ಬೆಳಗಾವಿ : ಕೊರೋನಾದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಮನನೊಂದು ತಾಯಿ ಹಾಗೂ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.
ಹಲಗಾ ಗ್ರಾಮದ ಭಾರತಿ ಶೇಖರ ದೇಸಾಯಿ (35) ಹಾಗೂ ಪ್ರಜ್ವಲ್ ಶೇಖರ ದೇಸಾಯಿ (14) ಆತ್ಮಹತ್ಯೆಗೆ ಶರಣಾದವರು. ಕಳೆದ ಕೆಲವು ವರ್ಷಗಳಿಂದ ಹಲಗಾ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ವಾಸಗಿದ್ದ ಕುಟುಂಬಕ್ಕೆ ಕೊರೋನಾದಿಂದ ಜಾರಿಗೊಳಿಸಿದ್ದ ಲಾಕಡೌನ್‌ನಿಂದಾಗಿ ಸರಿಯಾಗಿ ಕೂಲಿ ಸಿಗದೆ ಇರುವುದರಿಂದ ಆರ್ಥಿಕ ಸಂಕಷ್ಟಎದುರಾಗಿತ್ತು.
ತನಗೆ ಕೊರೋನಾ ಚಿಕಿತ್ಸೆ ನೀಡಿದ ವೈದ್ಯರಿಗೆ ಕೈಯಾರೆ ಬೆಳೆದ ಅಕ್ಕಿ ನೀಡಿದ ವೃದ್ಧ..! …
ಇದರಿಂದ ಮನನೊಂದ ಭಾರತಿ ಹಾಗೂ ಪ್ರಜ್ವಲ್ ಹಲಗಾ ಗ್ರಾಮದಲ್ಲಿರುವ ಸ್ವೀಟ್‌ಮಾರ್ಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಹಿಳೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾನೆ.
ಕೊರೋನಾ ಮಹಾಮಾರಿ ವಿಶ್ವಕ್ಕೆ ಅಪ್ಪಳಿಸಿದ ಬಳಿಕ ದೇಶದ ಆರ್ಥಿಕ ಸ್ಥಿತಿಯೂ ಕೂಡ ಹದಗೆಟ್ಟಿದ್ದು, ಇದರಿಂದ ಜನಜೀವನ ಸಾಕಷ್ಟು ಸಮಸ್ಯೆ ಎದುರಿಸುವಂತಾಯ್ತು. ಈ ರೀತಿಯ ಘಟನೆಗಳು ಹಲವು ಬಾರಿ ಮರುಕಳಿಸುತ್ತಲೇ ಇವೆ.