ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಡಿಸೆಲ್ ದರ ಗಗನಮುಖಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ಬರೋಬ್ಬರಿ 98ರೂಪಾಯಿ 19 ಪೈಸೆಯಾಗಿದೆ. ಲೀಟರ್ ಡೀಸೆಲ್ ದರ 90 ರೂಪಾಯಿ 84 ಪೈಯಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಈ ನಡುವೆ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಮುಂಬೈ ಮಹಾನಗರದಲ್ಲಿ …
Read More »ಶಾಸಕರ ನಿಧಿಯಿಂದ ನೀಡಲಾದ ಎರಡು ರಕ್ಷಾ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಜಡಿ ಸಿದ್ದೇಶ್ವರ ಮಠದ ಪೀಠಾಧಿಪತಿ
ಮೂಡಲಗಿ: ಕೊರೋನಾ ಸೋಂಕಿತರ ನೇರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್‍ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ …
Read More »ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಸಿಎಂ, ಸಚಿವರಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್
ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರ ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ಕೋರ್ಟ್, “ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ …
Read More »ಕೆಎಸ್‌ಆರ್‌ಟಿಸಿ ಹೆಸರು ಕರ್ನಾಟಕದಿಂದ ಕೈ ತಪ್ಪುವ ಆತಂಕ ಬೇಡ: ಡಿಸಿಎಂ ಸವದಿ
ಬೆಂಗಳೂರು:ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಶ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆ. ಎಸ್. ಆರ್. ಟಿ. ಸಿ. ಎಂಬ ಹೆಸರನ್ನು ಮುಂದೆಯೂ ಕರ್ನಾಟಕವು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ …
Read More »ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ಸರ್ಕಾರ ವರ್ತಿಸುತ್ತಿದೆ’
ಬೆಂಗಳೂರು: ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಮೇಯರ್ ಶಿಲ್ಪಾ ನಾಗ್ ನಡುವಿನ ಜಟಾಪಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಪ್ರಜಾಪ್ರಭುತ್ವದ ಮೂರು ಮಂಗಗಳು ನಾಚುವಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ಗಳು.. ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಪಾಲಿಕೆ ಆಯುಕ್ತರ ನಡುವೆ ನಡೆಸುತ್ತಿರುವ ಹಾದಿ- ಬೀದಿ ಜಗಳ ನೋಡಿದರೆ, ರಾಜ್ಯದಲ್ಲಿ ಸರಕಾರ ಅಸ್ಥಿತ್ವದಲ್ಲಿದಿಯೋ ಇಲ್ಲವೋ ಎಂಬ ಅನುಮಾನ ಸಾರ್ವಜನಿಕ …
Read More »ರಾಜ್ಯದಲ್ಲಿ KSRTC ಟ್ರೇಡ್ ಮಾರ್ಕ್ ನಿಷೇಧ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ”ಕೆಎಸ್‌ಆರ್‌ಟಿಸಿ” ಟ್ರೇಡ್‌ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಆದೇಶ ಮತ್ತು ನಿಷೇಧ ಬಂದಿಲ್ಲ ಅಂತಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ.ಕಳಸದ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ ”ಕೆಎಸ್‌ಆರ್‌ಟಿಸಿ” ಎಂದು ಬಳಸುವಂತಿಲ್ಲವೆಂದು, ಕೇಂದ್ರದ ಟ್ರೇಡ್ ಮಾರ್ಕ್ಸ್ ರಿಜಿಸ್ಟರಿ ಅವರು ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಎರಡು ರಾಜ್ಯಗಳ …
