ಬೆಂಗಳೂರು: ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಪಕ್ಷ ಕೇಳಿರುವ ಐದು ಪ್ರಶ್ನೆಗಳಿಗೆ 10 ಪ್ರಶ್ನೆಗಳನ್ನು ಕೇಳುವ ಮೂಲಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯ ಬಿಜೆಪಿ ಏನಾದರೂ ಮರೆತುಬಿಟ್ಟಿದೆಯಾ ಹೇಗೆ? ಪ್ರಶ್ನೆ ಕೇಳುವ ಅಷ್ಟೊಂದು ಹುಚ್ಚಿದ್ದರೆ ಮರ್ಯಾದೆಯಿಂದ ರಾಜೀನಾಮೆ …
Read More »ವಾರದ ಸಂತೆಗೆ ಪರ್ಯಾಯ ವ್ಯವಸ್ಥೆ : ಗೋಕಾಕ ವಾಲ್ಮೀಕಿ ಕ್ರೀಡಾಂಗಣಕ್ಕೆ ಸ್ಥಳಾಂತರ
ಗೋಕಾಕ : ಸಾಮಾಜಿಕ ಅಂತರ ಕಾಯ್ದುಕೊಂಡು ವಾರದ ಸಂತೆಯನ್ನು ನಡೆಸಲು ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿರುವ ಮಾರುಕಟ್ಟೆಯನ್ನು ವಾಲ್ಮೀಕಿ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ಮೈದಾನದಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಗುರುತು( ಮಾರ್ಕಿಂಗ್ ) ಮಾಡಿದ್ದಾರೆ. ಅಂಗಡಿಗಳಿಗೆ ಹಾಗೂ ಗ್ರಾಹಕರಿಗೆ ಮಾರ್ಕಿಂಗ್ ಮಾಡಲಾಗಿದ್ದು, ಆ ವ್ಯಾಪ್ತಿಯಲ್ಲೇ ನಿಂತು ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಕಿಂಗ್ ಮಾಡಲಾಗಿದ್ದು, ಅಲ್ಲಿಯೇ ನಿಂತು ತರಕಾರಿಗಳನ್ನು ಖರೀದಿ ಮಾಡಬೇಕಾಗಿದೆ. …
Read More »ಸಾರಿಗೆ ನೌಕರರ ಮುಷ್ಕರ ಅಂತ್ಯ : ರಾಜ್ಯಾದ್ಯಂತ ಬಸ್ ಸಂಚಾರ ಆರಂಭ
ಬೆಂಗಳೂರು : ಕಳೆದ 15 ದಿನಗಳಿಂದ ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರ ಬುಧವಾರ ಅಂತ್ಯವಾಗಿದೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, “ಸಂಜೆಯಿಂದಲೇ ಬಸ್ಸುಗಳ ಸಂಚಾರ ಆರಂಭವಾಗಿದೆ. ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದೆ” ಎಂದು ತಿಳಿಸಿದ್ದಾರೆ. ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಹೈಕೋರ್ಟ್ ಆದೇಶ ಗೌರವಿಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಕೊರೊನಾ …
Read More »ಕಡೆಗೂ ಗೆದ್ದ ಸನ್‌ರೈಸರ್ಸ್, ರಾಹುಲ್ ಬಳಗಕ್ಕೆ ಹ್ಯಾಟ್ರಿಕ್ ಸೋಲು
ಚೆನ್ನೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟು ಜಯಕ್ಕಾಗಿ ಪರಿತಪಿಸುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-14ರಲ್ಲಿ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ 9 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು. ಮತ್ತೊಂದೆಡೆ, ಕನ್ನಡಿಗ ಕೆಎಲ್ ರಾಹುಲ್ ಬಳಗ ಹ್ಯಾಟ್ರಿಕ್ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನಕ್ಕೆ ಕುಸಿಯಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಖಲೀಲ್ ಅಹಮದ್ …
Read More »KKR ವಿರುದ್ಧ ಧೋನಿ ಪಡೆಗೆ 18 ರನ್ನುಗಳ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ CSK
ಮುಂಬಯಿ : ತೀವ್ರ ಕುಸಿತದ ಬಳಿಕವೂ ಚೆನ್ನೈ ತಂಡದ ಬೃಹತ್ ಮೊತ್ತಕ್ಕೆ ದಿಟ್ಟ ರೀತಿಯಲ್ಲಿ ಜವಾಬು ನೀಡಿದ ಕೆಕೆಆರ್ ಬುಧವಾರದ ಐಪಿಎಲ್ ಮುಖಾಮುಖೀಯಲ್ಲಿ 18 ರನ್ನುಗಳ ವೀರೋಚಿತ ಸೋಲನುಭವಿಸಿದೆ. ಆರಂಭಿಕರಾದ ಫಾ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಅವರ ಶತಕದ ಜತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟಿಗೆ 220 ರನ್ ರಾಶಿ ಹಾಕಿತು. ಕೆಕೆಆರ್ ಅಗ್ರ ಕ್ರಮಾಂಕದ ಘೋರ ವೈಫಲ್ಯದಿಂದ ಪವರ್ ಪ್ಲೇ ಒಳಗಾಗಿ 31 …
Read More »ನಿಟ್ಟೆ :ಕಸ ಹಾಕಿದವರಿಂದಲೇ ವಿಲೇವಾರಿ : ನಿಟ್ಟೆ ಗ್ರಾ.ಪಂ. ಸದಸ್ಯೆಯ ದಿಟ್ಟತನಕ್ಕೆ ಮೆಚ್ಚುಗೆ
