Breaking News

Laxminews 24x7

ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮಕ್ಕಳ ಸೇರಿ ಮೂವರು ಸೋಂಕಿನಿಂದ ಗುಣಮುಖ

ದಾವಣಗೆರೆ: ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮಕ್ಕಳ ಸೇರಿ ಮೂವರು ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಸಂಸದರು ಆರೋಗ್ಯ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಮಗಳು ಮತ್ತು‌ ಮಗ ಸೇರಿದಂತೆ ಇನ್ನೊಬ್ಬ ಯುವಕ 16 ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹಗಲಿರುಳು ಶ್ರಮಿಸಿದ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಧನ್ಯವಾದ ಎಂದು ಅವರು ಹೇಳಿದ್ದಾರೆ. ನಮ್ಮ ಜಿಲ್ಲೆ ಸದ್ಯ ಕೊರೊನಾ ಮುಕ್ತ. ಜನರು ಇನ್ನಷ್ಟು ಜಾಗೃತಿಯಿಂದ …

Read More »

ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ಬಿಜೆಪಿನಾಯಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌.

ಉತ್ತರ ಪ್ರದೇಶ: ದೇಶದ ಜನತೆ ಒಗ್ಗಟ್ಟಿನಿಂದ ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಪ್ರಧಾನಿ ಮೋದಿ ದೀಪ ಹಚ್ಚುವ ಅಭಿಯಾನ‌ಕ್ಕೆ ಕರೆ ನೀಡಿದ್ದರು. ಆದ್ರೆ ಉತ್ತರಪ್ರದೇಶದ ಬಲರಾಮಪುರದ ಬಿಜೆಪಿ ನಾಯಕಿ ಮಂಜು ತಿವಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌. ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ನಾಯಕಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲು ತನ್ನ ಬಳಿ ಇದ್ದ ಗನ್ ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಅಲ್ಲದೇ ಗುಂಡು …

Read More »

ಕೊರೊನಾ ಪರೀಕ್ಷೆಗೆ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್

ಬೆಂಗಳೂರು,ಏ.6- ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ಭಾರತದಲ್ಲಿ ಸೋಂಕಿತರ ತಪಾಸಣೆಗಾಗಿ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್ ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ. ಇದರಂತೆ ಹಾಸನ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬೆಂಗಳೂರಿನ ಕಮಾಂಡೋ ಆಸ್ಪತ್ರೆ (ಭಾರತೀಯ ವಾಯುಪಡೆ), ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ವಲಯ ಘಟಕ, …

Read More »

ರಾಜ್ಯದ ಕೆಲವೆಡೆ ಮಳೆರಾಯನ ಅಬ್ಬರ – ಸಿಡಿಲು ಬಡಿದು ರೈತ ಸಾವು

ಬೆಂಗಳೂರು: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ. ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಹಳ್ಳೂರಿನಲ್ಲಿ ಸಿಡಿಲು ಹೊಡೆದು ರೈತ ಗುಂಡಪ್ಪ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಗುಡುಗು, ಸಿಡಿಲ ಮಳೆಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಭಾರೀ ಅನಾಹುತ ತಪ್ಪಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ …

Read More »

ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

ಜೋಹಾನ್ಸ್‍ಬರ್ಗ್, ಏ.5-ಭಾರತದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ-ಎ-ಜಮಾತ್ ಮರ್ಕೆಜ್ ಬೃಹತ್ ಧಾರ್ಮಿಕ ಸಭೆಯ ದುಷ್ಪರಿಣಾಮ ಈಗ ಜಗತ್ತಿನ ಕೆಲ ಭಾಗಗಳಲ್ಲೂ ಗೋಚರಿಸುತ್ತಿದ್ದು, ಸಾವು ಮತ್ತು ಸೋಂಕುಗಳ ವರದಿಯಾಗುತ್ತಿವೆ. ಈ ಸಭೆಯಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ್ದ ಧರ್ಮ ಗುರು ಒಬ್ಬರು ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದ ಮೂಲಗಳೇ ದೃಢಪಡಿಸಿವೆ. ದೆಹಲಿಯಲ್ಲಿ ಮಾರ್ಚ್ 15ರಂದು ನಡೆದ ತಬ್ಲೀಘಿ …

Read More »

ದಾವಣಗೆರೆ:ವರುಣನ ಆರ್ಭಟ – ಮನೆಗೆ ನುಗ್ಗಿದ ನೀರು,,,,,..

