ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 996 ಲೀಟರ್ ಮದ್ಯವನ್ನು ವಾಹನ ಸಮೇತ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಗುಜರಾತ್‌ನ ಜೋಠಾಣಾ ತಾಲ್ಲೂಕಿನ ಕಡವಾಜಿ ಗುಲಬಾಜಿ ಠಾಕೂರ (48) ಹಾಗೂ ರಾಜೂಜಿ ಮನಾಜಿ ಠಾಕೂರ (37) ಬಂಧಿತರು. ವಾಹನದ ಮಾಲೀಕರನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. 4ನೇ ಆರೋಪಿ, ಗುಜರಾತ್‌ನಲ್ಲಿ ಅಕ್ರಮ ಮದ್ಯ ಪಡೆದು ಮಾರುತ್ತಿರುವ ವೀರಸಿಂಗ್ ಮಾನಾಜಿ ಠಾಕೂರ ಅವರನ್ನೂ ಬಂಧಿಸಬೇಕಾಗಿದೆ. ವಶಪಡಿಸಿಕೊಂಡ ವಾಹನ ಹಾಗೂ ಮದ್ಯದ ಒಟ್ಟು ಮೌಲ್ಯ ₹ 26.31 ಲಕ್ಷ ಆಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ಖಾನಾಪುರ ತಾಲ್ಲೂಕಿನ ಕಣಕುಂಬಿ ತನಿಖಾ ಠಾಣೆಯಲ್ಲಿ ತಪಾಸಣೆ ಮಾಡಿಗಾಗ, ವಾಹನದ ಹಿಂಭಾಗದಲ್ಲಿ ಪಾರ್ಟಿಷನ್ ಮಾಡಿ 567 ಲೀಟರ್ ಮದ್ಯ ಹಾಗೂ 429 ಲೀಟರ್ ಗೋವಾ ಬಿಯರ್ ಸಾಗಿಸುತ್ತಿದ್ದುದು ಪತ್ತೆಯಾಯಿತು’ ಎಂದು ಅಬಕಾರಿ ಉಪ ಸೂಪರಿಂಟೆಂಡೆಂಟ್ ಚನಗೌಡ ಎಸ್.