ಬೆಳಗಾವಿ: ಭಾರತ್ ಬಂದ್ ಹಿನ್ನೆಲೆಯಲ್ಲಿ ಕುಂದಾನಗರಿಯಲ್ಲಿ ಪ್ರತಿಭಟನಾ ಕಾವು ಏರುತ್ತಿದ್ದು, ಬೆಳಗಾವಿ ಬಸ್ ನಿಲ್ದಾಣದ ಮುಂದೆ ವಿವಿಧ ರೈತ ಸಂಘಟನೆಗಳು ಟೈರ್ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿವೆ.
ಇಂದು ಭಾರತ ಬಂದ್ಗೆ ಕರೆ ನೀಡಲಾಗಿದೆ. ಕೇಂದ್ರದ ಮೂರು ಕೃಷಿ ಕಾಯ್ದೆ, ಖಾಸಗೀಕರಣ ಹಾಗೂ ಬೆಲೆ ಏರಿಕೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಇಂದು ಬೀದಿಗೆ ಇಳಿದಿವೆ. ಜಿಲ್ಲೆಯಲ್ಲಿ ಕೂಡ ಪ್ರತಿಭಟನೆ ಜೋರಾಗಿದ್ದು ಬಸ್ ಬಂದ್ ಮಾಡುವಂತೆ ವಿವಿಧ ಸಂಘಟನೆಗಳು ಬಸ್ ನಿಲ್ದಾಣದ ಮುಂದೆ ಪಟ್ಟು ಹಿಡಿದಿದ್ದು ನಿಲ್ದಾಣಕ್ಕೆ ಬರುತ್ತಿರುವ ಬಸ್ಗಳಿಗೆ ತಡಿಯೊಡ್ಡಿ ವಾಪಸ್ ಕಳಿಸುತ್ತಿದ್ದಾರೆ.