ಬೆಳಗಾವಿ-ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,ನಿರ್ದೇಶಕರ ಸ್ಥಾನಕ್ಕೆ ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ
ಬೆಳಗಾವಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ತಲಾ ಒಬ್ಬರು ನಿರ್ದೇಶಕರು ಚುನಾಯಿತರಾಗುತ್ತಾರೆ,ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮತ್ತು ಶಾಸಕ ಗಣೇಶ್ ಹುಕ್ಕೇರಿ ನಡುವೆ ಬಿಗ್ ಫೈಟ್ ನಡೆಯಲಿದೆ.
ಮುಂದುವರಿಸಲು ಸ್ಕ್ರೋಲ್ ಮಾಡಿ
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ, ಈ ಸ್ಥಾನ ಗಿಟ್ಟಿಸಿಕೊಳ್ಳಲು ಗಣೇಶ ಹುಕ್ಕೇರಿ ಫುಲ್ ತಯಾರಿ ಮಾಡಿಕೊಂಡಿದ್ದು,ಇಬ್ಬರ ನಡುವೆ ಬಿಗ್ ಫೈಟ್ ನಡೆಯುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ.
ಡಿಸಿಎಂ ಲಕ್ಷ್ಮಣ ಸವದಿ ಮತ್ತು ರಮೇಶ್ ಕತ್ತಿ ಗುಂಪು ಒಂದುಗೂಡಿಸಿ ಈ ಬಾರಿ ಹತ್ತೂ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ಮಾಡುವಂತೆ RSS ಸೂಚನೆ ನೀಡಿದೆ,ಆದ್ರೆ ಚಿಕ್ಕೋಡಿ ಮತ್ತು ಖಾನಾಪೂರ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆಯುವದು ಕಷ್ಟ.
ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಲು ಶಾಸಕ ಗಣೇಶ್ ಹುಕ್ಕೇರಿ ಪಟ್ಟು ಹಿಡಿದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಬಿಜೆಪಿ ನಾಯಕರು ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಮನವೊಲಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಬಿಜೆಪಿ ನಾಯಕರ ಸಂದಾನ ಸಫಲವಾದಲ್ಲಿ ಚಿಕ್ಕೋಡಿಯಲ್ಲೂ ಅವಿರೋಧ ಆಯ್ಕೆ ನಡೆಯಬಹುದು
ಖಾನಾಪೂರ ತಾಲ್ಲೂಕಿನಲ್ಲಿ ಎಂ ಈ ಎಸ್ ಮಾಜಿ ಶಾಸಕ ಅರವಿಂದ ಪಾಟೀಲ ನಿರ್ದೇಶಕರಾಗಿದ್ದಾರೆ,ಈ ಬಾರಿ ಅವರನ್ನು ಸೋಲಿಸಲು ಖಾನಾಪೂರ ತಾಲ್ಲೂಕಿನಲ್ಲಿ ಬಿಗ್ ಪಾಲಿಟಿಕ್ಸ್ ನಡೆಯುತ್ತಿದೆ. ಬಿಜೆಪಿ ನಾಯಕ ವಿಠ್ಠಲ ಹಲಗೇಕರ,ಶಾಸಕಿ ಅಂಜಲಿ ನಿಂಬಾಳ್ಕರ್ ಇಬ್ಬರೂ ತಯಾರಿ ಮಾಡಿಕೊಂಡಿದ್ದಾರೆ,ಕೊನೆಯ ಘಳಿಗೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿಠ್ಠಲ ಹಲಗೇಕರ ಅವರಿಗೆ ಬೆಂಬಲ ಸೂಚಿಸುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ.
https://youtu.be/-mjImckkvpc
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News