Breaking News

ಸಂಖ್ಯಾಬಲದ ಕೊರತೆಯಿಂದ ಬಿದ್ದುಹೋಯ್ತು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ

Spread the love

ಬೆಂಗಳೂರು,   ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಮೇಲೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಂಖ್ಯಾಬಲದ ಕೊರತೆಯಿಂದ ಬಿದ್ದು ಹೋಗಿದೆ.

ಅವಿಶ್ವಾಸ ನಿರ್ಣಯದ ಬಗ್ಗೆ ಎರಡನೇ ಪ್ರತಿಪಕ್ಷ ಜೆಡಿಎಸ್‍ ತಟಸ್ಥ ನಿಲುವು ಅನುಸರಿಸಿತ್ತು. ಅವಿಶ್ವಾಸವನ್ನು ವಿಭಜನೆಯ ಮತಕ್ಕೆ ಹಾಕುವುದಾದರೆ ಕೊರೊನಾ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ಪಿಪಿಇ ಕಿಟ್‍ ಹಾಕಿಸಿ ವಿಧಾನಸಭೆಗೆ ಕರೆ ತರುವುದಾಗಿ ಬಿಜೆಪಿ ಹೇಳಿತ್ತು.

ಈ ಕುರಿತಂತೆ ಬೆಳಗ್ಗೆ ನಡೆದ ಚರ್ಚೆಯಲ್ಲಿ ಸೋಂಕಿತರು ಅಧಿವೇಶನಕ್ಕೆ ಬರುವುದು ಬೇಡ, ವಿಭಜನೆಯ ಮತದ ಬದಲು ದ್ವನಿಮತದ ಮೂಲಕ ಅವಿಶ್ವಾಸ ನಿರ್ಣಯ ಇತ್ಯರ್ಥವಾಗಲಿ ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಹಾಗಾಗಿ ತಡ ರಾತ್ರಿ 11 ಗಂಟೆಯವರೆಗೂ ನಡೆದ ಚರ್ಚೆಯಲ್ಲಿ ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸರ್ಕಾರದ ಪರವಾಗಿ ಉತ್ತರ ನೀಡಿದರು.

ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಗಲಭೆ ಪ್ರಕರಣದ ಬಗ್ಗೆ ಸುಧೀರ್ಘ ಉತ್ತರ ನೀಡಿದರು. ಆರೋಪಿ ನವೀನ್‍ ವಿರುದ್ಧ ಪ್ರಕರಣ ದಾಖಲಾಗಿದೆ, ತಕ್ಷಣ ಬಂಧಿಸಲಾಗಿದೆ. ಆರೋಪಿ ನವೀನನ್ನು ನಮ್ಮ ವಶಕ್ಕೆ ಕೊಡಿ ಎಂದು ಗುಂಪು ಬೇಡಿಕೆ ಮುಂದಿಟ್ಟಿದೆ. ಯಾರೇ ಬಂದರೂ ಗಲಭೆ ನಿಯಂತ್ರಣಕ್ಕೆ ಬರುವುದಿಲ್ಲ. ಶಾಸಕರಾದ ಜಮೀರ್ ಅಹಮದ್‍, ರಿಜ್ವಾನ್ ಅರ್ಹದ್ ಪ್ರಯತ್ನಿಸಿದರೂ ಗುಂಪು ಮಾತು ಕೇಳಲ್ಲ ಎಂದರು.

ಗಲಭೆಯನ್ನು ಕಾಂಗ್ರೆಸ್ ನ ಒಳ ಜಗಳ ಎಂದು ಅಲ್ಲಿನ ಜನ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಒಬ್ಬರು ಶಾಸಕರಿದ್ದಾರೆ, ಮತ್ತೊಬ್ಬರು ಶಾಸಕರಾಗಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಇಬ್ಬರನ್ನು ಕೂರಿಸಿ ಸಂಧಾನ ಮಾಡಿದ್ದರೆ ಗಲಭೆಯಾಗುತ್ತಿರಲಿಲ್ಲ ಎಂದರು.

ಅಷ್ಟು ಗಲಾಟೆಯಾಗಿ ಗಾಯವಾಗಿದೆ. ಒಬ್ಬರು ಆಸ್ಪತ್ರೆಗೆ ದಾಖಲಾದ ಮಾಹಿತಿ ಇಲ್ಲ. ಎಲ್ಲವೂ ಪೂರ್ವನಿಯೋಜಿತ, ಪೊಲೀಸರು ಎಲ್ಲಿಂದ ಬರುತ್ತಾರೆ ಎಂದು ತಿಳಿದುಕೊಂಡು ರಸ್ತೆ ಬಂದ್ ಮಾಡಿದ್ದಾರೆ. ಯಾಕ್ರಿ ಶಾಸಕರ ಮನೆಗೆ ಬೆಂಕಿ ಹಾಕಿದರಿ, ಪೊಲೀಸ್‍ಠಾಣೆಗೆ ಬೆಂಕಿ ಹಾಕಿದಿರಿ ಎಂದು ಹೇಳಿದಾಗ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತ ಪಡಿಸಿದರು.

ಚರ್ಚೆ, ಉತ್ತರದ ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ಯಡಿಯೂರಪ್ಪ ಅವರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕರವಾಗಿದೆ ಎಂದು ಸಭಾಧ್ಯಕ್ಷ ಪ್ರಕಟಿಸಿದರು. ಸದನವನ್ನು ಅನಿರ್ಧಿಷ್ಠಾವಧಿವರೆಗೂ ಮುಂದೂಡಿದರು


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