ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ನಟ-ನಟಿಯರು ಮನೆಯಲ್ಲಿ ಇರಿ, ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಸ್ಯಾಂಡಲ್‍ವುಡ್ ನಟಿಯೊಬ್ಬರು ಲಾಕ್‍ಡೌನ್ ಇದ್ದರೂ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ಇಂದು ನಸುಕಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು …
Read More »ಬೆಳಗಾವಿ ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ದೃಢ ವಿಚಾರ ಪೇಷಂಟ್ ನಂಬರ್ 128 – 20 ವರ್ಷದ ಯುವಕನ ಟ್ರಾವೆಲ್ ಹಿಸ್ಟರಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆ ವಿಚಾರವಾಗಿ ಸೋಂಕು ಪೀಡಿತ ವ್ಯಕ್ತಿ ಸಂಖ್ಯೆ 126ರ ಟ್ರಾವೆಲ್ ಹಿಸ್ಟ್ರಿ ಹೀಗಿದೆ ಮಾರ್ಚ್ 4 ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಆಗಮನ. ನಂತರ ಎಂದಿನಂತೆ ಕಸಾಯಿ ಖಾನೆ ಕೆಲಸದಲ್ಲಿ ಭಾಗಿ. ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದರ ಹಿನ್ನಲೆಯಲ್ಲಿ ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರಿಗೂ ಜಿಲ್ಲಾಡಳಿತ ತೀವ್ರ ಹುಡುಕಾಟ …
Read More »ಸಂಪೂರ್ಣ ಬಂದ್ “ಆಡಿಯೋ ತುಣುಕು” ನಕಲಿ ಇಂತಹ ಅನಧಿಕೃತ ಮತ್ತು ಸುಳ್ಳು ಸುದ್ದಿಗಳನ್ನು ನಂಬಿ ಆತಂಕಕ್ಕೆ ಒಳಗಾಗಬಾರದು.
ಸಂಪೂರ್ಣ ಬಂದ್ “ಆಡಿಯೋ ತುಣುಕು” ನಕಲಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟನೆ ಬೆಳಗಾವಿ, ಏ.೪: ಕರೊನಾ ಹಿನ್ನೆಲೆಯಲ್ಲಿ ಶನಿವಾರ(ಏ.೪)ದಿಂದ ಸೋಮವಾರದವರೆಗೆ ದಿನಸಿ, ತರಕಾರಿ ಮಾರಾಟ ಸೇರಿದಂತೆ ಎಲ್ಲವೂ ಸಂಪೂರ್ಣ ಬಂದ್ ಎಂಬ “ನಕಲಿ ಆಡಿಯೋ” ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವ ಪ್ರತಿಯೊಂದು ಕ್ರಮಗಳ ಕುರಿತು ಲಿಖಿತ …
Read More »ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆ ಈಗ ಬೆಳಗಾವಿಯಲ್ಲಿ ಪುಲ್ ಹೈ ಅಲರ್ಟ…
ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆ ಈಗ ಬೆಳಗಾವಿಯಲ್ಲಿ ಪುಲ್ ಹೈ ಅಲರ್ಟ… ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಜನತೆಯಲ್ಲಿ ಆತಂಕ ಹೆಚ್ವಿಸಿದೆ, ಬೆಳಗಾವಿಯ ವಿವಿಧ ಬಡಾವಣೆಯ ಸಂಪರ್ಕ ರಸ್ತೆಯನ್ನು ಬಂದ್ ಮಾಡುತ್ತಿರುವ ಸ್ಥಳಿಯರು. ಹೊರಗಿನಿಂದ ಬರುವವರು ಮತ್ತು ಬಡಾವಣೆಯಲ್ಲಿರುವವರು ಹೊರ ಹೋಗದಂತೆ ಬೇಲಿ ಹಾಕಿದ ದೃಶ್ಯ ಬೆಳಗಾವಿಯಲ್ಲಿ ಎಲ್ಲೆಡೆ ನೋಡಬಹುದಾಗಿದೆ. ಬೆಳಗಾವಿ ಯಮನಾಪು ಮತ್ತು ಬಿ ಕೆ ಕಂಗ್ರಾಳ ಗ್ರಾಮದಲ್ಲಿ ರಸ್ತೆ,ಆಂಜನೇಯ …
Read More »ಬಳ್ಳಾರಿ: ಪ್ರತಿ ಮನೆಗೆ ಬರಲಿದೆ ತರಕಾರಿ ಸಂಚಾರಿ ವಾಹನ
ಬಳ್ಳಾರಿ: ಕೊರೊನಾ ಮಾಹಾಮಾರಿಗೆ ಈಡಿ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ಅನೇಕ ದಾನಿಗಳು ಬಡವರಿಗೆ ನೆರವಾಗುತ್ತಿದ್ದಾರೆ. ಬಳ್ಳಾರಿಯ ಆರ್ಯವೈಶ್ಯ ಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಜಿಲ್ಲಾಡಳಿತ ಸಹಾಯಕ್ಕೆ ದಾವಿಸಿದ್ದು, ಈ ಎರಡು ಸಂಸ್ಥೆಗಳು ಜೊತೆಗೂಡಿ ತಲಾ 400 ರೇಷನ್ ಕಿಟ್‍ಗಳಂತೆ ಒಟ್ಟು 800 ರೇಷನ್ ಕಿಟ್‍ಗಳನ್ನು ಬಳ್ಳಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಪ್ರತಿ ಒಂದು ಕಿಟ್‍ನಲ್ಲಿ ದಿನ ನಿತ್ಯ ಬೇಕಾಗುವ ವಿವಿಧ ಬಗೆಯ ಧಾನ್ಯಗಳ ಇದ್ದು, ಜಿಲ್ಲಾಧಿಕಾರಿ …
