ಬೆಂಗಳೂರು: ಕೊರೊನಾ ಬಗ್ಗೆ ಗಮನ ಕೊಡಿ, ಬಾಕಿ ವಿಚಾರ ನಮಗೆ ಬಿಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ.
ಸದ್ಯ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಮಾತು ಜೋರಾಗಿ ಕೇಳಿ ಬರುತ್ತಿದೆ. ಆದರೆ ನೇರವಾಗಿ ಇದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಪರೋಕ್ಷವಾಗಿ ಬಂಡಾಯದ ಮಾತುಗಳನ್ನು ಆಡುತ್ತಿದ್ದಾರೆ. ಈ ವಿಚಾರವಾಗಿ ಅಮಿತ್ ಶಾ ಅವರು ಯಡಿಯೂರಪ್ಪನವಿಗೆ ಕರೆ ಮಾಡಿ ಮಾತನಾಡಿದ್ದು, ಈ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಶುಕ್ರವಾರ ರಾತ್ರಿ ಗಂಟೆಗೆ ಅಮಿತ್ ಶಾ ಬಿಎಸ್‍ವೈಗೆ ಕರೆ ಮಾಡಿದ್ದು, ಕೊರೊನಾ ನಿಯಂತ್ರಣ ಬಗ್ಗೆ ಮಾತ್ರ ಗಮನ ಕೊಡಿ. ಬೇರೆ ವಿಚಾರಗಳ ಬಗ್ಗೆ ನಮಗೆ ಬಿಟ್ಟುಬಿಡಿ. ಬಾಕಿ ಎಲ್ಲ ನಾವು ನೋಡಿಕೊಳ್ಳುತ್ತೇವೆ. ಕರ್ನಾಟಕದಲ್ಲಿ ಏನಾಗ್ತಿದೆ ಎಂದು ನಮಗೆ ಗೊತ್ತಿದೆ. ಈ ಯಾವುದೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಮಿತ್ ಶಾ ಯಡಿಯೂರಪ್ಪನವರಿಗೆ ಕರೆ ಮಾಡಿ ಹೇಳಿದ್ದಾರೆ ಎಂದು ಮೂಲಕಗಳಿಂದ ಮಾಹಿತಿ ಲಭಿಸಿದೆ.

Laxmi News 24×7