Breaking News

Laxminews 24x7

ಅಂಜುಮನ್ ಸಂಸ್ಥೆಯಿಂದ ಆರೋಗ್ಯ ಸೇವೆ

ಬೆಳಗಾವಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಸಮಿತಿಯು ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಸಿದ್ಧತೆ ಮಾಡಿಕೊಂಡಿದೆ. ಲಕ್ಷಣಗಳಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದು ಮನೆಗಳಲ್ಲಿ ಆರೈಕೆಯಲ್ಲಿರುವವರಿಗೆ ಅಥವಾ ಇತರ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡವರಿಗೆ ಚಿಕಿತ್ಸಾ ಸೇವೆ ನೀಡಲಿದೆ. ರೋಗಿಗಳ ಮನೆಗಳಿಗೇ ಕಳುಹಿಸುವುದಕ್ಕೆಂದು ಈಗಾಗಲೇ 120 ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಿ ಸಂಗ್ರಹಿಸಿದೆ. ಸಿಲಿಂಡರ್‌ ಒಂದನ್ನು ₹ 9,500ಕ್ಕೆ ಖರೀದಿಸಲಾಗಿದೆ. …

Read More »

ಕೆಮ್ಮುತ್ತಿದ್ದ ಹುಡುಗಿಯನ್ನು ನೋಡಿ ಕೊರೊನಾ, ಕೊರೊನಾ ಎಂದೆ… ಆದರೆ!

ಮೈಸೂರು: ನಾನು ಕೋವಿಡ್-19 ಪೀಡಿತನಾಗಿದ್ದು ನನ್ನ ತಪ್ಪಿನಿಂದಲೇ. ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಕೆಮ್ಮುತ್ತಿದ್ದಳು. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಆಕೆಯನ್ನು ರೇಗಿಸಿದೆ. ಕೊರೊನಾ… ಕೊರೊನಾ… ಎಂದೆ. ಇದರಿಂದ ಸಿಟ್ಟಾದ ಆಕೆ ನೇರವಾಗಿ ನನ್ನ ಬಳಿ ಬಂದು ಕೆಮ್ಮಿದಳು. ನನಗೆ ಬಂದಿದ್ದರೆ, ನಿಮಗೂ ಬರಲಿ ಅಂದಳು. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣ ನಾನು ಮಾಸ್ಕ್‌ಅನ್ನು ಕುತ್ತಿಗೆಗೆ ಇಳಿಸಿಕೊಂಡಿದ್ದೆ. ಅದೇ ಪರಿಸರದಲ್ಲಿ ಉಸಿರಾಡಿದ್ದೆ. ಎರಡ್ಮೂರು ದಿನ ಕಳೆಯೋದರೊಳಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡವು. ನನಗೆಲ್ಲಿ …

Read More »

ಆಗಸ್ಟ್ 31 ರವರೆಗೆ ಮಹಾರಾಷ್ಟ್ರ ಲಾಕ್‌-ಡೌನ್ ವಿಸ್ತರಣೆ

  ಮುಂಬೈ: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಬುಧವಾರ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಒಳಗೊಂಡಿರುವ ತುರ್ತು ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.   ಮಿಷನ್ ಬಿಗಿನ್ ಎಗೇನ್ ಉಪಕ್ರಮದ ಭಾಗವಾಗಿ, ಚಿತ್ರಮಂದಿರಗಳು, ಆಹಾರ ಮಳಿಗೆಗಳು, ನ್ಯಾಯಾಲಯಗಳು, ರೆಸ್ಟೋರೆಂಟ್‌ಗಳಿಲ್ಲದ ಮಾಲ್‌ಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳು ಆಗಸ್ಟ್ …

Read More »

ಚೀನಕ್ಕೆ ಭಾರತದ ತಿರುಗೇಟು..

ಹೊಸದಿಲ್ಲಿ: ಲಡಾಖ್‌ನಲ್ಲಿ ತಿಂಗಳುಗಳಿಂದ ಭಾರತಕ್ಕೆ ಕಿರಿಕಿರಿ ಉಂಟು ಮಾಡಿದ್ದ ಚೀನ, ಈಗ ದಕ್ಷಿಣದ ಹಿಂದೂ ಮಹಾ ಸಾಗರದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ, ಭಾರತೀಯ ನೌಕಾಪಡೆ ತನ್ನ ಸಮರ ನೌಕೆಗಳನ್ನು ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ (ಐಒಆರ್‌) ನಿಯೋಜಿಸಿ, ಚೀನಕ್ಕೆ ಸೆಡ್ಡು ಹೊಡೆದಿದೆ.   ಚೀನಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಶೇ. 80ರಷ್ಟು ಸರಕು ಹಿಂದೂ ಮಹಾ ಸಾಗರದ ಮೂಲಕವೇ ಹಾದು ಹೋಗುವುದರಿಂದ ಆ ಸಮುದ್ರ ಭಾಗವನ್ನು ತನ್ನ …

Read More »

50ಕ್ಕೂ ಹೆಚ್ಚು ಜನರನ್ನ ಕೊಲೆಗೈದ ಆರೋಪದಲ್ಲಿ ಆಯುರ್ವೇದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದಿಲ್ಲಿ: ದಿಲ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಜನರನ್ನ ಕೊಲೆಗೈದ ಆರೋಪದಲ್ಲಿ ಆಯುರ್ವೇದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಆಲಿಘರ್ ನಿವಾಸಿಯಾಗಿದ್ದ ದೇವೇಂದರ್ ಶರ್ಮಾ(62) ಬಂಧಿತ. ಹಲವು ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಕಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದದ್ದಕ್ಕಾಗಿ ಬಂಧಿಸಲಾಗಿತ್ತು . ಕಿಡ್ನಿ ದಂಧೆ ಪ್ರಕರಣದಲ್ಲಿ ಜೈಪುರದ ಸೆಂಟ್ರಲ್ ಜೈಲಿನಲ್ಲಿ ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬಳಿ ತಪ್ಪಿಸಿಕೊಂಡಿದ್ದನು …

