Breaking News

ಬಿಕ್ಲು ಶಿವ ಕೊಲೆ ಕೇಸ್ – ಬೈರತಿ ಬಸವರಾಜ್‌ಗೆ ಜಾಮೀನು

Spread the love

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣ ಆರೋಪಿ ಶಾಸಕ ಬೈರತಿ ಬಸವರಾಜ್  ಅವರಿಗೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾ ಬಳಿಕ ಅವರನ್ನು ಬಂಧಿಸಲಾಗಿತ್ತು.

ಫೆ.12 ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಬೈರತಿ ಬಸವರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಆರೋಗ್ಯ ತಪಾಸಣೆ ನಡೆಸಿದ್ದ ವೇಳೆ ಅವರಿಗೆ ಇಸಿಜಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರಿಗೆ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್ ಮಾಡಿಸಲಾಗಿತ್ತು.

ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಬೈರತಿ ಬಸವರಾಜ್‌ಗೆ ಅಲ್ಲಿಯೂ ಹಿನ್ನಡೆಯಾಗಿತ್ತು.

ಕೊಲೆ ಪ್ರಕರಣದಲ್ಲಿ ಸರಣಿ ಘಟನೆಗಳು ಪೂರಕವಾಗಿ ನಡೆದಿವೆ. 2 ಗುಂಪುಗಳು ಜಗಳ ಆಡುವಾಗ ಆರೋಪಿತ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಸ್ತಿಯ ಜಿಪಿಎ ತೋರಿಸಿದ್ದಾರೆ. ಬಿಕ್ಲು ಶಿವನಿಗೆ ತಾಯಿಯ ಮುಂದೆ ಗನ್ ತೋರಿಸಲಾಗಿದೆ. ಕಾಲ್ ರೆಕಾರ್ಡ್ ಪರಿಶೀಲನೆ ನಡೆಸಿದಾಗ ಗನ್ ಹೊಂದಿರುವ ವ್ಯಕ್ತಿ ಜಗದೀಶ್ ಜೊತೆಗೆ ಸಂಪರ್ಕ ಹೊಂದಿದ್ದರು. ಬಳಿಕ ಇವರು ಶ್ರೀಲಂಕಾಕ್ಕೆ ಪಲಾಯನ ಮಾಡಿದ್ದಾರೆ. ಬೈರತಿ ಬಸವರಾಜ್ ವಿಚಾರಣೆ ಎದುರಿಸಬೇಕು. ಈ ಹಿಂದೆ ನಿರೀಕ್ಷಣಾ ಜಾಮೀನು ಪಡೆದಾಗ ಹೇಗೆ ಇರಬೇಕು ಅಂತ ಗೊತ್ತಿಲ್ವಾ ಅಂತ ಕೋರ್ಟ್ ಗರಂ ಆಗಿ ಪ್ರಶ್ನಿಸಿತ್ತು.


Spread the love

About Laxminews 24x7

Check Also

ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ

Spread the loveಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