ಬೆಳ್ಮಣ್: ಸ್ವತ್ಛ ಭಾರತದ ಪರಿಕಲ್ಪನೆ ಕೇವಲ ಭಾಷಣ, ಬ್ಯಾನರ್‌ಗಳ ಪ್ರಚಾರಕ್ಕೆ ಸೀಮಿತವಾಗಿರದೆ ಕಾರ್ಯ ರೂಪದಲ್ಲಿಯೂ ಅಳವಡಿಕೆಯಾಗಬೇಕು ಎಂಬ ಚಿಂತನೆಯೊಂದಿಗೆ ನಿಟ್ಟೆ ಗ್ರಾ.ಪಂ. ಸದಸ್ಯೆಯೋರ್ವರು ಕಸ ಹಾಕುತ್ತಿದ್ದವರನ್ನು ಹಿಡಿದು ಅವರಿಂದಲೇ ಕಸ ವಿಲೇವಾರಿ ಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಟ್ಟೆ ಗ್ರಾ.ಪಂ. ಸದಸ್ಯೆ ರಶ್ಮಿ ಸದಾನಂದ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ವಿಲೇವಾರಿಗೊಳಿಸಿ ಪಂಚಾಯತ್‌ಗೆ ದಂಡ ಕಟ್ಟಿಸಿದ್ದಾರೆ. ಪಂಚಾಯತ್ ಸದಸ್ಯೆ ರಶ್ಮಿಯವರ ಈ …
Read More »ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಮತ್ತೆ ಅಕ್ಕಿ ಪ್ರಮಾಣ ಕಡಿತ
ಬೆಂಗಳೂರು : ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಬಿಗ್ ಶಾಕ್ ನೀಡಿದ್ದು, ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ವಿತರಿಸುತ್ತಿರುವ ಅಕ್ಕಿಪ್ರಮಾಣವನ್ನು ರಾಜ್ಯ ಸರ್ಕಾರ ಮತ್ತೆ ಕಡಿತಗೊಳಿಸಿದೆ. ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಈ ಹಿಂದೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ವಿತರಿಸಲಾಗುತ್ತಿತ್ತು. ಹೊಸ ಪದ್ಧತಿಯಲ್ಲಿ ಈ ತಿಂಗಳಿನಿಂದ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಹಾಗೂ 2 …
Read More »24 ಗಂಟೆಯೊಳಗೆ ‘RTPCR’ ಪರೀಕ್ಷಾ ಫಲಿತಾಂಶ ವರದಿ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರದಿಂದ ಆದೇಶ
ಬೆಂಗಳೂರು : ಕೋವಿಡ್ 19 ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಾದರಿಗಳ ಪರೀಕ್ಷಾ ಫಲಿತಾಂಶವನ್ನು 24 ಗಂಟೆಯೊಳಗೆ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 2 ನೇ ಅಲೆಯ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ …
Read More »ಸುರಪುರದ ಸಬ್ ಜೈಲಿನ 24 ಕೈದಿಗಳಿಗೆ ಕೊರೊನಾ ಸೋಂಕು!
ಯಾದಗಿರಿ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಯಾದಗಿರಿ ಜಿಲ್ಲೆಯ ಸುರಪುರ ನಗರದ ಸಬ್ ಜೈಲಿನಲ್ಲಿ 24 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಯಾದಗಿರಿ ಜಿಲ್ಲಿಯ ಸುರಪುರದ ಸಬ್ ಜೈಲ್ ನಲ್ಲಿ 24 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮತ್ತಷ್ಟು ಕೈದಿಗಳು ಹಾಗೂ ಸಿಬ್ಬಂದಿಗಳ ಕೋವಿಡ್ ಟೆಸ್ಟ್ ಮಾಡಲಾಗಿದೆ. ಜೈಲಿನ 24 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೈಲಿಗೆ ಹೊರಗಿನವರ …
Read More »ಶಾಕಿಂಗ್ : ಬೆಳಗಾವಿ ಲೋಕಸಭಾ ಉಪಚುನಾವಣಾ ಭದ್ರತೆಗೆ ತೆರಳಿದ್ದ 10 ಮಂದಿ ಪೊಲೀಸರಿಗೆ ಕೊರೊನಾ ಸೋಂಕು
ಬಾಗಲಕೋಟೆ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಳಗಾವಿ ಲೋಕಸಭೆ ಉಪಚುನಾವಣಾ ಭದ್ರತೆಗೆ ತೆರಳಿದ್ದ ಬಾಗಲಕೋಟೆಯ 10 ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಬೆಳಗಾವಿ ಲೋಕಸಭೆ ಉಪಚುನಾವಣಾ ಭದ್ರತೆಗೆ ತೆರಳಿದ್ದ ಬಾಗಲಕೋಟೆ ಜಿಲ್ಲೆಯ 200 ಪೊಲೀಸರ ಪೈಕಿ ಇದೀಗ 10 ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆಎನ್ನಲಾಗಿದೆ. ಸದ್ಯ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರ ಸಂಪರ್ಕದಲ್ಲಿದ್ದ ಇತರರ ಕೋವಿಡ್ ಟೆಸ್ಟ್ ಮಾಡಲಾಗಿದೆ. 10 …
Read More »
Laxmi News 24×7