಿಸಿ ಸುಧೀರ್ ಅಂಗೂರ್, ಶೈಲಜಾ ಸೇರಿ …
Read More »ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರವೀಂದ್ರನಾಥ್ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಗೋಚರವಾಗುತ್ತಿದೆ. ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದಕ್ಕೆ ರವೀಂದ್ರನಾಥ್ ಅಸಮಧಾನಗೊಂಡು ಈ ರೀತಿ ನಿರ್ಧಾರ …
Read More »ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ.
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 17 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ. ರಕ್ಷಿಸಲ್ಪಟ್ಟ ಬಾಲಕಾರ್ಮಿಕರೆಲ್ಲ ಕೊಪ್ಪಳ, ಬಳ್ಳಾರಿ ಮೂಲದವರು. ಈ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಿದೆ. ಹಾಗೂ ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ರಕ್ಷಣೆಗೆ …
Read More »ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ನನ್ನು ಬಿಡುಗಡೆ ಮಾಡುತ್ತಿರುವುದು
ದೆಹಲಿ: ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ನನ್ನು ಬಿಡುಗಡೆ ಮಾಡುತ್ತಿರುವುದು ಶಾಂತಿಗಾಗಿ ಎಂದು ಹೇಳಿದ್ದ ಪಾಕಿಸ್ತಾನದ ನಿಜ ರೂಪ ಬಯಲಾಗಿದೆ. ಅಭಿನಂದನ್ ಬಿಡುಗಡೆಗೆ ಕಾರಣ ಬಯಲಾಗಿದೆ. ಭಾರತದ ಆ ಬಂದು ಮಾತಿಗೆ ಹೆದರಿ ಪಾಪಿ ಪಾಕಿಸ್ತಾನ ಬಾಲು ಮುದುಡಿಕೊಂಡಿತ್ತು. ಅಭಿನಂದನ್ ಬಿಡುಗಡೆ ಮಾಡದಿದ್ರೆ ಭಾರತದಿಂದ ದಾಳಿ ಆಗುವ ಆತಂಕಕ್ಕೆ ಪಾಕ್ ಸೇನೆ ಮುಖ್ಯಸ್ಥ ಖಮರ್ ಬಜ್ವಾ ಕಾಲುಗಳು ನಡುಗುತ್ತಿತ್ತು. 2019ರ ಪಾಕ್ ಸರ್ವಪಕ್ಷ …
Read More »ಮತ್ತೊಂದ್ಕಡೆ 2ನೇ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ.
ದೆಹಲಿ : ಕೊರೊನಾ ಬಿಕ್ಕಟ್ಟಿನ ನಡುವೆ ಬಿಹಾರ ಮೊದಲ ಹಂತದ ಮತದಾನ ಯಶಸ್ವಿಯಾಗಿದೆ. 1066 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತ್ತೊಂದ್ಕಡೆ 2ನೇ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ. ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಿರುಸಿನ ಮತದಾನ ನಡೆದಿದೆ. ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಕಂಡುಬಂದ ದೋಷದಿಂದಾಗಿ ವೋಟಿಂಗ್ ತಡವಾಗಿ ಆರಂಭವಾಗಿತ್ತು. ಇಂತಹ ಸಣ್ಣಪುಟ್ಟ ಘಟನೆಗಳನ್ನು …
Read More »ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ರೌಡಿಶೀಟರ್ಗಳನ್ನು ಸೇರಿ 10 ಜನರನ್ನು ಬಂಧಿಸಿದ್ದಾರೆ.
ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ರೌಡಿಶೀಟರ್ಗಳನ್ನು ಸೇರಿ 10 ಜನರನ್ನು ಬಂಧಿಸಿದ್ದಾರೆ. ರೌಡಿಶೀಟರ್ಗಳಾದ ಕಾರ್ತಿಕ್ ಅಲಿಯಾಸ್ ಚಪ್ಪರ್, ಹುಚ್ಚೆಗೌಡ ಅಲಿಯಾಸ್ ಹಂದಿ ಹುಚ್ಚ, ಹೇಮಂತ್ ಅಲಿಯಾಸ್ ಮಿಂಡ್ರಿ ಸೇರಿ 10 ಜನರು ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಆದ ಆರೋಪಿಗಳು ದರೋಡೆಗೆ ಸಂಚು ರೂಪಿಸಿದ್ದರು. ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ಗೆ ಸಜ್ಜಾಗಿದ್ರು. ಈ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆ ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ …
Read More »ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿ ಮತದಾರರಿಂದ ವೋಟು ಯಾಚಿಸಿದರು .