ದಾವಣಗೆರೆ: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ. ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ಆದರೆ ದಾವಣಗೆರೆಯಲ್ಲಿ ರಾತ್ರಿ ಇಡೀ ಸತತ ಮಳೆ ಸುರಿದಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ದಾವಣಗೆರೆ ನಗರದ ಬೇತೂರ ರಸ್ತೆಯ ಆನೆಕೊಂಡ ಎಕೆ ಕಾಲೋನಿಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನರು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಕಡೆ ರಸ್ತೆಯಲ್ಲಿ …

Read More »

ಧಾರವಾಡದ ಜನರಿಗೆ ಗುಡ್ ನ್ಯೂಸ್ – ಜಿಲ್ಲೆಯ ಕೊರೊನಾ ಸೋಂಕಿತ ಗುಣಮುಖ

ಹುಬ್ಬಳ್ಳಿ: ಕೋವಿಡ್-19 ಪಾಸಿಟಿವ್ ಸೋಂಕು ತಗುಲಿದ್ದ ಧಾರವಾಡದ ಹೊಸಯಲ್ಲಾಪುರ ನಿವಾಸಿ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗರಕ್ಕೆ ಮಾರ್ಚ್ 12ರಂದು ಆಗಮಿಸಿದ್ದ 33 ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಆದ್ದರಿಂದ ಮಾರ್ಚ್ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾರ್ಚ್ 18 ರಿಂದ 21ರವರೆಗೆ ಎಸ್‍ಡಿಎಂ …

Read More »

ಬೆಂಗಳೂರು:ಅಂಬುಲೆನ್ಸ್‌ನಲ್ಲಿ ಗುಜರಿ ವಸ್ತುಗಳ ಸಾಗಾಟ

ಬೆಂಗಳೂರು: ಯಾರೂ ಹಿಡಿಯುವುದಿಲ್ಲ, ಪರಿಶೀಲನೆ ನಡೆಸುವುದಿಲ್ಲ ಎಂದು ಕಳ್ಳತನ ಮಾಡಿದ್ದ ಗುಜರಿ ವಸ್ತುಗಳನ್ನು ಅಂಬುಲೆನ್ಸ್ ನಲ್ಲಿ ಸಾಗಾಟ ಮಾಡುತ್ತಿದ್ದರು. ಶಿವಾಜಿ ನಗರದ ರೆಸಲ್ ಮಾರ್ಕೆಟ್‍ನಲ್ಲಿ ಸತೀಶ್, ಮಹೇಶ್ ಗುಜರಿ ಸಾಮಾನುಗಳನ್ನು ಹರ್ಷಿಣಿ ಹೆಸರಿನ ಅಂಬುಲೆನ್ಸ್ ಮೂಲಕ ಸಾಗಾಟ ಮಾಡುತ್ತಿದ್ದರು. ವಾಹನಗಳ ಟೈರ್, ಟ್ಯೂಬ್ ಸೇರಿದಂತೆ ಹಲವು ಗುಜರಿ ವಸ್ತುಗಳನ್ನು ಖದೀಮರು ಅಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಅನುಮಾನ ಬಂದು ಪೊಲೀಸರು ಅಂಬುಲೆನ್ಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗುಜರಿ ಸಾಮಾನು …

Read More »

ಕೊರೊನಾಗೆ 24 ಗಂಟೆಯಲ್ಲಿ 27 ಸಾವು – ಸೋಂಕಿತರ ಸಂಖ್ಯೆ 4,200ಕ್ಕೆ ಏರಿಕೆ

ಬೆಂಗಳೂರು: 27 ಜನರು ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ತಲುಪಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ …

Read More »

ಕೊರೊನಾ ಅಂಧಕಾರದ ವಿರುದ್ಧ ಬೆಳಕಿನ ಯುದ್ಧ – ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

ಬೆಂಗಳೂರು: ಮನುಕುಲದ ಹೆಮ್ಮಾರಿ, ಮಹಾಮಾರಿ, ಕೊರೊನಾ ವೈರಸ್ ಮೂಡಿಸಿರೋ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನ ಜನ ಭರ್ಜರಿ ಬೆಂಬಲ ಸೂಚಿಸಿದ್ದಾರೆ. ದೇಶಾದ್ಯಂತ ದೀಪಾವಳಿಯಂತೆ ಜನ ದೀಪ ಹಚ್ಚುತ್ತಿದ್ದಾರೆ. ಮನೆಗಳ ಲೈಟ್ಸ್ ಆಫ್ ಮಾಡಿ, ದೇವರ ಮನೆ, ಮನೆ ಒಳಗೆ, ಮನೆ ಆವರಣ, ತುಳಸಿ ಗಿಡ, ಬಾಲ್ಕನಿ, ಟೆರೆಸ್‍ಗಳಲ್ಲಿ ದೀಪ, ಮೇಣದ ಬತ್ತಿ, ಮೊಬೈಲ್ ಫ್ಲ್ಯಾಶ್ ಹಾಗೂ ಟಾರ್ಚ್‍ಗಳ …

Read More »