Breaking News

Laxminews 24x7

ಕೋವಿಡ್ ಲಸಿಕೆ ಹಾಕಿಸಿಕೊಂಡವರು ಈ ತಪ್ಪನ್ನು ಮಾಡಲೇಬೇಡಿ!

ನವದೆಹಲಿ, ಮೇ 27: ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾದ ನಂತರ ಲಸಿಕೆ ಕಾರ್ಯಕ್ರಮಗಳು ಕೂಡ ಚುರುಕು ಪಡೆದುಕೊಂಡಿತು. ಈ ಮಧ್ಯೆ ಕೊರೊನಾ ವೈರಸ್‌ನ ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಇದರಿಂದಾಗಿ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆಯೂ ಆಗಬಹುದು. ಆದರೆ ಈ ಉತ್ಸಾಹದಲ್ಲಿ ಒಂದು ತಪ್ಪನ್ನು ನೀವು ಮಾಡಿದರೆ ಮುಂದೆ ಸಂಕಷ್ಟಗಳು ಉಂಟಾಗಬಹುದು. ಹೌದು, ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಹಲವರು ತಮ್ಮ ಕೊರೊನಾ …

Read More »

ತಳ್ಳುವ ಗಾಡಿಯಲ್ಲೇ ಗಂಡನನ್ನ ಕೂರಿಸಿಕೊಂಡು ಮೈಲಿ ದೂರದ ಆಸ್ಪತ್ರೆಗೆ ಕರೆದೊಯ್ದ ಪತ್ನಿ-ಮಗ!

ಗದಗ: ಕರೊನಾ ಲಾಕ್​ಡೌನ್​ ಹಿನ್ನೆಲೆ ಸಾರಿಗೆ ಸೌಲಭ್ಯ ಬಂದ್ ಆಗಿದ್ದು, ​ಮನೆಯಿಂದ ಮೈಲಿ ದೂರದ ಆಸ್ಪತ್ರೆಗೆ ತಳ್ಳುವ ಗಾಡಿಯಲ್ಲೇ ರೋಗಿಯನ್ನ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ವೈರಲ್​ ಆಗಿದೆ. ಗದಗನ ಸಿದ್ದರಾಮೇಶ್ವರ ನಗರದ ನಿವಾಸಿ ಗೋವಿಂದಪ್ಪಗೆ ಎರಡು ತಿಂಗಳ ಹಿಂದೆ ಆಪರೇಷನ್ ಆಗಿದ್ದು, ವೈದ್ಯರು ಒಂದು ಕಾಲು ತೆಗೆದಿದ್ದಾರೆ. ಔಷಧ ಹಾಗೂ ಚಿಕಿತ್ಸೆ ಪಡೆಯಲು ಗದಗ ಜಿಮ್ಸ್ ಆಸ್ಪತ್ರೆಗೆ ಹೋಗಬೇಕಿದ್ದರಿಂದ ವಾಹನ ಸೌಲಭ್ಯವಿಲ್ಲದೆ ತಳ್ಳುವ ಗಾಡಿ ಮೂಲಕವೇ ಆತನನ್ನು ಕೂರಿಸಿಕೊಂಡು ಪತ್ನಿ …

Read More »

ನನ್ನ ಬಂಧಿಸುವ ಧೈರ್ಯ ಯಾರಿಗೂ ಇಲ್ಲ: ಐಎಂಎಗೆ ಸೆಡ್ಡುಹೊಡೆದ ಬಾಬಾ ರಾಮ್ ದೇವ್

ನವದೆಹಲಿ: ಅಲೋಪತಿ ಮೂರ್ಖತನದ ಪದ್ಧತಿ ಎಂದು ಟೀಕಿಸಿದ್ದ ಯೋಗ ಗುರು ಬಾಬಾ ರಾಮ್ ದೇವ್ ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದ್ದು, ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳುವ ಮೂಲಕ ಭಾರತೀಯ ವೈದ್ಯಕೀಯ ಸಂಘಕ್ಕೆ ಸಡ್ಡುಹೊಡೆದಿದ್ದಾರೆ. ಅಲೋಪತಿ ಮೂರ್ಖತನದ ವಿಜ್ಞಾನ ಎಂದು ಟೀಕಿಸಿದ್ದ ಯೋಗ ಗುರು ಬಾಬಾ ದೇವ್ ಅವರನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ …

