Breaking News

ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ,-ಬೆಳಗಾವಿ-5……

Spread the love

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ವೇಳೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೀದರ್ ಮತ್ತು ವಿಜಯಪುರದಲ್ಲಿ  ಇಬ್ಬರು ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್ 55 ವರ್ಷ ಮಹಿಳೆ ಮತ್ತು ವಿಜಯಪುರ 82 ವರ್ಷ ಮಹಿಳೆಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ  ಮಾರಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 59 ಕ್ಕೆ ಏರಿದೆ.

ಯಾದಗಿರಿ ಮತ್ತು ಉಡುಪಿ  ಜಿಲ್ಲೆಯಲ್ಲಿಂದು  ನೂರಕ್ಕಿಂತ ಹೆಚ್ಚಿನ ಕೇಸ್ ಪತ್ತೆಯಾಗಿವೆ. ಬಹುತೇಕ ಸೋಂಕಿತರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.

ಜಿಲ್ಲಾವಾರು ಅಂಕಿ ಅಂಶ:

ಯಾದಗಿರಿ-103

ಉಡುಪಿ- 123

ಬೆಳಗಾವಿ-5

ದಾವಣಗೆರೆ-6

ಹಾಸನ-3

ಬೀದರ-1

ರಾಯಚೂರು-2

ಕಲಬುರಗಿ-68

ಬೆಂಗಳೂರು ನಗರ-18

ಕೋಲಾರ-1

ಹಾವೇರಿ-3

ಮಂಡ್ಯ-3

ದ. ಕನ್ನಡ-24

ಉ. ಕನ್ನಡ-2

ವಿಜಯಪುರ-6

ಚಿಕ್ಕಬಳ್ಳಾಪುರ-2

 


Spread the love

About Laxminews 24x7

Check Also

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Spread the love ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