Read More »ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೂ ದಿನಸಿ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ದಿನಸಿ, ತರಕಾರಿ ಖರೀದಿಸಬಹುದಾಗಿದೆ. ತಮ್ಮ ವಾಹನಗಳಲ್ಲಿ ಬೇರೆ ಕಡೆ …
Read More »ದೀಪ ಹಚ್ಚಿದ್ರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತೆ: ರಾಮ್‍ದಾಸ್
ಮೈಸೂರು: ದೀಪ ಹಚ್ಚಿದ್ರೆ ವೈರಸ್ ದೀಪದ ಬಳಿ ಬರುತ್ತೆ. ಈ ವೇಳೆ ದೀಪದ ಶಾಖಕ್ಕೆ ವೈರಸ್ ಸಾಯುತ್ತೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ. ಮೈಸೂರಿನಲ್ಲಿ ದೀಪದ ಕುರಿತು ವಿಶೇಷ ವ್ಯಾಖ್ಯಾನ ನೀಡಿದ ಅವರು, ಮೋದಿಯವರ ದೀಪ ಬೆಳಗುವ ಕರೆಯ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದಕ್ಕಾಗಿಯೇ ದೀಪ ಹಚ್ಚಲು ದೇಶಾದ್ಯಾಂತ ಕರೆ ನೀಡಿದ್ದಾರೆ ಎಂದರು. ಕತ್ತಲಿನಲ್ಲಿ ದೀಪ ಹಚ್ಚಿದರೆ ಎಲ್ಲೆ ಇದ್ದರೂ ವೈರಸ್ ದೀಪದ ಬಳಿ ಬರುತ್ತೆ. …
Read More »ಬಾಗಲಕೋಟೆಯಲ್ಲಿ ಕೊರೊನಾಗೆ ಮೊದಲ ಬಲಿ………….
ಬಾಗಲಕೋಟೆ: ಕೊರೊನಾ ವೈರಸ್ ಗೆ ಜಿಲ್ಲೆಯಲ್ಲಿ ಮೊದಲ ಬಲಿ(ರೋಗಿ ನಂಬರ್. 125)ಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 75 ವರ್ಷದ ವೃದ್ಧ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ವೃದ್ಧ ಮಾರ್ಚ್ 31ರಂದು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಯಾವುದೇ ವಿದೇಶ, ರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ಗುರುವಾರ ವೃದ್ಧನಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ವೃದ್ಧನ ಮಗ ಮತ್ತು ಮಗಳು ಹತ್ತು …
Read More »ಬೆಂಗಳೂರು:ಉಚಿತ ಹಾಲಿಗಾಗಿ ಮುಗಿಬಿದ್ದ ಜನ
ಬೆಂಗಳೂರು: ಲಾಕ್‍ಡೌನ್ ಮುಗಿಯುವರೆಗೂ ಬಡವರಿಗೆ ಉಚಿತ ಹಾಲು ವಿತರಣೆ ಮಾಡುವಂತೆ ಸಿಎಂ ಯಡಿಯೂರಪ್ಪ ಫೋಷಣೆ ಮಾಡಿದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಉಚಿತ ಹಾಲಿಗಾಗಿ ಜನರು ಮುಗಿಬಿದ್ದಿದ್ದಾರೆ. ಬೆಂಗಳೂರಿನ ಪಂತರಪಾಳ್ಯ, ಕಮಲನಗರದಲ್ಲಿ ತಂಡೋಪ ತಂಡವಾಗಿ ಜನರು ಬಂದು ಉಚಿತವಾಗಿ ಹಾಲು ಪಡೆಯುತ್ತಿದ್ದಾರೆ. ಅಲ್ಲದೇ ಹಾಲಿಗಾಗಿ ಕಿಲೋ ಮೀಟರ್‌ಗಟ್ಟಲೇ ಕ್ಯೂನಲ್ಲಿ ಜನರು ನಿಂತಿದ್ದಾರೆ. ಹಾಲು ಪಡೆಯಲು ಬಂದವರು ಮಾಸ್ಕ್ ಹಾಕಿಲ್ಲ, ಜೊತೆಗೆ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಜನರು …
Read More »ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿ ಸಾವು……….
ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ಮೃತ ದುರ್ದೈವಿ. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ. ಟೆಕ್ಕಿ ಜ್ವರ, ನೆಗಡಿ, ಕೆಮ್ಮ, ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತ ಮಾದರಿ ಹಾಗೂ ಥ್ರೋಟ್ ಸ್ವ್ಯಾಬ್ ಅನ್ನು ಶಿವಮೊಗ್ಗಕ್ಕೆ ರವಾನೆ …
Read More »