Read More »

ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

ಉಡುಪಿ: ಜಿಲ್ಲೆಯ ಬಕ್ರೀದ್ ಆಚರಣೆಗೆ ಕೊರೊನ ಮಹಾಮಾರಿ ಅಡ್ಡಗಾಲು ಇಟ್ಟಿದೆ. ಮುಸಲ್ಮಾನರ ಪವಿತ್ರ ಮತ್ತು ಅದ್ಧೂರಿ ಹಬ್ಬ ಬಕ್ರೀದ್ ಈ ಬಾರಿ ಕಳೆ ಕಟ್ಟಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮುಸಲ್ಮಾನರು ಈ ಬಾರಿ ಸರಳವಾಗಿ ಬಕ್ರೀದ್ ಆಚರಿಸಲು ನಿರ್ಧಾರ ಮಾಡಿದಂತಿದೆ. ಪ್ರತಿ ವರ್ಷ ಬಕ್ರೀದ್ ಬಂದಾಗ ಉಡುಪಿ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಾಲ್ಕು ದಿನದಲ್ಲಿ ಸಾವಿರದ ಇನ್ನೂರು ಆಡು ಮತ್ತು ಕುರಿ ವ್ಯಾಪಾರ ಆಗುತ್ತಿತ್ತು. ಈ ಬಾರಿ ಕೇವಲ 250 ರಿಂದ …

Read More »

ಆ್ಯಂಟಿಜೆನ್ ಟೆಸ್ಟ್‌ಗೆ ಹೆದರಿ ಮಾರುಕಟ್ಟೆಯನ್ನೇ ಬಂದ್ ಮಾಡಿದ ವ್ಯಾಪಾರಸ್ಥರು!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಹಾವಳಿ ಜೋರಾಗುತ್ತಿದಂತೆ ಜಿಲ್ಲಾಡಳಿತ ಆ್ಯಂಟಿಜೆನ್ ಟೆಸ್ಟ್‍ಗೆ ಮುಂದಾಗಿದೆ. ನಗರದ ಜನನಿಬಿಡ ಪ್ರದೇಶ, ಮಾರುಕಟ್ಟೆಗಳಲ್ಲಿ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಈ ಟೆಸ್ಟ್ ಗೆ ಹೆದರಿ ಹುಬ್ಬಳ್ಳಿಯಲ್ಲಿ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿದ್ದಾರೆ.   ಹುಬ್ಬಳ್ಳಿಯ ದುರ್ಗದ ಬೈಲ್ ಸೇರಿದಂತೆ ಅವಳಿನಗರದ 15 ಕಡೆಗಳಲ್ಲಿ ಧಾರವಾಡ ಜಿಲ್ಲಾಡಳಿತ ಇಂದಿನಿಂದ ರ‍್ಯಾಪಿಡ್ ಟೆಸ್ಟ್ ಆರಂಭಿಸಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹುಬ್ಬಳ್ಳಿಯ ದುರ್ಗದ ಬೈಲ್ ಗೆ ಭೇಟಿ …

Read More »

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಆತಂಕದ ಮಧ್ಯೆಯೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಧೈರ್ಯ ದಿಂದ ಗುರುವಾರ ಸಿಇಟಿ ಪರೀಕ್ಷೆ ಬರೆದರು.

ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಆತಂಕದ ಮಧ್ಯೆಯೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಧೈರ್ಯ ದಿಂದ ಗುರುವಾರ ಸಿಇಟಿ ಪರೀಕ್ಷೆ ಬರೆದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ- 6, ಗೋಕಾಕ-4. ಅಥಣೀ-3, ರಾಯಬಾಗ-1,ಮತ್ತು ಹುಕ್ಕೇರಿ-1 ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಳಾಗಿತ್ತು. ಒಟ್ಟು 6247 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಅವರಲ್ಲಿ 690 ಗೈರು ಹಾಜರಾಗಿದ್ದು, 5557 ವಿದ್ಯಾರ್ಥಿಗಳು ಪರೀಕ್ಷೆ ಬರೆದರು …

Read More »

ಜಯಲಲಿತಾ ನಿವಾಸದಲ್ಲಿ 4 ಕೆಜಿ ಚಿನ್ನ 601 ಕೆಜಿ ಬೆಳ್ಳಿ ಪತ್ತೆ..!

ಚೆನ್ನೈ,ಜು.30- ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ 4 ಕೆಜಿ ಚಿನ್ನ, 601 ಕೆಜಿ ಬೆಳ್ಳಿ ಸಿಕ್ಕಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಜಯಲಲಿತಾ ವಾಸವಿದ್ದ ವೇದ ನಿಲಯಂ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್ ಫೌಂಡೇಷನ್‍ಗೆ ಕಳುಹಿಸಿಕೊಡುತ್ತಿದೆ. ಸರ್ಕಾರ ನಿವಾಸದಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದ್ದು, ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು …

Read More »

ಕುಮಾರಸ್ವಾಮಿ ಅವರೀಗೇ ಬಿಜೆಪಿ ಮೇಲೆ ಸ್ವಲ್ಪ ಲವ್ ಆಗಿದೆ.:ಹೊರಟ್ಟಿ

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಈ ಕುರಿತು ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಸಭೆ ಕರೆದು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. , ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಮೇಲೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಆದರೆ ಅವರು …

Read More »