Read More »

ಜಿಂದಾಲ್ ಜಮೀನು : ಕೋರ್ಟ್ ತೀರ್ಪಿನ ನಂತರ ತೀರ್ಮಾನ : ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು : ಜಿಂದಾಲ್ ಸಂಸ್ಥೆಗೆ ಜಮೀನು ನೀಡುವುದು ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ, ಈ ಸಂಪುಟ ಒಪ್ಪಿಗೆ ನೀಡಿಲ್ಲ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತಾಡಿರುವ ಅವರು, ಜಿಂದಾಲ್ ಗೆ ಜಮೀನು ನೀಡಿರುವ ಕುರಿತು ಮುಂದೆ ಏನ್ ಆಗುತ್ತದೆ ಎನ್ನುವುದರ ಬಗ್ಗೆ ಗೊತ್ತಿಲ್ಲ. ಈ ಕುರಿತು ಹೈ ಕೋರ್ಟ್ ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್ ನಲ್ಲಿಯೂ ಪ್ರಕರಣ ಇದೆ. ಅವತ್ತು ಕರ್ನಾಟಕ ಹೈಕೋರ್ಟ್ ಹೇಳಿತ್ತು. …

Read More »

ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ ಸಿ.ಪಿ. ಯೋಗೇಶ್ವರ್

ಮುಖ್ಯಮಂತ್ರಿ ಬದಲಾವಣೆ ನನ್ನ ಉದ್ದೇಶವಲ್ಲ. ಅಷ್ಟೊಂದು ಶಕ್ತಿಯೂ ನನಗಿಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಕ್ಕಿರುವುದು ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಯಿಸುವ ಅಭಿಪ್ರಾಯ ನನಗೆ ಇಲ್ಲ. ನನ್ನ ಸಮಸ್ಯೆ ಹೇಳಿಕೊಳ್ಳಲು ದೆಹಲಿಗೆ ಹೋಗಿದ್ದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಕ್ಕಾಗಲ್ಲ. ಮುಂದಿನ …

Read More »

ಸಚಿವ ಸಿಪಿ ಯೋಗೇಶ್ವರ್ ಅವರನ್ನು ಅರೆಸ್ ಮಾಡಿ – ಶಾಸಕ ಎಂ.ಪಿ.ರೇಣುಕಾಚಾರ್ಯ ಗುಡುಗು

ಹೊನ್ನಾಳ್ಳಿ : ವಿಜಯೇಂದ್ರ, ಸಿಎಂ ಯಡಿಯೂರಪ್ಪ ಅವರನ್ನು ಹಿಂಭಾಗಿಲಿನಿಂದ ಕಾಲು ಹಿಡಿದು, ಗೋಗರೆದು, ಕಣ್ಣೀರಿಟ್ಟು ಸಚಿವರಾದಂತವರು ಸಿಪಿ ಯೋಗೀಶ್ವರ್. ಮೆಗಾ ಸಿಟಿ ಹಗರಣದಲ್ಲಿ ಏನೆಗ್ಗಾ ಹಗರಣ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಆಗ್ರಹಿಸುತ್ತೇನೆ. ಅವರನ್ನು ಮೊದಲು ಬಂಧಿಸಿ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅವನ್ಯಾರ್ ರೀ.. ನನ್ನ ಬಗ್ಗೆ ಮಾತನಾಡೋಕೆ.. …

Read More »