ನವೆಂಬರ್ 3 ರಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿ ಮತದಾರರಿಂದ ವೋಟು ಯಾಚಿಸಿದರು . ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತಾಡಿದ ಸಿದ್ದರಾಮಯ್ಯ , ಬಿಜೆಪಿಯ ಅಭ್ಯರ್ಥ ಮುನಿರತ್ನ ನಾಯ್ಡು ಎಲ್ಲ ಮತದಾರರಿಗೆ ಮೋಸ ಮಾಡಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸಲು ಇದು ಉತ್ತಮ ಅವಕಾಶ , ಪ್ರಜಾಪ್ರಭುತ್ವ ಉಳಿಯಬೇಕಾದರೆ ಮುನಿರತ್ನರನ್ನು ಸೋಲಿಸಲೇಬೇಕು ಎಂದು …
Read More »ಶಿರಾ ಮತ್ತು ರಾಜರಾಜೇಶ್ವರಿನಗರ ಉಪಚುನಾವಣೆಗಳಿಗೆ ಪ್ರಚಾರದ ಭರಾಟೆ ಉತ್ತುಂಗವನ್ನು ತಲುಪುತ್ತಿದ್ದಂತೆಯೇ ,
ನವೆಂಬರ್ 3 ರಂದು ನಡೆಯಲಿರುವ ಶಿರಾ ಮತ್ತು ರಾಜರಾಜೇಶ್ವರಿನಗರ ಉಪಚುನಾವಣೆಗಳಿಗೆ ಪ್ರಚಾರದ ಭರಾಟೆ ಉತ್ತುಂಗವನ್ನು ತಲುಪುತ್ತಿದ್ದಂತೆಯೇ , ಹಣದ ಆಮಿಷವೊಡ್ಡುತ್ತಿರುವ ಕುರಿತು ಅರೋಪ- ಪ್ರತ್ಯಾರೋಪಗಳ ಪ್ರಕ್ರಿಯೆಯೂ ಶುರುವಿಟ್ಟುಕೊಂಡಿದೆ . ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ , ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರನ್ನೊಳಗೊಂಡ ನಿಯೋಗವೊಂದು , ಶಿರಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಆರೋಪಿಸಿ ಮುಖ್ಯ ಚುನಾವಣೆ ಅಧಿಕಾರಿಗೆ ಇಂದು ದೂರು ನೀಡಿತು …
Read More »ಗೋಕಾಕ ಶೈಕ್ಷಣಿಕ ವಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಜಲಸಂಪನ್ಮೂಲ ಸಚಿವರಾದ ರಮೇಶ ಲ.ಜಾರಕಿಹೊಳಿ ಅವರು ಉಚಿತ ಲ್ಯಾಪ್ ವಿತರಿಸಿದರು.
ಗೋಕಾಕ: ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗೋಕಾಕ ಶೈಕ್ಷಣಿಕ ವಲಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಜಲಸಂಪನ್ಮೂಲ ಸಚಿವರಾದ ರಮೇಶ ಲ.ಜಾರಕಿಹೊಳಿ ಅವರು ಉಚಿತ ಲ್ಯಾಪ್ ವಿತರಿಸಿದರು. ಶೇ. 100 ರಷ್ಟು ಫಲಿತಾಂಶ ಸಾಧಿಸಿದ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ತಲಾ 7 ಶಾಲೆಗಳಿಗೆ ತಲಾ 25 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಿಸಿದರು. ಬಳಿಕ ಮಾತನಾಡಿದ ಅವರು, ಗೋಕಾಕ ಮತಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ …
Read More »ನಗರದಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ಪೂಜಾ ಸಾಮಗ್ರಿ ಖರೀದಿಸಲು ಹೋಗುತ್ತಿದ್ದ ವೃದ್ಧೆಯ ಸರ ಎಗರಿಸಿ ಕಳ್ಳ ಎಸ್ಕೇಪ್ ಆಗಿರುವ ಘಟನೆ
ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ ಮುಂದುವರೆದಿದೆ. ಪೂಜಾ ಸಾಮಗ್ರಿ ಖರೀದಿಸಲು ಹೋಗುತ್ತಿದ್ದ ವೃದ್ಧೆಯ ಸರ ಎಗರಿಸಿ ಕಳ್ಳ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಹಿಂಬದಿಯಿಂದ ಬೈಕ್ನಲ್ಲಿ ಬಂದ ಸರಗಳ್ಳ ಒಂದು ಕೈಯಲ್ಲಿ ಬೈಕ್ ಓಡಿಸುತ್ತ ಮತ್ತೊಂದು ಕೈಯಿಂದ ವೃದ್ಧೆಯ ಕತ್ತಿಗೆ ಕೈ ಹಾಕಿ ಸರ ಕದ್ದಿದ್ದಾನೆ. ಕಳೆದ ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ಸರೋಜಮ್ಮ ಎಂಬುವವರು ಪೂಜಾ ಸಾಮಗ್ರಿ …
Read More »