ಬೆಂಗಳೂರು, ಏ.30- ಮತ್ತೊಮ್ಮೆ ರಾಜ್ಯದಲ್ಲಿ ಕೊರೊನಾ ಸೋಂಕು ಅಬ್ಬರಿಸಿದೆ. ಇಂದು ಮಧ್ಯಾಹ್ನದವರೆಗೂ ನಡೆದ ಪರೀಕ್ಷೆಯಲ್ಲಿ 22 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 557ಕ್ಕೇರಿದೆ. 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 223 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಈವರೆಗೂ ಹಸಿರು ವಲಯವಾಗಿದ್ದ ತುಮಕೂರಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಹಿರೇಬಾಗವಾಡಿಯಲ್ಲಿ 12, ಹುಕ್ಕೇರಿಯಲ್ಲಿ ಎರಡು, ಬೆಂಗಳೂರು ನಗರದಲ್ಲಿ ಮೂರು ಮಂದಿಗೆ, ವಿಜಯಪುರದಲ್ಲಿ ಎರಡು, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 501ರ ಸಂಪರ್ಕದಿಂದ 58 ವರ್ಷದ ಮಹಿಳೆಯಲ್ಲಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ದಾವಣಗೆರೆ 69 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ತುಮಕೂರಿನಲ್ಲಿ ನಿನ್ನೆ ಸಾವನ್ನಪ್ಪಿದ 73 ವರ್ಷದ ಪುರುಷನ ಜೊತೆ ಸಂಪರ್ಕದಲ್ಲಿದ್ದ 65 ವರ್ಷದ ಮಹಿಳೆಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಇನ್ನೂ ಬೆಂಗಳೂರು ನಗರದಲ್ಲಿ ಪಾದಾರಾಯನಪುರ ವಾರ್ಡ್‍ಗೆ ಭೇಟಿ ನೀಡಿದ 20 ಮತ್ತು 28 ವರ್ಷದ ಯುವಕರಲ್ಲಿ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 63 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 221ರ ಸಂಪರ್ಕದಿಂದ 62 ವರ್ಷದ ಪುರುಷ, 33 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಹದಿನಾಲ್ಕು ಮಂದಿಗೆ ಸೋಂಕು ತಗುಲಿದೆ. ಇಂದು ಪತ್ತೆಯಾಗಿರುವ ಸೋಂಕು ಪ್ರಕರಣಗಳಲ್ಲಿ ಬಹುತೇಕ ತಬ್ಲಿಘೀ ಸಂಪರ್ಕವೇ ಮೂಲವಾಗಿದೆ. ಸೋಂಕಿತರ ದ್ವಿತೀಯ ಸಂಪರ್ಕದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ನೆರ ಹೊರೆ ಮತ್ತು ಸಂಬಂಧಿಕರಿಗೆ ಸೋಂಕು ಹರಡಿದೆ.
ಹುಕ್ಕೇರಿ ತಾಲ್ಲೂಕಿನಲ್ಲಿ ರೋಗಿ ಸಂಖ್ಯೆ 293ರ ಸಂಪರ್ಕದಿಂದ 9 ವರ್ಷದ ಬಾಲಕ, 75 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಹಿರೇಬಾಗೇವಾಡಿಯಲ್ಲಿ ಮೂರು ಮಂದಿ ಸೋಂಕಿತರ ಸಂಪರ್ಕದಿಂದ 24 ವರ್ಷದ ಯುವತಿ ಸೋಂಕಿತಳಾದರೆ,
483ರ ಸಂಖ್ಯೆಯ ರೋಗಿ ಸಂಪರ್ಕದಿಂದ 27 ವರ್ಷದ ಯುವಕ, 486ರ ಸಂಪರ್ಕದಿಂದ 24 ವರ್ಷದ ಯುವತಿಗೆ, 16 ವರ್ಷದ ಬಾಲಕನಿಗೆ, 36 ವರ್ಷದ ಮಹಿಳೆಗೆ, 496ರ ಸಂಪರ್ಕದಿಂದ 18 ವರ್ಷದ ಯುವಕನಿಗೆ, 36 ವರ್ಷದ ಪುರುಷನಿಗೆ, 494ರ ಸಂಪರ್ಕದಿಂದ 48 ವರ್ಷದ ಮಹಿಳೆ,
483ರ ಸಂಪರ್ಕದಿಂದ 50 ವರ್ಷದ ಪುರುಷನಿಗೆ, 27 ವರ್ಷದ ಮಹಿಳೆಗೆ, 484ರ ಸಂಪರ್ಕದಿಂದ 43 ವರ್ಷದ ಪುರುಷನಿಗೆ, 293ರ ಸಂಪರ್ಕದಿಂದ 8 ವರ್ಷದ ಬಾಲಕಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆಯ ಹೆಲ್ತï ಬುಲೇಟಿನ್ ತಿಳಿಸಿದೆ. ಇಂದು ಏಳು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.