ಮೈಸೂರು ಮೇ 29ರಿಂದ ಜೂನ್ 7ರ ವರೆಗೆ ಸಂಪೂರ್ಣ ಲಾಕ್‍ಡೌನ್

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೇ 29ರಿಂದ ಜೂನ್ 7ರ ವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಲಿದೆ. ಎರಡು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಆದೇಶ ಮಾಡಿದ್ದಾರೆ. ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಉಳಿದ ದಿನಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಮೇ 29ರಿಂದ ಜೂನ್ 7ರ ಬೆಳಗ್ಗೆ 6 …

Read More »

ರೈತರ ಹೋರಾಟಕ್ಕೆ 6 ತಿಂಗಳು: ಬೇಡಿಕೆ ಈಡೇರಿಸಿ, ಕಾಯಿದೆಗಳನ್ನು ವಾಪಸ್ ಪಡೆಯಲು ಸಿದ್ದು ಆಗ್ರಹ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಆರು ತಿಂಗಳಾಗಿದ್ದು ಬೇಡಿಕೆಗಳನ್ನು ಪ್ರಜಾತಾಂತ್ರಿವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಿರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರ, ಕಾರ್ಮಿಕರ ಪಾಲಿಗೆ ಮಾರಣಾಂತಿಕವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಮೋದಿಯವರ ಸರ್ಕಾರ ಜಾರಿಗೆ ತಂದು ಒಂದು ವರ್ಷವಾಗುತ್ತಿದೆ. ಪ್ರತಿಭಟನೆಯ …

Read More »

ಜನ್ಮದಿನಕ್ಕೆ ಬಟ್ಟೆ ಕೊಡಿಸಲಿಲ್ಲ ಅಂತ ನವವಿವಾಹಿತೆ ಆತ್ಮಹತ್ಯೆ: ಕೊಲೆ ಕೇಸು ದಾಖಲು!

ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸದೇ ಗಂಡ ರೇಗಾಡಿದ್ದರಿಂದ ನೊಂದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಗ್ರಾಮದಲ್ಲಿ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ರಾಜು ಅವರ ಪುತ್ರಿ ಮಮತಾ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಯುವಕ ಮಹದೇವ ಅಲಿಯಾಸ್ ಮಣಿಕಂಠ ಮೂರು ತಿಂಗಳ ಅಪ್ರಾಪ್ತೆಯಾಗಿದ್ದ ಮಮತಾಳನ್ನು ಅಪಹರಿಸಿ ಮದುವೆಯಾಗಿದ್ದ. ಜನ್ಮದಿನವಾದ ಇಂದು ಹೊಸಬಟ್ಟೆ ಕೊಡಿಸುವಂತೆ ಗಂಡ ಮಣಿಕಂಠನಿಗೆ ಕೇಳಿದ್ದಾಳೆ. …

Read More »

ಪತ್ನಿಯನ್ನ ಕೆಎಎಸ್​ ಅಧಿಕಾರಿ ಮಾಡಿಸಿದ್ದವ ಕರೊನಾಗೆ ಬಲಿ

ಶಿವಮೊಗ್ಗ: ಮದುವೆ ಆದ ಮೇಲೆ ಹೆಂಡತಿಯನ್ನ ಚೆನ್ನಾಗಿ ಓದಿಸಿದ್ದ. ಕೆಎಎಸ್​ ಅಧಿಕಾರಿ ಸ್ಥಾನಕ್ಕೇರಲೂ ಬೆನ್ನೆಲುಬಾಗಿ ನಿಂತಿದ್ದ. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದವ ಮಹಾಮಾರಿ ಕರೊನಾಗೆ ಬಲಿಯಾಗಿದ್ದಾನೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ಈತ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ನಾನಂತೂ ಓದಿಲ್ಲ ಹಾಗಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಕನಸುಕಂಡಿದ್ದ‌. ಹೀಗಾಗಿ …

Read More »