ಮೂಡಲಗಿ: ಅರಬಾಂವಿ ಕ್ಷೇತ್ರದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರ ಸಹಕಾರದಿಂದ ಕೊರೋನಾ ಸೈನಿಕರ ಸೇವೆಯಿಂದ ಸಾಧ್ಯವಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಅವರು ಸಮೀಪದ ಖಾನಟ್ಟಿ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಾದ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಹಾದಿಮನಿ ಅವರು ಕೊರೋನಾ ಸಂತಸ್ತರ 100 ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ಗಳನ್ನು ಹಂಚುವ ಸಂದರ್ಭದಲ್ಲಿ ಮಾತನಾಡಿ, ಶಾಸಕರು ತಮ್ಮ ಕ್ಷೇತ್ರದ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ಕರೆದು ವೈರಸ್ ಹರಡದಂತೆ ಯಾವ ರೀತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿತ್ತಿದ್ದಾರೆ. ಅದು ಅಲ್ಲದೇ ಅರಬಾಂವಿ ಕ್ಷೇತ್ರದ ಜನತೆಗೆ ಮಾಸ್ಕ್ ನೀಡಿ, ಅನಾವ್ಯಕವಾಗಿ ಮನೆಯಿಂದ ಹೊರಗೆಡೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಸರಕಾರದ ನೀತಿ ನಿಯಮಾವಳಿಗಳನ್ನು ಪಾಲಿಸ ಬೇಕು ಎಂದು ಹೇಳಿದರು.
ಗ್ರಾಪಂ. ಅಧ್ಯಕ್ಷೆ ದ್ಯಾಮವ್ವ ಹಾದಿಮನಿ ಮಾತನಾಡಿ, ಕೊರೋನಾ ವೈರಸ್ ಹಿನ್ನೆಲೆ ಗ್ರಾಮದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಇರುವುದರಿಂದ ಬಡ ಜನರಿಗೆ ದಿನಸಿ ವಸ್ತುಗಳ ಕೊರತೆ ಉಂಟಾಗಬಾರದೆಂದು ಶಾಸಕರ ಅಭಿಮಾನದ ಮೇರಿಗೆ ಗ್ರಾಮದ 100 ಬಡ ಕುಟುಂಬಗಳಿಗೆ ವಿರತಣೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರೀ ಸಾಯಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಮರೇಪ್ಪ ಮರೇಪ್ಪಗೊಳ, ಮಾಜಿ ತಾಪಂ ಸದಸ್ಯ ಈಶ್ವರ ತುಪ್ಪದ, ರಮೇಶ ಮೇತ್ರಿ, ಟಿಎಪಿಎಮ್‍ಸಿ ನಿರ್ಧೇಶಕ ಯಂಕನಗೌಡ ಪಾಟೀಲ, ಗುತ್ತಿಗೆದಾರ ಸಿದ್ದಪ್ಪ ಹಾದಿಮನಿ, ಪಿಕೆಪಿಎಸ್ ಅಧ್ಯಕ್ಷ ಗುರು ಪಾಟೀಲ, ವಿಲ್ಸನ್ ಮೇತ್ರಿ, ಸುಭಾಸ ತುಪ್ಪದ, ಗುರು ಪಾಟೀಲ್, ಶಿವಲಿಂಗಪ್ಪ ದೊಡಮನಿ, ಹಾಲಪ್ಪ ಹಾದಿಮನಿ, ಲಕ್ಷ್ಮಣ ರಡೇರಹಟ್ಟಿ, ಚರ್ಚ ಪಾಸ್ಟರ್ ಧನ್ಯಕುಮಾರ, ಸುನೀಲ ಖಾನಟ್ಟಿ, ಮುದಕಪ್ಪ ಪೋತರಾಜ, ಶಂಕರ ಮೇತ್ರಿ, ಧನಪಾಲ ಮೇತ್ರಿ, ಅಶೋಕ ಪೋತರಾಜ, ತುಕಾರಾಮ ಹಾದಿಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.