ಬೆಳಗಾವಿ : ಜೀವಂತ ಗುಂಡು ಸಮೇತ ಪ್ರಯಾಣಿಸುತ್ತಿದ್ದ ಯೋಧನೊಬ್ಬನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಸಂಕೇಶ್ವರದ ಹನುಮಾನ ನಗರದ ಸುಬೇದಾರ್ ಅರುಣ ಮಾರುತಿ ಭೋಸಲೆ ಕಳೆದೊಂದು ತಿಂಗಳ ಹಿಂದೆ ರಜೆ ಮೇಲೆ ಬಂದು ಮರಳಿ ಕರ್ತವ್ಯಕ್ಕೆಂದು ಕಾಶ್ಮೀರಕ್ಕೆ ಹೋಗಲು ಬೆಳಗಾವಿ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಎಕೆ 47ನ ಒಂದು ಜೀವಂತ ಗುಂಡು ಪತ್ತೆಯಾಗಿದೆ.
Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ-ಚೀನಾ ಯುದ್ಧ?
ಜೊತೆಗೆ ಒಂದು ಇನ್ಸಾಸ್ ಫೈರೆಡ್ ಕೇಸ್(ಖಾಲಿ ಗುಂಡು) ಪತ್ತೆಯಾಗಿದ್ದು, ಸೈನಿಕನನ್ನು ಪೊಲೀಸರು ಮರಾಠ ಲಘು ಪದಾತಿ ದಳ ವಶಕ್ಕೆ ನೀಡಿದ್ದಾರೆ.
ಸುಬೇದಾರ ಸುದೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕೇವಲ 6 ತಿಂಗಳು ಮಾತ್ರ ಸೇವಾವಧಿ ಇದೆ.