Breaking News

ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ

Spread the love

ಪಡ್ಡೆ ಹುಡುಗರ ಕನಸಸಿನ ರಾಣಿ ಬಾಲಿವುಡ್ ನಟಿ ಪೂನಂ ಪಾಂಡೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಹುಕಾಲದ ಗೆಳೆಯ ಸ್ಯಾಮ್​ನನ್ನು ವರಿಸಿದ್ದರು. ಆದರೆ ಈಗ ಗಂಡನ ವಿರುದ್ಧವೇ ದೂರು ನೀಡಿದ್ದಾರೆ.

 ಹೌದು ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಕಿರುಕುಳ ನೀಡಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆಯನ್ನು ಪೊಲೀಸರು ಗೋವಾದಲ್ಲಿ ಅರೆಸ್ಟ್ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್​ 11ರಂದು ಪೂನಂ ಪಾಂಡೆ ತನ್ನ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ಸದ್ಯ ಪೂನಂ ಪಾಂಡೆ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಸ್ಯಾಮ್ ಅಲ್ಲಿಗೆ ಬಂದು ಪೂನಂ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


Spread the love

About Laxminews 24x7

Check Also

ಅಕ್ಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸ

Spread the loveಬೋರಗಾಂವ: ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಗಡಿ ಕಾಯುವ ಸೈನಿಕರನ್ನು ಎಲ್ಲರೂ ಗೌರವಿಸಬೇಕು ಎಂದು ಮಾಜಿ ಸಂಸದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