Read More »ಪೈಲಟ್ ತರಬೇತಿ ಕೇಂದ್ರ: 2 ಸಂಸ್ಥೆಗಳಿಗೆ ಒಪ್ಪಿಗೆ -ಮಂಗಲಾ ಅಂಗಡಿ
ಬೆಳಗಾವಿ: ‘ವಿಮಾನ ಹಾರಾಟ ಕ್ಷೇತ್ರದಲ್ಲಿ ಅಗತ್ಯ ತರಬೇತಿ ನೀಡುವ ಸಂಸ್ಥೆ ಅಥವಾ ಕೇಂದ್ರವನ್ನು (ಪೈಲಟ್ ತರಬೇತಿ ಕೇಂದ್ರ) ನಗರದ ಸಮೀಪದಲ್ಲಿ ಪ್ರಾರಂಭಿಸಲು 2 ಖಾಸಗಿ ತರಬೇತಿ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ಒಪ್ಪಿಗೆ ಸೂಚಿಸಿದೆ’ ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಆಯ್ಕೆಯಾದ ಈ ಎರಡು ಸಂಸ್ಥೆಗಳಿಗೆ ತಲಾ 5ಸಾವಿರ ಚ.ಮೀ. ಅಳತೆಯಂತೆ ಒಟ್ಟು 10ಸಾವಿರ ಚ.ಮೀ. …
Read More »ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ
ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಕಳೆದ 25 ವರ್ಷಗಳಿಂದ ಈ ಆನೆಯ ಪರಿಪಾಲನೆಯನ್ನು ಮಾವುತ ದಾಮೋದರ್ ನಾಯರ್ ನೋಡಿಕೊಳ್ಳುತ್ತಿದ್ದರು. 74 ವರ್ಷದ ದಾಮೋದರ್ ಇಹಲೋಕ ತ್ಯಜಿಸಿದಾಗ ಮೂಕ ಪ್ರಾಣಿಯು ಮಾವುತನಿಗೆ ಭಾವನಾತ್ಮಕ ಅಶ್ರುತರ್ಪಣಗೈದ ವಿಡಿಯೊ ಎಂಥಹ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ. ಬ್ರಹದತ್ತನ್ ಎಂಬ ಆನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವುತನ …
Read More »ಹಿರಿಯ ನಟಿ ಬಿ. ಜಯಾರ ಮೃತದೇಹವನ್ನ ಕಸದರಾಶಿ ಬಳಿ ಇಟ್ಟು ಅವಮಾನ! ವಿಡಿಯೋ ವೈರಲ್
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಗುರುವಾರ (ಜೂ.3) ನಿಧನರಾಗಿದ್ದಾರೆ. ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದ ಜಯಾ, ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜನಪ್ರಿಯರಾಗಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಇಂತಹ ಜನಪ್ರಿಯ ನಟಿ ಅಗಲಿಕೆ ಸುದ್ದಿ ಅಭಿಮಾನಿಗಳ ಪಾಲಿಗೆ ದುಃಖಕರ. …
Read More »ರಾಜ್ಯದಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.11 ಇದ್ದು, ಶೇ.5ಕ್ಕೆ ಬಂದರೆ ಅನ್ ಲಾಕ್ : ಸಿಎಂ BSY
ಹುಬ್ಬಳ್ಳಿ: ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದ್ದು, ಸದ್ಯ 11.09 ರಷ್ಟಿದೆ. ಈ ಪಾಸಿಟಿವಿಟಿ ದರ ಶೇ.5ಕ್ಕೆ ಬಂದರೆ ರಾಜ್ಯದಲ್ಲಿ ಅನ್ ಲಾಕ್ ಮಾಡುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಇಲ್ಲಿನ ಸವಾಯಿ ಗಂಧರ್ವ ಹಾಲಿನಲ್ಲಿ ಕೋವಿಡ್ ನಿಯಂತ್ರಣದ ಕುರಿತು ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞರ ಅಭಿಪ್ರಾಯದಂತೆ ಪಾಸಿಟಿವಿಟಿ ದರ ಶೇ.5 ಕ್ಕಿಳಿದರೆ ಅನ್ ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಜನರು ಕೂಡ ಕೈ ಜೋಡಿಸಬೇಕು …
Read More »
Laxmi News 24×7